2 ಕೋಟಿ ಆಫರ್ ಬಿಟ್ಟ ಸಾಯಿ ಪಲ್ಲವಿ: ಭೇಷ್ ಎಂದ ನಿರ್ದೇಶಕ ಸುಕುಮಾರ್!

ನಟಿ ಸಾಯಿ ಪಲ್ಲವಿ ಎಲ್ಲರಂತೆ ಅಲ್ಲ. ಸಾಯಿ ಪಲ್ಲವಿ ಕೆಲವು ವಿಚಾರಗಳಲ್ಲಿ ತುಂಬಾನೇ ಡಿಫ್ರೆಂಟ್. ಸಾಯಿ ಪಲ್ಲವಿ, ಮೇಕಪ್, ಲಿಪ್ ಲಾಕ್ ವಿಚಾರದಲ್ಲಿ ತಮ್ಮದೇ ಆದ ನಿರ್ಧಾರಗಳನ್ನು ಹೊಂದಿದ್ದಾರೆ. ಅದರಿಂದ ಹಲವು ಬಾರಿ ಸಾಯಿ ಪಲ್ಲವಿ ಸುದ್ದಿ ಆಗಿದ್ದಾರೆ.

ಸಾಯಿ ಪಲ್ಲವಿ ಹೆಚ್ಚಾಗಿ ಸೀರೆಯಲ್ಲೇ ಕಾಣಿಸಿಕೊಳ್ಳುತ್ತಾರೆ. ಅದು ಕೂಡ ಈ ನಟಿಯ ವಿಶೇಷತೆಗಳಲ್ಲಿ ಒಂದು. ಯಾವುದೇ, ಸಿನಿಮಾ ಕಾರ್ಯಕ್ರಮ ಆದರೂ ಕೂಡ ಸಾಯಿ ಪಲ್ಲವಿ ಹೆಚ್ಚಾಗಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ಈಕೆ ಕಾಣಿಸಿಕೊಂಡಿದ್ದು, ಸಿನಿಮಾದ ಕಾರ್ಯಕ್ರಮದಲ್ಲಿ. ಅಲ್ಲು ಕೂಡ ರೇಶ್ಮೆ ಸೀರೆಯುಟ್ಟು ನಟಿ ಗಮನ ಸೆಳೆದಿದ್ದಾರೆ.

ಆದರೆ ಇಲ್ಲಿ ಎಲ್ಲದಕ್ಕಿಂತಲೂ ಹೆಚ್ಚಾಗಿ ಗಮನ ಸೆಳೆದ ವಿಚಾರ ಅಂದರೆ ಅದು ನಟಿ ಸಾಯಿ ಪಲ್ಲವಿ ಬಗ್ಗೆ ನಿರ್ದೇಶಕ ಸುಕುಮಾರ್ ಮಾತನಾಡಿದ್ದು. ನಿರ್ದೇಶಕ ಸುಕುಮಾರ್, ಸಾಯಿ ಪಲ್ಲವಿ, ಕೀರ್ತಿ ಸುರೇಶ್ ಒಟ್ಟಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲು ಕಾರಣ ರಶ್ಮಿಕಾ ಮಂದಣ್ಣ ಸಿನಿಮಾ.

ಸಾಯಿ ಪಲ್ಲವಿಯನ್ನು ಮೆಚ್ಚಿ, ಕೊಂಡಾಡಿದ ಸುಕುಮಾರ್!

ಸಾಯಿ ಪಲ್ಲವಿಯನ್ನು ಮೆಚ್ಚಿ, ಕೊಂಡಾಡಿದ ಸುಕುಮಾರ್!

