ಕ್ರೇಜಿ ಅಪ್‌ಡೇಟ್: ಶೌರ್ಯಾಂಗ ಪರ್ವಕ್ಕೂ ಮುನ್ನ ಪ್ರಭಾಸ್ ಖಾಕಿ ಖದರ್

'ಬಾಹುಬಲಿ' ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಈಗಾಗಲೇ ಸಿನಿಮಾ 500 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವ ಲೆಕ್ಕಾಚಾರ ನಡೀತಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಪ್ರಭಾಸ್ ಮತ್ತೆ ಗೆಲುವಿನ ಲಯಕ್ಕೆ ಮರಳಿದ್ದಾರೆ.

'ಸಲಾರ್' ಬಳಿಕ ಪ್ರಭಾಸ್ ಮುಂದಿನ ಸಿನಿಮಾಗಳು ಭಾರೀ ಹೈಪ್ ಕ್ರಿಯೇಟ್ ಮಾಡ್ತಿದೆ. ಸದ್ಯ 'ಕಲ್ಕಿ' ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಸದ್ದಿಲ್ಲದೇ 'ರಾಜಾ ಡೀಲಕ್ಸ್' ಎನ್ನುವ ಮತ್ತೊಂದು ಸಿನಿಮಾ ಚಿತ್ರೀಕರಣದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಮಾರುತಿ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾ ಚಿತ್ರೀಕರಣವನ್ನು ರಹಸ್ಯವಾಗಿಯೇ ಇಡಲಾಗಿದೆ. ಇದೀಗ 'ಸಲಾರ್' ಸೀಕ್ವೆಲ್ ಬಗ್ಗೆ ನಿರೀಕ್ಷೆ ಗರಿಗೆದರಿದೆ.

Salaar Actor Prabhas to play police cop in his next?

ಶೌರ್ಯಾಂಗ ಪರ್ವವನ್ನು ಬೇಗ ಹೇಳಿ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಈ ಸಿನಿಮಾ ಯಾವಾಗ ಬರುತ್ತದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಇದೆಲ್ಲದರ ನಡುವೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಸ್ಪಿರಿಟ್' ಚಿತ್ರದಲ್ಲಿ ಪ್ರಭಾಸ್ ನಟಿಸಬೇಕಿದೆ.

ಬಹಳ ಹಿಂದೆಯೇ 'ಸ್ಪಿರಿಟ್' ಸಿನಿಮಾ ಘೋಷಣೆ ಆಗಿತ್ತು. ಸಂದೀಪ್ ರೆಡ್ಡಿ ನಿರ್ದೇಶನದ 'ಅನಿಮಲ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಇದರ ಬೆನ್ನಲ್ಲೇ 'ಸ್ಪಿರಿಟ್' ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಆದಷ್ಟು ಬೇಗ ಈ ಸಿನಿಮಾ ಕೈಗೆತ್ತಿಕೊಳ್ಳುವುದಾಗಿ ನಿರ್ದೇಶಕರು ಹೇಳುತ್ತಾ ಬರ್ತಿದ್ದಾರೆ.

Salaar Actor Prabhas to play police cop in his next?

'ಸ್ಪಿರಿಟ್' ಚಿತ್ರದಲ್ಲಿ ಪ್ರಭಾಸ್ ಪಾತ್ರದ ಬಗ್ಗೆ ಸಂದೀಪ್ ರೆಡ್ಡಿ ವಂಗಾ ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ. ಚಿತ್ರದಲ್ಲಿ ಯಂಗ್ ರೆಬಲ್ ಸ್ಟಾರ್ ಪೊಲೀಸ್ ಆಫೀಸರ್ ಆಗಿ ನಟಿಸ್ತಾರೆ ಎಂದು ಹೇಳಿದ್ದಾರೆ. ಇದನ್ನು ಕೇಳಿ ಡಾರ್ಲಿಂಗ್ ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ. ಪ್ರಭಾಸ್‌ನ ಆಂಗ್ರಿ ಯಂಗ್‌ಮ್ಯಾನ್ ಆಗಿ ತೋರಿಸುತ್ತೇನೆ ಎಂದು ನಿರ್ದೇಶಕರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

