ಸಾಯಿ ಧರಮ್ ತೇಜ್ ಆರೋಗ್ಯದ ಅಪ್ ಡೇಟ್; ಆಸ್ಪತ್ರೆಯಿಂದ ಹೆಲ್ತ್ ಬುಲೇಟಿನ್ ಬಿಡುಗಡೆ

By ಫಿಲ್ಮಿಬೀಟ್ ಡೆಸ್ಕ್

ಟಾಲಿವುಡ್ ನಟ, ಮೆಗಾಸ್ಟಾರ್ ಕುಟುಂಬದ ಕುಡಿ ಸಾಯಿ ಧರಮ್ ತೇಜ್ ಅಪಘಾತದಿಂದ ತೀವ್ರ ಗಾಯಗೊಂಡಿದ್ದು, ಹೈದರಾಬಾದ್ ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಧರಮ್ ತೇಜ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆ ತಡರಾತ್ರಿ ಹೈದರಾಬಾದ್ ನ ದುರ್ಗಮ್ ಚೆರುವು ಕೇಬಲ್ ಬ್ರಿಡ್ಜ್ ಬಳಿ ಸ್ಪೋಟ್ಸ್ ಬೈಕ್ ನಲ್ಲಿ ಬರ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಬೈಕಿಂದ ಕೆಳಗೆ ಬಿದ್ದ ಧರಮ್ ತೇಜ್ ಗೆ ಬಲವಾದ ಏಟು ಬಿದ್ದಿದೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಸಿಲಾಯಿತು. ಬಳಿಕ ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಗೆ ಧಾಕಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಇದೀಗ ಅಪೋಲೋ ಆಸ್ಪತ್ರೆ ಹೆಲ್ತ್ ಬುಲೇಟಿನ್ ಬಿಡುಗಡೆ ಮಾಡಿದ್ದು, "ಸಾಯಿ ಧರಮ್ ತೇಜ್ ಅವರ ಸ್ಥಿತಿ ಸ್ಥಿರವಾಗಿದೆ. ಎಲ್ಲಾ ಪ್ರಮುಖ ಆರ್ಗನ್ ಗಳು ಕೆಲಸ ಮಾಡುತ್ತಿವೆ. ಜೀವಕ್ಕೆ ಯಾವುದೇ ಅಪಾಯವಿಲ್ಲ. ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನ ಬಿಡುಗಡೆ ಮಾಡುತ್ತೇೆವೆ" ಎಂದು ಹೇಳಿದೆ.

ಸಾಯಿ ಧರಮ್ ತೇಜ್ ಅವರಿಗೆ ಬೆನ್ನು ಮೂಳೆ, ಎದೆ ಭಾಗಕ್ಕೆ ಗಾಯವಾಗಿದೆ ಎನ್ನಲಾಗಿದೆ. ಅಪಘಾತವಾದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಕುಟುಂಬದವು ತಕ್ಷಣ ಆಸ್ಪತ್ರೆಗೆ ಬಳಿ ದೌಡಾಯಿಸಿದರು. ಮೆಗಾ ಸ್ಟಾರ್ ಚಿರಂಜೀವಿ, ಪವನ್ ಕಲ್ಯಾಣ್ ಸೇರಿದಂತೆ ಇಡೀ ಕುಟುಂಬ ಆಸ್ಪತ್ರೆಗೆ ಆಗಮಿಸಿ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಧರನ್ ತೇಜ್ ಆರೋಗ್ಯಜ ಬಗ್ಗೆ ಮಾಹಿತಿ ನೀಡಿದ್ದಾರೆ.

Sai Dharam Tej heath update; Health Bulletin from Apollo-hospital Hyderabad

ಈ ಬಗ್ಗೆ ಮೆಗಾಸ್ಟಾರ್ ಚಿರಂಜೀವಿ ಟ್ವೀಟ್ ಮಾಡಿದ್ದು, "ಕೆಲವು ಗಂಟೆಗಳ ಹಿಂದೆ ಸಾಯಿ ಧರಮ್ ತೇಜ್ ಅಪಘಾತಕ್ಕೀಡಾಗಿದ್ದಾನೆ. ಸಣ್ಣಪುಟ್ಟ ಗಾಯಗಳಾಗಿವೆ. ಅಭಿಮಾನಿಗಳು ಮತ್ತು ಸ್ನೇಹಿತರು ಯಾವುದೇ ಆತಂಕ ಪಡಬೇಕಾಗಿಲ್ಲ. ಸಾಯಿ ಧರಮ್ ತೇಜ್ ಗೆ ನುರಿತ ವೈದ್ಯರು ತಂಡ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆರೋಗ್ಯ ಸ್ಥಿರವಾಗಿದ್ದು, ಕೆಲವೇ ದಿನಗಳಲ್ಲಿ ವಾಪಸ್ ಆಗಲಿದ್ದಾರೆ" ಎಂದು ಹೇಳಿದ್ದಾರೆ.

ಧರಮ್ ತೇಜಿ ಗೆ ಗಂಭೀರ ಗಾಯಗಳಾಗಿವೆಯಾದರೂ ಹೆಲ್ಮೆಟ್​ ಧರಿಸಿದ್ದರಿಂದ ಪ್ರಾಣಕ್ಕೆ ಯಾವುದೇ ಅಪಾಯ ಇಲ್ಲ ಎಂದು ವರದಿ ಆಗಿದೆ. ಸಾಯಿ ಧರಮ್ ತೇಜ್ ಅವರಿಗೆ ಬೈಕ್ ಕ್ರೇಜ್ ಜಾಸ್ತಿ. ನಟ ಪವನ್​ ಕಲ್ಯಾಣ್, ಧರಮ್ ತೇಜ್ ಅವರಿಗೆ ಅವೆಂಜರ್ ಬೈಕನ್ನು ಗಿಫ್ಟ್​ ಆಗಿ ನೀಡಿದ್ದರು. ಧರಮ್ ತೇಜ್ ಅವರ ತಾಯಿ ಹಾರ್ಲೆ ಡೇವಿಡ್ಸನ್​ ಬೈಕ್ ಗಿಫ್ಟ್​ ನೀಡಿದ್ದರು. ಒಟ್ಟು ಅವರ ಗ್ಯಾರೇಜ್​​ನಲ್ಲಿ 4 ಸ್ಪೋರ್ಟ್ಸ್​ ಬೈಕ್ ಇದ್ದವು ಎಂಬ ಮಾಹಿತಿ ಲಭ್ಯವಾಗಿದೆ.

More from Filmibeat

English summary
Sai Dharam Tej heath update; Health Bulletin from Apollo-hospital Hyderabad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X