ನೃತ್ಯ ನಿರ್ದೇಶಕಿಯಾದ 'ಫಿದಾ' ಸುಂದರಿ ಸಾಯಿ ಪಲ್ಲವಿ

ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಸಾಯಿ ಪಲ್ಲವಿ ಈಗ ನೃತ್ಯ ನಿರ್ದೇಶಕಿಯಾಗಿದ್ದಾರೆ. ನಾಗ ಚೈತನ್ಯ ಜೊತೆ ಲವ್ ಸ್ಟೋರಿ ಸಿನಿಮಾದಲ್ಲಿ ಬ್ಯುಸಿಯಿರುವ ಸಾಯಿ ಸಿನಿಮಾಗಾಗಿ ನೃತ್ಯ ಸಂಯೋಜನೆ ಮಾಡಲು ಮುಂದಾಗಿದ್ದಾರೆ.

Recommended Video

ಅಂದು ನನ್ನ ಅಮ್ಮನ ಕಾಲಿಗೆ ಬಿದ್ದು ಕೊಟ್ಟ ಮಾತನ್ನ ಉಳಿಸಿಕೊಂಡರು ಶಿವಣ್ಣ | Shiva Rajkumar | Filmibeat Kannada

ಲವ್ ಸ್ಟೋರಿ, ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ಅಭಿನಯದ ಬಹುನಿರೀಕ್ಷೆಯ ಸಿನಿಮಾ. ಮೊದಲ ಬಾರಿಗೆ ಸಾಯಿ ಪಲ್ಲವಿ ಮತ್ತು ನಾಗಚೈತನ್ಯ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಈಗಾಗಲೆ ಚಿತ್ರದ ಟೀಸರ್ ಮತ್ತು ಲಿರಿಕಲ್ ವಿಡಿಯೋ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸದ್ಯ 90 ರಷ್ಟು ಚಿತ್ರೀಕರಣ ಮುಗಿಸುರುವ ಚಿತ್ರತಂಡ ಇನ್ನೂ ಉಳಿದ ಭಾಗದ ಚಿತ್ರೀಕರಣ ಮುಗಿಸಲು ಸಜ್ಜಾಗಿದೆ. ಆದರೆ ಕೊರೊನಾ ವೈರಸ್ ಹಾವಳಿ ಹೆಚ್ಚಾದ ಪರಿಣಾಮ ಸದ್ಯಕ್ಕೆ ಚಿತ್ರೀಕರಣ ನಡೆಸದಿರಲು ನಿರ್ಧರಿಸಿದೆ. ಚಿತ್ರದ ಒಂದು ಪ್ರಮುಖ ಹಾಡಿನ ಚಿತ್ರೀಕರಣ ಸಹ ಭಾಕಿಯುಳಿದಿದೆ.

Sai Pallavi turns To Choreographer For Her Love Story Movie

ಮೂಲಗಳ ಪ್ರಕಾರ ಈ ಹಾಡಿನ ನೃತ್ಯ ನಿರ್ದೇಶನವನ್ನು ನಟಿ ಸಾಯಿ ಪಲ್ಲವಿ ಅವರೆ ಮಾಡುತ್ತಿದ್ದಾರಂತೆ. ನಿರ್ದೇಶಕ ಶೇಖರ್ ಕಮ್ಮುಲ ಸಾಯಿ ಪಲ್ಲವಿ ಬಳಿ ನೃತ್ಯ ನಿರ್ದೇಶನ ಮಾಡುವಂತೆ ಕೇಳಿಕೊಂಡಿದ್ದಾರಂತೆ. ಹಾಗಾಗಿ ಸಾಯಿ ಪಲ್ಲವಿ ಅವರೆ ನೃತ್ಯ ನಿರ್ದೇಶನ ಮಾಡುವುದು ಬಹುತೇಕ ಖಚಿತವಾಗಿ. ಸಾಯಿ ಪಲ್ಲವಿ ನಟಿ ಮಾತ್ರವಲ್ಲ, ಅದ್ಭುತ ಡ್ಯಾನ್ಸರ್ ಕೂಡ ಹೌದು. ಅಭಿನಯದ ಜೊತೆಗೆ ನೃತ್ಯದ ಮೂಲಕವೂ ಚಿತ್ರಪ್ರಿಯರ ಮನಗೆದ್ದಿದ್ದಾರೆ.

ನಿರ್ದೇಶಕರ ಕೋರಿಕೆಯಂತೆ ಸಾಯಿ ಲವ್ ಸ್ಟೋರಿಯಲ್ಲಿ ನೃತ್ಯ ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಾಯಿ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ ಅಂದ್ಮೇಲೆ ಸಿನಿಮಾದ ಮೇಲಿನ ಮತ್ತಷ್ಟು ಹೆಚ್ಚಾಗಿದೆ. ಈಗಾಗಲೆ ಫಿದಾ, ಮತ್ತು ಮಾರಿ-2 ಸಿನಿಮಾದ ರೌಡಿ ಬೇಬಿ ಹಾಡಿನ ಮೂಲಕ ಸಾಯಿ ಪಲ್ಲವಿ ನೃತ್ಯ ನೋಡಿದ್ದೀರಿ. ಲವ್ ಸ್ಟೋರಿ ಸಿನಿಮಾದಲ್ಲಿಯೂ ಸಾಯಿ ಪಲ್ಲವಿ ಅವರ ಭರ್ಜರಿ ನೃತ್ಯ ಇರುವುದರಲ್ಲಿ ಯಾವುದೆ ಅನುಮಾನವಿಲ್ಲ.

More from Filmibeat

English summary
Actress Sai Pallavi might turn to choreographer for her Love Story movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X