'ಅರ್ಜುನ್ ರೆಡ್ಡಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಸಂದೀಪ್ ರೆಡ್ಡಿ ವಂಗಾ ಬಳಿಕ ಬಾಲಿವುಡ್‌ನಲ್ಲಿ ಕಬೀರ್ ಸಿಂಗ್ ಸಿನಿಮಾ ಮಾಡಿದ್ದರು. ತಮ್ಮ ಸಿನಿಮಾಗಳಲ್ಲಿ ರೋಚಕ ಸನ್ನಿವೇಶಗಳಿಂದ ವಂಗಾ ಗಮನ ಸೆಳೆಯುತ್ತಾರೆ. 'ಅನಿಮಲ್' ಚಿತ್ರದಲ್ಲೂ ಅದರ ಪರಾಕಾಷ್ಠೆಯನ್ನು ತೋರಿಸಿದ್ದಾರೆ. ಅದಕ್ಕೆ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ. ಸಿನಿಮಾ 700 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ.

'ಸ್ಪಿರಿಟ್' ಚಿತ್ರದಲ್ಲಿ ಪ್ರಭಾಸ್ ಪೊಲೀಸ್ ಆಫಿಸರ್ ಆಗಿ ನಟಿಸಲಿದ್ದು ಪೊಲೀಸ್‌ಗಿರಿಯ ಪರಾಕಾಷ್ಠೆಯನ್ನು ತೋರಿಸುವ ಬಗ್ಗೆ ಸುಳಿವು ನೀಡಿದ್ದಾರೆ. ಪ್ರಭಾಸ್ ಈವರೆಗೆ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿಲ್ಲ. ಹಾಗಾಗಿ ಅಭಿಮಾನಿಗಳಿಗೆ ಇದು ಸಖತ್ ಸರ್‌ಪ್ರೈಸ್‌ ಆಗಿ ಇರಲಿದೆ. ಯಂಗ್ ರೆಬಲ್ ಸ್ಟಾರ್ ಖಾಇ ಖದರ್ ಹೇಗಿರುತ್ತೋ ಎಂದು ಅಭಿಮಾನಿಗಳು ಊಹಿಸಿಕೊಂಡೇ ಥ್ರಿಲ್ ಆಗಿದ್ದಾರೆ.

'ಬಾಹುಬಲಿ' ಸರಣಿ ಬಳಿ ಪ್ರಭಾಸ್ ಎಲ್ಲಾ ಪ್ಯಾನ್ ಇಂಡಿಯಾ ಸಿನಿಮಾಗಳನ್ನೇ ಮಾಡುತ್ತಿದ್ದಾರೆ. 'ಸಾಹೋ', 'ರಾಧೆಶ್ಯಾಮ್', 'ಆದಿಪುರುಷ್' ಈಗ ಬಂದಿರುವ 'ಸಲಾರ್' ಎಲ್ಲವೂ ಪ್ಯಾನ್ ಇಂಡಿಯಾ ಸಿನಿಮಾಗಳೇ. 'ಕಬೀರ್ ಸಿಂಗ್' ಹಾಗೂ 'ಅನಿಮಲ್' ಸಿನಿಮಾಗಳಿಂದ ಬಾಲಿವುಡ್‌ನಲ್ಲೂ ಸಂದೀಪ್ ರೆಡ್ಡಿ ಕ್ರೇಜ್ ಸಂಪಾದಿಸಿದ್ದಾರೆ. ಹಾಗಾಗಿ 'ಸ್ಪಿರಿಟ್' ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರೋದು ಕನ್ಫರ್ಮ್.

'ಸಲಾರ್' ಬಳಿಕ 'ಕಲ್ಕಿ' ಸಿನಿಮಾ ತೆರೆಗೆ ಬರಲಿದೆ. ನಾಗ್‌ ಅಶ್ವಿನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಂತರ 'ರಾಜಾ ಡೀಲಕ್ಸ್' ಸಿನಿಮಾ ತೆರೆಗೆ ಬರಲಿದೆ. ಆ ನಂತರ 'ಸ್ಪಿರಿಟ್' ಸಿನಿಮಾ ರಿಲೀಸ್ ಆಗಿ ಬಳಿಕ 'ಸಲಾರ್'-2 ತೆರೆಗಪ್ಪಳಿಸುವ ಸಾಧ್ಯತೆಯಿದೆ. ಪ್ರಶಾಂತ್ ನೀಲ್ ಜೊತೆಗೆ 'ರಾವಣಂ' ಎನ್ನುವ ಮತ್ತೊಂದು ಚಿತ್ರದಲ್ಲೂ ಪ್ರಭಾಸ್ ನಟಿಸೋ ಸಾಧ್ಯತೆಯಿದೆ.

More from Filmibeat

English summary
Prabhas' next role as cop.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X