For Quick Alerts
  ALLOW NOTIFICATIONS  
  For Daily Alerts

  ಪವನ್ ಕಲ್ಯಾಣ್ ಜೊತೆ ನಟಿಸಲು ದೊಡ್ಡ ಮೊತ್ತದ ಸಂಭಾವನೆ ಪಡೆದ ಸಾಯಿ ಪಲ್ಲವಿ!

  |

  ನಟ ಪವನ್ ಕಲ್ಯಾಣ್ ಹಾಗೂ ರಾಣಾ ದಗ್ಗುಬಾಟಿ ಒಟ್ಟಿಗೆ ಅಭಿನಯಿಸುತ್ತಿರುವ ಮಲಯಾಳಂ ಸಿನಿಮಾ ಅಯ್ಯಪ್ಪನುಂ ಕೋಶಿಯುಂ ಸಿನಿಮಾದ ರೀಮೇಕ್‌ ಬಗ್ಗೆ ಸಖತ್ ಚರ್ಚೆ ನಡೆಯುತ್ತಿದೆ.

  ಈ ರೀಮೇಕ್ ಸಿನಿಮಾದಲ್ಲಿ ನಟಿಸಲು ಪವನ್ ಕಲ್ಯಾಣ್ ಪಡೆಯುತ್ತಿರುವ ಸಂಭಾವನೆ ಬಗ್ಗೆ ದೊಡ್ಡದಾಗಿ ಸುದ್ದಿಯಾಗಿದೆ. ಇದರ ನಡುವೆ ಸಿನಿಮಾಕ್ಕೆ ನಾಯಕಿ ಯಾರಾಗಬಹುದು ಎಂಬ ಚರ್ಚೆಯೂ ಜೋರಾಗಿ ನಡೆದಿದ್ದು, ಈಗ ನಾಯಕಿ ಯಾರೆಂಬುದು ಖಾತ್ರಿಯಾಗಿದೆ.

  ಸಿನಿಮಾದಲ್ಲಿ ಪವನ್ ಕಲ್ಯಾಣ್ ಗೆ ನಾಯಕಿಯಾಗಿ ನಟಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಇನ್ನು ರಾಣಾ ದಗ್ಗುಬಾಟಿಗೆ ನಾಯಕಿಯಾಗಿ ಐಶ್ವರ್ಯಾ ರಾಜೇಶ್ ನಟಿಸುತ್ತಿದ್ದಾರೆ. ಆದರೆ ಪವನ್ ಕಲ್ಯಾಣ್ ಜೊತೆ ನಟಿಸಲು ಸಾಯಿ ಪಲ್ಲವಿ ಭಾರಿ ದೊಡ್ಡ ಮತ್ತದ ಸಂಭಾವನೆಗೆ ಡಿಮ್ಯಾಂಡ್ ಮಾಡಿದ್ದು, ಷರತ್ತಿಗೆ ಓಕೆ ಎಂದಿದ್ದಾರೆ ನಿರ್ಮಾಪಕರು.

  ಭಾರಿ ಸಂಭಾವನೆ ಕೇಳಿದ ಸಾಯಿ ಪಲ್ಲವಿ

  ಭಾರಿ ಸಂಭಾವನೆ ಕೇಳಿದ ಸಾಯಿ ಪಲ್ಲವಿ

  ಪವನ್ ಕಲ್ಯಾಣ್ ಜೊತೆ ನಟಿಸಲು ಬರೋಬ್ಬರಿ 2 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ ಸಾಯಿ ಪಲ್ಲವಿ. ಪವನ್ ಕಲ್ಯಾಣ್ ಹಾಗೂ ರಾಣಾ ಸಂಭಾವನೆಗೆ ಹೋಲಿಸಿದರೆ ಇದು ಕಡಿಮೆಯೇ ಆದರೆ. ಸಿನಿಮಾ ದಲ್ಲಿ ಸಾಯಿ ಪಲ್ಲವಿ ಅವರ ಪಾತ್ರವೂ ಸಹ ಬಹಳ ಕಡಿಮೆಯೇ ಇದೆ.

