'ಸಲಾರ್' ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಫ್ರೀ: ನೀವು ಮಾಡಬೇಕಿರುವುದು ಇಷ್ಟೇ!
ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಚಿತ್ರದ ಟ್ರೈಲರ್ ಲಾಂಚ್‌ಗೆ ಕೆಲವೇ ಗಂಟೆಗಳು ಬಾಕಿಯಿದೆ. ಹೊಂಬಾಳೆ ಸಂಸ್ಥೆ ನಿರ್ಮಾಣದ ಈ ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಎರಡು ಭಾಗಗಳಾಗಿ ಸಿನಿಮಾ ತೆರೆಗೆ ಬರಲಿದೆ.
ಬಾಹುಬಲಿ ಸರಣಿ ಬಳಿಕ ಪ್ರಭಾಸ್ ನಟನೆಯ ಸಿನಿಮಾಗಳು ಅಷ್ಟಾಗಿ ಸದ್ದು ಮಾಡುತ್ತಿಲ್ಲ. ಆದರೆ 'ಸಲಾರ್' ಸಿನಿಮಾ ಮೇಲೆ ಎಲ್ಲರ ನಿರೀಕ್ಷೆಯಿದೆ. 'KGF' ಸರಣಿ ಬಳಿಕ ಪ್ರಶಾಂತ್ ನೀಲ್ ಈ ಸಿನಿಮಾ ಕಟ್ಟಿಕೊಟ್ಟಿದ್ದು ಸಹಜವಾಗಿಯೇ ನಿರೀಕ್ಷೆ ದುಪ್ಪಟ್ಟಾಗಿದೆ. ಬರೀ ಪೋಸ್ಟರ್ ಹಾಗೂ ಸಣ್ಣ ಟೀಸರ್‌ನಿಂದ್ಲೇ ಸಿನಿಮಾ ಹೈಪ್ ಕ್ರಿಯೇಟ್ ಮಾಡಿದೆ. 5 ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.

'ಸಲಾರ್' ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದಂತೆ ಹೊಂಬಾಳೆ ಸಂಸ್ಥೆ ಪ್ರಮೋಷನ್ ಕಿಚ್ಚು ಹೆಚ್ಚಿಸಿದೆ. ವಿಭಿನ್ನ ರೀತಿಯಲ್ಲಿ ಹೈಪ್ ಕ್ರಿಯೇಟ್ ಮಾಡ್ತಿದೆ. ಇತ್ತೀಚೆಗೆ 'ಸಲಾರ್' ಮರ್ಸಂಟೈಸ್ ಬಿಡುಗಡೆ ಮಾಡಿತ್ತು. ಅಭಿಮಾನಿಗಳು ಹೊಂಬಾಳೆ ವೆಬ್‌ಸೈಟ್‌ಗೆ ಹೋಗಿ 'ಸಲಾರ್' ಪೋಸ್ಟರ್ ಟೀ-ಶರ್ಟ್, ಹುಡಿ ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ.
ಪ್ರಭಾಸ್ ಮೊಬೈಲ್‌ನಲ್ಲಿ ಪ್ರಶಾಂತ್ ನೀಲ್‌ಗೆ ಏನನ್ನೋ ತೋರಿಸುತ್ತಿರುವ ಫೋಟೊ ಶೇರ್ ಮಾಡಿ ಹೊಂಬಾಳೆ ಸಂಸ್ಥೆ ಅಭಿಮಾನಿಗಳಿಗೆ ಒಂದು ಸರ್‌ಪ್ರೈಸ್ ನೀಡಿದೆ. ಈ ಫೋಟೊಗೆ ಒಳ್ಳೆ ಕ್ಯಾಪ್ಷನ್ ಕೊಡಿ. ಉತ್ತಮವಾದ ಕ್ಯಾಪ್ಷನ್‌ಗಳನ್ನು ನೀಡುವ 5 ಜನಕ್ಕೆ 'ಸಲಾರ್' ಚಿತ್ರದ ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಉಚಿತ ಎಂದು ಹೇಳಲಾಗಿದೆ. ಅಭಿಮಾನಿಗಳು ತಮ್ಮದೇ ಶೈಲಿಯಲ್ಲಿ ಫೋಟೊಗೆ ಕ್ಯಾಪ್ಷನ್ ಕೊಡುತ್ತಿದ್ದಾರೆ.
