ಸಲಾರ್ ಪಾರ್ಟ್ 1 ಹೆಸರು ಸೀಸ್‌ಫೈರ್; ಈ 'ಸೀಸ್‌ಫೈರ್' ಎಂದರೆ ಅರ್ಥವೇನು?

ಭಾರತದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಸಲಾರ್ ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ. ಸೆಪ್ಟೆಂಬರ್ 28ರಂದು ಸಲಾರ್ ಬೆಳ್ಳಿಪರದೆಗೆ ಲಗ್ಗೆ ಇಡಲು ಸಲಾರ್ ತಯಾರಾಗಿದೆ. ಇನ್ನು ಚಿತ್ರದ ಬಿಡುಗಡೆ ದಿನ ಸಮೀಪಿಸುತ್ತಿದ್ದಂತೆ ಚಿತ್ರತಂಡ ಚಿತ್ರದ ಹೈಪ್ ಹೆಚ್ಚಿಸಲು ಟೀಸರ್ ಬಿಡುಗಡೆಗೊಳಿಸಿದೆ.

ಇಂದು ( ಜುಲೈ 6 ) ಬೆಳಗ್ಗೆ 5.12ಕ್ಕೆ ಹೊಂಬಾಳೆ ಫಿಲ್ಮ್ಸ್ ಯುಟ್ಯೂಬ್ ಚಾನೆಲ್‌ನಲ್ಲಿ ಸಲಾರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸೂರ್ಯ ಹುಟ್ಟುವುದಕ್ಕೂ ಮುನ್ನವೇ ಬಿಡುಗಡೆಗೊಂಡ ಈ ಟೀಸರ್ ವೀಕ್ಷಿಸಲು ಪ್ರಭಾಸ್ ಅಭಿಮಾನಿಗಳು ರಾತ್ರಿಯಿಡೀ ನಿದ್ರೆ ಬಿಟ್ಟು ಸಲಾರ್ ಭಜನೆ ಮಾಡುತ್ತಾ ಕಾಯುತ್ತಾ ಕುಳಿತಿದ್ದರು.

salaar ceasefire meaning

ಟೀಸರ್ ಬಿಡುಗಡೆಯಾದ ಬಳಿಕ ಪ್ರಭಾಸ್ ಅಭಿಮಾನಿಗಳು ಹಾಗೂ ಸಿನಿ ರಸಿಕರು ಟೀಸರ್ ಮೆಚ್ಚಿಕೊಂಡರೆ, ಇನ್ನೂ ಕೆಲ ಸಿನಿ ರಸಿಕರು ಚಿತ್ರದ ಟೀಸರ್ ನಿರೀಕ್ಷಿಸಿದ ಮಟ್ಟಕ್ಕೆ ಇಲ್ಲ, ಕೆಜಿಎಫ್ ಡಿಲೀಟೆಡ್ ಸೀನ್‌ಗಳನ್ನು ಬಳಸಿ ಮಾಡಿದಂತಿದೆ, ಉಗ್ರಂ ಚಿತ್ರದ ರಿಮೇಕ್ ಎಂದೆಲ್ಲಾ ಕಾಮೆಂಟ್ ಮಾಡಿದರು.

ಒಟ್ಟಿನಲ್ಲಿ ಸಲಾರ್ ಟೀಸರ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಚರ್ಚೆಗಳು ಆರಂಭಗೊಂಡಿವೆ. ಹೀಗೆ ಒಂದೆಡೆ ಟೀಸರ್‌ಗೆ ನೆಗೆಟಿವ್ ಕಾಮೆಂಟ್‌ಗಳು ವ್ಯಕ್ತವಾಗುತ್ತಿದ್ದರೆ, ಇನ್ನೂ ಕೆಲವರು ಟೀಸರ್‌ನಲ್ಲಿರುವ ದೃಶ್ಯಗಳಲ್ಲಿ ಕಥೆಯ ಹಿಂಟ್ ಏನಾದರೂ ಸಿಗಲಿದೆಯಾ ಎಂಬ ಹುಡುಕಾಟದಲ್ಲಿದ್ದಾರೆ. ಇನ್ನು ಸಲಾರ್ ಎರಡು ಭಾಗಗಳಲ್ಲಿ ಬರಲಿದ್ದು, ಇದು ಮೊದಲ ಭಾಗದ ಟೀಸರ್ ಆಗಿದೆ.

ಟೀಸರ್ ಕೊನೆಯಲ್ಲಿ ಪಾರ್ಟ್ 1 ಸೀಸ್‌ಫೈರ್ ಎಂದು ಶೀರ್ಷಿಕೆಯನ್ನು ರಿವೀಲ್ ಮಾಡಲಾಗಿದೆ. ಸೀಸ್‌ಫೈರ್ ಎಂದರೆ ಕನ್ನಡದಲ್ಲಿ 'ಕದನ ವಿರಾಮ' ಎಂದರ್ಥ. ಈ ಮೂಲಕ ಸಲಾರ್ ಮೊದಲ ಭಾಗ ಹೊಡೆದಾಟವೊಂದರ ಮಧ್ಯಂತರಕ್ಕೆ ಅಂತ್ಯಗೊಳ್ಳಲಿದೆ ಎಂದು ಊಹಿಸಲಾಗುತ್ತಿದೆ.

