ಸ್ಟಾರ್‌ ನಟಿ ಜೊತೆ 46ನೇ ವಯಸ್ಸಿನಲ್ಲಿ 2ನೇ ಮದುವೆಯಾದ ನಟ,ಇವರ ಅಜ್ಜಿ ಕನ್ನಡದ ಖ್ಯಾತ ಹಿನ್ನೆಲೆ ಗಾಯಕಿ..!

ಪ್ರೇಮ ಕುರುಡು.. ಇತಿಹಾಸದುದ್ದಕ್ಕೂ ಪ್ರೀತಿಗಂಟಿಕೊಂಡೇ ಬಂದ ಆರೋಪ ಇದು. ಆದರೆ ಬದಲಾದ ಕಾಲದಲ್ಲಿ ಪ್ರೀತಿಯ ವರಸೆ ಬದಲಾಗಿದೆ. ಭಾವೋದ್ವೇಗದ ಪ್ರೀತಿ, ಸ್ನೇಹವಾಗಿ ಅರಳಿ, ಬೆಳೆದು ಪ್ರಬುದ್ಧವಾಗುವ ತನಕ, ನಂಬುಗೆಗಳ ಅಡಿಪಾಯದಲ್ಲಿ ನಿಜಾರ್ಥದ ಅನುರಾಗ ಅರಳುವ ತನಕ... ಕಾಯುವ ತಂತ್ರ ಈಗಿನದು. ಬಾಳಪೂರ್ತಿ ಜೊತೆ ಬರುವ ಪ್ರೀತಿಯ ಗಟ್ಟಿತನವನ್ನು ಒಂದಲ್ಲ ಹತ್ತು ಬಾರಿ ಪರೀಕ್ಷಿಸುವ, ಪೊಳ್ಳೆನಿಸಿದರೆ ಕೈ ಬಿಡುವ, ತಾಳುವುದನ್ನು ಮಾತ್ರ ಆಯ್ದುಕೊಳ್ಳುವ ಪ್ರೀತಿಯ ಹೊಸ ಪರಿ ಇದು. ಇದಕ್ಕೆ ಸಾಯಿ ಕಿರಣ್ ಸದ್ಯದ ಉದಾಹರಣೆ.

ಹೌದು, ಸಾಯಿಕಿರಣ್.. ಪಕ್ಕದ ಆಂಧ್ರದ ಪುರಾತನದ ಕಾಲದ ಹೀರೊ. ನುವ್ವೇ ಕಾವಲಿ ಚಿತ್ರದ ಮೂಲಕ ತೆಲುಗು ಜನರ ಹೃದಯ ಗೆದ್ದ ಸಾಯಿಕಿರಣ್ ಆ ನಂತರ ಪ್ರೇಮಿಂಚು ಎಂಬ ಚಿತ್ರವನ್ನು ಕೂಡ ಮಾಡಿದ್ದರು. ಡಾರ್ಲಿಂಗ್ ಡಾರ್ಲಿಂಗ್, ಕಾಣಿ, ಸೇರಿ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡರು. ಇನ್ನೂ.. ಚಿತ್ರರಂಗದಲ್ಲಿ ನೆಲೆಯೂರುವ ಸಂದರ್ಭದಲ್ಲಿಯೇ ಕಿರುತೆರೆಯತ್ತ ಮುಖ ಮಾಡಿದ ಸಾಯಿ ಕಿರಣ್ 2000ನೇ ಇಸ್ವಿಯಿಂದ ಇಲ್ಲಿಯವರೆಗೆ ಸರಿಸುಮಾರು 25 ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ.

Sai Kiran Grandson of Legendary Singer P Susheela Gets Engaged to Koilamma Actress Sravanti

ಹೀಗೆ ತೆಲುಗು ಚಿತ್ರರಂಗ ಮತ್ತು ಕಿರುತೆರೆ ಎರಡರಲ್ಲಿಯೂ ಸಕ್ರಿಯರಾಗಿರುವ ಸಾಯಿಕಿರಣ್ ಮೆಲೋಡಿ ಕ್ವೀನ್ ಮತ್ತು ಖ್ಯಾತ ಹಿನ್ನೆಲೆ ಗಾಯಕಿ ಪಿ.ಸುಶೀಲಾ ಅವರ ಮೊಮ್ಮಗ ಅನ್ನುವುದು ವಿಶೇಷ. ಇನ್ನೂ ಸಾಯಿಕಿರಣ್ ಕೇವಲ ನಟ ಮಾತ್ರ ಅಲ್ಲ ಸಂಗೀತ ನಿರ್ದೇಶಕರು ಕೂಡ ಹೌದು. ಇವರ ಸಂಗೀತದಲ್ಲಿ ಶಿವಸ್ಥಾನ ಎಂಬ ಹಾಡು ಕೂಡ ಹೊರ ಬಂದಿದೆ. ಇಂಥಾ ಸಾಯಿಕಿರಣ್ ಈಗ ತಮ್ಮ 46ನೇ ಎರಡನೇ ಮದುವೆಗೆ ಸಿದ್ಧರಾಗಿದ್ದಾರೆ.

