ಹೊಸ ಲೋಕಕ್ಕೆ ಕರೆದುಕೊಂಡು ಹೋಗುವ ಸಾಯಿ ಪಲ್ಲವಿಯ ಹೊಸ ಸಾಂಗ್

ಪ್ರತಿಭಾವಂತ ನಟಿ, ಸಹಜ ಸುಂದರಿ ಸಾಯಿ ಪಲ್ಲವಿ, ನಟ ನಾಗ ಚೈತನ್ಯ ಜೊತೆಯಾಗಿ ನಟಿಸಿರುವ ಹೊಸ ಚಿತ್ರದ ಹಾಡು ಬಿಡುಗಡೆ ಆಗಿದ್ದು, ಕೇಳುಗರನ್ನು ಹೊಸದೊಂದು ಲೋಕಕ್ಕೆ ಕರೆದುಕೊಂಡು ಹೋಗುವಷ್ಟು ಮಾಧುರ್ಯ ಭರಿತವಾಗಿದೆ.

ಕಡಿಮೆ ಅವಧಿಯಲ್ಲಿ ತಮ್ಮ ಪ್ರತಿಭೆಯಿಂದ, ಸಹಜ ಸೌಂದರ್ಯದಿಂದ ಕೋಟ್ಯಂತರ ಅಭಿಮಾನಿಗಳನ್ನು ಪಡೆದುಕೊಂಡಿರುವ ಸಾಯಿ ಪಲ್ಲವಿ ಮತ್ತು ಸ್ಟಾರ್ ನಟ ನಾಗ ಚೈತನ್ಯ ಜೊತೆಯಾಗಿ ನಟಿಸಿರುವ 'ಲವ್ ಸ್ಟೋರಿ' ಚಿತ್ರದ ಹಾಡೊಂದು ನಿನ್ನೆ ಬಿಡುಗಡೆ ಆಗಿದೆ.

ಲಿರಿಕಲ್ ವಿಡಿಯೋ ಹಾಡು ಇದಾಗಿದ್ದು, ಯೂಟ್ಯೂಬ್‌ನಲ್ಲಿ ಮಾರ್ಚ್‌ 11 ರಂದು ಬಿಡುಗಡೆ ಆಗಿದೆ. ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಮಂದಿ ಹಾಡನ್ನು ನೋಡಿ, ಕೇಳಿ ಆನಂದಿಸಿದ್ದಾರೆ. ಹಾಡಿನ ಬಗ್ಗೆ ಅತೀವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅರ್ಥಪೂರ್ಣ ಸಾಹಿತ್ಯಕ್ಕೆ ಹಿತವಾದ ಸಂಗೀತ ಜೊತೆ

ಅರ್ಥಪೂರ್ಣ ಸಾಹಿತ್ಯಕ್ಕೆ ಹಿತವಾದ ಸಂಗೀತ ಜೊತೆ

'ವಾಸ್ತವಿಕ ಜಗತ್ತಿನಿಂದ ದೂರ ಓಡಿಹೋಗಿ ನಮ್ಮದೇ ಒಂದು ಗೂಡು ಕಟ್ಟಿಕೊಳ್ಳೋಣ, ಎಲ್ಲ ಅಡೆತಡೆಗಳನ್ನು ದಾಟಿ ಬಂದು ಬಿಡು' ಎಂದು ಯುವ ಪ್ರೇಮಿಯೊಬ್ಬ ಪ್ರೇಯಸಿಯನ್ನು ಹಾಡಿನ ಮೂಲಕ ಕರೆಯುತಿದ್ದಾನೆ. ಆ ಪ್ರೇಮಿಯ ಕನಸು, ಪ್ರೇಯಸಿಗೆ ನೀಡುವ ಪ್ರೀತಿಯ ಭರವಸೆಗಳೇ ಇಲ್ಲಿ ಹಾಡಾಗಿವೆ. ಮನಸ್ಸಿಗೆ ಹಿತವೆನಿಸುವ ಸುಂದರ ಸಂಗೀತವು ಅರ್ಥಪೂರ್ಣ ಸಾಹಿತ್ಯಕ್ಕೆ ಜೊತೆಯಾಗಿದೆ.

