'ಬಾಹುಬಲಿ' ಪ್ರಭಾಸ್ ಗೆ ವಿಲನ್ ಆದ ಬಾಲಿವುಡ್ ನಟ ಸೈಫ್ ಅಲಿ ಖಾನ್

ಟಾಲಿವುಡ್ ಸ್ಟಾರ್ ಪ್ರಭಾಸ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ರಾಧೆ ಶ್ಯಾಮ' ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿಸಿರುವ ಪ್ರಭಾಸ್, ಈ ಸಿನಿಮಾ ರಿಲೀಸ್ ಗೂ ಮೊದಲೇ 21ನೇ ಸಿನಿಮಾ ಅನೌನ್ಸ್ ಆಗಿದೆ. ಈ ಚಿತ್ರದ ಬಗ್ಗೆ ಈಗಾಗಲೆ ಚರ್ಚೆ ಪ್ರಾರಂಭವಾಗಿದ್ದು ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಆದರೆ ಈ ನಡುವೆ ಪ್ರಭಾಸ್ 22ನೇ ಸಿನಿಮಾ ಸಹ ಬಹಿರಂಗವಾಗಿದ್ದು ಚಿತ್ರಕ್ಕೆ 'ಆದಿಪುರುಷ' ಎಂದು ಟೈಟಲ್ ಇಡಲಾಗಿದೆ.

Recommended Video

Sudeep ಹುಟ್ಟು ಹಬ್ಬದಂದು ಅವರ ಬಯೋಗ್ರಫಿ ಬಿಡುಗಡೆ ಮಾಡಿದ Puneeth Rajkumar | Filmibeat Kannada

ಸಾಹೋ ಸಿನಿಮಾದ ಬಳಿಕ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಸಹಿ ಮಾಡುವ ಮೂಲಕ ಪ್ರಭಾಸ್ ಅಭಿಮಾನಿಗಳ ಕುತೂಹಲ ಇಮ್ಮಡಿಗೊಳಿಸಿದ್ದಾರೆ. ಈಗಾಗಲೇ 'ಆದಿಪುರುಷ' ಸಿನಿಮಾದ ಟೈಟಲ್ ಪೋಸ್ಟರ್ ರಿಲೀಸ್ ಆಗಿದ್ದು, 10 ತಲೆಯ ರಾವಣ ಮತ್ತು ಆಂಜನೇಯನ ಚಿತ್ರಗಳು ಗಮನ ಸೆಳೆಯುತ್ತಿದೆ. ಇದೀಗ ಸಿನಿಮಾದಿಂದ ಮತ್ತೊಂದು ಇಂಟರೆಸ್ಟಿಂಗ್ ವಿಚಾರವನ್ನು ಚಿತ್ರತಂಡ ಬಹಿರಂಗಪಡಿಸಿದೆ. ಚಿತ್ರದಲ್ಲಿ ಪ್ರಭಾಸ್ ಗೆ ವಿಲನ್ ಆಗಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಕಾಣಿಸಿಕೊಳ್ಳುತ್ತಿದ್ದಾರೆ.

'ಲಂಕೇಶ್' ಪಾತ್ರದಲ್ಲಿ ಸೈಫ್ ಅಲಿ ಖಾನ್

'ಲಂಕೇಶ್' ಪಾತ್ರದಲ್ಲಿ ಸೈಫ್ ಅಲಿ ಖಾನ್

ನಟ ಸೈಫ್ ಖಾನ್ 'ಆದಿಪುರುಷ' ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಸೈಫ್ ಅಲಿ ಖಾನ್, ಲಂಕೇಶ್ (ರಾವಣ) ಪಾತ್ರಕ್ಕೆ ಬಣ್ಣಹಚ್ಚುತ್ತಿದ್ದಾರೆ. ಈ ವಿಚಾರವನ್ನು ಸಿನಿಮಾ ತಂಡ ಬಹಿರಂಗ ಪಡಿಸಿ "7000 ವರ್ಷಗಳ ಹಿಂದೆ ವಿಶ್ವದ ಅತ್ಯಂತ ಬುದ್ಧಿವಂತ ರಾಕ್ಷಸ ಅಸ್ತಿತ್ವದಲ್ಲಿದ್ದ" ಎಂದು ಬರೆದುಕೊಂಡಿದ್ದಾರೆ.