ಹೌದು, ಅಸಲಿಗೆ 2010ರಲ್ಲಿ ವೈಷ್ಣವಿ ಎಂಬುವರನ್ನು ಸಾಯಿ ಕಿರಣ್ ಮದುವೆಯಾಗಿದ್ದರು. ಆ ನಂತರ ಒಂದು ಹೆಣ್ಣು ಮಗುಗೆ ತಂದೆಯೂ ಆದರು. ಆದರೆ ಆ ನಂತರ ಸಂಸಾರದಲ್ಲಿ ವಿರಸ ಶುರುವಾಯಿತು. ಬಿರುಕು ಮೂಡಿ ವಿಚಾರ ವಿಚ್ಛೇದನದ ಹಂತಕ್ಕೆ ತಲುಪಿತು. ಈ ಕಾರಣಕ್ಕೆ ತಮ್ಮ ಪತ್ನಿಗೆ ಡಿವೋರ್ಸ್ ನೀಡಿದ್ದ ಸಾಯಿ ಕಿರಣ್ ಈಗ ಎರಡನೇ ಮದುವೆಗೆ ಅಣಿಯಾಗಿದ್ದಾರೆ. ತಮ್ಮ ಜೊತೆ ತೆರೆ ಹಂಚಿಕೊಂಡಿದ್ದ ಧಾರಾವಾಹಿಯ ನಾಯಕಿಯನ್ನೇ ಮದುವೆಯಾಗಲಿದ್ದಾರೆ. ಹೀಗೊಂದು ಸುದ್ದಿ ಸದ್ಯಕ್ಕೆ ಆಂಧ್ರದಲ್ಲಿ ಕೇಳಿ ಬರುತ್ತಿದೆ. ಚರ್ಚೆಗೆ ಕೂಡ ಕಾರಣವಾಗಿದೆ.

ಆ ಪ್ರಕಾರ ನೋಡುವುದಾದರೆ ಸಾಯಿಕಿರಣ್ ತಮ್ಮ ಜೊತೆ ಕೊಯಿಲಮ್ಮ ಧಾರಾವಾಹಿಯಲ್ಲಿ ಆಕ್ಟ್ ಮಾಡಿದ್ದ ಶ್ರವಂತಿ ಅವರ ಜೊತೆ ಸದ್ಯದಲ್ಲಿ ಸಪ್ತಪದಿಯನ್ನು ತುಳಿಯಲಿದ್ದಾರೆ. ಇನ್ನೂ ಈಗಾಗಲೇ ಇಬ್ಬರ ನಿಶ್ಚಿತಾರ್ಥ ಕೂಡ ನೆರವೆರಿದ್ದು ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇನ್ನುಳಿದಂತೆ ಸಾಯಿಕಿರಣ್ ಮದುವೆಯಾಗುತ್ತಿರುವ ಶ್ರಾವಂತಿ ಅವರ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದಾರೆ. ತಮ್ಮ ಈ ಚಾನೆಲ್‌ನಲ್ಲಿ ಸೀರೆ ಮತ್ತು ಫ್ಯಾಷನ್ ಕುರಿತ ವಿಡಿಯೋಗಳನ್ನು ಶ್ರಾವಂತಿ ಹಂಚಿಕೊಂಡಿದ್ದಾರೆ.

ಒಟ್ನಲ್ಲಿ ಸದ್ಯಕ್ಕೆ ಸಾಯಿಕಿರಣ್ ಮತ್ತು ಶ್ರಾವಂತಿ ನಿಶ್ಚಿತಾರ್ಥ ಸಮಾರಂಭ ನೆರವೇರಿದೆ. ಸಾಮಾಜಿಕ ಜಾಲತಾಣದಲ್ಲಿ ಇವರಿಗೆ ಶುಭಾಶಯಗಳ ಮಹಾಪೂರ ಕೂಡ ಹರಿದು ಬರುತ್ತಿದೆ. ಇಬ್ಬರ ಮದುವೆ ಸದ್ಯದಲ್ಲಿಯೇ ಅದ್ಧೂರಿಯಾಗಿ ನಡೆಯುವ ಸಾಧ್ಯತೆ ಇದೆ. ಮದುವೆ ಸಮಾರಂಭದಲ್ಲಿ ತೆಲುಗು, ತಮಿಳು ಚಿತ್ರರಂಗದ ಅನೇಕ ಗಣ್ಯರು ಭಾಗವಹಿಸುವ ಸಾಧ್ಯತೆ ಕೂಡ ಇದೆ.

More from Filmibeat

Read more about: marriage wedding tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X