ತೆಲುಗು ನಿರ್ದೇಶಕ ಸುಕುಮಾರ್ ರಶ್ಮಿಕಾ ಮಂದಣ್ಣ, ಶರ್ವಾನಂದ್ ಅಭಿನಯದ 'ಆಡವಾಳ್ಳು ಮೀಕು ಜೋಹರ್ಲು' ಸಿನಿಮಾದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಅದ್ದೂರಿ ಕಾರ್ಯಕ್ರಮದಲ್ಲಿ ನಟಿ ಸಾಯಿ ಪಲ್ಲವಿ ಕೂಡ ಭಾಗಿ ಆಗಿದ್ದರು. ವೇದಿಕೆ ಮೇಲೆ ನಿರ್ದೇಶಕ ಸುಕುಮಾರ್ ಸಿನಿಮಾದ ಬಗ್ಗೆ ಆಡಿದ ಮಾತುಗಳು ಹೆಚ್ಚಾಗಿ ಗಮನ ಸೆಳೆದಿಲ್ಲ. ಬದಲಿಗೆ ಸುಕುಮಾರ್ ನಟಿ ಸಾಯಿ ಪಲ್ಲವಿಯ ಬಗ್ಗೆ ಮಾತನಾಡಿದ್ದು ಹೆಚ್ಚಾಗಿ ಗಮನ ಸೆಳೆದಿದೆ. ಸಾಯಿ ಪಲ್ಲವಿ ಫೇರ್‌ನೆಸ್ ಕ್ರೀಮ್ ಜಾಹೀರಾತು ಬಿಟ್ಟಿದ್ದು, ಸುಕುಮಾರ್‌ ಅವರಿಗೆ ಉತ್ತಮ ಎನಿಸಿದೆ ಅಂತೆ.

2 ಕೋಟಿ ಕೊಟ್ಟರು ಬೇಡ ಎಂದ ಸಾಯಿ ಪಲ್ಲವಿ!

2 ಕೋಟಿ ಕೊಟ್ಟರು ಬೇಡ ಎಂದ ಸಾಯಿ ಪಲ್ಲವಿ!

ನಟಿ ಸಾಯಿ ಪಲ್ಲವಿ ಈ ಹಿಂದೆ ಜಾಹೀರಾತು ಒಂದನ್ನು ತಿರಸ್ಕರಿಸಿ ಸಿಕ್ಕಾಪಟ್ಟೆ ಸುದ್ದಿ ಆಗಿದ್ದರು. ಫೇರ್‌ನೆಸ್ ಕ್ರೀಮ್‌ನಲ್ಲಿ ನಟಿಸಲು ಸಾಯಿ ಪಲ್ಲವಿ ತಿರಸ್ಕರಿಸಿದ್ದರು. ಫೇರ್‌ನೆಸ್ ಕ್ರೀಮ್ ನೀಡುವ ಭರವಸೆ ನಕಲಿ ಎಂದು ಸಾಯಿ ಪಲ್ಲವಿ ಈ ಜಾಹೀರಾತು ಬಿಟ್ಟಿದ್ದರು. ಇದನ್ನು ನೆನೆದ ಸುಕುಮಾರ್ 'ಅಷ್ಟೊಂದು ದುಬಾರಿ ಜಾಹೀರಾತನ್ನು ಸಾಯಿ ಪಲ್ಲವಿ ತಿರಸ್ಕರಿಸಿದ ವಿಚಾರ ಕೇಳಿ ಅಚ್ಚರಿ ಆಯಿತು. ಆದರೆ ಅದರ ಹಿಂದಿನ ಉದ್ದೇಶ ಕೇಳಿ ಒಳ್ಳೆಯದು ಅನಿಸಿತು.' ಎಂದಿದ್ದಾರೆ. ಸಾಯಿ ಪಲ್ಲವಿಗೆ ಈ ಜಾಹೀರಾತಿಗಾಗಿ 2 ಕೋಟಿ ಆಫರ್ ಬಂದಿತ್ತಂತೆ.

ಲಿಕ್ ಲಾಕ್ ಮಾಡುವುದಿಲ್ಲ ನಟಿ ಸಾಯಿ ಪಲ್ಲವಿ!

ಲಿಕ್ ಲಾಕ್ ಮಾಡುವುದಿಲ್ಲ ನಟಿ ಸಾಯಿ ಪಲ್ಲವಿ!

