ಒಂದು ಸಿನಿಮಾದಿಂದ ಎಲ್ಲವನ್ನೂ ಕಳೆದುಕೊಂಡಿದ್ದ ಸಾಯಿ ಕುಮಾರ್
ಜೀವನವೇ ಹಾಗೆ, ಎಲ್ಲವೂ ಸರಿಯಾಗಿದೆ ಎಂದುಕೊಳ್ಳುವಾಗಲೇ ತಿರುವೊಂದು ಬಂದು ಎಲ್ಲವನ್ನೂ ತಲೆಕೆಳಗು ಮಾಡಿಬಿಡುತ್ತದೆ. ಒಂದು ಕೆಟ್ಟ ನಿರ್ಣಯ ಹಿಂದಿನ ಎಲ್ಲಾ ಶ್ರಮವನ್ನು ಮಣ್ಣು ಪಾಲು ಮಾಡಿಬಿಡುತ್ತದೆ.
Recommended Video
ಕೆಟ್ಟ ನಿರ್ಣಯದಿಂದ ದೊಡ್ಡ-ದೊಡ್ಡ ನಷ್ಟ ಅನುಭವಿಸಿದರ ಸಂಖ್ಯೆ ಸಿನಿಮಾರಂಗದಲ್ಲಿ ಹೆಚ್ಚು. ಕಷ್ಟಪಟ್ಟು ತಮ್ಮದೇ ಆದ ಗುರುತು ಮೂಡಿಸಿಕೊಂಡಿದ್ದ ನಟರೂ ಸಹ ಒಂದು ಕೆಟ್ಟ ನಿರ್ಣಯದಿಂದ ಭಾರಿ ನಷ್ಟ ಅನುಭವಿಸಿದ ಸಾಕಷ್ಟು ಉದಾಹರಣೆಗಳಿವೆ.
ನಟ ಸಾಯಿ ಕುಮಾರ್ ಅವರಲ್ಲೊಬ್ಬರು. ಸಾಯಿ ಕುಮಾರ್ ಕಷ್ಟಪಟ್ಟು ಮೇಲೆ ಬಂದು ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ವ್ಯಕ್ತಿ. ಆದರೆ ಅವರ ಒಂದು ಕೆಟ್ಟ ನಿರ್ಣಯ ಅವರಿಗೆ ಭಾರಿ ನಷ್ಟವನ್ನುಂಟು ಮಾಡಿತ್ತು.

ಸಿನಿಮಾ ನಿರ್ಮಾಣ ಮಾಡುವ ಮನಸ್ಸು ಮಾಡಿದರು
ನಟ ಸಾಯಿ ಕುಮಾರ್ ತಂದೆ ಸಣ್ಣ-ಪುಟ್ಟ ಪಾತ್ರಗಳಲ್ಲಿ ನಟಿಸುವ ವೇಳೆಗೆ ಸಾಯಿ ಕುಮಾರ್ ಡಬ್ಬಿಂಗ್ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದರು. ನಂತರ ನಾಯಕ ನಟರಾಗಿ ಅಭಿನಯ ಆಗಷ್ಟೆ ಪ್ರಾರಂಭಿಸಿದ್ದರು. ಆಗಲೇ ಸಿನಿಮಾವೊಂದನ್ನು ನಿರ್ಮಾಣ ಮಾಡುವ ನಿರ್ಣಯ ಮಾಡಿದರು ಸಾಯಿ ಕುಮಾರ್.

ಸಾಯಿ ಕುಮಾರ್ ಸಹೋದರನೇ ನಿರ್ದೇಶಕ
ಸಾಯಿ ಕುಮಾರ್ ಸಹೋದರ ಅಯ್ಯಪ್ಪ ಶರ್ಮಾ ನಿರ್ದೇಶನದಲ್ಲಿ ತಂದೆ ತಾವೇ ನಾಯಕನಾಗಿ, ತಂದೆ ಪಿಜೆ ಶರ್ಮಾ ಅವರನ್ನೇ ವಿಲನ್ ಆಗಿ ಹಾಕಿಕೊಂಡು 'ಈಶ್ವರ್ ಅಲ್ಲಾ' ಎಂಬ ಸಿನಿಮಾವೊಂದನ್ನು ನಿರ್ಮಾಣ ಮಾಡಿಯೇ ಬಿಟ್ಟರು. ಆ ಕಾಲದಲ್ಲಿಯೇ ಸಿನಿಮಾಕ್ಕೆ ಎರಡು ಕೋಟಿ ಬಂಡವಾಳ ಹಾಕಿದ್ದರಂತೆ ಸಾಯಿ ಕುಮಾರ್. ಅದಕ್ಕಾಗಿ ಸಾಲವನ್ನೂ ಮಾಡಿದ್ದರು.

ಮಗನೇ ತಂದೆಯನ್ನು ಹೊಡೆಯುವುದನ್ನು ಜನ ಸಹಿಸಲಿಲ್ಲ
ಸಿನಿಮಾವನ್ನು ಕೊಳ್ಳಲು ವಿತರಕರು ಒಪ್ಪಿರಲಿಲ್ಲ, ಹಾಗಾಗಿ ಸಿನಿಮಾ ಬಿಡುಗಡೆ ತಡವಾಯಿತು. ಸಿನಿಮಾ ಚೆನ್ನಾಗಿದ್ದರೂ ಸಹ ಪಿಜೆ ಶರ್ಮಾ ಅವರನ್ನು ವಿಲನ್ ಆಗಿ ಪ್ರೇಕ್ಷಕರು ಒಪ್ಪಿಕೊಳ್ಳಲಿಲ್ಲ. ಮಗನೇ ತಂದೆಯನ್ನು ಹೊಡೆಯುವುದು ಪ್ರೇಕ್ಷಕರಿಗೆ ಜೀರ್ಣಿಸಿಕೊಳ್ಳಲಾಗಲಿಲ್ಲ ಸಿನಿಮಾ ದಾರುಣವಾಗಿ ಸೋತಿತು. ಸಾಯಿ ಕುಮಾರ್‌ಗೆ ಸಾಲಗಳು ಹೆಗಲೇರಿದವು.

ಕಂತುಗಳಲ್ಲಿ ಬಾಕಿ ತೀರಿಸಿದ್ದ ಸಾಯಿ ಕುಮಾರ್
ಕಲಾವಿದರಿಗೆ, ಸ್ಟುಡಿಯೋಗಳಿಗೆ ಬಾಕಿ ಉಳಿಸಿಕೊಂಡಿದ್ದರು ಸಾಯಿ ಕುಮಾರ್. ಬ್ಯಾಂಕ್‌ಗಳಿಂದಲೂ ಸಾಲ ತಂದಿದ್ದರು. ಕೊನೆಗೆ ಎಲ್ಲವನ್ನೂ ಕಳೆದುಕೊಂಡ ಅವರು, ಸಿನಿಮಾಗಳಲ್ಲಿ ನಟಿಸಿ ಕಂತುಗಳಲ್ಲಿ ಸಾಲಗಳನ್ನು ತೀರಿಸಿದರಂತೆ. ಆ ನಂತರ ತಮ್ಮ ಮಗನ ಸಿನಿಮಾ ಗರಂ ಅನ್ನು ನಿರ್ಮಿಸಿದರು ಸಾಯಿ ಕುಮಾರ್ ಅದರಲ್ಲಿ ತುಸು ಲಾಭ ಗಳಿಸಿದರು.


Click it and Unblock the Notifications











