ಹೈದರಾಬಾದ್‌ನಲ್ಲಿ 'ಸಲಾರ್' ಹೊಸ ಶೆಡ್ಯೂಲ್ ಆರಂಭಿಸಿದ ಪ್ರಭಾಸ್

ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ ಸಲಾರ್ ಸಿನಿಮಾ ಆರಂಭದಿಂದಲೂ ನಿರೀಕ್ಷೆ ಹೆಚ್ಚಿಸಿದೆ. ಸಲಾರ್ ಚಿತ್ರಕ್ಕೂ ಮುಂಚೆ ಪ್ರಭಾಸ್ ನಟನೆಯ ರಾಧೆಶ್ಯಾಮ್ ಬಿಡುಗಡೆಯಾಗಲಿದೆ. ಆದರೂ ರಾಧೆಶ್ಯಾಮ್ ಚಿತ್ರಕ್ಕಿಂತ ಸಲಾರ್ ಚಿತ್ರದ ಮೇಲೆ ಎಲ್ಲರ ಗಮನ ಇದೆ.

ಈಗಾಗಲೇ ಎರಡು ಹಂತದಲ್ಲಿ ಸಲಾರ್ ಶೂಟಿಂಗ್ ಮುಗಿಸಿರುವ ಚಿತ್ರತಂಡ ಈಗ ಮೂರನೇ ಹಂತಕ್ಕೆ ಚಾಲನೆ ಕೊಟ್ಟಿದೆ. ಹೈದರಾಬಾದ್‌ನಲ್ಲಿ ಇಂದಿನಿಂದ ಸಲಾರ್ ಸಿನಿಮಾದ ಹೊಸ ಶೆಡ್ಯೂಲರ್ ಚಿತ್ರೀಕರಣ ಆರಂಭವಾಗಿದೆ ಎಂಬ ಮಾಹಿತಿ ಇದೆ. ಪ್ರಭಾಸ್ ಸಹ ಈ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

ತಮಿಳಿನ ಚಿತ್ರ ವಿಮರ್ಶಕ ಮನೋಬಾಲ ವಿಜಯಬಾಲನ್ ಟ್ವೀಟ್ ಮಾಡಿರುವ ಪ್ರಕಾರ, ''ಇಂದಿನಿಂದ ಹೈದರಾಬಾದ್‌ನಲ್ಲಿ ಭಾರಿ ನಿರೀಕ್ಷೆಯ ಆಕ್ಷನ್ ದೃಶ್ಯಗಳ ಶೂಟಿಂಗ್ ನಡೆಯಲಿದೆ. ಇದರಲ್ಲಿ ಇಂಟರ್‌ವಲ್ ಸೀನ್ ಸಹ ಒಳಗೊಂಡಿದೆ. ಸುಮಾರು ಒಂದು ವಾರಗಳ ಕಾಲ ಈ ಶೂಟಿಂಗ್ ಮುಂದುವರಿಯಲಿದೆ'' ಎಂದಿದ್ದಾರೆ.

Salaar new schedule to start from today in Hyderabad

ಕೊರೊನಾ ವೈರಸ್ ಭೀತಿ, ಮತ್ತೆ ಲಾಕ್‌ಡೌನ್ ಆಗುತ್ತಾ ಎಂಬ ಆತಂಕದ ನಡುವೆ ವೇಗವಾಗಿ ಚಿತ್ರೀಕರಣ ಮಾಡಲಾಗುತ್ತಿದೆ. ಎರಡನೇ ಲಾಕ್‌ಡೌನ್‌ನಿಂದ ಸ್ವಲ್ಪ ರಿಲೀಫ್ ಸಿಗುತ್ತಿದ್ದಂತೆ ಸಲಾರ್ ಚಿತ್ರೀಕರಣ ಶುರು ಮಾಡಿದ್ದರು. ಯೋಜನೆಯಂತೆ ಶೆಡ್ಯೂಲ್ ಮುಗಿಸಿದ್ದರು. ಈ ಕಡೆ ಹೈದರಾಬಾದ್‌ನಲ್ಲಿ ಸಲಾರ್ ಮುಗಿಸಿದ ಪ್ರಭಾಸ್ ಆ ಕಡೆ ಮುಂಬೈಗೆ ತೆರಳಿ ಆದಿಪುರುಷ್ ಚಿತ್ರೀಕರಣದಲ್ಲಿ ತೊಡಗಿಕೊಂಡರು. ಈಗ ಆದಿಪುರುಷ್‌ಗೆ ಬ್ರೇಕ್ ಹಾಕಿ, ಮತ್ತೆ ಸಲಾರ್ ಸೇರಿಕೊಳ್ಳುತ್ತಿದ್ದಾರೆ.

