ಮೆಗಾಸ್ಟಾರ್ ಕುಟುಂಬದ ತಂಟೆಗೆ ಬರಬೇಡಿ: ಬಹಿರಂಗ ಎಚ್ಚರಿಕೆ

ತೆಲುಗು ಚಿತ್ರರಂಗ ಎಂಬುದು ಕೆಲವು ಕುಟುಂಬಗಳ ಆಸ್ತಿ ಎಂಬಂತಾಗಿದೆ. ಮೆಗಾಸ್ಟಾರ್ ಚಿರಂಜೀವಿ ಕುಟುಂಬ, ಎನ್‌ಟಿಆರ್ ಕುಟುಂಬ, ಅಕ್ಕಿನೇನಿ ಕುಟುಂಬ, ದಗ್ಗುಬಾಟಿ ಕುಟುಂಬದ್ದೇ ಅಲ್ಲಿ ಪಾರುಪತ್ಯ.

ಅದರಲ್ಲೂ ಮುಖ್ಯವಾಗಿ ಮೆಗಾಸ್ಟಾರ್ ಹಾಗೂ ಎನ್‌ಟಿಆರ್ ಕುಟುಂಬದ ಪಾರುಪತ್ಯ ತುಸು ಹೆಚ್ಚೇ ಇದೆ. ಅದರಲ್ಲಿಯೂ ಮೆಗಾಸ್ಟಾರ್ ಕುಟುಂಬದಲ್ಲಿ ಸಕ್ರಿಯ ನಾಯಕ ನಟರು ಹೆಚ್ಚು. ಹಾಗಾಗಿ ಅವರ ಕುಟುಂಬದವರ ಜೋರು ತುಸು ಹೆಚ್ಚು.

ನಿನ್ನೆಯಷ್ಟೆ (ಮಾರ್ಚ್ 27) ಮೆಗಾಸ್ಟಾರ್ ಕುಟುಂಬದ ಕುಡಿ ಚಿರಂಜೀವಿ ಪುತ್ರ ರಾಮ್‌ ಚರಣ್ ತೇಜ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳಿಗಾಗಿ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಿ ಮೆಗಾಸ್ಟಾರ್ ಕುಟುಂಬವನ್ನು ಒಟ್ಟುಗೂಡಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಮೆಗಾಸ್ಟಾರ್ ಕುಟುಂಬದ ಕುಡಿಯೊಂದು ಮೆಗಾಸ್ಟಾರ್ ಕುಟುಂಬದ ತಂಟೆಗೆ ಬಂದರೆ ಎಚ್ಚರ ಎಂದು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ.

ಎಚ್ಚರಿಕೆ ನೀಡಿದ ಸಾಯಿ ಧರಮ್ ತೇಜ್

ಎಚ್ಚರಿಕೆ ನೀಡಿದ ಸಾಯಿ ಧರಮ್ ತೇಜ್

ರಾಮ್ ಚರಣ್ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಇತ್ತೀಚೆಗಷ್ಟೆ ನಾಯಕ ನಟನಾಗಿ ಗುರುತಿಸಿಕೊಂಡಿರುವ ಸಾಯಿ ಧರಮ್ ತೇಜ್, 'ಮೆಗಾಸ್ಟಾರ್ ಕುಟುಂಬವನ್ನು ಉದ್ದೇಶಪೂರ್ವಕವಾಗಿ ಕೆಲವರು ಟಾರ್ಗೆಟ್ ಮಾಡಿದ್ದಾರೆ. ಅವರ್ಯಾರು ಎಂಬುದು ನಿಮಗೂ ಗೊತ್ತು. ನೀವು ನಮ್ಮನ್ನು ಎಷ್ಟೇ ದ್ವೇಷಿಸಿದರು ನಾವು ಪ್ರೀತಿಸುತ್ತಲೇ ಇರುತ್ತೇವೆ. ಆದರೆ ಅಭಿಮಾನಿಗಳು ಸುಮ್ಮನಿರುವವರಲ್ಲ' ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ಚಿರಂಜೀವಿ ಕುಟುಂಬದ ಬಗ್ಗೆ ಕತೆ ಹೇಳಿದ ಸಾಯಿ ಧರಮ್

