ಸಲಾರ್ ಸಿನಿಮಾಗೂ ಬಾಲಿವುಡ್ ನಟ ಅಮಿತಾಬ್ ಬಚ್ಚನ್‌ಗೂ ಸಂಬಂಧವಿದ್ಯಾ?: ಹೌದೆನ್ನುತ್ತಾರೆ ಪ್ರಶಾಂತ್ ನೀಲ್!
ಸಲಾರ್ ಸಿನಿಮಾ ಬಿಡುಗಡೆಯಾಗಿ ವಾರ ಕಳೆದಿದ್ದು, ಬಾಕ್ಸ್ ಆಫೀಸ್‌ನಲ್ಲಿ ಸಕತ್ ಕಮಾಯಿ ಮಾಡುತ್ತಿದೆ. ಅಂತಾರಾಷ್ಟ್ರೀಯ ಬಾಕ್ಸ್ ಆಫೀಸ್‌ನಲ್ಲಿ ಈಗಾಗಲೇ ಈ ಸಿನಿಮಾ 600 ಕೋಟಿ ಗಳಿಸಿದ್ದು, 'ಸಲಾರ್' ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ನಿರ್ದೇಶಕ ಪ್ರಶಾಂತ್ ನೀಲ್ ಇತ್ತೀಚೆಗೆ ಈ ಸಿನಿಮಾಕ್ಕೂ ಅಮಿತಾಬ್ ಬಚ್ಚನ್ ಅವರಿಗೂ ಇರುವ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.
'ಸಲಾರ್' ನಿರ್ದೇಶಕ ಪ್ರಶಾಂತ್ ನೀಲ್ ಇತ್ತೀಚೆಗೆ ಪಿಂಕ್ವಿಲ್ಲಾಗೆ ನೀಡಿರುವ ಸಂದರ್ಶನದಲ್ಲಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ಸಲಾರ್ ಸಿನಿಮಾಗೆ ಸ್ಫೂರ್ತಿ ನೀಡಿದ್ದಾರೆ ಎಂದು ಹೇಳಿದ್ದಾರೆ. ಸಲಾರ್ ಸಿನಿಮಾದ ಪ್ರಮುಖ ಪಾತ್ರ ಅಂದರೆ, ಕೋಪಿಷ್ಠ ಯುವಕನ ಪಾತ್ರ ಅಮಿತಾಬ್ ಬಚ್ಚನ್ ಅವರಿಂದಲೇ ಪ್ರೇರಣೆ ಪಡೆದಿದೆ ಎಂದು ಹೇಳಿದ್ದಾರೆ. ಅದರಲ್ಲೂ ಸಲೀಂ-ಜಾವೇದ್ ಚಲನಚಿತ್ರಗಳಲ್ಲಿ ಅಮಿತಾಬ್ ಬಚ್ಚನ್ ನಿರ್ವಹಿಸಿದ ಪಾತ್ರದಂತೆಯೇ ಎಂದು ತಿಳಿಸಿದ್ದಾರೆ.

ಅಮಿತಾಬ್ ಮೇಲೆ ಪ್ರಶಾಂತ್ ನೀಲ್ ಪ್ರೀತಿ
ಸಲಾರ್‌ಗೆ ಅಮಿತಾನ್ ಬಚ್ಚನ್ ಸ್ಫೂರ್ತಿ ನೀಡಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, "ಹೌದು, ನಾನು ಖಚಿತವಾಗಿ ಆ ಕಾಲಘಟ್ಟದಿಂದ ಸ್ಫೂರ್ತಿ ಪಡೆದಿದ್ದೇನೆ. ಆದರೆ ನನ್ನ ಸಿನಿಮಾದ ನಾಯಕನು ನನ್ನ ದೊಡ್ಡ ಖಳನಾಯಕನಾಗಬೇಕು ಎಂಬ ರೀತಿಯಲ್ಲಿ ನಾನು ಬರೆಯುತ್ತೇನೆ. ನಾನು ಯಾವಾಗಲೂ ಅದನ್ನು ಸರಿಯಾಗಿಯೇ ಮಾಡುತ್ತೇನೆ" ಎಂದಿದ್ದಾರೆ.