ಲವ್ ಸ್ಟೋರಿ ಸಿನಿಮಾಕ್ಕೆ ಸಿ.ಎಚ್.ಪವನ್ ಸಂಗೀತ

ಲವ್ ಸ್ಟೋರಿ ಸಿನಿಮಾಕ್ಕೆ ಸಿ.ಎಚ್.ಪವನ್ ಸಂಗೀತ

''ಲವ್ ಸ್ಟೋರಿ'' ಸಿನಿಮಾಕ್ಕೆ ಸಂಗೀತ ನಿರ್ದೇಶನವನ್ನು ಪವನ್ ಸಿ.ಎಚ್. ಮಾಡಿದ್ದಾರೆ. ಈಗ ಬಿಡುಗಡೆ ಆಗಿರುವ ಏ ಪಿಲ್ಲಾ ಹಾಡಿನ ಸಾಹಿತ್ಯವನ್ನು ಚೈತನ್ಯಾ ಪಿಂಗಾಲಿ ಬರೆದಿದ್ದಾರೆ. ಹಾಡಿರುವವರು ಹರಿಚರಣ್.

ಸೂಕ್ಷ್ಮ ನಿರ್ದೇಶಕ ಶೇಖರ್ ಕಮ್ಮುಲ ಚಿತ್ರ

ಸೂಕ್ಷ್ಮ ನಿರ್ದೇಶಕ ಶೇಖರ್ ಕಮ್ಮುಲ ಚಿತ್ರ

ತೆಲುಗು ಪ್ರೇಕ್ಷಕರು ಹಲವು ಕಾಲ ನೆನಪಿನಲ್ಲಿಳಿಯುವಂತಹಾ ಸಿನಿಮಾಗಳನ್ನು ನೀಡಿರುವ ಸೂಕ್ಷ್ಮ ನಿರ್ದೇಶಕ ಶೇಖರ್ ಖಮ್ಮುಲ 'ಲವ್ ಸ್ಟೋರಿ' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅವರ ನಿರ್ದೇಶನದ ಕೊನೆಯ ಚಿತ್ರ 'ಫಿದಾ' ಕ್ಕೂ ಸಾಯಿ ಪಲ್ಲವಿಯೇ ನಾಯಕಿಯಾಗಿದ್ದರು. ಆ ಚಿತ್ರ ಭರ್ಜರಿ ಹಿಟ್ ಆಗಿತ್ತು.

ಸಾಯಿ ಪಲ್ಲವಿ ಎಂಬ ಬಳುಕುವ ಬಳ್ಳಿ

ಸಾಯಿ ಪಲ್ಲವಿ ಎಂಬ ಬಳುಕುವ ಬಳ್ಳಿ

ಇನ್ನು ಸಾಯಿ ಪಲ್ಲವಿ ಎಂಬ ಬಳುಕುವ ಬಳ್ಳಿ ಈಗಾಗಲೇ ದಕ್ಷಿಣ ಭಾರತ ಸಿನಿರಂಗದಲ್ಲಿ ತನ್ನದೇ ಆದ ದೊಡ್ಡ ಅಭಿಮಾನಿ ವರ್ಗವನ್ನೇ ಸೃಷ್ಟಿಸಿಕೊಂಡಿದ್ದಾರೆ. ಮಲೆಯಾಳಂ ಮೂಲಕ ಸಿನಿಮಾರಂಗ ಪ್ರವೇಶಿಸಿದ ಈ ವೈದ್ಯೆ ತಮಿಳು, ತೆಲುಗು ಚಿತ್ರಗಳಲ್ಲಿಯೂ ಭಾರಿ ಯಶಸ್ಸು ಕಂಡಿದ್ದಾರೆ.

ಸಿನಿಮಾ ಬಿಡುಗಡೆ ಯಾವಾಗ?

ಸಿನಿಮಾ ಬಿಡುಗಡೆ ಯಾವಾಗ?

ಲವ್ ಸ್ಟೋರಿ ಸಿನಿಮಾ ತೆಲುಗಿನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದು, ಏಪ್ರಿಲ್ 2 ಕ್ಕೆ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ. ಕೊರೊನಾ ಭೀತಿಯಿಂದ ಸಿನಿಮಾ ಬಿಡುಗಡೆ ಮುಂದೆ ಹೋದರೂ ಆಶ್ಚರ್ಯವಿಲ್ಲ.

More from Filmibeat

English summary
A New song was released from movie 'Love Story'. Sai Pallavi and Naga Chaithanya were in the lead role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X