For Quick Alerts
  ALLOW NOTIFICATIONS  
  For Daily Alerts

  ತೆಲುಗು ನಟನ ಜೊತೆಗೆ ಸಾಯಿ ಪಲ್ಲವಿ ಮದುವೆ!? ಹಿರಿಯ ನಟ ಹೇಳಿದ್ದು ಹೀಗೆ

  |

  ನಟಿ ಸಾಯಿ ಪಲ್ಲವಿ 'ಸೌಥ್ ಇಂಡಿಯಾ ಕ್ರಶ್' ಆಗಿ ಬಹುಸಮಯವೇ ಆಗಿದೆ. ಆಕೆಯ ನಟನೆಗೆ, ಆಕೆಯ ನೃತ್ಯಕ್ಕೆ, ನಗುವಿಗೆ, ಆಕೆಯ ಸಾಮಾಜಿಕ ವ್ಯಕ್ತಿತ್ವಕ್ಕೆ ಮಾರುಹೋಗದವರು ಕಡಿಮೆ.

  ನಟಿಯೊಬ್ಬರು ಖ್ಯಾತರಾಗುತ್ತಿದ್ದಂತೆ ಅಭಿಮಾನಿಗಳು, ಮಾಧ್ಯಮಗಳು ಅವರ ಮದುವೆ ಹಿಂದೆ ಬಿದ್ದುಬಿಡುತ್ತಾರೆ. ಸಂದರ್ಶನಗಳಲ್ಲಿ, ಅಭಿಮಾನಿಗಳೊಂದಿಗೆ ಸಂವಾದದಲ್ಲಿ 'ಮದುವೆ ಯಾವಾಗ?' ಎಂಬ ಪ್ರಶ್ನೆ ತೂರಿ ಬರುವುದು ಸಾಮಾನ್ಯ.

  ಇದೀಗ ಮತ್ತೆ ಸಾಯಿ ಪಲ್ಲವಿ ಮದುವೆ ಬಗ್ಗೆ ಸಣ್ಣ ಚರ್ಚೆ ಎದ್ದಿದೆ. ಇದಕ್ಕೆ ಕಾರಣವಾಗಿದ್ದು ತೆಲುಗಿನ ಹಿರಿಯ ನಟರೊಬ್ಬರು ಅಭಿಮಾನಿಗಳೊಟ್ಟಿಗೆ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಚುಟುಕು ಸಂವಾದ.

  ಚಿರಂಜೀವಿ ಸಹೋದರ ನಾಗಬಾಬುಗೆ ಎದುರಾದ ಪ್ರಶ್ನೆ

  ಚಿರಂಜೀವಿ ಸಹೋದರ ನಾಗಬಾಬುಗೆ ಎದುರಾದ ಪ್ರಶ್ನೆ

  ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು, ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಟ್ಟಿಗೆ ಪ್ರಶ್ನೋತ್ತರ ಸಂವಾದ ನಡೆಸಿದ್ದರು. ನಾಗಬಾಬುಗೆ ಹಲವು ಪ್ರಶ್ನೆಗಳನ್ನು ಅಭಿಮಾನಿಗಳು ಕೇಳಿದರು. ಅದರಲ್ಲಿ ಒಂದು ಸಾಯಿ ಪಲ್ಲವಿ ಮದುವೆ ಕುರಿತಾದದ್ದಾಗಿತ್ತು.

  ನಾಗಬಾಬುಗೆ ಪ್ರಶ್ನೆ ಕೇಳಿದ ಅಭಿಮಾನಿ

  ನಾಗಬಾಬುಗೆ ಪ್ರಶ್ನೆ ಕೇಳಿದ ಅಭಿಮಾನಿ

  ನಾಗಬಾಬು ಪುತ್ರ ವರುಣ್ ತೇಜ್ ಟಾಲಿವುಡ್‌ನ ಹಿಟ್ ಹೀರೋಗಳಲ್ಲಿ ಒಬ್ಬರು. ನಾಗಬಾಬು ಅವರು ಅಭಿಮಾನಿಗಳೊಟ್ಟಿಗೆ ಪ್ರಶ್ನೋತ್ತರ ಸಂವಾದ ನಡೆಸಬೇಕಾದರೆ, 'ಅಣ್ಣಾ, ವರುಣ್ ಹಾಗೂ ಸಾಯಿ ಪಲ್ಲವಿಗೆ ಮದುವೆ ಮಾಡಿಬಿಡಿ. ಅವರಿಬ್ಬರ ಜೋಡಿ ಅದ್ಭುತವಾಗಿದೆ' ಎಂದು ಅಭಿಮಾನಿಯೊಬ್ಬ ಸಂದೇಶ ಕಳಿಸಿದ್ದಾನೆ.