"ನನ್ನ ಸಿನಿಮಾ ನಾಯಕನನ್ನು ದೊಡ್ಡ ಖಳನಾಯಕನಂತಯೇ ಬರೆಯಲು ಪ್ರಾರಂಭಿಸುತ್ತೇನೆ. ಆದ್ದರಿಂದ ಬಹುಶಃ ಅದು ಹೇಗೆ ತೆರೆ ಮೇಲೆ ಕಾಣಿಸುತ್ತದೆ. ಹೀಗಾಗಿಯೇ ನನ್ನ ಕೆಜಿಎಫ್ ಮತ್ತು ಸಲಾರ್ ಎರಡೂ ಚಲನಚಿತ್ರಗಳ ಎರಡೂ ಪಾತ್ರಗಳು ಸಾಮ್ಯತೆ ಹೊಂದಿದ್ದು, ಅವರು ದೊಡ್ಡ ಖಳನಾಯಕರಾಗಿ ತೆರೆ ಮೇಲೆ ಕಾಣಿಸುತ್ತಾರೆ" ಎಂದು ಮಾಹಿತಿ ನೀಡಿದ್ದಾರೆ.
ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ನಟನೆಯ ಸಲಾರ್
ಸಲಾರ್ ಚಿತ್ರದಲ್ಲಿ ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಾಣ ಸ್ನೇಹಿತರು ಮತ್ತು ಶತ್ರುಗಳಾಗಿ ಕಾಣಿಸಿಕೊಂಡಿದ್ದಾರೆ. ಕಾಲ್ಪನಿಕ ನಗರವಾದ ಖಾನ್‌ಸಾರ್‌ನಲ್ಲಿ ನಡೆಯುವ ಈ ಚಿತ್ರದ ಕಥೆಯು ದೇವ (ಪ್ರಭಾಸ್) ಮತ್ತು ವರದ (ಪೃಥ್ವಿರಾಜ್ ಸುಕುಮಾರನ್) ಎಂಬ ಇಬ್ಬರು ಸ್ನೇಹಿತರ ಸುತ್ತ ಸುತ್ತುತ್ತದೆ. 'ಸಲಾರ್' ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ವಿಜಯ್ ಕಿರಗಂದೂರು ಬಂಡವಾಳ ಹೂಡಿದ್ದಾರೆ.

'ಸಲಾರ್' ಸಿನಿಮಾದಲ್ಲಿ ಶ್ರುತಿ ಹಾಸನ್, ಟಿನು ಆನಂದ್, ಈಶ್ವರಿ ರಾವ್, ಜಗಪತಿ ಬಾಬು, ಶ್ರೀಯಾ ರೆಡ್ಡಿ, ಮವೀನ್ ಶಂಕರ್, ಪ್ರಮೋದ್, ದೇವರಾಜ್ ಮತ್ತು ಗರುಡ ರಾಮ್ ಸೇರಿದಂತೆ ಹಲವು ಮಂದಿ ನಟಿಸಿದ್ದಾರೆ. ಸಲಾರ್ ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಡಿಸೆಂಬರ್ 22 ರಂದು ಬಿಡುಗಡೆಯಾಗಿದೆ. ಸಲಾರ್ ಚಿತ್ರದ ಮುಂದುವರಿದ ಭಾಗಕ್ಕೆ ಸಲಾರ್: ಭಾಗ 2 - ಶೌರ್ಯಾಂಗ ಪರ್ವಂ ಎಂದು ಹೆಸರಿಸಲಾಗಿದೆ.
ಸಲಾರ್ ಯಶಸ್ಸಿಗೆ ಪ್ರಭಾಸ್ ಪ್ರತಿಕ್ರಿಯೆ
ಸಲಾರ್ ಸಿನಿಮಾ ಶಾರುಖ್ ಖಾನ್ ಮತ್ತು ರಾಜ್‌ಕುಮಾರ್ ಹಿರಾನಿ ಕಾಂಬಿನೇಷನ್‌ನ 'ಡಂಕಿ' ಸಿನಿಮಾ ಜೊತೆಗೆ ಬಾಕ್ಸ್ ಆಫೀಸ್ ಪೈಪೋಟಿ ನೀಡಿತ್ತು. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆ ಪ್ರಾರಂಭ ಮಾಡಿತ್ತು. ಇದೀಗ ಅಂತಾರಾಷ್ಟ್ರೀಯ ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ 600 ಕೋಟಿ ಗಡಿ ದಾಟಿದೆ.
ಈ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಶ್ರೀಯಾ ರೆಡ್ಡಿ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಖಳನಾಯಕಿ ರಾಧಾ ರಾಮ ಮನ್ನಾರ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಜಗಪತಿ ಬಾಬು ಅವರು ರಾಜ ಮನ್ನಾರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











