For Quick Alerts
  ALLOW NOTIFICATIONS  
  For Daily Alerts

  ಪುಟ್ಟ ಮಕ್ಕಳಿಗೆ ಮೆಹಂದಿ ಹಾಕಿ ಸಂಭ್ರಮಿಸಿದ ಸಾಯಿ ಪಲ್ಲವಿ: ಸಮಂತಾ ಹೇಳಿದ್ದೇನು?

  |

  ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಸಾಯಿ ಪಲ್ಲವಿ ಸದ್ಯ ತೆಲುಗು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಸಾಯಿ ಪಲ್ಲವಿ ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು. 'ಪ್ರೇಮಂ' ಸಿನಿಮಾ ಮೂಲಕ ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಸಂಚಲನ ಮೂಡಿಸಿದ್ದ ನಟಿಗೆ ಫಿದಾ ಆಗದವರೇ ಇಲ್ಲ.

  ಸರಳತೆ ಮತ್ತು ಅದ್ಭುತ ಅಭಿನಯದ ಮೂಲಕ ಅಭಿಮಾನಿಗಳ ಮನಗೆದ್ದಿರುವ ಸಾಯಿಪಲ್ಲವಿ ಸದ್ಯ ತೆಲುಗಿನ ಲವ್ ಸ್ಟೋರಿ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಸಿನಿಮಾದಲ್ಲಿ ನಾಗ ಚೈತನ್ಯ ನಾಯಕನಾಗಿ ನಟಿಸುತ್ತಿದ್ದಾರೆ. ಸದ್ಯ ಸಿನಿಮಾದ ಚಿತ್ರೀಕರಣ ಉತ್ತರ ಪ್ರದೇಶದ ಹಳ್ಳಿಯಲ್ಲಿ ನಡೆಯುತ್ತಿದೆ. ಶೂಟಿಂಗ್ ಒತ್ತಡದ ನಡುವೆಯೂ ಸಾಯಿ ಪಲ್ಲವಿ ಸೆಟ್ ನಲ್ಲಿ ನೆರೆದಿದ್ದ ಮಕ್ಕಳಿಗೆ ಮೆಹಂದಿ ಹಾಕಿ ಸಂಭ್ರಮಿಸಿದ್ದಾರೆ. ಮುಂದೆ ಓದಿ...

  ಪರೀಕ್ಷೆ ಬರೆಯಲು ಕಾಲೇಜಿಗೆ ಹೋದ ಸಾಯಿ ಪಲ್ಲವಿ: ಸೆಲ್ಫಿಗಾಗಿ ಮುಗಿಬಿದ್ದ ವಿದ್ಯಾರ್ಥಿಗಳು

  ಮಕ್ಕಳಿಗೆ ಮೆಹಂದಿ ಹಾಕಿದ ಸಾಯಿ ಪಲ್ಲವಿ

  ಮಕ್ಕಳಿಗೆ ಮೆಹಂದಿ ಹಾಕಿದ ಸಾಯಿ ಪಲ್ಲವಿ

  ಸಾಯಿ ಪಲ್ಲವಿ ಶೂಟಿಂಗ್ ಸ್ಪಾಟ್ ನಲ್ಲಿದ್ದ ಮಕ್ಕಳಿಗೆ ಮೆಹಂದಿ ಹಾಕಿದ್ದಾರೆ ಸಂಭ್ರಮಿಸಿದ್ದಾರೆ. ಪುಟ್ಟ ಪುಟ್ಟ ಕೈಗಳಿಗೆ ತರಹೇವಾರಿ ಡಿಸೈನ್ ಗಳನ್ನು ಬಿಡಿಸಿ ಮಕ್ಕಳನ್ನು ಸಂತಸ ಪಡಿಸಿದ್ದಾರೆ. ಮೆಹಂದಿ ಎಂದರೆ ಮಕ್ಕಳಿಗೆ ಎಷ್ಟು ಪ್ರೀತಿ ಎನ್ನುವುದು ಎಲ್ಲರಿಗೂ ಗೊತ್ತಿರುವುದೇ. ಮಕ್ಕಳ ಮನಸ್ಸು ಅರಿತು ಸಾಯಿ ಪಲ್ಲವಿ ಮದರಂಗಿ ಬಿಡಿಸಿ ಖುಷಿಪಡಿಸಿದ್ದಾರೆ.

