For Quick Alerts
  ALLOW NOTIFICATIONS  
  For Daily Alerts

  'ಶ್ಯಾಮ್ ಸಿಂಗ ರಾಯ್'ಗೆ ಜೋಡಿಯಾಗ್ತಾರಾ 'ಪ್ರೇಮಂ' ಸುಂದರಿ ಸಾಯಿ ಪಲ್ಲವಿ?

  |

  ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಸಾಯಿ ಪಲ್ಲವಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಲಯಾಳಂ ಸೂಪರ್ ಹಿಟ್ 'ಪ್ರೇಮ್' ಸಿನಿಮಾ ಮೂಲಕ ಸಂಚಲನ ಮೂಡಿಸಿದ್ದ ನಟಿ ಸಾಯಿ ಪಲ್ಲವಿ ಸದ್ಯ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ.

  ಸುಶಾಂತ್ ತನ್ನ ಹೊಟ್ಟೆಯಲ್ಲಿ ಮತ್ತೊಮ್ಮೆ ಹುಟ್ಟಿ ಬರ್ತಾನೆ ಎಂದ ಬಾಲಿವುಡ್ ನಟಿ | Raakhi Sawanth | Sushanth Singh

  ನಾಗ ಚೈತನ್ಯ ಜೊತೆ ನಟಿಸಿರುವ ಲವ್ ಸ್ಟೋರಿ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿರುವ ಸಾಯಿ ಪಲ್ಲವಿ ಈಗ ಶ್ಯಾಮ್ ಸಿಂಗ ರಾಯ್ ಗೆ ಜೋಡಿಯಾಗಲು ಸಜ್ಜಾಗಿದ್ದಾರೆ. ಶ್ಯಾಮ್ ಸಿಂಗ್ ರಾಯ್ ತೆಲುಗು ನಟ ನಾನಿ ಅಭಿನಯದ ಸಿನಿಮಾ. ಈ ಮೊದಲು ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗುತ್ತಿತು. ಆದರೀಗ ಸಾಯಿ ಪಲ್ಲವಿ ಆಯ್ಕೆಯಾಗಿದ್ದಾರಂತೆ. ಮುಂದೆ ಓದಿ...

  ಸೂಪರ್ ಹಿಟ್ 'ಪ್ರೇಮಂ' ಸಿನಿಮಾದ ತಮಿಳು ರಿಮೇಕ್ ನಲ್ಲಿ ಸ್ಟಾರ್ ನಟಸೂಪರ್ ಹಿಟ್ 'ಪ್ರೇಮಂ' ಸಿನಿಮಾದ ತಮಿಳು ರಿಮೇಕ್ ನಲ್ಲಿ ಸ್ಟಾರ್ ನಟ

  ನಾನಿ ಅಭಿನಯದ ಶ್ಯಾಮ್ ಸಿಂಗ ರಾಯ್ ಸಿನಿಮಾ

  ನಾನಿ ಅಭಿನಯದ ಶ್ಯಾಮ್ ಸಿಂಗ ರಾಯ್ ಸಿನಿಮಾ

  ಶ್ಯಾಮ್ ಸಿಂಗ ರಾಯ್ ನ್ಯೂಚುಲ್ ಸ್ಟಾರ್ ನಾನಿ ಅಭಿನಯದ ಸಿನಿಮಾ. ಶ್ಯಾಮ್ ಸಿಂಗ ರಾಯ್ ಗೆ ನಾಯಕಿಯಾಗಿ ಸಾಯಿ ಪಲ್ಲವಿ ಆಯ್ಕೆಯಾಗಿದ್ದಾರೆ ಎನ್ನುವ ಮಾತು ಹೇಳಿಬರುತ್ತಿದೆ. ಈಗಾಗಲೆ ಸಾಕಷ್ಟು ಸಿನಿಮಾಗಳಲ್ಲಿ ಬ್ಯಸಿಯಾಗಿರುವ ಸಾಯಿ ಮತ್ತೆ ನಾನಿಗೆ ನಾಯಕಿಯಾಗಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

  ಎರಡನೇ ಬಾರಿ ನಾನಿಗೆ ನಾಯಕಿಯಾದ ಸಾಯಿ ಪಲ್ಲವಿ

  ಎರಡನೇ ಬಾರಿ ನಾನಿಗೆ ನಾಯಕಿಯಾದ ಸಾಯಿ ಪಲ್ಲವಿ

  ನಟಿ ಸಾಯಿ ಮತ್ತು ನಾನಿ ಈಗಾಗಲೆ ಒಂದು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಎಂಸಿಎ ಸಿನಿಮಾದಲ್ಲಿ ನಾನಿಗೆ ನಾಯಕಿಯಾಗಿ ನಟಿಸಿದ್ದ ಸಾಯಿ ಪಲ್ಲವಿ, ಶ್ಯಾಮ್ ಸಿಂಗ ರಾಯ್ ಗೆ ಆಯ್ಕೆ ಆಗುವ ಮೂಲಕ ಮತ್ತೆ ಎರಡನೇ ಬಾರಿ ನಾನಿ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಇಬ್ಬರನ್ನು ಒಟ್ಟಿಗೆ ತೆರೆಮೇಲೆ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ.

