ಸಾಯಿ ಪಲ್ಲವಿ ನಟಿಸಬೇಕಿದ್ದ 'ಮಾ ಇಂಟಿ ಬಂಗಾರಂ' ಚಿತ್ರದಲ್ಲಿ ಸಮಂತಾ ಬಣ್ಣ ಹಚ್ಚಿದ್ದೇಕೆ?

ಸಮಂತಾ ನಿರ್ಮಿಸಿ ನಟಿಸುತ್ತಿರುವ 'ಮಾ ಇಂಟಿ ಬಂಗಾರಂ' ಸಿನಿಮಾ ಈ ವಾರ ವಿಶ್ವದಾದ್ಯಂತ ತೆರೆಗೆ ಬರ್ತಿದೆ. ಸಿನಿಮಾ ಪ್ರಚಾರಕ್ಕಾಗಿ ಸಾಕಷ್ಟು ಸಂದರ್ಶನಗಳಲ್ಲಿ ಸ್ಯಾಮ್ ಭಾಗಿ ಆಗುತ್ತಿದ್ದಾರೆ. ಒಂದೇ ದಿನ 40 ಸಂದರ್ಶನ ನೀಡಿ ಎಲ್ಲರ ಹುಬ್ಬೇರಿಸಿದ್ದಾರೆ. ಒನ್‌ ಇಂಡಿಯಾ ತೆಲುಗು ಸಂದರ್ಶನದಲ್ಲಿ ಸಾಕಷ್ಟು ವಿಚಾರಗಳನ್ನು ಆಕೆ ಹಂಚಿಕೊಂಡಿದ್ದಾರೆ. ಸಿನಿಮಾ ಕಥೆ, ಕಾನ್ಸೆಪ್ಟ್ ಎಲ್ಲದರ ಬಗ್ಗೆಯೂ ಮಾತನಾಡಿದ್ದಾರೆ.

'ಮಾ ಇಂಟಿ ಬಂಗಾರಂ' ಸಾಯಿ ಪಲ್ಲವಿ ನಟಿಸಬೇಕಿದ್ದ ಸಿನಿಮಾ. ಆಕೆಗಾಗಿಯೇ ಸಮಂತಾ ಪತಿ ರಾಜ್ ನಿಡುಮೊರು ಕಥೆ ಬರೆದಿದ್ದರು. ಆದರೆ ಆಕೆ 'ರಾಮಾಯಣ' ಸೇರಿ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಇದ್ದಿದ್ದರಿಂದ ಸಮಂತಾ ನಟಿಸುವಂತಾಯಿತು. ಇದೇ ಕಾರಣಕ್ಕೆ ಕಥೆಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡು ಸಿನಿಮಾ ಕಟ್ಟಿಕೊಡಲಾಗಿದೆ. ಈಗಾಗಲೇ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಗಮನ ಸೆಳೆದಿದೆ.

Sai Pallavi Missed It Samantha Grabbed It The Untold Story Behind Maa Inti Bangaaram

ಇದು 'ಬಾಷಾ' ಶೈಲಿಯ ಸಿನಿಮಾ ಹೇಗೆ? ಎನ್ನುವ ಪ್ರಶ್ನೆಗೆ ನಿರ್ದೇಶಕಿ ನಂದಿನಿ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ. "ಇದು ಬಾಷಾ' ಸಿನಿಮಾ ಅಂದ್ರೆ ರೀಮೆಕ್ ಅಲ್ಲ. ಟೆಂಪ್ಲೆಟ್ ಅದೇ ರೀತಿ ಇರುತ್ತೆ. ಒಬ್ಬ ವ್ಯಕ್ತಿ ಪ್ರಶಾಂತವಾಗಿ ಜೀವನ ಸಾಗಿರುತ್ತಿರುತ್ತಾನೆ. ಆದ್ರೆ ವ್ಯಕ್ತಿಗೆ ಒಂದು ಫ್ಯಾಶ್‌ಬ್ಯಾಕ್ ಇದೆ. ಈಗ ಎಷ್ಟು ಪ್ರಶಾಂತವೋ ಅದಕ್ಕೆ ತದ್ವಿರುದ್ಧ(ವೈಲೆಂಟ್)ವಾಗಿರುತ್ತೆ. ಅದರಿಂದ ಈ ಪ್ರಶಾಂತ ಜೀವನದಲ್ಲಿ ಏನೆಲ್ಲಾ ಆಗುತ್ತೆ ಎನ್ನುವ ಕಥೆ ಚಿತ್ರದಲ್ಲಿದೆ. 'ಬಾಷಾ' ರೀತಿಯ ಫ್ಯಾಶ್‌ಬ್ಯಾಕ್ ಇಲ್ಲ. ಚಿತ್ರದಲ್ಲಿ ಪಕ್ಕದ್ಮನೆ ಹುಡುಗಿ ರೀತಿ ಕಾಣುವ ನಾಯಕಿಯ ಫ್ಯಾಶ್‌ಬ್ಯಾಕ್ ಏನು ಎನ್ನುವುದನ್ನು ತೆರೆಮೇಲೆ ನೋಡ್ಬೇಕು" ಎಂದಿದ್ದಾರೆ.

