For Quick Alerts
  ALLOW NOTIFICATIONS  
  For Daily Alerts

  ಪುಷ್ಪ 2 ಗೆ ಸೇರುತ್ತಾರಾ ಸಾಯಿ ಪಲ್ಲವಿ? ತೂಕದ ಪಾತ್ರ.. ಶೀಘ್ರದಲ್ಲೇ ಅಧಿಸೂಚನೆ!

  |

  ಅಲ್ಲು ಅರ್ಜುನ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ 2' ಕೆಲವು ದಿನಗಳ ಹಿಂದಷ್ಟೇ ಸೆಟ್ಟೇರಿದೆ. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅನುಪಸ್ಥಿತಿಯಲ್ಲಿ ಸಿನಿಮಾ ಟೇಕ್ ಆಫ್ ಆಗಿದೆ. ಕೊನೆಗೂ ಸಿನಿಮಾ ಸೆಟ್ಟೇರುವುದನ್ನೇ ಕಾದು ಕೂತಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿಯಂತೂ ಸಿಕ್ಕಿತ್ತು.

  'ಪುಷ್ಪ' ಪ್ಯಾನ್ ಇಂಡಿಯಾ ಲೆವೆನ್‌ನಲ್ಲಿ ಬಾಕ್ಸಾಫೀಸ್‌ ದೋಚದೆ ಹೋಗಿದ್ದರೆ ಈ ಮಟ್ಟಿಗೆ ಸದ್ದು ಮಾಡುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಬಾಲಿವುಡ್ ಬಾಕ್ಸಾಫೀಸ್‌ನಲ್ಲೇ 100 ಕೋಟಿ ರೂ. ಕಲೆಕ್ಷನ್ ಮಾಡಿದ್ದರಿಂದ 'ಪುಷ್ಪ' ಪಾರ್ಟ್ 2ಗೆ ಇಡೀ ಚಿತ್ರತಂಡ ಸಿದ್ಧರಾಗಿತ್ತು. ಅದಂತೆ ಸಿನಿಮಾ ಕೂಡ ಒಂದು ಬದಲಾವಣೆಗಳನ್ನು ಮಾಡಿಕೊಂಡು ಮುಹೂರ್ತ ಮಾಡಿ ಮುಗಿಸಿದೆ.

  ವಿಚ್ಛೇದನದ ಬಳಿಕ 2ನೇ ಮದುವೆಗೆ ರೆಡಿ: ಹಲ್‌ಚಲ್ ಎಬ್ಬಿಸಿದ ಸಮಂತಾ ಮರು ಮದುವೆ!ವಿಚ್ಛೇದನದ ಬಳಿಕ 2ನೇ ಮದುವೆಗೆ ರೆಡಿ: ಹಲ್‌ಚಲ್ ಎಬ್ಬಿಸಿದ ಸಮಂತಾ ಮರು ಮದುವೆ!

  ಅದ್ಭುತ ಯಶಸ್ಸಿನ ಬಳಿಕ ನಿರ್ದೇಶಕ ಸುಕುಮಾರ್ ಕಥೆಯನ್ನು ಮತ್ತಷ್ಟು ಸ್ಟ್ರಾಂಗ್ ಮಾಡಿದ್ದಾರೆ. ಹಲವು ಪಾತ್ರಗಳನ್ನು ಹೊಸದಾಗಿ ಸೇರ್ಪಡೆ ಮಾಡುತ್ತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಸದ್ಯ ಸಾಯಿ ಪಲ್ಲವಿ ಹೆಸರು ಹೊಸದಾಗಿ ಕೇಳಿಬರುತ್ತಿದೆ.

  'ಪುಷ್ಪ 2' ಸಿಕ್ಕಾಪಟ್ಟೆ ಸ್ಟ್ರಾಂಗ್

  'ಪುಷ್ಪ 2' ಸಿಕ್ಕಾಪಟ್ಟೆ ಸ್ಟ್ರಾಂಗ್

  'ಪುಷ್ಪ' ಪಕ್ಕಾ ರಗಡ್ ಕ್ಯಾರೆಕ್ಟರ್ ಆಗಿದ್ದರೂ, ಸ್ಟೈಲಿಶ್ ಸ್ಟಾರ್ ಈ ಪಾತ್ರದ ಮೂಲಕ ಐಕಾನ್ ಸ್ಟಾರ್ ಆಗಿ ಹೊರಹೊಮ್ಮಿದ್ದರು. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಕ್ಯಾರೆಕ್ಟರ್‌ಗಳು ಭಾರತದಾದ್ಯಂತ ಜನಪ್ರಿಯವಾಗಿದ್ದವು. ಹೀಗಾಗಿ ಅದ್ಭುತ ಯಶಸ್ಸಿನ ಬಳಿಕ 'ಪುಷ್ಪ 2' ಸೆಟ್ಟೇರಿದೆ. ಈ ಬಾರಿ ಪುಷ್ಪ ಮೊದಲ ಭಾಗಕ್ಕಿಂತ ಮೂರು ಪಟ್ಟು ಅದ್ಧೂರಿಯಾಗಿದೆ ಮೂಡಿ ಬರುತ್ತಿದೆ. ಮೂಲಗಳ ಪ್ರಕಾರ, ಸಿನಿಮಾದ ಬಜೆಟ್ ಕೂಡ ಮೂರು ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ. ಹೀಗಾಗಿ ಸುಕುಮಾರ್ ಪಾರ್ಟ್ 2ವನ್ನು ಮತ್ತಷ್ಟು ಸ್ಟ್ರಾಂಗ್ ಮಾಡಿದ್ದಾರೆ ಎನ್ನುತ್ತಿದೆ ಟಾಲಿವುಡ್.

  ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಸಮಂತಾ ಕಾನೂನು ಸಮರ: ಅಂತಹದ್ದೇನಾಯ್ತು?ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಸಮಂತಾ ಕಾನೂನು ಸಮರ: ಅಂತಹದ್ದೇನಾಯ್ತು?

  'ಪುಷ್ಪ 2' ಸಿನಿಮಾದಲ್ಲಿ ಸಾಯಿ ಪಲ್ಲವಿ?

  'ಪುಷ್ಪ 2' ಸಿನಿಮಾದಲ್ಲಿ ಸಾಯಿ ಪಲ್ಲವಿ?

  'ಪುಷ್ಪ' ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಜೊತೆ ಸಮಂತಾ ಐಟಂ ಸಾಂಗ್‌ ಒಂದರಲ್ಲಿ ಕಾಣಿಸಿಕೊಂಡಿದ್ದರು. "ಊ ಅಂಟಾವ ಮಾವಾ.." ಅಂತ ಭರ್ಜರಿ ಸ್ಟೆಪ್ಸ್ ಹಾಕಿದ್ದ ಸಮಂತಾ ಕೂಡ ಮಿಂಚಿದ್ದರು. ಅದೇ ಪಾರ್ಟ್ 2 ನಲ್ಲಿ ಮತ್ತೊಂದು ಸ್ಟಾರ್ ನಟಿಯನ್ನು ಕರೆತಂದಿದ್ದಾರೆ ಎನ್ನಲಾಗಿದೆ. ಅವರು ಬೇರೆ ಯಾರೂ ಅಲ್ಲ ಸಾಯಿ ಪಲ್ಲವಿ.

  ಸಾಯಿ ಪಲ್ಲವಿ ಪಾತ್ರವೇನು?

  ಸಾಯಿ ಪಲ್ಲವಿ ಪಾತ್ರವೇನು?

  'ಪುಷ್ಪ 2' ಸಿನಿಮಾದಲ್ಲಿ ಸಾಯಿ ಪಲ್ಲವಿ ಬುಡಕಟ್ಟು ಜನಾಂಗದ ಮಹಿಳೆಯಾಗಿ ಕಾಣಿಸಿಕೊಳ್ಳಿದ್ದಾರೆ ಅಂತ ವರದಿಯಾಗಿದೆ. ಈ ಬಗ್ಗೆ ನಿರ್ದೇಶಕ ಸುಕುಮಾರ್ ಶೀಘ್ರದಲ್ಲಿಯೇ ಘೋಷಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಸಾಯಿ ಪಲ್ಲವಿ ಜೊತೆನೇ ಕಾಲಿವುಡ್‌ ಸ್ಟಾರ್ ನಟ ವಿಜಯ್ ಸೇತುಪತಿಯನ್ನೂ ಈ ಸಿನಿಮಾ ವಿಶೇಷ ಪಾತ್ರಕ್ಕಾಗಿ ಕರೆದುಕೊಂಡು ಬರಲಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಅಪ್‌ಡೇಟ್ ಬಾಕಿ ಉಳಿದಿದೆ.

  ಪುಷ್ಪಗೆ ಭರ್ಜರಿ ಸಕ್ಸಸ್

  ಪುಷ್ಪಗೆ ಭರ್ಜರಿ ಸಕ್ಸಸ್

  ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಹಾಗೂ ಸಮಂತಾ ಸೇರಿದಂತೆ ಗಣ್ಯರೇ ಈ ಸಿನಿಮಾದಲ್ಲಿ ನಟಿಸಿದ್ದಾರೆ. ರಕ್ತ ಚಂದನ ಕಳ್ಳಸಾಗಾಣೆಯನ್ನಿಟ್ಟುಕೊಂಡು ಕಥೆ ಹೆಣೆದಿದ್ದ ಸುಕುಮಾರ್‌ ಹಾಗೂ ತಂಡಕ್ಕೆ ಭರ್ಜರಿ ಸಕ್ಸಸ್ ಸಿಕ್ಕಿತ್ತು. ಅದ್ಭುತ ಹಾಡುಗಳು, ಡೈಲಾಗ್, ಆಕ್ಷನ್ ಎಲ್ಲವೂ ಪ್ರೇಕ್ಷಕರನ್ನು ಸೆಳೆದಿತ್ತು. ಈಗ 'ಪುಷ್ಪ 2' ಸಿನಿಮಾ ಮೇಲೆ ಎಲ್ಲರ ಗಮನ ಸೆಳೆದಿದೆ.

  English summary
  Sai Pallavi Will Be Joining Allu Arjun Starrer Pan India Movie Pushpa 2, Know More.
  Friday, September 9, 2022, 9:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X