  ಸಾಯಿ ಪಲ್ಲವಿಗೆ ಕಡಿಮೆ ಸ್ಕ್ರೀನ್ ಸ್ಪೇಸ್

  ಸಾಯಿ ಪಲ್ಲವಿಗೆ ಕಡಿಮೆ ಸ್ಕ್ರೀನ್ ಸ್ಪೇಸ್

  ಇಡೀಯ ಸಿನಿಮಾ ರಾಣಾ ದಗ್ಗುಬಾಟಿ-ಪವನ್ ಕಲ್ಯಾಣ್ ಮೇಲೆ ನಿರ್ಭರವಾಗಿದ್ದು, ಇಬ್ಬರೂ ನಾಯಕಿಯರಿಗೆ ಸ್ಕ್ರೀನ್ ಸ್ಪೇಸ್ ಕಡಿಮೆಯೇ. ಕೆಲವೇ ದಿನಗಳಲ್ಲಿ ನಾಯಕಿಯರ ಭಾಗದ ಚಿತ್ರೀಕರಣ ಮುಗಿದು ಹೋಗುತ್ತದೆ. ಹೀಗಿದ್ದಾಗ್ಯೂ ಸಾಯಿ ಪಲ್ಲವಿ ದೊಡ್ಡ ಮತ್ತವನ್ನೇ ಕೇಳಿದ್ದಾರೆ ಎನ್ನಲಾಗುತ್ತಿದೆ.

  ರಾಣಾ ದಗ್ಗುಬಾಟಿ ಎದುರು ಐಶ್ವರ್ಯಾ ರಾಜೇಶ್

  ರಾಣಾ ದಗ್ಗುಬಾಟಿ ಎದುರು ಐಶ್ವರ್ಯಾ ರಾಜೇಶ್

  ಇನ್ನು ರಾಣಾ ದಗ್ಗುಬಾಟಿಗೆ ಜೊತೆಯಾಗುತ್ತಿರುವ ಐಶ್ವರ್ಯಾ ರಾಜೇಶ್ ತಮಿಳಿನ ಹಿಟ್ ನಟಿಯಾಗಿದ್ದು, ತೆಲುಗಿನಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಐಶ್ವರ್ಯಾ ರಾಜೇಶ್ ಅವರಿಗೆ ಸಹ ಸಿನಿಮಾದಲ್ಲಿ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಇಲ್ಲ.

  ' Yuvarathnaa ' ನಿಗಾಗಿ ಒಂದಾದ, Rakshit Shetty, Vijay Devarakonda | Filmibeat Kannnada
  ಪವನ್ ಕಲ್ಯಾಣ್ ಗೆ 50 ಕೋಟಿ ಸಂಭಾವನೆ?

  ಪವನ್ ಕಲ್ಯಾಣ್ ಗೆ 50 ಕೋಟಿ ಸಂಭಾವನೆ?

  ಸಿನಿಮಾದ ಚಿತ್ರೀಕರಣ ಜನವರಿಯಿಂದ ಆರಂಭವಾಗಲಿದೆ. ಸಿನಿಮಾಕ್ಕೆ ಪವನ್ ಕಲ್ಯಾಣ್ ಗೆ 50 ಕೋಟಿ ಸಂಭಾವನೆ ನೀಡಲಾಗಿದ್ದರೆ ರಾಣಾ ದಗ್ಗುಬಾಟಿಗೆ 6 ಕೋಟಿ ನೀಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ರಾಣಾ ನಟಿಸುತ್ತಿರುವ ಪಾತ್ರಕ್ಕೆ ಮೊದಲಿಗೆ ಸುದೀಪ್ ಅವರನ್ನು ಆಯ್ಕೆ ಮಾಡಲಾಗಿತ್ತು, ಡೇಟ್ಸ್ ಹೊಂದಾಣಿಕೆ ಸಮಸ್ಯೆಯಿಂದ ಆ ಪಾತ್ರ ರಾಣಾ ದಗ್ಗುಬಾಟಿ ಪಾಲಾಯಿತು ಎನ್ನಲಾಗುತ್ತಿದೆ.

  English summary
  Actress Sai Pallavi demands for big amount of remuneration to act with Pawan Kalyan in Ayyappanum Koshiyum director.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X