ಇನ್ನು ಟೀಸರ್‌ನಲ್ಲಿ ಪ್ರಭಾಸ್ ಮುಖವನ್ನು ಒಮ್ಮೆ ಸೈಡ್ ಆಂಗಲ್‌ನಲ್ಲಿ ಮಾತ್ರ ತೋರಿಸಿರುವ ಪ್ರಶಾಂತ್ ನೀಲ್ ಅದೇ ರೀತಿ ಚಿತ್ರದ ಕಂಟೆಂಟ್ ಅನ್ನೂ ಸಹ ಸ್ವಲ್ಪವೇ ಮಾತ್ರ ತೋರಿಸಿ ಕಥೆ ಯಾವ ಆಧಾರಿತ ಎಂಬುದನ್ನು ಇನ್ನೂ ಸಹ ನಿಗೂಢವಾಗಿ ಉಳಿಸಿಕೊಂಡಿದ್ದಾರೆ. ಟೀಸರ್ ವೀಕ್ಷಿಸಿದ ಸಿನಿ ರಸಿಕರಿಗೆ ಇದೊಂದು ಮಾಸ್ ಚಿತ್ರ ಎಂಬುದನ್ನು ಹೊರತುಪಡಿಸಿ ಕಥೆಯನ್ನು ನೀಲ್ ಬಿಟ್ಟುಕೊಟ್ಟಿಲ್ಲ.

ಕೆಜಿಎಫ್ ತಂಡದ ಸದಸ್ಯರೇ ಸಲಾರ್ ಚಿತ್ರಕ್ಕೂ ಕೆಲಸ ಮಾಡಿರುವುದರಿಂದ ಅತ್ಯದ್ಭುತ ಕ್ವಾಲಿಟಿಯ ಟೀಸರ್ ಮೂಡಿ ಬಂದಿದ್ದು, ಈಗಾಗಲೇ ವ್ಯೂಸ್‌ನಲ್ಲಿ ದಾಖಲೆ ನಿರ್ಮಿಸುವತ್ತ ಹೆಜ್ಜೆ ಹಾಕುತ್ತಿದೆ.

ಟೀಸರ್‌ನಲ್ಲಿನ ಎರಡು ದೃಶ್ಯಗಳಿಂದಾಗಿ ಸಲಾರ್ ಚಿತ್ರ ಉಗ್ರಂನ ರಿಮೇಕ್ ಇರಬಹುದು ಎಂಬ ಅನುಮಾನವನ್ನು ಹುಟ್ಟುಹಾಕಿವೆ. ಪ್ರಭಾಸ್ ಎರಡು ಗನ್ ನಡೆದು ಬರುತ್ತಿರುವ ದೃಶ್ಯ ಉಗ್ರಂ ಚಿತ್ರದಲ್ಲಿಯೂ ಇದೆ. ಉಗ್ರಂ ಚಿತ್ರದಲ್ಲಿ ಅಗಸ್ತ್ಯ ಹೇಗೆ ತನ್ನ ಕೈನಲ್ಲಿನ ಟ್ಯಾಟ್ಯೂವನ್ನು ಬಟ್ಟೆಯಿಂದ ಮರೆ ಮಾಚಿ ಗನ್ ಹಿಡಿದು ಹೋರಾಡುತ್ತಾನೋ ಅದೇ ರೀತಿ ಇಲ್ಲಿ ಸಲಾರ್ ಕೈಗೆ ಬಟ್ಟೆ ಕಟ್ಟಿಕೊಂಡು ಟ್ಯಾಟ್ಯೂವನ್ನು ಮರೆಮಾಚಿದ್ದಾನೆ.

ಇದು ಅನುಮಾನ ಹುಟ್ಟುಹಾಕಿದ ಮೊದಲ ದೃಶ್ಯವಾದರೆ ಮತ್ತೊಂದು ಸಲಾರ್ ಟೀಸರ್‌ನಲ್ಲಿ ನಾಯಕ ನಟನ ಕೈನಲ್ಲಿ ಟ್ಯಾಟ್ಯೂ ಇರುವುದು. ಇಷ್ಟು ದಿನಗಳ ಕಾಲ ಪ್ರಭಾಸ್ ಲುಕ್‌ನಲ್ಲಿ ಕೈಗೆ ಬಟ್ಟೆ ಕಟ್ಟಿದ್ದನ್ನು ಮಾತ್ರ ಕಂಡಿದ್ದೆವು. ಆದರೆ ಟೀಸರ್‌ನ ಒಂದು ದೃಶ್ಯದಲ್ಲಿ ಪ್ರಭಾಸ್ ಕೈಗೆ ಬಟ್ಟೆ ಕಟ್ಟಿಲ್ಲ. ಈ ದೃಶ್ಯದಲ್ಲಿ ಪ್ರಭಾಸ್ ಎಡಗೈ ಗಮನಿದರೆ ಅಲ್ಲಿ ಉಗ್ರಂ ಸಿನಿಮಾದಲ್ಲಿ ಅಗಸ್ತ್ಯ ತನ್ನ ಕೈಗೆ ಹಾಕಿಸಿದ್ದ ಟ್ಯಾಟ್ಯೂವನ್ನೇ ಹೋಲುವ ಟ್ಯಾಟ್ಯೂ ಇದೆ.

ಈ ಎರಡೂ ಅಂಶಗಳಿಂದ ಸಲಾರ್ ಚಿತ್ರ ಉಗ್ರಂ ಚಿತ್ರದ ರಿಮೇಕ್ ಎನ್ನಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿಯೂ ಸಹ ಈ ಕುರಿತು ಟ್ವೀಟ್‌ಗಳು ಹರಿದಾಡುತ್ತಿದ್ದು, ಕನ್ನಡ ಸಿನಿ ರಸಿಕರು ಇದು ಉಗ್ರಂ ರಿಮೇಕ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

More from Filmibeat

English summary
Salaar first part named as Ceasefire; What is the meaning of Ceasefire? Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X