'ಶ್ಯಾಮ್ ಸಿಂಗ್ ರಾಯ್'ಗಾಗಿ ಒಂದಾದ ಸಾಯಿ ಪಲ್ಲವಿ ಮತ್ತು ನಾನಿ

ದಕ್ಷಿಣ ಭಾರತೀಯ ಸಿನಿಮಾ ಖ್ಯಾತ ನಟಿ ಸಾಯಿ ಪಲ್ಲವಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟ ನಾಗಚೈತನ್ಯ ಜೊತೆ ಲವ್ ಸ್ಟೋರಿ ಸಿನಿಮಾದಲ್ಲಿ ನಟಿಸುತ್ತಿದ್ದ ಸಾಯಿ ಪಲ್ಲವಿ, ಈ ಸಿನಿಮಾ ಮುಗಿಸಿ ಆಗಲೆ ಮತ್ತೊಂದು ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ಹೌದು, ಸಾಯಿ ಪಲ್ಲವಿ ಮತ್ತು ತೆಲುಗು ನಟ ನಾನಿ ಅಭಿನಯದ ಹೊಸ ಸಿನಿಮಾ ಶ್ಯಾಮ್ ಸಿಂಗ್ ರಾಯ್ ಚಿತ್ರದ ಮುಹೂರ್ತ ಇಂದು (ಡಿ.10) ನೆರವೇರಿದ್ದು, ಚಿತ್ರೀಕರಣ ಸಹ ಇವತ್ತಿನಿಂದನೇ ಪ್ರಾರಂಭವಾಗಿದೆ. ಚಿತ್ರದ ಮುಹೂರ್ತದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಶ್ಯಾಮ್ ಸಿಂಗ್ ರಾಯ್ ಸಿನಿಮಾದ ಮುಹೂರ್ತ ಇಂದು ಹೈದರಾಬಾದ್ ನಲ್ಲಿ ನರೆವೇರಿದ್ದು, ವಿಶೇಷ ಎಂದರೆ ನಟ ನಾನಿ ತಂದೆ ಘಂಟ ರಂಬಾಬು ಚಿತ್ರಕ್ಕೆ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ. ಮೊದಲ ಬಾರಿಗೆ ನಾನಿ ತಂದೆ ಮಗನ ಚಿತ್ರಕ್ಕೆ ಕ್ಲ್ಯಾಪ್ ಮಾಡಿದ್ದು, ನಾನಿ ತುಂಬಾ ಸಂತಸಪಟ್ಟಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ನಾನಿ, ಮೊದಲ ಬಾರಿಗೆ ಅಪ್ಪ ಕ್ಲ್ಯಾಪ್ ಮಾಡಿದ್ದಾರೆ ಎಂದು ವಿಡಿಯೋ ಶೇರ್ ಮಾಡಿದ್ದಾರೆ.

Sai Pallavi and Nani starrer Shyam Singha Roy movie officially Launched Today

ನಾನಿ ಮತ್ತು ಸಾಯಿ ಪಲ್ಲವಿ ಎರಡನೇ ಬಾರಿಗೆ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಮೊದಲು ಎಂಸಿಎ ಎನ್ನುವ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಚಿತ್ರಕ್ಕೆ ಟ್ಯಾಕ್ಸಿವಾಲ ಖ್ಯಾತಿಯ ನಿರ್ದೇಶಕ ರಾಹುಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶೇಷ ಎಂದರೆ ಸಿನಿಮಾದಲ್ಲಿ ಮೂವರು ನಾಯಕಿಯರು. ಸಾಯಿ ಪಲ್ಲವಿ ಜೊತೆ ಮಲಯಾಳಂ ನಟಿ ಮಡೊನ್ನಾ ಸೆಬಾಸ್ಟಿಯನ್ ಮತ್ತು ಕೃತಿ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಸಾಯಿ ಪಲ್ಲವಿ ಬಳಿ ಸದ್ಯ ಲವ್ ಸ್ಟೋರಿ, ರಾಣಾದಗ್ಗುಬಾಟಿ ಅಭಿನಯದ ವಿರಾಟಪರ್ವಂ ಜೊತೆಗೆ ವಿಬ್ ಸೀರಿಸ್ ನಲ್ಲೂ ಬ್ಯುಸಿಯಾಗಿದ್ದಾರೆ.

More from Filmibeat

English summary
Actress Sai Pallavi and Nani starrer Shyam Singha Roy movie officially Launched Today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X