ನಟಿ ಸಾಯಿ ಪಲ್ಲವಿ ಆದಷ್ಟು ನೈಜವಾಗಿ ಇರಲು ಪ್ರಯತ್ನಿಸುತ್ತಾರೆ. ಅಂದರೆ ಸಿನಿಮಾದಲ್ಲೂ ಕೂಡ ಸಾಯಿ ಪಲ್ಲವಿ ಕೆಲವೊಂದು ಕಂಡೀಷನ್‌ಗಳನ್ನು ತಪ್ಪದೇ ಹಾಕುತ್ತಾರೆ. ಸಾಯಿ ಪಲ್ಲವಿಗೆ ಲಿಪ್ ಲಾಕ್ ಮಾಡುವುದು ಅಂದರೆ ಅಲರ್ಜಿ. ಹಾಗಾಗಿ ಸಾಯಿ ಪಲ್ಲವಿ ಯಾವುದೇ, ಸಿನಿಮಾ ಆಗಲಿ, ಎಷ್ಟೇ ದೊಡ್ಡ ಬಜೆಟ್ ಆಗಲಿ, ನಟ ಆಗಲಿ ಆಕೆ ಲಿಪ್ ಲಾಕ್ ಮಾಡುವುದಿಲ್ಲ. ಚಿತ್ರದ ಆರಂಭಕ್ಕೂ ಮೊದಲೇ ಈ ರೀತಿಯ ಕಂಡಿಷನ್ ಹಾಕುತ್ತಾರಂತೆ.

ಮೇಕಪ್ ಇಲ್ಲದೇ ಅಭಿನಯಿಸುತ್ತಾರೆ!

ಮೇಕಪ್ ಇಲ್ಲದೇ ಅಭಿನಯಿಸುತ್ತಾರೆ!

ಇನ್ನು ಚಿತ್ರರಂಗದಲ್ಲಿ ಮತ್ತೊಂದು ಮಾತಿದೆ. ನಟಿ ಸಾಯಿ ಪಲ್ಲವಿ ಸಿನಿಮಾಗಳಲ್ಲಿ ಮೇಕಪ್ ಹಾಕುವುದನ್ನು ಕೂಡ ಇಷ್ಟ ಪಡುವುದಿಲ್ಲವಂತೆ. ಆದಷ್ಟು ಮೇಕಪ್ ಇಲ್ಲದೇ ನಟಿಸಲು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರಂತೆ. ಕೆಲವು ಸಿನಿಮಾಗಳಲ್ಲಿ ಸಾಯಿ ಪಲ್ಲವಿಗೆ ಮೇಕಪ್ ಕೂಡ ಹಾಕಿಲ್ಲವಂತೆ. ಇದು ಕೂಡ ಸಾಯಿ ಪಲ್ಲವಿ ಇಷ್ಟ ಪಡವ ವಿಚಾರಗಳಲ್ಲಿ ಒಂದು. ಹಾಗಾಗಿ ಸಾಯಿ ಪಲ್ಲವಿಯನ್ನು ನ್ಯಾಚುರಲ್ ಸ್ಟಾರ್ ಅಂತಲೇ ಕರೆಯಲಾಗುತ್ತದೆ.

ವಿರಾಟ ಪರ್ವಂ ಸಿನಿಮಾ ರಿಲೀಸ್‌ಗೆ ರೆಡಿ!

ವಿರಾಟ ಪರ್ವಂ ಸಿನಿಮಾ ರಿಲೀಸ್‌ಗೆ ರೆಡಿ!

ಸಾಯಿ ಪಲ್ಲವಿ ಸಿನಿಮಾಗಳನ್ನು ಸಾಲಾಗಿ ಒಪ್ಪಿಕೊಳ್ಳುವುದಿಲ್ಲ. ಯಾಕೆಂದರೆ ಸಿನಿಮಾ ಮತ್ತು ಕಥೆಯ ಆಯ್ಕೆಯಲ್ಲಿ ತುಂಬಾನೇ ಸೀಮಿತ. ಕಥೆ ತುಂಬಾ ಇಷ್ಟ ಆದರೆ ಮಾತ್ರ ಸಿನಿಮಾ ಒಪ್ಪಿಕೊಳ್ಳುತ್ತಾರೆ. ಇತ್ತೀಚೆಗೆ ರಿಲೀಸ್ ಆದ 'ಶ್ಯಾಮ ಸಿಂಗ ರಾಯ್' ಸಿನಿಮಾದ ಮೂಲಕ ಸಾಯಿ ಪಲ್ಲವಿ ಯಶಸ್ಸು ಕಂಡಿದ್ದಾರೆ. ಈಗ ಸಾಯಿ ಪಲ್ಲವಿ ಅಭಿನಯದ 'ವಿರಾಣ ಪರ್ವಂ' ಸಿನಿಮಾ ಮಾತ್ರ ರಿಲೀಸ್‌ಗೆ ರೆಡಿಯಾಗಿದೆ.

More from Filmibeat

English summary
Sai Pallavi Impress Director Sukumar By Rejecting 2 Crore Offer, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X