ತೆಲುಗು ನಟ ಪ್ರಭಾಸ್‌ಗೆ ಆಗಲೇ ಮಕ್ಕಳಿದ್ದಾರಾ? ಹೆಂಡ್ತಿ ಯಾರು ?
ಟೈಟಲ್ ನೋಡಿ ಕನ್ಫೂಸ್ ಆಗಬೇಡಿ. ತೆಲುಗು ನಟ ಪ್ರಭಾಸ್ ಮದುವೆ ಬಗ್ಗೆ ಆಗಾಗ್ಗೆ ವದಂತಿಗಳು ಹರಿದಾಡುತ್ತಿರುತ್ತದೆ. ಹೈದರಾಬಾದ್ ಮೂಲದ ಉದ್ಯಮಿಯೊಬ್ಬರ ಮಗಳ ಜೊತೆ ಪ್ರಭಾಸ್ ಮದುವೆ ನಡೆಯುತ್ತದೆ ಎನ್ನುವ ಊಹಾಪೋಹ ಇತ್ತೀಚೆಗೆ ಕೇಳಿಬಂದಿತ್ತು. ಇದು ಸುಳ್ಳು ಎಂದು ಡಾರ್ಲಿಂಗ್ ಆಪ್ತ ಮೂಲಗಳಿಂದ ಸ್ಪಷ್ಟನೆ ಸಿಕ್ಕಿತ್ತು.
ವಯಸ್ಸು 40 ದಾಟಿದರೂ ಪ್ರಭಾಸ್ ಯಾಕೋ ಮದುವೆ ಬಗ್ಗೆ ಆಲೋಚಿಸದಂತೆ ಕಾಣುತ್ತಿಲ್ಲ. ಈ ಹಿಂದೆ ಕೆಲ ನಟಿಯರ ಜೊತೆಗೂ ಯಂಗ್ ರೆಬಲ್ ಸ್ಟಾರ್ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ ಅದೆಲ್ಲ ಸುಳ್ಳು ಎಂದು ಖಾತ್ರಿಯಾಗಿತ್ತು. ಸದ್ಯ ಪ್ರಭಾಸ್ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಕಳೆದು ಹೋಗಿದ್ದಾರೆ. ಸಿನಿಮಾ ಶೂಟಿಂಗ್, ಪ್ರವಾಸ ಬಿಟ್ಟರೆ ಬೇರೆ ವಿಚಾರಗಳ ಬಗ್ಗೆ ಆಲೋಚಿಸುವ ಗೋಜಿಗೆ ಹೋಗುತ್ತಿಲ್ಲ.

ಪ್ರಭಾಸ್‌ಗೆ ಮದುವೆ ಮಾಡುವ ಬಗ್ಗೆ ದೊಡ್ಡಪ್ಪ ಕೃಷ್ಣಂರಾಜು ಆಗಾಗ್ಗೆ ಮಾತನಾಡುತ್ತಿದ್ದರು. ಆದರೆ ಅವರ ಅಗಲಿಕೆ ಬಳಿಕ ಆ ಸುದ್ದಿ ತಣ್ಣಗಾಯಿತು. ಆದಷ್ಟು ಬೇಗ ಪ್ರಭಾಸ್ ಮದುವೆ ಮಾಡುತ್ತೇವೆ ಎಂದು ದೊಡ್ಡಮ್ಮ ಶ್ಯಾಮಲಾ ದೇವಿ ಹೇಳುತ್ತಿರುತ್ತಾರೆ. ಆದರೆ ಯಾಕೋ ಅದಕ್ಕೆ ಕಾಲ ಕೂಡಿ ಬಂದಂತೆ ಕಾಣುತ್ತಿಲ್ಲ. ಸದ್ಯ ಬಾಹುಬಲಿ ನಟನನ್ನು ನಂಬಿ ನೂರಾರು ಕೋಟಿ ಬಂಡವಾಳ ಹೂಡಿ ನಿರ್ಮಾಪಕರು ಸಿನಿಮಾ ನಿರ್ಮಿಸುತ್ತಿದ್ದಾರೆ.
ನಾಲ್ಕೈದು ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಪ್ರಭಾಸ್ ಕಮೀಟ್ ಆಗಿದ್ದಾರೆ. ಆ ಸಿನಿಮಾಗಳ ಒಟ್ಟು ಬಜೆಟ್ 1000 ಕೋಟಿ ರೂ.ಗೂ ಹೆಚ್ಚು ಎಂದು ಅಂದಾಜಿಸಲಾಗುತ್ತಿದೆ. ಹೊಂಬಾಳೆ ಫಿಲ್ಮ್ಸ್ ಜೊತೆಗೆ 3 ಸಿನಿಮಾಗಳನ್ನು ಮಾಡಲು ಪ್ರಭಾಸ್ ಒಪ್ಪಂದ ಮಾಡಿಕೊಂಡಿದ್ದಾರೆ. 'ರಾಜಾಸಾಬ್' ಹಾಗೂ 'ಫೌಜಿ' ಸಿನಿಮಾಗಳಲ್ಲಿ ನಟಿಸುತ್ತಿರುವ ಪ್ರಭಾಸ್ ಶೀಘ್ರದಲ್ಲೇ 'ಸ್ಪಿರಿಟ್' ಸಿನಿಮಾ ಆರಂಭಿಸಲಿದ್ದಾರೆ.
ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಅವರದ್ದು ಸೂಪರ್ ಹಿಟ್ ಜೋಡಿ. 'ಬಿಲ್ಲಾ', 'ಮಿರ್ಚಿ' ಹಾಗೂ 'ಬಾಹುಬಲಿ' ಸರಣಿ ಸಿನಿಮಾಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿ ಮೋಡಿ ಮಾಡಿದ್ದರು. ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎಂದು ಮೊದಲಿನಿಂದಲೂ ಗುಸುಗುಸು ಕೇಳಿಬರ್ತಿದೆ. ಆದರೆ ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಅಂತ ಇಬ್ಬರೂ ಹೇಳುತ್ತಾ ಬರ್ತಿದ್ದಾರೆ. ಪ್ರಭಾಸ್ ಕಾರಣಕ್ಕೆ ಸ್ವೀಟಿ ಕೂಡ ಮದುವೆ ಆಗಿಲ್ಲ ಎನ್ನುವವರು ಇದ್ದಾರೆ.
ಇವರಿಬ್ಬರದ್ದು ಸೂಪರ್ ಜೋಡಿ. ನಿಜ ಜೀವನದಲ್ಲಿ ಕೂಡ ಇಬ್ಬರೂ ಒಂದಾಗಬೇಕು ಎನ್ನುವುದು ಸಾಕಷ್ಟು ಅಭಿಮಾನಿಗಳ ಆಸೆ. ಪ್ರನುಷ್ಕಾ ಎಂದು ಈ ಜೋಡಿಗೆ ಹೆಸರು ಕೊಟ್ಟು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಾರೆ. ಇಬ್ಬರೂ ಒಟ್ಟಿಗೆ ಇರುವ ಫೋಟೊ, ವೀಡಿಯೋಗಳನ್ನು ಪದೇ ಪದೆ ವೈರಲ್ ಮಾಡುತ್ತಿರುತ್ತಾರೆ. ಇದೀಗ ಅಂಥದ್ದೇ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಚಕ್ಕರ್ ಹೊಡೀತಿದೆ.
AI ತಂತ್ರಜ್ಞಾನದಲ್ಲಿ ಸಾಕಷ್ಟು ಫೇಕ್ ಫೋಟೊ, ವೀಡಿಯೋನ್ನು ಕ್ರಿಯೇಟ್ ಮಾಡಿ ಹರಿಬಿಡಲಾಗುತ್ತಿದೆ. ಇತ್ತೀಚೆಗೆ ನಟ ಪ್ರಕಾಶ್ ರಾಜ್ ಕುಂಭಮೇಳದಲ್ಲಿ ಭಾಗಿ ಆಗಿರುವಂತೆ AI ಫೋಟೊವೊಂದು ವೈರಲ್ ಆಗಿ ವಿವಾದ ಸೃಷ್ಟಿಸಿತ್ತು. ಈ ಸಂಬಂಧ ಪ್ರಕಾಶ್ ರಾಜ್ ದೂರು ದಾಖಲಿಸಿದ್ದರು. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆ ಆಗಿರುವಂತೆ ಕೂಡ ಫೇಕ್ ಇಮೇಜ್‌ಗಳು ಸದ್ದು ಮಾಡಿತ್ತು.
ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಮದುವೆ ಆಗಿರುವಂತೆ ಕೆಲ ದಿನಗಳ ಹಿಂದೆ AI ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ತೇಲಿಬಿಡಲಾಗಿತ್ತು. ಇದೀಗ ನೆಟ್ಟಿಗರೊಬ್ಬರು ಪ್ರಭಾಸ್ ಹಾಗೂ ಸ್ವೀಟಿಗೆ ಮದುವೆ ಆಗಿ ಮಕ್ಕಳು ಇರುವಂತೆ ಫೋಟೊ, ವೀಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಸದ್ಯ ಅದು ಸಖತ್ ವೈರಲ್ ಆಗುತ್ತಿದೆ. ಕೆಲವರಂತೂ ಅಯ್ಯೋ ಏನಿದು ಇಷ್ಟು ರಿಯಲೆಸ್ಟಿಕ್ ಆಗಿದೆ ಎಂದು ಹುಬ್ಬೇರಿಸಿದ್ದಾರೆ. ಸದ್ಯ ಈ ವೀಡಿಯೋ ಸಖತ್ ವೈರಲ್ ಆಗ್ತಿದೆ.


Click it and Unblock the Notifications