ಚಿರಂಜೀವಿ ಕುಟುಂಬದ ಬಗ್ಗೆ ಕತೆ ಹೇಳಿದ ಸಾಯಿ ಧರಮ್

'ಒಂದು ಊರಿನಲ್ಲಿ ಒಂದು ಮಾವಿನಮರವಿತ್ತು. ಮರದ ತುಂಬಾ ಹಣ್ಣು. ಒಬ್ಬ ಶಾಲಾ ಶಿಕ್ಷಕಿ ಹೇಳುತ್ತಾಳೆ, ''ಯಾರು ಮೊದಲು ಮಾವಿನ ಮರ ಮುಟ್ಟುತ್ತಾರೊ ಅವರಿಗೆ ಎಲ್ಲ ಹಣ್ಣುಗಳು ಸಿಗುತ್ತವೆ'' ಎಂದು. ಆದರೆ ಆ ಹುಡುಗರು ಒಬ್ಬರ ಕೈಯನ್ನು ಒಬ್ಬರು ಹಿಡಿದು ಒಟ್ಟಿಗೆ ಆ ಮರದ ಕಡೆಗೆ ಸಾಗುತ್ತಾರೆ. ಆ ಮಕ್ಕಳೆ 'ಮೆಗಾ ಹೀರೋ'ಗಳು. ಅದುವೇ ಚಿರಂಜೀವಿ ಕುಟುಂಬ. ನಾವೆಲ್ಲರೂ ಒಟ್ಟಿಗೆ ಒಗ್ಗಟ್ಟಿನಿಂದಲೇ ಇದ್ದೇವೆ, ಇರುತ್ತೇವೆ' ಎಂದಿದ್ದಾರೆ ಸಾಯಿ ಧರಮ್ ತೇಜ್.

'ರಾಮ್ ಚರಣ್‌ಗೆ ಅದೇ ಅಭಿಮಾನ ನೀಡುತ್ತಿದ್ದೀರಿ'

'ರಾಮ್ ಚರಣ್‌ಗೆ ಅದೇ ಅಭಿಮಾನ ನೀಡುತ್ತಿದ್ದೀರಿ'

'ನಟ ಚಿರಂಜೀವಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಹಬ್ಬ ಮಾಡುತ್ತಿದ್ದುದನ್ನು ನಾನು ನೋಡುತ್ತಿದ್ದೆ. 'ಹೀಗೆ ಇನ್ನೊಬ್ಬ ನಟನಿಗೆ ವೈಭವಗಳು ನಡೆಯಲು ಸಾಧ್ಯವಾ? ಎಂದುಕೊಳ್ಳುತ್ತಿದ್ದೆ. ಆದರೆ ಈಗ ರಾಮ್ ಚರಣ್ ತೇಜಾಗೆ ಅಂಥಹುದ್ದೇ ವೈಭವಗಳನ್ನು ನೀವು ಮಾಡುತ್ತಿದ್ದೀರ. ಇದು ಸಾಧ್ಯವಾಗಿದ್ದು ಅಭಿಮಾನಿಗಳಿಂದ. ಚಿರಂಜೀವಿ ಅವರಿಗೆ ನೀಡಿದ್ದ ಪ್ರೀತಿಯನ್ನೇ ನೀವು ನಮ್ಮ ಭಾವ ರಾಮ್ ಚರಣ್‌ಗೆ ನೀಡುತ್ತಿದ್ದೀರ, ನಿಮಗೆ ಧನ್ಯವಾದ' ಎಂದರು ಸಾಯಿ ಧರಮ್.

Recommended Video

Congress ನಿಂದ ಸೈಟ್ ಮಾರಿಬಿಟ್ಟೆ,ಕಾಫಿ ಪುಡಿಗೂ ದುಡ್ಡಿರ್ಲಿಲ್ಲ ಅಂದ್ರು Jaggesh | Filmibeat Kannada
ಮೆಗಾ ಕುಟುಂಬದ ಹೀರೋಗಳಿವರು

ಮೆಗಾ ಕುಟುಂಬದ ಹೀರೋಗಳಿವರು

ಮೆಗಾಸ್ಟಾರ್ ಕುಟುಂಬದ ಹಲವಾರು ನಾಯಕ ನಟರು ತೆಲುಗು ಚಿತ್ರರಂಗದಲ್ಲಿದ್ದಾರೆ. ಹಲವರು ತೆಲುಗು ಚಿತ್ರರಂಗದ ದಿ ಬೆಸ್ಟ್ ನಾಯಕ ನಟರು ಎನಿಸಿಕೊಂಡಿದ್ದಾರೆ. ಚಿರಂಜೀವಿ ನಂತರ ಬಂದ ಪವನ್ ಕಲ್ಯಾಣ್ ಈಗಲೂ ಅತಿ ಹೆಚ್ಚು ಅಭಿಮಾನಿಗಳುಳ್ಳ ನಟ. ಚಿರಂಜೀವಿ ಮತ್ತೊಬ್ಬ ಸಹೋದರ ನಾಗಬಾಬು ಸಹ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇವರ ನಂತರ ತಲೆಮಾರಿನಲ್ಲಿ ರಾಮ್ ಚರಣ್ ತೇಜ, ಅಲ್ಲು ಅರ್ಜುನ್, ಅಲ್ಲು ಸಿರೀಶ್, ವರುಣ್ ತೇಜ್, ಸಾಯಿ ಧರಮ್ ತೇಜ್, ಪಂಜಾ ವೈಷ್ಣವ್ ತೇಜ್ ಅವರುಗಳು ಪ್ರಸ್ತುತ ತೆಲುಗು ಸಿನಿರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

More from Filmibeat

English summary
Mega Hero Said Dharam Tej warned people who are doing negative comment about Mega family.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X