For Quick Alerts
  ALLOW NOTIFICATIONS  
  For Daily Alerts

  ಲೇಟ್ ಆದ್ರು ಫ್ಯಾನ್ಸ್ ಮನಗೆದ್ದ 'ಸಲಾರ್' ಟೀಂ: ಮಸಿ ಬಳಸದೇ ಪ್ರಭಾಸ್ ಬರ್ತ್‌ಡೇಗೆ ಸ್ಪೆಷಲ್ ಸರ್‌ಪ್ರೈಸ್!

  |

  ಬಾಹುಬಲಿ ಪ್ರಭಾಸ್ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. 'ರೆಬೆಲ್ ಹಾಗೂ ''ಬಿಲ್ಲಾ' ಸಿನಿಮಾಗಳು ಹೊಸ ರೂಪದಲ್ಲಿ ರಿಲೀಸ್ ಆಗಿ ಸದ್ದು ಮಾಡ್ತಿದೆ. ಅಭಿಮಾನಿಗಳು ಹಬ್ಬದ ರೀತಿ ಸಿನಿಮಾ ವೆಲ್‌ಕಮ್ ಮಾಡಿದ್ದಾರೆ. 'ಆದಿಪುರುಷ್' ಟೀಂನಿಂಗ್ ಹೊಸ ಪೋಸ್ಟರ್ ರಿಲೀಸ್ ಆಗಿದೆ. 'ಪ್ರಾಜೆಕ್ಟ್- K' ಡಾರ್ಲಿಂಗ್ ಹುಟ್ಟುಹಬ್ಬಕ್ಕೆ ಶುಭ ಕೋರಿತ್ತು. ಸಂಜೆವರೆಗೂ ಸಲಾರ್ ಚಿತ್ರ ತಂಡದಿಂದ ಹೊಸ ಪೋಸ್ಟರ್ ಅಥವಾ ಅಪ್‌ಡೇಟ್‌ಗಾಗಿ ಕಾಯುತ್ತಿದ್ದರು. ವರ್ಕಿಂಗ್ ಸ್ಟಿಲ್ಸ್ ರಿಲೀಸ್ ಮಾಡಿ ಟೀಂ 'ಸಲಾರ್' ಪ್ರಭಾಸ್‌ಗೆ ಶುಭ ಕೋರಿದೆ.

  ಪ್ರಭಾಸ್ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನೆಚ್ಚಿನ ನಟನ 43ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸಿದ್ದಾರೆ. ಪ್ರಭಾಸ್ ಸದ್ಯ KGF ಚಿತ್ರತಂಡದ ಜೊತೆ ಕೆಲಸ ಮಾಡುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಬರೀ ಪೋಸ್ಟರ್‌ಗಳಿಂದ ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡ್ತಿದೆ. ಮುಂದಿನ ವರ್ಷ ಸೆಪ್ಟೆಂಬರ್ 28ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಪ್ರಭಾಸ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಟೀಸರ್, ಪೋಸ್ಟರ್ ಬರುತ್ತೆ ಎಂದು ಅಭಿಮಾನಿಗಳು ಕಾಯುತ್ತಿದ್ದರು.

  ಸಂಜೆವರೆಗೂ ಕಾದರೂ 'ಸಲಾರ್' ಚಿತ್ರತಂಡದ ಕಡೆಯಿಂದ ಯಾವುದೇ ಅಪ್‌ಡೇಟ್ ಸಿಕ್ಕಿರಲಿಲ್ಲ. ಕೊನೆ ಪಕ್ಷ ಒಂದು ಪೋಸ್ಟರ್ ರಿಲೀಸ್ ಮಾಡಿ ಪ್ರಭಾಸ್‌ಗೆ ಹುಟ್ಟುಹಬ್ಬ ಶುಭಾಶಯ ಕೋರಿಲ್ಲ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದರು. ಆದರೆ ಸಂಜೆ ವೇಳೆಗೆ ಚಿತ್ರದ 3 ವರ್ಕಿಂಗ್ ಸ್ಟಿಲ್ಸ್ ರಿವೀಲ್ ಆಯ್ತು. ಸ್ಟಿಲ್ಸ್‌ನಲ್ಲಿ ಪ್ರಭಾಸ್ ಮಾಸ್ ಲುಕ್‌ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

  'ಸಲಾರ್' ವರ್ಕಿಂಗ್ ಸ್ಟಿಲ್ಸ್ ಚಿಂದಿ

  'ಸಲಾರ್' ವರ್ಕಿಂಗ್ ಸ್ಟಿಲ್ಸ್ ಚಿಂದಿ

  ಒಂದು ಸ್ಟಿಲ್‌ನಲ್ಲಿ ಪ್ರಭಾಸ್ ಕಂಟೈನರ್ ಮೇಲೆ ನಿಂತು ಕೊಂಡಿದ್ದಾರೆ. ಮೆಕಾನಿಕ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ಯಂಗ್ ರೆಬಲ್ ಸ್ಟಾರ್ ಮಾಸ್ ಸ್ಟೈಲಿಶ್ ಲುಕ್‌ ಅಭಿಮಾನಿಗಳಿಗೆ ಕಿಕ್ ಕೊಡ್ತಿದೆ. ಮತ್ತೊಂದು ಸ್ಟಿಲ್‌ನಲ್ಲಿ ರಗಡ್ ಲುಕ್‌ನಲ್ಲಿ ಪ್ರಭಾಸ್ ನಿಂತಿದ್ದಾರೆ. ಮಗದೊಂದರಲ್ಲಿ ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕೂಡ ಮಾತನಾಡುತ್ತಿದ್ದಾರೆ. ಇಲ್ಲಿವರೆಗೂ ಸಲಾರ್ ಪೋಸ್ಟರ್‌, ಸ್ಟಿಲ್ಸ್‌ನಲ್ಲಿ ಕಪ್ಪು ಬಣ್ಣವನ್ನು ಹೈಲೆಟ್ ಮಾಡಿ ತೋರಿಸಿದ್ದರು. ಇದನ್ನು ನೋಡಿ ನೋಡಿ ಕೆಲವರಿಗೆ ಬೇಸರವಾಗಿತ್ತು. ಸದ್ಯ ರಿಲೀಸ್ ಆಗಿರುವ ಅದಕ್ಕಿಂತ ಭಿನ್ನವಾಗಿದ್ದು ಅಭಿಮಾನಿಗಳ ಮನಗೆದ್ದಿದೆ.

