ಬೈಕ್ ಅಪಘಾತದಿಂದ ಗುಣಮುಖರಾದ ಸಾಯಿ ಧರಂ ತೇಜ್‌ಗೆ ನೋಟಿಸ್!

ತೆಲುಗು ನಟ ಸಾಯಿ ಧರಂ ತೇಜ್‌ ಹಲವು ದಿನಗಳ ಹಿಂದೆ ಬೈಕ್‌ ಅಪಘಾತಕ್ಕೆ ಒಳಗಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಪಡೆದ ಬಳಿಕ ಸಾಯಿ ಧರಂ ತೇಜ್‌ ಮನೆಗೆ ವಾಪಸ್‌ ಆಗಿದ್ದಾರೆ. ಆದರೆ ಅವರು ಅಪಘಾತಕ್ಕೆ ಸಂಬಂಧಿಸಿದ ವಿಚಾರಣೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲವಂತೆ. ಹಾಗಾಗಿ ಅವರಿಗೆ ನೋಟೀಸ್‌ ಜಾರಿ ಆಗಿದೆ.

ಗುಣಮುಖವಾದ ಬಳಿಕ ಸಾಯಿ ಧರಂ ತೇಜ ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಹಾಕಿಕೊಂಡಿದ್ದರು. "ನನ್ನ ಪುನರ್ಜನ್ಮಕ್ಕೆ ಕಾರಣವಾದ ನಿಮ್ಮ ಪ್ರೀತಿಗಾಗಿ ನಿಮ್ಮ ಪ್ರಾರ್ಥನೆಗಾಗಿ ನಾನು ನಿಮಗೆ ಋಣಿಯಾಗಿದ್ದೇನೆ. ನಿಮ್ಮ ಪ್ರೀತಿಯನ್ನು ಪಡೆಯುವುದು ನನ್ನ ಪೂರ್ವ ಜನ್ಮದ ಪುಣ್ಯ". ಎಂದು ಭಾವುಕ ನುಡಿಗಳನ್ನ ಸಾಯಿ ಧರಂ ತೇಜ್‌ ಬರೆದುಕೊಂಡಿದ್ದರು.

ತಿಂಗಳ ಬಳಿಕ ಸಾಯಿ ಧರಂ ತೇಜ್‌ ಹುಷಾರಾಗಿ ಮನೆಗೆ ಬಂದ ಬಳಿಕ, ಕುಟುಂಬದೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿದ್ದರು. ತೆಲುಗು ಚಿತ್ರರಂಗದ ದೊಡ್ಡ ಮನೆ ಹುಡುಗ ಮನೆಗೆ ಬಂದಿರೋ ಕಾರಣ ಇಡೀ ಕುಟುಂಬ ಸಂತಸ ವ್ಯಕ್ತಪಡಿಸಿತ್ತು. ಇದೇ ಖುಷಿಯನ್ನು ಕುಟುಂಬ ಎಲ್ಲರೂ ಹಂಚಿಕೊಂಡಿದ್ದರು.

ವಿಚಾರಣೆಗೆ ಸ್ಪಂದಿಸದ ಸಾಯಿ ಧರಂ ತೇಜ್!

ವಿಚಾರಣೆಗೆ ಸ್ಪಂದಿಸದ ಸಾಯಿ ಧರಂ ತೇಜ್!

ವೇಗವಾಗಿ ಬೈಕ್ ಚಲಿಸುತ್ತಿದ್ದ ಕಾರಣ ಬೈಕ್ ಸ್ಕಿಡ್ ಆಗಿದ್ದರಿಂದ ಈ ಅಪಘಾತ ಸಂಭವಿಸಿತ್ತು. ಹಾಗಾಗಿ ಈ ಅಪಘಾತಕ್ಕೆ ಸಂಬಂಧಿಸಿದಂತೆ ಹೈದ್ರಾಬಾದ್‌ ಪೋಲಿಸರಿಂದ ನೋಟೀಸ್‌ ಜಾರಿ ಆಗಿದೆ. ಸೆಪ್ಟೆಂಬರ್‌ನಲ್ಲಿ ಅಪಘಾತ ಸಂಭವಿಸಿತ್ತು. ಅಪಘಾತದ ಬಳಿಕ ಬೈಕ್‌ ದಾಖಲೆಗಳನ್ನು ಕೊಡುವಂತೆ ಪೋಲಿಸರು ಸಾಕಷ್ಟು ಬಾರಿ ಸಾಯಿ ಧರಂ ತೇಜ್‌ ಅವರಿಗೆ ಹೇಳಿದ್ದರಂತೆ. ಆದರೆ ಸಾಯಿ ಧರಂ ತೇಜ್‌ ಅದಕ್ಕೆ ಸ್ಪಂದಿಸಿಲ್ಲ. ಆದ ಕಾರಣ ಈಗ ನೋಟೀಸ್‌ ನೀಡಲಾಗಿದೆ.

ಸೂಕ್ತ ದಾಖಲೆಗಳನ್ನು ಒದಗಿಸುತ್ತಿಲ್ಲ ಸಾಯಿ ಧರಂ ತೇಜ್!