ತನ್ಹಾಜಿ ಸಿನಿಮಾದಲ್ಲಿ ಅಭಿನಯಿಸಿದ್ದ ಸೈಫ್

ತನ್ಹಾಜಿ ಸಿನಿಮಾದಲ್ಲಿ ಅಭಿನಯಿಸಿದ್ದ ಸೈಫ್

ಅಂದ್ಹಾಗೆ ಸೈಫ್ ಈ ಮೊದಲು ಓಂ ರಾವತ್ ನಿರ್ದೇಶನದ ತನ್ಹಾಜಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಪ್ರಭಾಸ್ ಸಿನಿಮಾದಲ್ಲಿಯೂ ಅಭಿನಯಿಸುವ ಮೂಲಕ ಸೈಫ್ ಎರಡನೇ ಬಾರಿ ಓಂ ರಾವತ್ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಚಿತ್ರದಲ್ಲಿ ನಾಯಕನ ಪಾತ್ರದಷ್ಟೆ ಸ್ಟ್ರಾಂಗ್ ಆದ ಪಾತ್ರ ಸೈಫ್ ಅಲಿ ಖಾನ್ ಪಾತ್ರ ಇರಲಿದೆಯಂತೆ.

ರಾಮನ ಪಾತ್ರದಲ್ಲಿ ಪ್ರಭಾಸ್, ಸೀತೆ ಯಾರು?

ರಾಮನ ಪಾತ್ರದಲ್ಲಿ ಪ್ರಭಾಸ್, ಸೀತೆ ಯಾರು?

ಈ ಸಿನಿಮಾ ಹಿಂದೂ ಮಹಾಕಾವ್ಯ ರಾಮಾಯಣವನ್ನು ಆಧರಿಸಿದ್ದು ಎಂದು ಈಗಾಗಲೇ ಗೊತ್ತಾಗಿದೆ. ಸೈಫ್ ಅಲಿ ಖಾನ್ ರಾವಣ ಆದರೆ, ಪ್ರಭಾಸ್ ಇಲ್ಲಿ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಮೇಲೆ ಸೀತೆ ಯಾರಾಗ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ಈಗಾಗಲೇ ಸಾಕಷ್ಟು ನಟಿಯರ ಹೆಸರುಗಳು ಕೇಳಿ ಬರುತ್ತಿದೆ. ಆದರೆ ಸಿನಿಮಾತಂಡ ಇನ್ನೂ ಅಧಿಕೃತವಾಗಿ ಯಾವ ಹೆಸರನ್ನು ಬಹಿರಂಗಪಡಿಸಿಲ್ಲ.

ಕನ್ನಡ ಸೇರಿದ್ದಂತೆ 5 ಭಾಷೆಯಲ್ಲಿ ಬರ್ತಿದೆ

ಕನ್ನಡ ಸೇರಿದ್ದಂತೆ 5 ಭಾಷೆಯಲ್ಲಿ ಬರ್ತಿದೆ

ಸಿನಿಮಾ ಪ್ರಭಾಸ್ ಮತ್ತು ಓಂ ರಾವತ್ ಸಿನಿಮಾ ಮುಂದಿನ ವರ್ಷ 2021ಕ್ಕೆ ಸೆಟ್ಟೇರಲಿದ್ದು, 2022ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ವಿಶೇಷ ಅಂದರೆ ಸಿನಿಮಾ ಹಿಂದಿ ಮತ್ತು ತೆಲುಗು ಭಾಷೆ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲಿಯೂ ರಿಲೀಸ್ ಆಗುತ್ತಿದೆ. ಪ್ರಭಾಸ್ ಸಿನಿಮಾ ಕನ್ನಡದಲ್ಲಿಯೂ ಡಬ್ ಆಗಿ ತೆರೆಗೆ ಬರುತ್ತಿದೆ.

More from Filmibeat

English summary
Bollywood Actor Saif Ali Khan to play villain in Prabhas starrer Adi Purush. He is playing Lankesh role in Adi Purush.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X