ಸಾಯಿ ಪಲ್ಲವಿ ತುಂಡು ಬಟ್ಟೆಗಳನ್ನು ಧರಿಸದೇ ಇರಲು ಆಕೆಯದ್ದೇ ಒಂದು ವಿಡಿಯೋ ಕಾರಣ!

ಸಾಯಿ ಪಲ್ಲವಿ ದಕ್ಷಿಣದ ಖ್ಯಾತ ನಟಿಯರಲ್ಲಿ ಒಬ್ಬರು. ಗ್ಲಾಮರಸ್ ಬಟ್ಟೆಗಳು, ಹಾಟ್ ಸೀನ್‌ಗಳು, ತುಂಡು ಬಟ್ಟೆಗಳನ್ನು ತೊಡುವುದೇ ನಟನೆ ಎಂದು ಹಲವು ನಟಿಯರು ನಂಬಿರುವ ಕಾಲದಲ್ಲಿ ಒಂದಿಷ್ಟೂ ಗ್ಲಾಮರಸ್ ಆಗಿ ಕಾಣಿಸಿಕೊಳ್ಳದೆ ಕೇವಲ ನಟನೆಯಿಂದಷ್ಟೆ ಸ್ಟಾರ್ ಪಟ್ಟಕ್ಕೇರಿದವರು ಸಾಯಿ ಪಲ್ಲವಿ.

ಸಾಯಿ ಪಲ್ಲವಿ ಈವರೆಗೆ ನಟಿಸಿರುವ ಯಾವ ಸಿನಿಮಾದಲ್ಲಿಯೂ ತುಂಡು ಬಟ್ಟೆ ಧರಿಸಿದವರಲ್ಲ, ಅಶ್ಲೀಲವಾಗಿ ಅಥವಾ ಗ್ಲಾಮರಸ್ ಆಗಿ ಕಾಣಿಸಿಕೊಂಡವರಲ್ಲ, ಕುಟುಂಬದೊಡನೆ ನೋಡಲು ಮುಜುಗರವಾಗುವಂಥಹಾ ದೃಶ್ಯಗಳಲ್ಲಿ ನಟಿಸಿದವರಲ್ಲ ಇದೇ ಕಾರಣಕ್ಕೆ ಇವರನ್ನು ಆರಾಧಿಸುವವರ ಸಂಖ್ಯೆ ದೊಡ್ಡದಿದೆ.

ಆದರೆ ನಟಿ ಸಾಯಿ ಪಲ್ಲವಿಗೆ ಗ್ಲಾಮರಸ್ ಉಡುಗೆಗಳ ಮೇಲೆ ದ್ವೇಷವೇನಿಲ್ಲ. ತುಂಡು ಬಟ್ಟೆ ಧರಿಸುವುದು ತಪ್ಪು ಎಂಬುದು ಸಾಯಿ ಪಲ್ಲವಿಯ ನಿಲವೂ ಅಲ್ಲ. ಆದರೆ ಸಾಯಿ ಪಲ್ಲವಿ ತುಂಡು ಬಟ್ಟೆಗಳನ್ನು ಧರಿಸದೇ ಇರಲು ಬಲವಾದ ಕಾರಣವೊಂದಿದೆ. ಅವರದ್ದೇ ಒಂದು ವಿಡಿಯೋದ ಕಾರಣದಿಂದ ಅವರು ಗ್ಲಾಮರಸ್ ಉಡುಗೆ ತೊಡುವುದು ಬಿಟ್ಟರಂತೆ!

ಗ್ಮಾಮರಸ್ ಉಡುಪುಗಳ ವಿರೋಧಿಯಲ್ಲ: ಸಾಯಿ ಪಲ್ಲವಿ

ಗ್ಮಾಮರಸ್ ಉಡುಪುಗಳ ವಿರೋಧಿಯಲ್ಲ: ಸಾಯಿ ಪಲ್ಲವಿ

ತಾವು ಗ್ಲಾಮರಸ್ ಉಡುಪುಗಳನ್ನು ತೊಡದೇ ಇರಲು ಕಾರಣವನ್ನು ಇತ್ತೀಚಿನ ಸಂದರ್ಶನದಲ್ಲಿ ವಿವರಿಸಿರುವ ಸಾಯಿ ಪಲ್ಲವಿ, ''ನಾನು ತುಂಡು ಬಟ್ಟೆಯ ವಿರೋಧಿಯಲ್ಲ. ನಾನು ಕ್ರೀಡಾಪಟು ಆಗಿದ್ದವಳು ಆಗೆಲ್ಲ ನಾನು ತುಂಡು ಬಟ್ಟೆ ಹಾಕಿದ್ದೆ, ಅದು ನನಗೆ ಮುಜುಗರ ತರುತ್ತಿರಲಿಲ್ಲ. ಈ ಮೊದಲೂ ನಾನು ಗ್ಲಾಮರಸ್ ಉಡುಗೆಗಳನ್ನು ಧರಿಸುತ್ತಿದ್ದೆ. ಆದರೆ ಒಂದು ಘಟನೆಯ ನಂತರ ನನ್ನೊಳಗೆ ಗ್ಲಾಮರಸ್ ಬಟ್ಟೆಗಳ ವಿರುದ್ಧವಾದ ಒಂದು ಸಂವೇದನೆ ಶುರುವಾಯಿತು'' ಎಂದು ಸಾಯಿ ಪಲ್ಲವಿ ವಿದ್ಯಾರ್ಥಿಯಾಗಿದ್ದಾಗ ನಡೆದ ಘಟನೆ ವಿವರಿಸಿದ್ದಾರೆ.

