ಕದ್ದು ಮುಚ್ಚಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿದ ಸಾಯಿ ಪಲ್ಲವಿ: ಯಾವ ಸಿನಿಮಾ?

ಸಾಯಿ ಪಲ್ಲವಿ ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟಿ. ಹಲವು ದೊಡ್ಡ ದೊಡ್ಡ ಸ್ಟಾರ್‌ಗಳೊಟ್ಟಿಗೆ ನಟಿಸಿದ್ದಾರೆ ಈಕೆ. ಸ್ಟಾರ್ ಆಗಿದ್ದರೂ ಸಾಮಾನ್ಯರಂತೆ ಸರಳವಾಗಿ ಬದುಕುವುದೇ ಸಾಯಿ ಪಲ್ಲವಿಗೆ ಇಷ್ಟ.

ತೀರಾ ಫ್ಯಾಷನೆಬಲ್ ಅಲ್ಲದೆ ಸಾಮಾನ್ಯ ಉಡುಗೆಗಳನ್ನು ತೊಡುವುದು, ಸರಳವಾದ ಆಹಾರ, ವಿದೇಶಗಳಿಗಲ್ಲದೆ ಆಗಾಗ್ಗೆ ಹಳ್ಳಿಗಾಡಿಗೆ ಪ್ರವಾಸ, ಸೆಟ್‌ಗಳಲ್ಲಿ ಸಹ ಸಾಮಾನ್ಯರೊಟ್ಟಿಗೆ ಆತ್ಮೀಯ ಸಂವಾದಗಳನ್ನು ಮಾಡುತ್ತಿರುತ್ತಾರೆ ಈ ನಟಿ. ಇದರ ಜೊತೆಗೆ ಸಾಯಿ ಪಲ್ಲವಿಗೆ ಇರುವ ಇನ್ನೊಂದು ಅಭ್ಯಾಸವೆಂದರೆ ಸಾಮಾನ್ಯರಂತೆ ಎಲ್ಲರೊಟ್ಟಿಗೆ ಕೂತು ಸಿನಿಮಾ ನೋಡುವುದು.

ಇದೇ ಕಾರಣಕ್ಕೆ ಮುಖ ಮುಚ್ಚಿಕೊಂಡು ಅಥವಾ ಬುರ್ಖಾ ತೊಟ್ಟುಕೊಂಡು ಸಾಮಾನ್ಯರಂತೆ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡಿ ಬರುತ್ತಾರೆ ಸಾಯಿ ಪಲ್ಲವಿ. ಪ್ರತ್ಯೇಕವಾಗಿ ಹೋಮ್‌ ಥಿಯೇಟರ್‌ನಲ್ಲಿ ಕೂತು ಸಿನಿಮಾ ನೋಡುವುದರ ಬದಲಿಗೆ, ಜನರೊಟ್ಟಿಗೆ ಕೂತು ಸಿನಿಮಾ ನೋಡುವುದು ಸಾಯಿ ಪಲ್ಲವಿಗೆ ಖುಷಿ ಕೊಡುತ್ತದೆ.

ಇದೀಗ ನಟಿ ಸಾಯಿ ಪಲ್ಲವಿ ಕದ್ದು ಮುಚ್ಚಿ ಚಿತ್ರಮಂದಿರಕ್ಕೆ ಭೇಟಿ ನೀಡಿ ಜನರೊಟ್ಟಿಗೆ ಕೂತು ಸಿನಿಮಾ ವೀಕ್ಷಿಸಿ ಬಂದಿದ್ದಾರೆ. ಸಾಯಿ ಪಲ್ಲವಿ ಮುಖ ಮುಚ್ಚಿಕೊಂಡು ಸಿನಿಮಾ ವೀಕ್ಷಿಸಿ, ಚಿತ್ರಮಂದಿರದಿಂದ ಹೊರಬರುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಟಿಯ ಸರಳತೆಗೆ ಮತ್ತೊಮ್ಮೆ ನೆಟ್ಟಿಗರು ಭೇಷ್ ಎನ್ನುತ್ತಿದ್ದಾರೆ.