  ಉತ್ತರವಾಗಿ ಮೀಮ್ ಪ್ರಕಟಿಸಿದ ನಾಗಬಾಬು

  ಉತ್ತರವಾಗಿ ಮೀಮ್ ಪ್ರಕಟಿಸಿದ ನಾಗಬಾಬು

  ಇದಕ್ಕೆ ಪ್ರತಿಕ್ರಿಯೆಯಾಗಿ ನಾಗಬಾಬು ಮೀಮ್ ಒಂದನ್ನು ಪ್ರಕಟಿಸಿದ್ದಾರೆ. 'ಜಾತಿರತ್ನಾಲು' ಸಿನಿಮಾದಲ್ಲಿ ನ್ಯಾಯಾಧೀಶ ಪಾತ್ರವಹಿಸಿದ್ದ ಬ್ರಹ್ಮಾನಂದಂ 'ಎಲ್ಲವನ್ನೂ ನೀವೆ ಡಿಸೈಡ್ ಮಾಡಿಕೊಳ್ಳುವುದಾದರೆ ನಾನೇಕೆ ಬೇಕು, ನೀವೆ ಮಾಡಿಕೊಳ್ಳಿ' ಎಂದು ತಮಾಷೆಯಾಗಿ ಹೇಳುವ ದೃಶ್ಯವಿದೆ. ಅದು ಮೀಮ್ ಆಗಿ ಬಹಳ ಖ್ಯಾತವಾಗಿದೆ. ಅದೇ ಮೀಮ್‌ ಅನ್ನು ಅಭಿಮಾನಿಗೆ ಉತ್ತರವಾಗಿ ನೀಡಿದ್ದಾರೆ ನಾಗಬಾಬು.

  ಸೈಕಲ್ ನಲ್ಲಿ ಬಂದು ವೋಟ್ ಹಾಕಿ ಮೋದಿಗೆ ಟಾಂಗ್ ಕೊಟ್ಟ ವಿಜಯ್ | Filmibeat Kannada
  ಫಿದಾ ಸಿನಿಮಾದಲ್ಲಿ ನಟಿಸಿದ್ದ ವರುಣ್-ಸಾಯಿ ಪಲ್ಲವಿ

  ಫಿದಾ ಸಿನಿಮಾದಲ್ಲಿ ನಟಿಸಿದ್ದ ವರುಣ್-ಸಾಯಿ ಪಲ್ಲವಿ

  ವರುಣ್ ತೇಜ್ ಹಾಗೂ ಸಾಯಿ ಪಲ್ಲವಿ ಒಟ್ಟಾಗಿ 'ಫಿದಾ' ಸಿನಿಮಾದಲ್ಲಿ ನಟಿಸಿದ್ದರು. ಶೇಖರ್ ಕಮ್ಮುಲ ನಿರ್ದೇಶಿಸಿದ್ದ ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ವರುಣ್ ತೇಜ್-ಸಾಯಿ ಪಲ್ಲವಿ ಜೋಡಿಯೂ ಹಿಟ್ ಆಗಿತ್ತು. ಹಾಗಾಗಿಯೇ ಅಭಿಮಾನಿ ಹೀಗೆ ಪ್ರಶ್ನೆ ಕೇಳಿದ್ದಾನೆ. ಆದರೆ ಸಾಯಿ ಪಲ್ಲವಿ ಅಥವಾ ವರುಣ್ ಮದುವೆ ಬಗ್ಗೆ ಯಾವುದೇ ಅಧಿಕೃತ ಸುದ್ದಿಗಳು ಹೊರಗೆ ಬಿದ್ದಿಲ್ಲ. ಇಬ್ಬರ ಮದುವೆ ಸನಿಹ ಭವಿಷ್ಯದಲ್ಲಿ ನಡೆಯುವ ಸಾಧ್ಯತೆಯೂ ಇಲ್ಲ.

  English summary
  A Fan says Nagababu that Varun Tej and Sai Pallavi were cute couple made them marry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X