ಸೂಕ್ತ ದಾಖಲೆಗಳನ್ನು ಒದಗಿಸುತ್ತಿಲ್ಲ ಸಾಯಿ ಧರಂ ತೇಜ್!

ವಿಚಾರಣೆಗಾಗಿ ದಾಖಲೆಗಳನ್ನು ಠಾಣೆಗೆ ಒದಗಿಸುವಂತಗೆ ಪೊಲೀಸರು ಹಲವು ಬಾರಿ ಹೇಳಿದ್ದರಂತೆ. ಅಪಘಾತಕ್ಕೆ ಒಳಗಾದ ಬೈಕ್‌ ದಾಖಲೆಗಳು, ಡ್ರೈವಿಂಗ್ ಲೈಸೆನ್ಸ್, ಆರ್‌.ಸಿ ಬುಕ್, ಇನ್ಸುರೆನ್ಸ್‌ ಮತ್ತು ಮಾಲಿನ್ಯ ಪ್ರಮಾಣ ಪತ್ರ ಒದಗಿಸುವಂತೆ ಪೋಲಿಸರು ಕೇಳಿದ್ದಾರೆ. ಆದರೆ ಇಲ್ಲಿ ತನಕ ಯಾವುದೇ ದಾಖಲೆ ಒದಗಿಸದೇ ಇರುವ ಕಾರಣ ಅವರಿಗೆ ನೋಟೀಸ್‌ ನೀಡಲಾಗಿದೆ ಎಂದು ಪೋಲಿಸ್‌ ಕಮಿಷನರ್ ಸ್ಟೀಫನ್‌ ರವೀಂದ್ರ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಭೀಕರವಾಗಿ ಗಾಯಗೊಂಡಿದ್ದ ಸಾಯಿ ಧರಂ ತೇಜ್!

ಭೀಕರವಾಗಿ ಗಾಯಗೊಂಡಿದ್ದ ಸಾಯಿ ಧರಂ ತೇಜ್!

ರಸ್ತೆ ಅಪಘಾತದಿಂದ ನಟ ಸಾಯಿ ಧರಂ ತೇಜ್ ಗಂಭೀರವಾಗಿ ಗಾಯಗೊಂಡು, ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು. ಐಸಿಯುನಲ್ಲಿ ನಟನಿಗೆ ಚಿಕಿತ್ಸೆ ನೀಡಲಾಗಿತ್ತು. ವೇಗವಾಗಿ ಬೈಕ್ ಚಲಿಸುತ್ತಿದ್ದ ಕಾರಣ ಬೈಕ್ ಸ್ಕಿಡ್ ಆಗಿದ್ದರಿಂದ ಈ ಅಪಘಾತ ಸಂಭವಿಸಿತ್ತು. ಸಾಯಿ ಧರಂ ತೇಜ್ ಹೆಲ್ಮೆಟ್ ಧರಿಸಿದ್ದರು ಹಾಗಾಗಿ ಹೆಚ್ಚಿನ ಅಪಾಯ ಆಗಿರಲಿಲ್ಲ. ಜುಬಿಲಿ ಹಿಲ್ಸ್‌ ಅಪೋಲೊ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಸಾಯಿ ಧರಂ ತೇಜ್ ಅವರನ್ನು ಇರಿಸಿ ಚಿಕಿತ್ಸೆ ನೀಡಲಾಗಿತ್ತು.

'ರಿಪಬ್ಲಿಕ್‌' ಸಿನಿಮಾ ಬಳಿಕ ಯಾವ ಚಿತ್ರವೂ ಪ್ರಕಟ ಆಗಿಲ್ಲ!

'ರಿಪಬ್ಲಿಕ್‌' ಸಿನಿಮಾ ಬಳಿಕ ಯಾವ ಚಿತ್ರವೂ ಪ್ರಕಟ ಆಗಿಲ್ಲ!

ಇನ್ನೂ ನಟ ಸಾಯಿ ಧರಂ ತೇಜ್‌ 2014ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸಾಯಿ ಅಭಿನಯದ ರಿಪಬ್ಲಿಕ್‌ ಸಿನಿಮಾ ಕೊನೆದಾಗಿ ತೆರೆಕಂಡ ಚಿತ್ರ. ಈ ಚಿತ್ರದ ಬಳಿಕ ಸಾಯಿ ಧರಂ ತೇಜ್‌ ಯಾವುದೇ ಚಿತ್ರವನ್ನು ಒಪ್ಪಿಕೊಂಡಿಲ್ಲ. ಒಂದು ತಿಂಗಳು ಬೆಡ್‌ ರೆಸ್ಟ್‌ ಪಡೆದಿದ್ದಾರೆ. ಈಗ ಸಾಯಿ ಸಂಪೂರ್ಣ ಗುಣಮುಖ ಆಗಿದ್ದಾರೆ. ರಿಪಬ್ಲಿಕ್‌ ರಿಲೀಸ್‌ ಆಗಿ ಸಾಯಿ ಅಭಿನಯಕ್ಕೆ ಉತ್ತಮ ರೆಸ್ಪಾನ್ಸ್‌ ಬಂದಿದೆ.

More from Filmibeat

English summary
Sai Dharam Tej Gets Legal Notice From Hyderabad Police, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X