ಏಕಕಾಲದಲ್ಲಿ ಸಲಾರ್ ಮತ್ತು ಆದಿಪುರುಷ್ ಚಿತ್ರಗಳ ಶೂಟಿಂಗ್ ನಡೆಯುತ್ತಿದ್ದು, ಎರಡೂ ಚಿತ್ರಗಳಿಗೆ ಸಮಾನ ನ್ಯಾಯ ಒದಗಿಸುವ ಜವಾಬ್ದಾರಿ ಪ್ರಭಾಸ್ ಮೇಲಿದೆ. ಹಾಗಾಗಿ, ಪ್ರಭಾಸ್ ಅವರ ಲಭ್ಯತೆಯ ಆಧಾರದ ಮೇಲೆ ನಿರ್ದೇಶಕರು ಸಹ ಶೂಟಿಂಗ್ ಪ್ಲಾನ್ ಮಾಡುತ್ತಿದ್ದಾರೆ.

ಅಂದ್ಹಾಗೆ, ಸಲಾರ್ ಚಿತ್ರವನ್ನು ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿ ವಿಜಯ್ ಕಿರಗಂದೂರ್ ನಿರ್ಮಾಣ ಮಾಡುತ್ತಿದ್ದಾರೆ. ಶ್ರುತಿ ಹಾಸನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ರಾಜಮಾನರ್ ಎಂಬ ಪಾತ್ರದಲ್ಲಿ ಜಗಪತಿ ಬಾಬು ಪ್ರಮುಖ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಹಿಂದೆ ನಿರ್ಧರಿಸಿದಂತೆ ಸಲಾರ್ ಚಿತ್ರ 2022ರ ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರಬೇಕಿತ್ತು. ಆದರೆ, ಹೊಂಬಾಳೆ ಫಿಲಂಸ್ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2 ಸಿನಿಮಾದ ರಿಲೀಸ್ ಹಿನ್ನೆಲೆ ಸಲಾರ್ ಬಿಡುಗಡೆ ಮುಂದೂಡಲಾಗಿದೆ. ಸಲಾರ್ ಘೋಷಿಸಿದ್ದ ದಿನಕ್ಕೆ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗುತ್ತಿದೆ.

Salaar new schedule to start from today in Hyderabad

ಪ್ರಭಾಸ್ 21ನೇ ಚಿತ್ರಕ್ಕೆ ಆಡಿಷನ್

ನಾಗ್ ಅಶ್ವಿನ್ ನಿರ್ದೇಶನದಲ್ಲಿ ಪ್ರಭಾಸ್ ನಾಯಕನಾಗಿ ನಟಿಸುತ್ತಿದ್ದು, ಈ ಚಿತ್ರಕ್ಕಾಗಿ ಆಡಿಷನ್ ಮಾಡಲಾಗುತ್ತಿದೆ. ದೇಶದ ಪ್ರಮುಖ ನಗರಗಳಲ್ಲಿ ಪ್ರಭಾಸ್ 21ನೇ ಚಿತ್ರಕ್ಕಾಗಿ ಆಡಿಷನ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ದಕ್ಷಿಣ ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ಚೆನ್ನೈ, ಕೊಚ್ಚಿನ ಹಾಗೂ ಪುದುಚೇರಿಯಲ್ಲಿ #ಪ್ರಾಜೆಕ್ಟ್K ಸಿನಿಮಾ ಆಡಿಷನ್ ನಡೆಯುತ್ತಿದೆ.

ಲಿಕಾನ್ ಸಿಟಿಯಲ್ಲಿ ಸೆಪ್ಟೆಂಬರ್ 12 ರಂದು ಆಡಿಷನ್ ನಡೆಸಲಾಗುತ್ತಿದೆ. ಅದೇ ದಿನ ಚೆನ್ನೈನಲ್ಲೂ ಆಡಿಷನ್ ಮಾಡಲಾಗುತ್ತಿದೆ. ಸೆಪ್ಟೆಂಬರ್ 15 ರಂದು ಪುದುಚೇರಿ ಮತ್ತು ಕೊಚ್ಚಿನ್‌ನಲ್ಲಿ ಆಡಿಷನ್ ಮಾಡಲಾಗುತ್ತದೆ. ಅದಕ್ಕೂ ಮುಂಚೆ ನಿಮ್ಮ ಪ್ರೊಫೈಲ್ [email protected]ಗೆ ಮೇಲ್ ಮಾಡಬಹುದು. ನಟ-ನಟಿಯರು, ಮಾರ್ಷಲ್ಸ್ ಆರ್ಟ್ಸ್ ಕಲಾವಿದರು, ಮಾಡೆಲ್ ಆಗಿರಬಹುದು. ಯಾವುದೇ ವಯಸ್ಸು, ಲಿಂಗ, ಭಾಷೆ, ರಾಷ್ಟ್ರೀಯತೆ, ಸಂಸ್ಕೃತಿಗೆ ಸೇರಿದವರು ಆಗಿರಬಹುದು.

ಈ ಚಿತ್ರದಲ್ಲಿ ಪ್ರಭಾಸ್ ಜೊತೆ ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಹಾಲಿವುಡ್ ಸಿನಿಮಾವೊಂದರಲ್ಲಿ ಪ್ರಭಾಸ್ ನಟಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ.

More from Filmibeat

English summary
Prabhas starrer Salaar movie new schedule to start from today in Hyderabad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X