  ಫೋಟೋ ಶೇರ್ ಮಾಡಿರುವ 'ಫಿದಾ' ಬ್ಯೂಟಿ

  ಫೋಟೋ ಶೇರ್ ಮಾಡಿರುವ 'ಫಿದಾ' ಬ್ಯೂಟಿ

  ಸಾಯಿ ಪಲ್ಲವಿ ಹಾಕಿದ ಮೆಹಂದಿ ನೋಡಿ ಹಳ್ಳಿಯ ಮಕ್ಕಳು ಫುಲ್ ಆಗಿದ್ದಾರೆ. ಮಕ್ಕಳಿಗೆ ಮದರಂಗಿ ಹಾಕುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಫೋಟೋಗೆ 'ಹ್ಯಾಪಿ ಕ್ಲೈಂಟ್ಸ್' ಎಂದು ಕ್ಯಾಪ್ಷನ್ ನೀಡಿದ್ದಾರೆ. ಸಾಯಿ ಪಲ್ಲ ವಿ ಕೆಲಸಕ್ಕೆ ಅಭಿಮಾನಿಗಳು ಫಿದಾ ಆಗಿದ್ದು ಲೈಕ್ ಒತ್ತಿ, ಮಚ್ಚುಗೆಯ ಕಾಮೆಂಟ್ಸ್ ಮಾಡುತ್ತಿದ್ದಾರೆ.

  ಸೌಂದರ್ಯ ಬಯೋಪಿಕ್ ನಲ್ಲಿ ನಟಿಸಲಿದ್ದಾರೆ ದಕ್ಷಿಣ ಭಾರತದ ಖ್ಯಾತ ನಟಿ

  ಸಮಂತಾ ಮತ್ತು ಅನುಪಮಾ ಪರಮೇಶ್ವರ್ ಹೇಳಿದ್ದೇನು?

  ಸಮಂತಾ ಮತ್ತು ಅನುಪಮಾ ಪರಮೇಶ್ವರ್ ಹೇಳಿದ್ದೇನು?

  ವಿಶೇಷ ಅಂದರೆ ಅಭಿಮಾನಿಗಳು ಮಾತ್ರವಲ್ಲದೆ ಸೆಲೆಬ್ರಿಟಿಗಳು ಸಹ ಸಾಯಿ ಪಲ್ಲವಿಯ ಮದರಂಗಿಗೆ ಮನಸೋತಿದ್ದಾರೆ. ನಟಿ ಸಮಂತಾ ಕಾಮೆಂಟ್ ಮಾಡಿ ತುಂಬಾ ಮುದ್ದಾಗಿದೆ ಎಂದಿದ್ದಾರೆ. ಇನ್ನೂ ನಟಿ ಅನುಪಮಾ ಪರಮೇಶ್ವರನ್ ಕಾಮೆಂಟ್ ಮಾಡಿ 'ಯು ಆರ್ ಸಚ್ ಎ ಡಾರ್ಲಿಂಗ್' ಎಂದಿದ್ದಾರೆ.

  ಅನಿರುದ್ ವಿರುದ್ಧ ತಿರುಗಿಬಿದ್ದ ನೆಟ್ಟಿಗರು | Oneindia Kannada
  ಸಾಯಿ ಪಲ್ಲವಿ ಬಳಿ ಇರುವ ಸಿನಿಮಾಗಳು

  ಸಾಯಿ ಪಲ್ಲವಿ ಬಳಿ ಇರುವ ಸಿನಿಮಾಗಳು

  ಸಾಯಿ ಪಲ್ಲವಿ ಸದ್ಯ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟ ನಾಗಚೈತನ್ಯ ಜೊತೆ ನಾಯಕಿಯಾಗಿ ನಟಿಸುತ್ತಿರುವ 'ಲವ್ ಸ್ಟೋರಿ' ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ನಿರತರಾಗಿದ್ದಾರೆ. ಜೊತೆಗೆ ರಾಣಾ ದಗ್ಗುಬಾಟಿ ಜೊತೆ 'ವಿರಾಟ ಪರ್ವಂ' ಸಿನಿಮಾದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾಗಳ ಜೊತೆಗೆ ಮೊದಲ ಬಾರಿಗೆ ವೆಬ್ ಸೀರಿಸ್ ನಲ್ಲಿ ಮಿಂಚಲು ಸಜ್ಜಾಗುತ್ತಿದ್ದಾರೆ.

  English summary
  South Indian Actress Sai Pallavi puts Mehndi on Kids at Love Story Movie Shooting Set in Uttar Pradesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X