ವೈಲೆನ್ಸ್.. ವೈಲೆನ್ಸ್.. ವೈಲೆನ್ಸ್: 'ಸಲಾರ್'ನಲ್ಲಿ ಪ್ರಭಾಸ್ ಫುಲ್ ವೈಲೆನ್ಸ್!

ವೈಲೆನ್ಸ್... ವೈಲೆನ್ಸ್... ವೈಲೆನ್ಸ್ ಈ‌ ಡೈಲಾಗ್ ಎಲ್ಲೆಡೆ ವೈರಲ್ ಆಗಿದೆ. ವೈಲೆನ್ಸ್ ಡೈಲಾಗ್ ವೈರಲ್ ಆಗೋಕೆ ಕಾರಣ 'ಕೆಜಿಎಫ್ 2'. ಸಿನಿಮಾದಲ್ಲಿ ‌ವೈಲೆನ್ಸ್ ಇದೆ. ಹಾಗಾಗಿ ಡೈಲಾಗ್‌ನಲ್ಲೂ ವೈಲೆನ್ಸ್ ಇದೆ. ನಿರ್ದೇಶಕ ಪ್ರಶಾಂತ್ ನೀಲ್ ಸೃಷ್ಟಿಯ ಈ ವೈಲೆನ್ಸ್ ಅಂತ್ಯ ಆಗಿಲ್ಲ. ಮತ್ತೆ ಮುಂದುವರೆಯಲಿದೆ.

ಹಾಗಂತ 'ಕೆಜಿಎಫ್ 3' ಚಿತ್ರದ ಬಗ್ಗೆ ಮಾತನಾಡುತ್ತಿಲ್ಲ. ಪ್ರಶಾಂತ್ ನೀಲ್ ಸಿನಿಮಾಗಳ ಬಗ್ಗೆ ಹೇಳ ಹೊರಟಿದ್ದೇವೆ.‌ಪ್ರಶಾಂತ್ ನೀಲ್ 'ಕೆಜಿಎಫ್' ನಂತರ ತೆಲುಗು ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ಅಲ್ಲಿನ ಸ್ಟಾರ್ ನಟರ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಈಗ 'ಸಲಾರ್' ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

'ಸಲಾರ್' ಸಿನಿಮಾ ಹೇಗಿರುತ್ತೆ? 'ಸಲಾರ್'ನಲ್ಲಿ ಪ್ರಭಾಸ್ ಹೇಗೆ ಮಿಂಚಲಿದ್ದಾರೆ. 'ಸಲಾರ್' ಕಥೆ ಹೇಗಿರಲಿದೆ? ಎನ್ನುವ ಬಗ್ಗೆ ಸಾಕಷ್ಟು ಕುತೂಹಲಗಳು ಇವೆ. ಇದಕ್ಕೆಲ್ಲಾ ಸದ್ಯ ರಿಲೀಸ್ ಆಗಿರುವ ಸಲಾರ್ ಸಿನಿಮಾದ ಹೊಸ ಪೋಸ್ಟರ್ ಉತ್ತರ ಕೊಟ್ಟಿದೆ.

ಸಲಾರ್ ಪೋಸ್ಟರ್‌ನಲ್ಲಿ ಸಿಕ್ಕ ಸುಳಿವೇನು?

'ಸಲಾರ್' ಸಿನಿಮಾ ಕೆಲಸ ಈಗ ಮತ್ತೆ ಶುರುವಾಗಿದೆ. 'ಕೆಜಿಎಫ್ 2'ಕಾರಣಕ್ಕೆ 'ಸಲಾರ್' ಸಿನಿಮಾದ ಶೂಟಿಂಗ್ ಸ್ಥಗಿತ ಮಾಡಲಾಗಿತ್ತು. ಈಗ ಮತ್ತೆ ಸಿನಿಮಾದ‌ ಶೂಟಿಂಗ್ ಶುರುವಾಗಿದ್ದು, ಭರದಿಂದ ಸಿನಿಮಾ ಸಂಬಂಧಿತ ಕೆಲಸಗಳು ನಡೆಯುತ್ತಿವೆ. ಇದರ ಭಾಗವಾಗಿ 'ಸಲಾರ್' ಸಿನಿಮಾದ ಹೊಸ ಪೋಸ್ಟರ್ ಜೊತೆಗೆ ಅಧಿಕೃತ ಟ್ವಿಟರ್ ಖಾತೆಯನ್ನು ತೆರೆಯಲಾಗಿದೆ. 'ಸಲಾರ್' ಚಿತ್ರದ ಎಲ್ಲಾ ಮಾಹಿತಿ, ಅಪ್ಡೇಟ್‌ಗಳನ್ನು ಈ ಟ್ವಿಟರ್ ಪೇಜ್‌ನಲ್ಲಿ ಲಭ್ಯವಾಗಲಿದೆ. ಸದ್ಯ ರಿಲೀಸ್ ಮಾಡಿರುವ ಹೊಸ ಪೋಸ್ಟರ್‌ನಲ್ಲಿ ಸಿನಿಮಾದ ಬಗ್ಗೆ ಸಣ್ಣ ಸುಳಿವನ್ನು ಬಿಟ್ಟು ಕೊಟ್ಟಿದೆ ಚಿತ್ರತಂಡ.

ಮತ್ತೆ ವೈಲೆನ್ಸ್ ಹಿಂದೆ ಬಿದ್ದ ಪ್ರಶಾಂತ್ ‌ನೀಲ್!

ಮತ್ತೆ ವೈಲೆನ್ಸ್ ಹಿಂದೆ ಬಿದ್ದ ಪ್ರಶಾಂತ್ ‌ನೀಲ್!

