For Quick Alerts
  ALLOW NOTIFICATIONS  
  For Daily Alerts

  ಮೊದಲ ದಿನವೇ ಸಲಾರ್ ಚಿತ್ರದ ಮೇಕಿಂಗ್ ಫೋಟೋಗಳು ಬಹಿರಂಗ

  |

  ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ ಸಲಾರ್ ಸಿನಿಮಾ ಇಂದಿನಿಂದ ಚಿತ್ರೀಕರಣ ಆರಂಭಿಸಿದೆ. ತೆಲಂಗಾಣದ ಗೋದಾವರಿ ಕಣಿವೆಯಲ್ಲಿ ಸಲಾರ್ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ನಟ ಪ್ರಭಾಸ್ ಭಾಗವಹಿಸಿದ್ದಾರೆ.

  ಪ್ರಭಾಸ್ ಸಲಾರ್ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಚಿತ್ರಗಳು ಹಾಗೂ ಕೆಲವು ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಸಲಾರ್ ಚಿತ್ರಕ್ಕಾಗಿ ಶ್ರುತಿ ಹಾಸನ್‌ಗೆ ಇಷ್ಟು ದೊಡ್ಡ ಸಂಭಾವನೆ ಕೊಡಲಾಗುತ್ತಿದೆಯಾ?ಸಲಾರ್ ಚಿತ್ರಕ್ಕಾಗಿ ಶ್ರುತಿ ಹಾಸನ್‌ಗೆ ಇಷ್ಟು ದೊಡ್ಡ ಸಂಭಾವನೆ ಕೊಡಲಾಗುತ್ತಿದೆಯಾ?

  ಸಲಾರ್ ಚಿತ್ರದ ಮೇಕಿಂಗ್ ಚಿತ್ರ ಹಾಗೂ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಪ್ರಭಾಸ್ ಅಭಿಮಾನಿಗಳು ಮನವಿ ಮಾಡಿದ್ದಾರೆ. ''ದಯವಿಟ್ಟು ಯಾರೂ ಚಿತ್ರಗಳು ವೈರಲ್ ಮಾಡಬೇಡಿ, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಬೇಡಿ'' ಎಂದು ವಿನಂತಿಸಿಕೊಂಡಿದ್ದಾರೆ.

  ಅಂದ್ಹಾಗೆ, ಶುಕ್ರವಾರ ಬೆಳಗ್ಗೆ ಇಲಾಂಡು ಅತಿಥಿ ಗೃಹಕ್ಕೆ ಬಂದ ಪ್ರಭಾಸ್, ಕೆಲವು ಸಮಯ ವಿಶ್ರಾಂತಿ ಪಡೆದು ನಂತರ ಶೂಟಿಂಗ್ ಸ್ಪಾಟ್‌ಗೆ ತೆರಳಿದರು. ಇಲಾಂಡು ಅತಿಥಿ ಗೃಹಕ್ಕೆ ಪ್ರಭಾಸ್ ಬಂದಿರುವ ಸುದ್ದಿ ತಿಳಿದ ರಾಮಗುಂಡಂ ಪೊಲೀಸ್ ಆಯುಕ್ತ ವಿ ಸತ್ಯನಾರಾಯಣ ಸ್ಥಳಕ್ಕೆ ಧಾವಿಸಿ ನಟನನ್ನು ಭೇಟಿ ಮಾಡಿದರು.

  ಸಲಾರ್ ಚಿತ್ರಕ್ಕೆ ಎಂಟ್ರಿ ಕೊಟ್ಟ ಸ್ಟಾರ್ ನಟ: ವಿಲನ್ ಪಾತ್ರದಲ್ಲಿ ಖ್ಯಾತ ಹೀರೋ?ಸಲಾರ್ ಚಿತ್ರಕ್ಕೆ ಎಂಟ್ರಿ ಕೊಟ್ಟ ಸ್ಟಾರ್ ನಟ: ವಿಲನ್ ಪಾತ್ರದಲ್ಲಿ ಖ್ಯಾತ ಹೀರೋ?

  ಸುಮಾರು 9 ದಿನಗಳ ಕಾಲ ಗೋದಾವರಿಯಲ್ಲಿ ಚಿತ್ರೀಕರಣ ನಡೆಯಲಿದ್ದು, ಆರಂಭದಲ್ಲಿ ಆಕ್ಷನ್ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿದೆಯಂತೆ.

  Salaar Movie Shooting Starts From Today at Godavari

  ಇನ್ನುಳಿದಂತೆ ಹೊಂಬಾಳೆ ಫಿಲಂಸ್ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದು, ನಿನ್ನೆಯಷ್ಟೇ ಚಿತ್ರ ನಾಯಕಿ ಯಾರೆಂದು ಪ್ರಕಟಿಸಿದ್ದರು. ಸೌತ್ ಚೆಲುವೆ ಶ್ರುತಿ ಹಾಸನ್ ಸಲಾರ್ ಚಿತ್ರದಲ್ಲಿ ಪ್ರಭಾಸ್‌ಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

  English summary
  The much anticipated Salaar Movie shooting starts from today at Godavari. Prabhas participated in day 1 shoot.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X