  ಹೈವೋಲ್ಟೇಜ್ ಆಕ್ಷನ್ ಸಿನಿಮಾ

  ಹೈವೋಲ್ಟೇಜ್ ಆಕ್ಷನ್ ಸಿನಿಮಾ

  ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಈ ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ನಿರ್ಮಾಣವಾಗುತ್ತಿದೆ. ಇದು ಕನ್ನಡದ 'ಉಗ್ರಂ' ಸಿನಿಮಾ ರೀಮೆಕ್ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಚಿತ್ರತಂಡ ಇದನ್ನು ನಿರಾಕರಿಸಿದೆ. ಶ್ರುತಿ ಹಾಸನ್ ಚಿತ್ರದಲ್ಲಿ ನಾಯಕಿಯಾಗಿ ನಟಿಸ್ತಿದ್ದು, ಜಗಪತಿ ಬಾಬು, ಪೃಥ್ವಿರಾಜ್ ಸುಕುಮಾರ್ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸ್ತಿದ್ದಾರೆ.

  'ಆದಿಪುರುಷ್' ಪೋಸ್ಟರ್‌ಗೆ ಬೇಸರ

  'ಆದಿಪುರುಷ್' ಪೋಸ್ಟರ್‌ಗೆ ಬೇಸರ

  ಕೆಲ ದಿನಗಳ ಹಿಂದೆ ರಿಲೀಸ್ ಆಗಿದ್ದ 'ಆದಿಪುರುಷ್' ಟೀಸರ್ ಟ್ರೋಲ್ ಆಗಿದ್ದು ಗೊತ್ತೆಯಿದೆ. ರಾಮಾಯಣ ಕಾವ್ಯ ಆಧರಿಸಿ ಓಂ ರಾವುತ್ ಈ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಆದರೆ ಸಿನಿಮಾ ಗುಣಮಟ್ಟ ಕೆಲವರಿಗೆ ಇಷ್ಟವಾಗಿಲ್ಲ. ಯಾವುದೋ ಆನಿಮೇಷನ್ ಸಿನಿಮಾ ನೋಡಿದಂತಾಗುತ್ತಿದೆ. ಪ್ರಭಾಸ್ ಶ್ರೀರಾಮನ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಯಂಗ್‌ ರೆಬಲ್ ಸ್ಟಾರ್ ಹುಟ್ಟುಹಬ್ಬಕ್ಕೆ ರಿಲೀಸ್ ಮಾಡಿರುವ ಪೋಸ್ಟರ್ ಕೂಡ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿದೆ.

  'ಪ್ರಾಜೆಕ್ಟ್- K' ಪೋಸ್ಟರ್ ಬರಲಿಲ್ಲ‌

  'ಪ್ರಾಜೆಕ್ಟ್- K' ಪೋಸ್ಟರ್ ಬರಲಿಲ್ಲ‌

  ಬಹುಕೋಟಿ ವೆಚ್ಚದಲ್ಲಿ ನಾಗ್‌ ಅಶ್ವಿನ್ ನಿರ್ದೇಶನದ 'ಪ್ರಾಜೆಕ್ಟ್- K' ಚಿತ್ರದಲ್ಲಿ ಪ್ರಭಾಸ್ ನಟಿಸ್ತಿದ್ದಾರೆ. ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆರಂತಹ ಸ್ಟಾರ್‌ಗಳು ಚಿತ್ರದಲ್ಲಿ ಇದ್ದಾರೆ. ನೂರಾರು ಕೋಟಿ ಸುರಿದು ಚಿತ್ರ ನಿರ್ಮಿಸಲಾಗುತ್ತಿದೆ. ಪ್ರಭಾಸ್ ಹುಟ್ಟುಹಬ್ಬಕ್ಕೆ ಚಿತ್ರದ ಪೋಸ್ಟರ್ ರಿಲೀಸ್ ಮಾಡುತ್ತಾರೆ ಎಂದು ಅಭಿಮಾನಿಗಳು ಕಾದಿದ್ದರು. ಆದರೆ ಬರೀ ಪ್ರಭಾಸ್ ಕೈ ಕಾಣುವ ಪೋಸ್ಟರ್ ಬಿಟ್ಟು ಹುಟ್ಟುಹಬ್ಬದ ಶುಭಾಶಯ ಕೋರಿದೆ ಚಿತ್ರತಂಡ.

  English summary
  Salaar makers unveil movie woking Stills to celebrate Prabha's Birthday. Salaar is an upcoming Indian action thriller film written and directed by Prashanth Neel, and produced by Vijay Kiragandur under Hombale Films. Know More.
  Sunday, October 23, 2022, 20:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X