ಕದ್ದು ಮುಚ್ಚಿ ಚಿತ್ರಮಂದಿರಕ್ಕೆ ಬಂದ ಸಾಯಿ ಪಲ್ಲವಿ

ಕದ್ದು ಮುಚ್ಚಿ ಚಿತ್ರಮಂದಿರಕ್ಕೆ ಬಂದ ಸಾಯಿ ಪಲ್ಲವಿ

ಸಾಯಿ ಪಲ್ಲವಿ ಇತ್ತೀಚೆಗೆ ಹೈದರಾಬಾದ್‌ನ ಆರ್‌ಕೆ ಕಾಂಪ್ಲೆಕ್ಸ್‌ನ ಪಿವಿಆರ್‌ ಗೆ ಭೇಟಿ ನೀಡಿ ಸಿನಿಮಾ ನೋಡಿದ್ದಾರೆ. ತಲೆಗೆ ಸ್ಕಾರ್ಫ್ ಸುತ್ತಿಕೊಂಡು, ಮಾಸ್ಕ್ ಧರಿಸಿ, ಸರಳವಾದ ಟಿ-ಶರ್ಟ್ ಹಾಗೂ ನೈಟ್ ಪ್ಯಾಂಟ್ ರೀತಿ ಕಾಣುವ ದೊಗಳೆ ಪ್ಯಾಂಟ್ ಧರಿಸಿ, ಯಾವುದೇ ಆಭರಣಗಳು ಇಲ್ಲದೆ, ಬ್ಯಾಗು ಹಾಗೂ ವಾಟರ್ ಬಾಟೆಲ್ ಹಾಗೂ ಶಾಲೊಂದನ್ನು ಹಿಡಿದುಕೊಂಡು ಸರಳವಾಗಿ ಚಿತ್ರಮಂದಿರಕ್ಕೆ ಬಂದಿದ್ದರು ಸಾಯಿ ಪಲ್ಲವಿ. ಚಿತ್ರಮಂದಿರದಿಂದ ಹೊರಕ್ಕೆ ಸಾಯಿ ಪಲ್ಲವಿ ನಡೆದುಕೊಂಡು ಬರುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಯಾವ ಸಿನಿಮಾ ನೋಡಿದರು ಸಾಯಿ ಪಲ್ಲವಿ?

ಯಾವ ಸಿನಿಮಾ ನೋಡಿದರು ಸಾಯಿ ಪಲ್ಲವಿ?

ಸಾಯಿ ಪಲ್ಲವಿ, ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ' ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದಿದ್ದರು ಎನ್ನಲಾಗುತ್ತಿದೆ. ಆದರೆ ಸಾಯಿ ಪಲ್ಲವಿ ಯಾವ ಸಿನಿಮಾವನ್ನು ನೋಡಿ ಹೊರಬಂದರು ಎಂಬ ಬಗ್ಗೆ ಖಾತ್ರಿಯಾಗಿಲ್ಲ. ಹೈದರಾಬಾದ್‌ನ ಆರ್‌ಕೆ ಕಾಂಪ್ಲೆಕ್ಸ್‌ನ ಪಿವಿಆರ್‌ನಲ್ಲಿ 'ಸರ್ಕಾರು ವಾರಿ ಪಾಟ' ಸಿನಿಮಾದ ಜೊತೆಗೆ ತಮಿಳಿನ 'ಡಾನ್', ಇಂಗ್ಲೀಷ್‌ನ 'ಡಾಕ್ಟರ್ ಸ್ಟ್ರೇಂಜ್', ಹಿಂದಿಯ 'ಜಯೇಶ್‌ಭಾಯ್ ಜೋರ್ದಾರ್' ಸಿನಿಮಾಗಳು ಪ್ರದರ್ಶನ ಕಾಣುತ್ತಿರುವ ಇಷ್ಟು ಸಿನಿಮಾಗಳಲ್ಲಿ ಯಾವ ಸಿನಿಮಾವನ್ನು ಸಾಯಿ ಪಲ್ಲವಿ ನೋಡಿದರು ಎಂಬ ಬಗ್ಗೆ ಖಾತ್ರಿ ಇಲ್ಲ.

