ಸಾಯಿ ಪಲ್ಲವಿ ಜೀವನದಲ್ಲಿ ಶುರುವಾಯ್ತು 'ಲವ್ ಸ್ಟೋರಿ'
ಎನ್ ಜಿ ಕೆ ಸಿನಿಮಾ ಬಳಿಕ ಸಾಯಿ ಪಲ್ಲವಿ ಎರಡು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಾಗಚೈತನ್ಯ ಅವರ ಚಿತ್ರದಲ್ಲಿ ಇದೇ ಮೊದಲ ಸಲ ಸಾಯಿ ಪಲ್ಲವಿ ನಾಯಕಿಯಾಗಿ ಅಭಿನಯಿಸುತ್ತಿರುವುದು ಸೌತ್ ಇಂಡಸ್ಟ್ರಿಯಲ್ಲಿ ಕುತೂಹಲ ಮೂಡಿಸಿದೆ.
ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ಜೋಡಿಯ ಈ ಚಿತ್ರಕ್ಕೆ ಈಗ 'ಲವ್ ಸ್ಟೋರಿ' ಎಂದು ಹೆಸರಿಡಲಾಗಿದೆ. ಶೇಖರ್ ಕಮ್ಮುಲಾ ಈ ಚಿತ್ರ ನಿರ್ದೇಶನ ಮಾಡುತ್ತಿದ್ದು, ನಾಗಚೈತನ್ಯ ಅವರ 19ನೇ ಸಿನಿಮಾ ಇದಾಗಿದೆ.

ಇದು ಪಕ್ಕಾ ಲವ್ ಸ್ಟೋರಿಯಾಗಿದ್ದು, ಹಳ್ಳಿಯಿಂದ ನಗರಕ್ಕೆ ಬರುವ ಹುಡುಗ ಮತ್ತು ಹುಡುಗಿ ಸುತ್ತ ಚಿತ್ರಕಥೆ ಮಾಡಲಾಗಿದೆ. ಶೇಖರ್ ಕಮ್ಮುಲಾ ಈ ಹಿಂದೆ ಫಿದಾ ಸಿನಿಮಾ ನಿರ್ದೇಶನ ಮಾಡಿದ್ದರು. ಫಿದಾ ಚಿತ್ರದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿದ್ದರು. ಈ ಸಿನಿಮಾ ಸಾಯಿ ಪಲ್ಲವಿ ವೃತ್ತಿ ಜೀವನದಲ್ಲಿ ದೊಡ್ಡ ಹಿಟ್ ಆಗಿತ್ತು.
ಇನ್ನು ನಾಗಚೈತನ್ಯ ಮತ್ತು ವೆಂಕಟೇಶ್ ನಟಿಸಿದ್ದ 'ವೆಂಕಿಮಾಮ' ಈ ಹಿಂದೆ ಬಿಡುಗಡೆಯಾಗಿ ಸೂಪರ್ ಸಕ್ಸಸ್ ಕಂಡಿತ್ತು. ಲವ್ ಸ್ಟೋರಿ ಸಿನಿಮಾ ಬಿಟ್ಟು ವಿರಾಟ್ ಪರ್ವ ಎಂಬ ಇನ್ನೊಂದು ಚಿತ್ರದಲ್ಲಿ ನಾಗಚೈತನ್ಯ ನಟಿಸುತ್ತಿದ್ದಾರೆ.


Click it and Unblock the Notifications