  ಸಾಯಿ ಪಲ್ಲವಿ- ನಾಗಚೈತನ್ಯ ಲವ್ ಸ್ಟೋರಿ ಭಾರಿ ಮೊತ್ತಕ್ಕೆ ಮಾರಾಟಸಾಯಿ ಪಲ್ಲವಿ- ನಾಗಚೈತನ್ಯ ಲವ್ ಸ್ಟೋರಿ ಭಾರಿ ಮೊತ್ತಕ್ಕೆ ಮಾರಾಟ

  ಟ್ಯಾಕ್ಸಿವಾಲ ನಿರ್ದೇಶನ ಸಿನಿಮಾ

  ಟ್ಯಾಕ್ಸಿವಾಲ ನಿರ್ದೇಶನ ಸಿನಿಮಾ

  ನಾನಿ ಮತ್ತು ಸಾಯಿ ಪಲ್ಲವಿ ಅಭಿನಯದ ಶ್ಯಾಮ್ ಸಿಂಗ ರಾಯ್, ಟ್ಯಾಕ್ಸಿವಾಲ ಸಿನಿಮಾ ಖ್ಯಾತಿಯ ನಿರ್ದೇಶಕ ರಾಹುಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಜಯ್ ದೇವರಕೊಂಡ ಅಭಿನಯದ ಟ್ಯಾಕ್ಸಿವಾಲ ನಿರೀಕ್ಷೆ ಯಶಸ್ಸು ಕಾಣಲಿಲ್ಲ. ಈಗ ನಾನಿ ಜೊತೆ ಶ್ಯಾಮ್ ಸಿಂಗ ರಾಯ್ ಸಿನಿಮಾ ಮಾಡುತ್ತಿದ್ದಾರೆ. ಅಂದುಕೊಂಡತೆ ಆಗಿದ್ದರೆ ಸಿನಿಮಾ ಈ ವರ್ಷದ ಕೊನೆಯಲ್ಲಿ ಕ್ರಿಸ್ ಮಸ್ ಗೆ ತೆರೆಗೆ ಬರಬೇಕಿತ್ತು. ಆದರೆ ಕೊರೊನಾ ವೈರಸ್ ಹಾವಳಿಯ ಪರಿಣಾಮ ಸಿನಿಮಾ ಡಿಸೆಂಬರ್ ಗೆ ಬರುವುದು ಅನುಮಾನ.

  ಸಾಯಿ ಪಲ್ಲವಿ ಹುಟ್ಟುಹಬ್ಬ: ವಿಶೇಷದಿನದಂದು ಯಾರಿಗಾಗಿ ಕಾಯುತ್ತಿದ್ದಾರೆ 'ಪ್ರೇಮಂ' ಸುಂದರಿಸಾಯಿ ಪಲ್ಲವಿ ಹುಟ್ಟುಹಬ್ಬ: ವಿಶೇಷದಿನದಂದು ಯಾರಿಗಾಗಿ ಕಾಯುತ್ತಿದ್ದಾರೆ 'ಪ್ರೇಮಂ' ಸುಂದರಿ

  ಸಾಯಿ ಪಲ್ಲವಿ ಬಳಿ ಇರುವ ಸಿನಿಮಾಗಳು

  ಸಾಯಿ ಪಲ್ಲವಿ ಬಳಿ ಇರುವ ಸಿನಿಮಾಗಳು

  ನಟಿ ಸಾಯಿ ಪಲ್ಲವಿ ಅಳೆದುತೂಗಿ ಪಾತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಪಾತ್ರಕೆಕ ತೂಕವಿದ್ದರೆ ಮಾತ್ರ ಆ ಸಿನಿಮಾವನ್ನು ಒಪ್ಪಿಕೊಳ್ಳುತ್ತಾರೆ. ಸದ್ಯ ಸಾಯಿ ಪಲ್ಲವಿ ನಾಗ ಚೈತನ್ಯ ಜೊತೆ ಲವ್ ಸ್ಟೋರಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ರಾಣಾ ದಗ್ಗುಬಾಟಿ ಜೊತೆ ವಿರಾಟಪರ್ವಂ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಸದ್ಯ ನಾನಿ ಅಭಿನಯದ ಶ್ಯಾಮ್ ಸಿಂಗ ರಾಯ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಆದರೆ ಬಗ್ಗೆ ಸಾಯಿ ಪಲ್ಲವಿ ಆಗಲಿ ಅಥವಾ ಸಿನಿಮಾತಂಡವಾಗಲಿ ಅಧಿಕೃತಗೊಳಿಸಿಲ್ಲ.

  English summary
  Actress Sai Pallavi leading lady opposite to Actor Nani starrer Shyam Singha Roy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X