ಈ ಮೊದಲೂ ಬುರ್ಖಾ ತೊಟ್ಟು ಸಿನಿಮಾ ನೋಡಿದ್ದರು

ಈ ಮೊದಲೂ ಬುರ್ಖಾ ತೊಟ್ಟು ಸಿನಿಮಾ ನೋಡಿದ್ದರು

ಸಾಯಿ ಪಲ್ಲವಿ ಹೀಗೆ ಕದ್ದು ಮುಚ್ಚಿ ಸಿನಿಮಾ ನೋಡುತ್ತಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆ ತಮ್ಮದೇ ಸಿನಿಮಾ 'ಶ್ಯಾಮ ಸಿಂಘ ರಾಯ್' ಅನ್ನು ಹೈದರಾಬಾದ್‌ನ ಸಿಂಗಲ್ ಸ್ಕ್ರೀನ್ ಚಿತ್ರಮಂದಿರದಲ್ಲಿ ಅಭಿಮಾನಿಗಳೊಟ್ಟಿಗೆ ಕೂತು ವೀಕ್ಷಿಸಿದ್ದರು. ಆದರೆ ಆಗಲೂ ಸಹ ಯಾರೂ ಸಾಯಿ ಪಲ್ಲವಿಯನ್ನು ಗುರುತು ಹಿಡಿದಿರಲಿಲ್ಲ. ಸಾಯಿ ಪಲ್ಲವಿ, ಬುರ್ಖಾ ತೊಟ್ಟುಕೊಂಡು ಹೋಗಿ ಜನರೊಟ್ಟಿಗೆ ಕೂತು ಸಿನಿಮಾ ನೋಡಿದ್ದರು. ಸಿನಿಮಾದಲ್ಲಿ ತಮ್ಮ ಎಂಟ್ರಿ ಸೀನ್, ಡ್ಯಾನ್ಸ್ ದೃಶ್ಯಗಳು ಬಂದಾಗ ಜನ ಶಿಳ್ಳೆ ಹಾಕುವುದು ನೋಡಿ ಖುಷಿ ಪಟ್ಟಿದ್ದರು ಸಾಯಿ ಪಲ್ಲವಿ.

ಸಾಯಿ ಪಲ್ಲವಿಯ ಮುಂಬರುವ ಸಿನಿಮಾಗಳು

ಸಾಯಿ ಪಲ್ಲವಿಯ ಮುಂಬರುವ ಸಿನಿಮಾಗಳು

ಸಾಯಿ ಪಲ್ಲವಿ ಪ್ರಸ್ತುತ ಸಖತ್ ಬ್ಯುಸಿ ನಟಿ. ಸಾಯಿ ಪಲ್ಲವಿ ನಟನೆಯ 'ವಿರಾಟ ಪರ್ವಂ' ಸಿನಿಮಾ ಬಿಡುಗಡೆಗೆ ತಯಾರಾಗಿದ್ದು, ಜುಲೈ 1 ರಂದು ತೆರೆಗೆ ಬರಲಿದೆ. ನಟ ಶಿವಕಾರ್ತಿಕೇಯನ್ ಜೊತೆಗೆ ಹೊಸ ಸಿನಿಮಾವೊಂದಕ್ಕೆ ಸಾಯಿ ಪಲ್ಲವಿ ಸಹಿ ಹಾಕಿದ್ದಾರೆ ಆ ಸಿನಿಮಾವನ್ನು ಕಮಲ್ ಹಾಸನ್ ನಿರ್ಮಾಣ ಮಾಡುತ್ತಿದ್ದಾರೆ. ಕತೆಯೂ ಅವರದ್ದೇ. ಜೊತೆಗೆ 'ಗಾರ್ಗಿ' ಹೆಸರಿನ ಪ್ಯಾನ್ ಇಂಡಿಯಾ ಸಿನಿಮಾದಲ್ಲಿಯೂ ಸಾಯಿ ಪಲ್ಲವಿ ನಟಿಸಿದ್ದಾರೆ. ಈ ಸಿನಿಮಾ ಸಹ ಶೀಘ್ರದಲ್ಲಿಯೇ ಬಿಡುಗಡೆ ಆಗಲಿದೆ.

More from Filmibeat

English summary
Actress Sai Pallavi visited Hyderabad RK Complex PVR secretly to watch movie. Her video of leaving theater went viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X