ಸಾಯಿ ಪಲ್ಲವಿಯ ವಿಡಿಯೋ ಬಿಡುಗಡೆ ಆಗಿತ್ತು

ಸಾಯಿ ಪಲ್ಲವಿಯ ವಿಡಿಯೋ ಬಿಡುಗಡೆ ಆಗಿತ್ತು

''ನಾನು ಜಾರ್ಜಿಯಾದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಆಗಿದ್ದಾಗ ಅಲ್ಲಿ ಕಾಲೇಜು ವೇದಿಕೆಯಲ್ಲಿ ಟ್ಯಾಂಗೋ ಡ್ಯಾನ್ಸ್ ಮಾಡಿದ್ದೆ. ಟ್ಯಾಂಗೊ ಡ್ಯಾನ್ಸ್ ಮಾಡಲು ಅನುಕೂಲವಾಗುವಂತೆ ಅಲ್ಲಿನವರು ಚಿಕ್ಕ ಉಡುಪು ಧರಿಸುತ್ತಾರೆ. ನಾನೂ ಸಹ ಮನೆಯವರ ಅನುಮತಿ ಪಡೆದು ಗ್ಲಾಮರಸ್ ಉಡುಪು ಧರಿಸಿದ್ದೆ. 'ಪ್ರೇಮಂ' ಸಿನಿಮಾ ಬಿಡುಗಡೆ ಆದ ಬಳಿಕ ಆ ಡ್ಯಾನ್ಸ್ ವಿಡಿಯೋ ಯೂಟ್ಯೂಬ್‌ನಲ್ಲಿ ಬಿಡುಗಡೆ ಆಯಿತು. ನನ್ನ ಡ್ಯಾನ್ಸ್‌ನ ವಿಡಿಯೋ ನೋಡಿದವರು ಅದನ್ನು ಡ್ಯಾನ್ಸ್ ರೀತಿ ನೋಡಲಿಲ್ಲ. ಅದರಲ್ಲಿ ಬೇರೆ ಏನೋ ನೋಡಿದರು, ಕಟ್ಟದಾಗಿ ಕಮೆಂಟ್ ಮಾಡಿದರು ಅದನ್ನು ಕಂಡು ನನಗೆ ನಾಚಿಕೆಯಾಯಿತು, ಬೇಸರವಾಯಿತು'' ಎಂದಿದ್ದಾರೆ ಸಾಯಿ ಪಲ್ಲವಿ.

ಅಂದಿನಿಂದ ತುಂಡು ಬಟ್ಟೆ ಧರಿಸುವುದು ಬಿಟ್ಟೆ: ಸಾಯಿ ಪಲ್ಲವಿ

ಅಂದಿನಿಂದ ತುಂಡು ಬಟ್ಟೆ ಧರಿಸುವುದು ಬಿಟ್ಟೆ: ಸಾಯಿ ಪಲ್ಲವಿ

ಆ ಘಟನೆ ಬಳಿಕ ನನಗೆ ಸಣ್ಣ ಉಡುಗೆಗಳನ್ನಾಗಲಿ, ಗ್ಲಾಮರಸ್ ಆದ ಉಡುಗೆಗಳನ್ನು ಧರಿಸಲು ಆಗಲೇ ಇಲ್ಲ. ಆ ರೀತಿಯ ಉಡುಗೆಗಳ ವಿರುದ್ಧ ಜಾಗೃತೆಯೊಂದು ತನ್ನಂತಾನೆ ನನ್ನ ಮನದಲ್ಲಿ ಮನೆ ಮಾಡಿಬಿಟ್ಟಿತು. ಈಗಲೂ ನಾನು ಸಾಮಾನ್ಯ ಉಡುಪು ಧರಿಸಿದರೂ ಅಪ್ರಯತ್ನ ಪೂರ್ವವಾಗಿ ನಾನು ಎಚ್ಚರವಾಗಿರುವಂತೆ ಆಗಿದೆ'' ಎಂದು ನಗುತ್ತಲೇ ವಿವರಿಸಿದ್ದಾರೆ ಸಾಯಿ ಪಲ್ಲವಿ.

ಜೂನ್ 17 ರಂದು ಸಿನಿಮಾ ಬಿಡುಗಡೆ

ಜೂನ್ 17 ರಂದು ಸಿನಿಮಾ ಬಿಡುಗಡೆ

ಸಾಯಿ ಪಲ್ಲವಿ ನಟಿಸಿರುವ 'ವಿರಾಟ ಪರ್ವಂ' ಸಿನಿಮಾ ಜೂನ್ 17 ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ವೆನ್ನೆಲ ಹೆಸರಿನ ಯುವತಿಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ಸಿನಿಮಾದಲ್ಲಿ ಸಾಯಿ ಪಲ್ಲವಿ ಜೊತೆಗೆ ರಾಣಾ ದಗ್ಗುಬಾಟಿ, ಪ್ರಿಯಾಮಣಿ ಇನ್ನೂ ಹಲವರಿದ್ದಾರೆ. ಇದರ ಹೊರತಾಗಿ ಕಮಲ್ ಹಾಸನ್ ನಿರ್ಮಾಣದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಸಾಯಿ ಪಲ್ಲವಿ, ಜೊತೆಗೆ 'ಗಾರ್ಗಿ' ಹೆಸರಿನ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮಿಳಿನ ಸ್ಟಾರ್ ನಟರೊಬ್ಬರ ಸಿನಿಮಾಕ್ಕೆ ಸಾಯಿ ಪಲ್ಲವಿ ಸಹಿ ಮಾಡಿದ್ದಾರೆ ಎನ್ನಲಾಗುತ್ತಿದೆ.

More from Filmibeat

English summary
Actress Sai Pallavi explains why she did not wear short dress in real life or in movie. She said she is not against glamorous dress.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X