For Quick Alerts
  ALLOW NOTIFICATIONS  
  For Daily Alerts

  ನನ್ನ ಹೆಸರಿಗೆ ಮುನ್ನಾ ನಿನ್ನ ಹೆಸರು ಹಾಕಿಸುವೆ: ಸಾಯಿ ಪಲ್ಲವಿಗೆ ರಾಣಾ ದಗ್ಗುಬಾಟಿ ಗೌರವ

  |

  ಸಿನಿಮಾ ಟೈಟಲ್ ಕಾರ್ಡ್‌ ಗಳಲ್ಲಿ ನಾಯಕರ ಹೆಸರುಗಳು 'ಆ ಸ್ಟಾರ್‌, ಈ ಸ್ಟಾರ್' ಎಂದು ಹಲವು ವಿಶೇಷಣಗಳೊಂದಿಗೆ ವಿಜೃಂಭಿಸುವುದು ಸಾಮಾನ್ಯ. ನಾಯಕಿ ಎಷ್ಟೇ ಚೆನ್ನಾಗಿ ಕೆಲಸ ಮಾಡಿದ್ದರೂ, ಎಷ್ಟೇ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೂ ಟೈಟಲ್‌ ಕಾರ್ಡ್‌ನಲ್ಲಿ ಆಕೆಯ ಹೆಸರಿಗೆ ಪ್ರಾಮುಖ್ಯತೆ ನೀಡಲಾಗುವುದಿಲ್ಲ.

  ಆ ನಟನೊಂದಿಗೆ ನಟಿಸಬೇಕೆಂಬ ಆಸೆ ಇತ್ತು ಎಂದ ಸಾಯಿ ಪಲ್ಲವಿ: ಯಾರು ಆ ನಟ?ಆ ನಟನೊಂದಿಗೆ ನಟಿಸಬೇಕೆಂಬ ಆಸೆ ಇತ್ತು ಎಂದ ಸಾಯಿ ಪಲ್ಲವಿ: ಯಾರು ಆ ನಟ?

  ಆದರೆ ನಟ ರಾಣಾ ದಗ್ಗುಬಾಟಿ ಈ ಸಂಪ್ರದಾಯ ಮುರಿಯಲಿದ್ದಾರೆ. ರಾಣಾ ನಾಯಕನಾಗಿ ನಟಿಸುತ್ತಿರುವ 'ವಿರಾಟ ಪರ್ವಂ' ಸಿನಿಮಾದಲ್ಲಿ ರಾಣಾ ದಗ್ಗುಬಾಟಿ ಹೆಸರಿಗೂ ಮೊದಲು ಸಿನಿಮಾದ ನಾಯಕಿ ಸಾಯಿ ಪಲ್ಲವಿ ಹೆಸರು ಪರದೆ ಮೇಲೆ ಮೂಡಲಿದೆ.

  ಪ್ರಕಾಶ್ ರೈ ನೋಡಿ ಭಯ ಪಟ್ಟಿದ್ದರಂತೆ ನಟಿ ಸಾಯಿ ಪಲ್ಲವಿಪ್ರಕಾಶ್ ರೈ ನೋಡಿ ಭಯ ಪಟ್ಟಿದ್ದರಂತೆ ನಟಿ ಸಾಯಿ ಪಲ್ಲವಿ

  ಹೌದು, ರಾಣಾ ದಗ್ಗುಬಾಟಿ ತಮ್ಮ ಸಹನಟಿಗೆ ಈ ಗೌರವ ನೀಡಲಿದ್ದಾರೆ. ಸ್ವತಃ ಸಾಯಿ ಪಲ್ಲವಿ ಈ ವಿಷಯವನ್ನು ಮಾಧ್ಯಮಗಳೊಟ್ಟಿಗೆ ಹಂಚಿಕೊಂಡಿದ್ದು, 'ನಿನ್ನದು ಬಹಳ ಪ್ರಮುಖ ಪಾತ್ರ ಹಾಗಾಗಿ, ಟೈಟಲ್‌ ಕಾರ್ಡ್‌ನಲ್ಲಿ ನನ್ನ ಹೆಸರಿಗಿಂತಲೂ ಮುಂಚೆ ನಿನ್ನ ಹೆಸರು ಇರುವಂತೆ ನೋಡಿಕೊಳ್ಳುತ್ತೇನೆ' ಎಂದಿದ್ದಾರಂತೆ ರಾಣಾ.

  ಸಾಯಿ ಪಲ್ಲವಿ ನಟನೆಗೆ ಮನಸೋತ ರಾಣಾ

  ಸಾಯಿ ಪಲ್ಲವಿ ನಟನೆಗೆ ಮನಸೋತ ರಾಣಾ

  ನಟಿ ಸಾಯಿ ಪಲ್ಲವಿ ಅದ್ಭುತವಾದ ನಟಿಯೂ ಸಹ ಹೌದು. ಸಾಯಿ ಪಲ್ಲವಿ ನಟನೆ ಕಂಡು ರಾಣಾ ದಗ್ಗುಬಾಟಿ ಬಹಳ ಮೆಚ್ಚಿಕೊಂಡಿದ್ದಾರಂತೆ. ಸಾಯಿ ಪಲ್ಲವಿ ಹೆಸರು ಮೊದಲು ಹಾಕಿಸುವಲ್ಲಿ ಅದೂ ಒಂದು ಕಾರಣವೇ.