ಡಿಸೆಂಬರ್ 22ಕ್ಕೆ 'ಸಲಾರ್' ಮೊದಲ ಭಾಗ ರಿಲೀಸ್ ಆಗಲಿದೆ. ಚಿತ್ರದಲ್ಲಿ ಪ್ರಭಾಸ್ ಜೊತೆ ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದಾರೆ. ಇತ್ತೀಚೆಗೆ ಪ್ರಶಾಂತ್ ನೀಲ್ ಸಿನಿಮಾ ಕತೆ ಬಗ್ಗೆ ಮಾತನಾಡಿದ್ದಾರೆ. ಇಬ್ಬರು ಆತ್ಮೀಯ ಸ್ನೇಹಿತ'ರು ಆಜನ್ಮ ಶತ್ರುಗಳಾಗುವ ಕತೆ ಸಲಾರ್' ಎಂದಿದ್ದಾರೆ. 'KGF'ಗೂ ಮುನ್ನ ನಾನು ಸಿದ್ಧಪಡಿಸಿದ ಕತೆ ಇದು ಎಂದಿದ್ದಾರೆ.
'ಸಲಾರ್' ಹಾಗೂ 'KGF' ಚಿತ್ರದ ಕತೆಗೂ ಲಿಂಕ್ ಇರುತ್ತದೆ. ಯಶ್ ಕೂಡ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಾರೆ ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಅಭಿಮಾನಿಗಳ ಆಸೆಗೆ ನೀಲ್ ತಣ್ಣೀರು ಎರಚಿದ್ದಾರೆ. 'ಸಲಾರ್', 'KGF' ಕತೆಗಳಿಗೆ ಲಿಂಕ್ ಇಲ್ಲ. ಅದಕ್ಕೆ ನನ್ನನ್ನು ಕ್ಷಮಿಸಬೇಕು. ಇವೆರಡು ಬೇರೆ ಬೇರೆ ಸಿನಿಮಾಗಳು ಎಂದಿದ್ದಾರೆ.
200 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ 'ಸಲಾರ್' ಸಿನಿಮಾ ನಿರ್ಮಾಣವಾಗಿದೆ. ಚಿತ್ರದಲ್ಲಿ ಜಗಪತಿ ಬಾಬು, ಈಶ್ವರಿ ರಾವ್, ರಾಮಚಂದ್ರ ರಾಜು, ಜಾನ್ಸಿ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿದ್ದಾರೆ. ಶ್ರುತಿ ಹಾಸನ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
'KGF' ಚಿತ್ರಕ್ಕೆ ಕೆಲಸ ಮಾಡಿದ ಸಾಕಷ್ಟು ತಂತ್ರಜ್ಞರು 'ಸಲಾರ್' ಚಿತ್ರಕ್ಕೂ ಕೆಲಸ ಮಾಡಿದ್ದಾರೆ. ಹೈದರಾಬಾದ್ ರಾಮೋಜಿ ಫಿಲ್ಮ್ ಸಿಟಿ, ಮಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ. ಭುವನ್ ಗೌಡ ಛಾಯಾಗ್ರಹಣ ಹಾಗೂ ರವಿ ಬಸ್ರೂರು ಸಂಗೀತ ಚಿತ್ರಕ್ಕಿದೆ.
ಬಾಲಿವುಡ್ ನಟಿ ಸಿಮ್ರತ್ ಕೌರ್ ಚಿತ್ರದ ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ ಎನ್ನಲಾಗ್ತಿದೆ. ದೊಡ್ಡಮಟ್ಟದಲ್ಲೇ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಕರ್ನಾಟಕದಲ್ಲಿ ಹೊಂಬಾಳೆ ಸಂಸ್ಥೆಯೇ ಸಿನಿಮಾ ರಿಲೀಸ್ ಮಾಡುತ್ತಿದೆ. ಎಎ ಫಿಲ್ಮ್ಸ್ ಸಂಸ್ಥೆ ಹಿಂದಿ ವರ್ಷನ್ ವಿತರಣೆ ಹಕ್ಕು ಖರೀದಿಸಿದೆ. ಇನ್ನು 'ಸಲಾರ್' ಜೊತೆಗೆ ಶಾರುಖ್ ಖಾನ್ ನಟನೆಯ 'ಡಂಕಿ' ಸಿನಿಮಾ ಕೂಡ ತೆರೆಗಪ್ಪಳಿಸುತ್ತಿದೆ.


Click it and Unblock the Notifications