ಸಾಯಿ ಪಲ್ಲವಿ ಬದಲು ಸಮಂತಾ ಬಂದಿದ್ದರಿಂದ ಏನೆಲ್ಲಾ ಬದಲಾಯ್ತು ಎನ್ನುವ ಪ್ರಶ್ನೆಗೆ ನಂದಿನಿ ರೆಡ್ಡಿ ಉತ್ತರಿಸಿದ್ದಾರೆ. "ಸಮಂತಾ ನಟಿಸುವುದು ಎನ್ನುವ ಗೊತ್ತಾಗುತ್ತಿದ್ದಂತೆ ಒಂದಷ್ಟು ಬದಲಾವಣೆ ಮಾಡಿಕೊಂಡಿದ್ದೇವೆ. ಮೊದಲು ಇಷ್ಟ ಆಕ್ಷನ್ ಇರಲಿಲ್ಲ. ಆದ್ರೆ ಮೂಲ ಕಥೆ ಇದೇ ಇತ್ತು. ಸಮಂತಾ ಬಂದಮೇಲೆ ಸಂಪೂರ್ಣ ಚಿತ್ರಣ ಬದಲಾಯ್ತು" ಎಂದು ತಿಳಿಸಿದ್ದಾರೆ.

ಮಹಿಳಾ ಪ್ರಧಾನ ಚಿತ್ರದಲ್ಲಿ ಇಡೀ ಸಿನಿಮಾ ಹೊತ್ತು ಸಾಗುವುದು ಸುಲಭವೋ, ಇಲ್ಲ ನಾಯಕ ಪಕ್ಕ ಕಾಣಿಸಿಕೊಳ್ಳುವುದು ಸುಲಭವೋ ಎನ್ನುವ ಪ್ರಶ್ನೆಗೆ ಸಮಂತಾ ಪ್ರತಿಕ್ರಿಯಿಸಿದ್ದಾರೆ. "ಎರಡೂ ಕೂಡ ಬೇರೆ ಬೇರೆ.. ನಾಯಕ ನಟರ ಪಕ್ಕ ನಾಯಕಿಯಾಗಿ ನಟಿಸಿದ್ದೀನಿ. ಹಾಗಾಗಿ ಈಗ ಹೊಸ ರೀತಿಯ ಸಿನಿಮಾಗಳಲ್ಲಿ ಕಾಣಿಸಿಕೊಳ್ತಿದ್ದೀನಿ. ಅದರಿಂದ ಸಾಕಷ್ಟು ಕಲಿತ್ತಿದ್ದೀನಿ. ಅದನ್ನು ಇಲ್ಲಿ ಬಳಸಿಕೊಳ್ತಿದ್ದೀನಿ" ಎಂದು ಉತ್ತರಿಸಿದ್ದಾರೆ.

ಸಾಮಾನ್ಯ ಸಿನಿಮಾಗಳಿಗೂ ಮಹಿಳಾ ಪ್ರಧಾನ ಸಿನಿಮಾಗಳಿಗೂ ವ್ಯತ್ಯಾಸ ಇರುತ್ತದೆ. ಬಹಳ ನಿರೀಕ್ಷೆ ಕೂಡ ಪ್ರೇಕ್ಷಕರಲ್ಲಿ ಇರುವುದರಿಂದ ಬಾಕ್ಸಾಫೀಸ್ ಗಳಿಕೆ ಬಹಳ ಮುಖ್ಯವಾಗುತ್ತದೆ. ಆ ಒತ್ತಡವನ್ನು ಹೇಗೆ ತೆಗೆದುಕೊಳ್ತೀರಾ ಎನ್ನುವ ಪ್ರಶ್ನೆಗೆ ಸ್ಯಾಮ್ ಉತ್ತರಿಸಿ "ಈ ಸಿನಿಮಾ ಅದನ್ನೆಲ್ಲಾ ಜಡ್ಜ್ ಮಾಡುತ್ತೆ. ಇದು ಕಂಪ್ಲೀಟ್ ಕಮರ್ಷಿಯಲ್ ಎಂಟರ್‌ಟೈನರ್ ಸಿನಿಮಾ. ಹಾಗಾಗಿ ಹೆಣ್ಣು ಮಗಳೊಬ್ಬಳು ಎಷ್ಟರಮಟ್ಟಿಗೆ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುತ್ತಾಳೆ ನೋಡ್ಬೇಕು, ಕಾದು ನೋಡೋಣ" ಎಂದಿದ್ದಾರೆ.

'ಶುಭಂ' ಸಿನಿಮಾ ಮೂಲಕ ಸಮಂತಾ ನಿರ್ಮಾಪಕಿಯಾಗಿದ್ದರು. ತಮ್ಮದೇ ಹೊಸ ಸಂಸ್ಥೆ ಹುಟ್ಟುಹಾಕಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ. ಸಾಯಿ ಪಲ್ಲವಿ ನಟಿಸಬೇಕಿದ್ದ 'ಮಾ ಇಂಟಿ ಬಂಗಾರಂ' ಚಿತ್ರದಲ್ಲಿ ಕಾರಣಾಂತರಗಳಿಂದ ಸ್ಯಾಮ್ ನಟಿಸುವಂತಾಗಿತ್ತು. ನಂದಿನಿ ರೆಡ್ಡಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸಮಂತಾ ಪತಿ ರಾಜ್ ನಿಡುಮೊರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಚಿತ್ರ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸಮಂತಾ ಜೋಡಿಯಾಗಿ ಕನ್ನಡ ನಟ ದಿಗಂತ್ ನಟಿಸಿರುವುದು ವಿಶೇಷ.

Read more about: samantha sai pallavi tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X