  ರಾಣಾ ರದ್ದು ಅದ್ಭುತವಾದ ಯೋಚನೆ: ಸಾಯಿ ಪಲ್ಲವಿ

  ರಾಣಾ ರದ್ದು ಅದ್ಭುತವಾದ ಯೋಚನೆ: ಸಾಯಿ ಪಲ್ಲವಿ

  ರಾಣಾ ದಗ್ಗುಬಾಟಿ ನೀಡುತ್ತಿರುವ ಗೌರವದ ಬಗ್ಗೆ ಮಾತನಾಡಿರುವ ಸಾಯಿ ಪಲ್ಲವಿ, 'ನಾನು ನನ್ನ ಪಾಡಿಗೆ ನಟಿಸುತ್ತಿದ್ದೇನೆ. ನನ್ನ ಕೆಲಸ ನಾನು ಮಾಡುತ್ತಿದ್ದೇನೆ. ಆದರೆ ರಾಣಾ ದಗ್ಗುಬಾಟಿ ನನ್ನ ಹೆಸರನ್ನು ಮೊದಲು ಹಾಕುವ ಬಗ್ಗೆ ಯೋಚನೆ ಮಾಡಿದ್ದಾರೆ. ಇದು ನಿಜಕ್ಕೂ ಅದ್ಭುತವಾದ ಯೋಚನೆ ' ಎಂದಿದ್ದಾರೆ ಸಾಯಿ ಪಲ್ಲವಿ.

  'ರೌಡಿ ಬೇಬಿ' ಹಾಡಿನ ಬಿಲಿಯನ್ ವೀಕ್ಷಣೆ ಸಂಭ್ರಮಕ್ಕೆ ಸಾಯಿ ಪಲ್ಲವಿ ಅಭಿಮಾನಿಗಳ ಆಕ್ರೋಶ'ರೌಡಿ ಬೇಬಿ' ಹಾಡಿನ ಬಿಲಿಯನ್ ವೀಕ್ಷಣೆ ಸಂಭ್ರಮಕ್ಕೆ ಸಾಯಿ ಪಲ್ಲವಿ ಅಭಿಮಾನಿಗಳ ಆಕ್ರೋಶ

  ಪ್ರಿಯಾಮಣಿ, ಟಬು ಸಹ ಇದ್ದಾರೆ

  ಪ್ರಿಯಾಮಣಿ, ಟಬು ಸಹ ಇದ್ದಾರೆ

  ಕೆಲವು ದಿನಗಳ ಹಿಂದಷ್ಟೆ 'ವಿರಾಟ ಪರ್ವಂ' ಸಿನಿಮಾದಲ್ಲಿ ರಾಣಾ ದಗ್ಗುಬಾಟಿ ಲುಕ್‌ ನ ಟೀಸರ್ ಒಂದನ್ನು ಬಿಡುಗಡೆ ಮಾಡಲಾಗಿದೆ. ಗನ್ ಹಿಡಿದು ನಕ್ಸಲೈಟ್ ಆಗಿ ಗಮನ ಸೆಳೆಯುತ್ತಿದ್ದಾರೆ ರಾಣಾ. ಸಿನಿಮಾದಲ್ಲಿ ಸಾಯಿ ಪಲ್ಲವಿ, ಪ್ರಿಯಾಮಣಿ, ಟಬು, ನಂದಿತಾ ದಾಸ್, ಝರೀನಾ ವಹಾದ್, ಈಶ್ವರಿ ರಾವ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾ ನಿರ್ದೇಶಿಸಿರುವುದು ವೇಣು ಉದುಗುಲು.

  ಕುಂಬಳ ಕಾಯಿ ಹೊಡೆದ ಪ್ರಶಾಂತ್ ನೀಲ್ ಅಂಡ್ ಟೀಮ್ | Filmibeat Kannada
  ಎರಡು ಸಿನಿಮಾಗಳು ಬಿಡುಗಡೆಗೆ ತಯಾರು

  ಎರಡು ಸಿನಿಮಾಗಳು ಬಿಡುಗಡೆಗೆ ತಯಾರು

  ಇನ್ನುಳಿದಂತೆ ನಟಿ ಸಾಯಿ ಪಲ್ಲವಿ ನಟಿಸಿ ಶೇಖರ್ ಕಮ್ಮುಲ ನಿರ್ದೇಶಿಸಿರುವ 'ಲವ್ ಸ್ಟೋರಿ' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ನಟ ನಾನಿ ಜೊತೆಗೆ ಎರಡನೇ ಸಿನಿಮಾ 'ಶ್ಯಾಂ ಸಿಂಗ್ ರಾಯ್' ನಲ್ಲಿ ನಟಿಸುತ್ತಿದ್ದಾರೆ ಸಾಯಿ ಪಲ್ಲವಿ. ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿರುವ 'ಪಾವ ಕದೈಗಳ್' ಬಗ್ಗೆ ಒಳ್ಳೆಯ ವಿಮರ್ಶೆ ಕೇಳಿಬಂದಿದೆ.

  English summary
  Sai Pallavi's name will sean first, before Rana Daggubati's name in movie Virata Parvam.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X