ಮೆಗಾಸ್ಟಾರ್ ಚಿರಂಜೀವಿ ನೀಡಿದ ಆಫರ್ ತಿರಸ್ಕರಿಸಿದರೇ ಸಾಯಿ ಪಲ್ಲವಿ
ಮಲಯಾಳಂ ಸಿನಿಮಾ ಮೂಲಕ ನಾಯಕಿಯಾಗಿ ತಮಿಳು, ತೆಲುಗು ಸಿನಿರಂಗದಲ್ಲಿ ಹಾಟ್ ಫೇವರೇಟ್ ಆಗಿರುವ ನಟಿ ಸಾಯಿ ಪಲ್ಲವಿ.
Recommended Video
ಸಾಲು-ಸಾಲು ಸಿನಿಮಾಗಳ ಆಫರ್‌ಗಳು ಸಾಯಿ ಪಲ್ಲವಿ ಅವರನ್ನು ಹುಡುಕಿಕೊಂಡು ಬರುತ್ತಿವೆ. ಆದರೆ ಬಹು ಎಚ್ಚರಿಕೆಯಿಂದ ಸಿನಿಮಾಗಳನ್ನು ಆಯ್ಕೆ ಮಾಡುತ್ತಿದ್ದಾರೆ ಈ ಬುದ್ಧಿವಂತ ನಟಿ.
ತಾವು ಮಾಡುವ ಸಿನಿಮಾ ಬಗ್ಗೆ ಅತಿಯಾದ ಕಾಳಜಿ ವಹಿಸುವ ಸಾಯಿ ಪಲ್ಲವಿ, ಹಣಕ್ಕಾಗಿ ಅಲ್ಲ ನಟನೆಯ ಮೇಲಿನ ಪ್ರೀತಿಗಾಗಿ ಸಿನಿಮಾ ಮಾಡುತ್ತಾರೆ ಎಂಬುದು ತಿಳಿದ ವಿಷಯವೇ. ಅವರು ಜಾಹೀರಾತಿನಲ್ಲಿ ನಟಿಸದೇ ಇರುವುದು ಇದೇ ಕಾರಣಕ್ಕಾಗಿದೆ.
ಇಂಥಹಾ ಸಾಯಿ ಪಲ್ಲವಿ, ಮೆಗಾಸ್ಟಾರ್ ಚಿರಂಜೀವಿ ಅವರು ನೀಡಿದ ಆಫರ್ ಅನ್ನೇ ತಿರಸ್ಕರಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

152 ನೇ ಸಿನಿಮಾ ಆಚಾರ್ಯ
ಮೆಗಾಸ್ಟಾರ್ ನಟನೆಯ 152 ನೇ ಸಿನಿಮಾ ಆಚಾರ್ಯ. ಸ್ವಂತ ಬ್ಯಾನರ್ ನಲ್ಲಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿ ಕೊರಟಾಲ ಶಿವ ಅವರಿಗೆ ವಹಿಸಲಾಗಿದೆ. ಸಿನಿಮಾದಲ್ಲಿ ಕಾಜಲ್ ಅಗರ್ವಾಲ್ ನಾಯಕಿಯಾಗಿದ್ದಾರೆ.

ಪಾತ್ರವೊಂದಕ್ಕೆ ಸಾಯಿ ಪಲ್ಲವಿ ಆಯ್ಕೆ ಆಗಿದ್ದರು
ಆದರೆ ಸಿನಿಮಾದಲ್ಲಿ ಮತ್ತೊಂದು ಪ್ರಮುಖವಾದ ಆದರೆ ತುಸು ಚುಟುಕಾದ ಪಾತ್ರಕ್ಕೆ ಸಾಯಿ ಪಲ್ಲವಿ ಅವರನ್ನು ಆಯ್ಕೆ ಮಾಡಿದ್ದರಂತೆ ಚಿರಂಜೀವಿ. ಆದರೆ ಸಿನಿಮಾದ ಆಫರ್ ಅನ್ನು ತಿರಸ್ಕರಿಸಿದರಂತೆ ಪ್ರೇಮಂ ನಟಿ. ತಿರಸ್ಕಾರಕ್ಕೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ.

ಪ್ರಾಮುಖ್ಯತೆ ಇಲ್ಲದ ಪಾತ್ರದಲ್ಲಿ ನಟಿಸೊಲ್ಲ ಸಾಯಿ ಪಲ್ಲವಿ
ಡೇಟ್ಸ್ ಹೊಂದಿಕೆ ಆಗದ ಕಾರಣ ಸಾಯಿ ಪಲ್ಲವಿ ಅಚಾರ್ಯ ಸಿನಿಮಾದ ಪಾತ್ರವನ್ನು ಒಲ್ಲೆ ಎಂದಿದ್ದಾರೆ ಎನ್ನಲಾಗುತ್ತಿದೆ. ಆದರೆ ಮತ್ತೊಂದು ಸುದ್ದಿ ಎಂದರೆ, ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರಲಿಲ್ಲ ಹಾಗಾಗಿ ಸಾಯಿ ಪಲ್ಲವಿ ಸಿನಿಮಾದಲ್ಲಿ ನಟಿಸಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ.

'ವಿರಾಟ ಪರ್ವಂ' ಸಿನಿಮಾದಲ್ಲಿ ನಟನೆ
ಪ್ರಸ್ತುತ ಸಾಯಿ ಪಲ್ಲವಿ ರಾಣಾ ದಗ್ಗುಬಾಟಿ ಜೊತೆಗೆ 'ವಿರಾಟ ಪರ್ವಂ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಕ್ಸಲೈಟ್ ಕತೆಯನ್ನು ಆಧಾರಿಸಿದ ಈ ಸಿನಿಮಾದಲ್ಲಿ ನಟಿ ಪ್ರಿಯಾಮಣಿ ಸಹ ಇದ್ದಾರೆ. ಇದರ ಹೊರತಾಗಿ ನಾಗಚೈತನ್ಯ ಜೊತೆಗೆ ಲವ್ ಸ್ಟೋರಿ ಸಿನಿಮಾದಲ್ಲೂ ಸಹ ಸಾಯಿ ಪಲ್ಲವಿ ನಟಿಸಿದ್ದಾರೆ.


Click it and Unblock the Notifications











