For Quick Alerts
  ALLOW NOTIFICATIONS  
  For Daily Alerts

  ಈ ಇಬ್ಬರು ಪುಟಾಣಿಗಳು ಈಗ ತೆಲುಗಿನ ಸ್ಟಾರ್ ನಟರು: ಯಾರೆಂದು ಹೇಳಬಲ್ಲಿರಾ.?

  |

  ದೇವರ ಕೋಣೆಯಲ್ಲಿ ಪೂಜೆ ಸಲ್ಲಿಸುತ್ತಾ, ದೇವರಿಗೆ ಮನಸಾರೆ ಕೈ ಮುಗಿಯುತ್ತಿರುವ ಈ ಪುಟಾಣಿಗಳು ಯಾರು ಎಂದು ಗುರುತಿಸಬಲ್ಲಿರಾ.? ಫೋಟೋದಲ್ಲಿ ಕಪ್ಪು ಶರ್ಟ್, ಶಾರ್ಟ್ಸ್ ಹಾಕಿಕೊಂಡು ದೇವರಿಗೆ ನಮಿಸುತ್ತಿರುವ ಬಾಲಕರು ಬೇರೆ ಯಾರೂ ಅಲ್ಲ.. ಒಬ್ಬರು ಮೆಗಾ ಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ. ಮತ್ತೊಬ್ಬರು ಚಿರಂಜೀವಿ ಸಹೋದರಿಯ ಪುತ್ರ ಸಾಯಿ ಧರಮ್ ತೇಜ.

  ತೆಲುಗಿನಲ್ಲಿ 'ರೇ', 'ಸುಬ್ರಮಣ್ಯಂ ಫಾರ್ ಸೇಲ್', 'ಸುಪ್ರೀಂ', 'ಇಂಟೆಲಿಜೆಂಟ್', 'ತೇಜ್ ಐ ಲವ್ ಯು', 'ಚಿತ್ರಲಹರಿ'ದಂತಹ ಹಿಟ್ ಸಿನಿಮಾಗಳಲ್ಲಿ ನಾಯಕನಾಗಿ ಅಭಿನಯಿಸಿರುವ ನಟ ಸಾಯಿ ಧರಮ್ ತೇಜ.

  ಇಂತಿಪ್ಪ ಸಾಯಿ ಧರಮ್ ತೇಜ, ನಿನ್ನೆಯಷ್ಟೇ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ತಮ್ಮ ಬಾಲ್ಯದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ಚೆನ್ನೈನ ತಮ್ಮ ಮನೆಯಲ್ಲಿ ತಾವು ಕಳೆದ ಸವಿ ನೆನಪುಗಳನ್ನು ಸಾಯಿ ಧರಮ್ ತೇಜ ಮೆಲುಕು ಹಾಕಿದ್ದಾರೆ.

  ಈ ನಾಲ್ಕು ಹುಡುಗರು ಈಗ ಸ್ಟಾರ್ ನಟರು! ಯಾರೆಂದು ಗುರುತಿಸಿ?ಈ ನಾಲ್ಕು ಹುಡುಗರು ಈಗ ಸ್ಟಾರ್ ನಟರು! ಯಾರೆಂದು ಗುರುತಿಸಿ?

  ಫೋಟೋದಲ್ಲಿ ರಾಮ್ ಚರಣ್ ತೇಜ, ಸುಶ್ಮಿತಾ ಮತ್ತು ಶ್ರೀಜಾ ಜೊತೆಗೆ ಸಾಯಿ ಧರಮ್ ತೇಜ ಪೂಜೆ ಸಲ್ಲಿಸಿ, ದೇವರಿಗೆ ನಮಿಸುತ್ತಿರುವುದನ್ನು ನೀವು ಕಾಣಬಹುದು.

  ಈ ಫೋಟೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದ್ಹಾಗೆ, ರಾಮ್ ಚರಣ್ ತೇಜ ಸದ್ಯ ರಾಜಮೌಳಿ ಅಭಿನಯದ 'ಆರ್.ಆರ್.ಆರ್' ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಇನ್ನೂ ಸಾಯಿ ಧರಮ್ ತೇಜ, 'ಸೋಲೋ ಬ್ರತುಕೇ ಸೋ ಬೆಟರ್' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

  English summary
  Have a look at the Throw back picture of Sai Dharam Tej's With Ram Charan Teja.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X