ಈ ಪೋಸ್ಟರ್ ನಲ್ಲಿ 'ದಿ ಮೋಸ್ಟ್ ವೈಲೆನ್ಸ್ ಮ್ಯಾನ್, ಕಾಲ್ಡ್ ಒನ್ ಮ್ಯಾನ್, ದಿ ಮೋಸ್ಟ್ ವೈಲೆನ್ಸ್' ಎಂದು ಬರೆಯಲಾಗಿದೆ. ಅಂದರೆ ಈ ಸಾಲುಗಳಲ್ಲಿ ಸಿನಿಮಾದ ನಾಯಕ ನಟ ಪ್ರಭಾಸ್ ಪಾತ್ರ ಅತೀ ಕ್ರೂರ ಎಂದು ವರ್ಣಿಸಲಾಗಿದೆ.‌ ಹಾಗಾಗಿ ಈ ಸಾಲುಗಳು ಪ್ರಭಾಸ್ ಪಾತ್ರ 'ಕೆಜಿಎಫ್' ರಾಕಿಯಂತೆಯೇ ಕ್ರೂರವಾಗಿ ಇರಲಿದೆ ಎನ್ನುವುದನ್ನು ಸೂಚಿಸಿದೆ.

ಪ್ರಭಾಸ್ ಪಾತ್ರ ಹೇಗಿರುತ್ತೆ?

ಪ್ರಭಾಸ್ ಪಾತ್ರ ಹೇಗಿರುತ್ತೆ?

ನಿರ್ದೇಶಕ ಪ್ರಶಾಂತ್ ನೀಲ್ 'ಕೆಜಿಎಫ್' ಸರಣಿ ಸಿನಿಮಾಗಳಲ್ಲಿ ಕ್ರೂರತೆ, ಹಿಂಸೆಯನ್ನು ತೋರಿಸಿದ್ದಾರೆ. ಈ ಕ್ರೂರತೆ ಯಾಕೆ ಎನ್ನುವುದಕ್ಕೆ ಸಿನಿಮಾದ ಕಥೆಯಲ್ಲೆ ನ್ಯಾಯ ಕೊಡುವ ಸಾಹಸವನ್ನೂ ಮಾಡಿದ್ದಾರೆ. ಈಗ ಅದೇ ವೈಲೆನ್ಸ್, 'ಸಲಾರ್' ಸಿನಿಮಾದಲ್ಲಿಯೂ ಮುಂದುವರೆಯುವ ಸೂಚನೆ ಸಿಕ್ಕಿದೆ. ಹಾಗಾಗಿ ಈ ಚಿತ್ರದಲ್ಲಿ ನಟ ಪ್ರಭಾಸ್ ಸಿಕ್ಕಾಪಟ್ಟೆ ವೈಲೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ಪಕ್ಕಾ ಆಗಿದೆ. ಇನ್ನೂ ಇತ್ತೀಚೆಗಷ್ಟೇ ಪ್ರಭಾಸ್ ಹೊಸ ಲುಕ್ ಲೀಕ್ ಆಗಿ ವೈರಲ್ ಆಗಿತ್ತು. ಈ ಬಂದಿರೋ ಪೋಸ್ಟರ್ ಕೂಡ ಸಿನಿಮಾ ಮತ್ತು ಪ್ರಭಾಸ್ ಪಾತ್ರದ ಮೇಲೆ ನಿರೀಕ್ಷೆ ಹೆಚ್ಚಿಸಿವೆ.

'ಕೆಜಿಎಫ್ 2'ನ ಹಿಂಸಾತ್ಮಕತೆಗೆ ವಿರೋಧ!

'ಕೆಜಿಎಫ್ 2'ನ ಹಿಂಸಾತ್ಮಕತೆಗೆ ವಿರೋಧ!

'ಕೆಜಿಎಫ್ 2' ಒಂದು ಮಾಸ್ ಸಿನಿಮಾ ಆಗಿ, ಒಂದು ಎಂಟರ್ಟೈನರ್ ಸಿನಿಮಾ ಆಗಿ ಜನರಿಗೆ ಇಷ್ಟವಾಗಿದೆ. ಆದರೆ ಈ ಚಿತ್ರವನ್ನು ಒಂದು ಸಾಮಾಜಿಕ ಕಳಕಳಿ ಇರುವ ಉತ್ತಮ ಸಿನಿಮಾ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಂದರೆ ಈ ಚಿತ್ರದಲ್ಲಿ ತೋರಿಸಲಾದ ವೈಲೆನ್ಸ್‌ಗೆ ಸಾಕಷ್ಟು ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ. ಇಂತಹ ದೊಡ್ಡ ಸಿನಿಮಾದಲ್ಲಿ ಬರೀ ವೈಲೆನ್ಸ್ ತುಂಬಿದೆ. ಸಿನಿಮಾದಲ್ಲಿ ಯಾವುದೇ ರೀತಿಯ ಸಂದೇಶ ಇಲ್ಲ ಎಂದು ಹಲವರು ಕಿಡಿಕಾರಿದ್ದಾರೆ. ಆದರೆ ಈಗ 'ಸಲಾರ್' ಸಿನಿಮಾದಲ್ಲಿ ಏನೆಲ್ಲಾ ಇರುತ್ತೆ? ಎನ್ನುವ ಬಗ್ಗೆ ಕುತೂಹಲ ಹುಟ್ಟಿಕೊಂಡಿದೆ.

More from Filmibeat

English summary
Salaar Movie New Poster Gives Clue About Violence In Movie, Know More Details,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X