ಬ್ಲ್ಯಾಕ್ ಅಂಡ್ ಬ್ಲ್ಯಾಕ್ ಥೀಮ್‌ನಲ್ಲಿ ಸಲಾರ್ ಸಕ್ಸಸ್ ಪಾರ್ಟಿ: ಎಲ್ಲಿಯೂ ಕಾಣದ ಪೃಥ್ವಿರಾಜ್ ಸುಕುಮಾರನ್!
ನಿರ್ದೇಶಕ ಪ್ರಶಾಂತ್ ನೀಲ್ ಅವರ ಕನಸಿನ ಸಿನಿಮಾ 'ಸಲಾರ್ ಭಾಗ 1' ಅದ್ಭುತ ಯಶಸ್ಸು ದಾಖಲಿಸಿದೆ. ಕನ್ನಡದ ಉಗ್ರಂ ಸಿನಿಮಾದ ರಿಮೇಕ್ ಆದರೂ ಕೂಡ ಅದನ್ನು ಮತ್ತಷ್ಟು ಅಚ್ಚುಕಟ್ಟಾಗಿ ಜನರ ಮುಂದೆ ಇಟ್ಟಿದ್ದಾರೆ. ಸಿನಿಮಾ ಈಗಾಗಲೇ 700 ಕೋಟಿ ರೂಪಾಯಿ ಗಡಿ ತಲುಪಿದ್ದು, ಥಿಯೇಟರ್‌ಗಳಲ್ಲಿ ಜಾಗ ಉಳಿಸಿಕೊಂಡಿದೆ. ಈ ಯಶಸ್ಸನ್ನು ತಂಡ ಸಂಭ್ರಮಿಸಿದೆ.
ಸಲಾರ್ ಚಿತ್ರತಂಡ ಮತ್ತೆ ಒಂದಾಗಿದ್ದು, ಬೆಂಗಳೂರಿನಲ್ಲಿ ತಮ್ಮ ವಿಜಯೋತ್ಸವವನ್ನು ಆಚರಿಸಿದೆ. ಈ ಸಕ್ಸಸ್ ಪಾರ್ಟಿಯಲ್ಲಿ ಪ್ರಭಾಸ್, ಶ್ರುತಿ ಹಾಸನ್, ಶ್ರೀಯಾ ರೆಡ್ಡಿ, ಜಗಪತಿ ಬಾಬು ಸೇರಿ ಅನೇಕ ನಟರಿದ್ದರು. ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಪಾರ್ಟಿಯಲ್ಲಿ ಉಪಸ್ಥಿತರಿದ್ದರು.

ಬ್ಲ್ಯಾಕ್ ಅಂಡ್ ಬ್ಲ್ಯಾಕ್‌ನಲ್ಲಿ ಸಲಾರ್ ಸಕ್ಸಸ್ ಪಾರ್ಟಿ
ಸಲಾರ್ ಸಕ್ಸಸ್ ಪಾರ್ಟಿಯನ್ನು ಮತ್ತಷ್ಟು ವಿಶೇಷವಾಗಿಸಿದ್ದು ಅದರ ಥೀಮ್. ಪಾರ್ಟಿಯಲ್ಲಿನ ಪೀಠೋಪಕರಣಗಳಿಂದ ಹಿಡಿದು ಬಟ್ಟೆಗಳವರೆಗೆ ಪ್ರತಿಯೊಂದರಲ್ಲಿಯೂ ಕಪ್ಪು ಬಣ್ಣದ ಛಾಯೆ ಇತ್ತು. ನಟ ಪ್ರಭಾಸ್ ತಮ್ಮ ಕಪ್ಪು ಜೀನ್ಸ್, ಟಿ-ಶರ್ಟ್ ಮತ್ತು ಬ್ಲೇಜರ್‌ನೊಂದಿಗೆ ಅಲ್ಟ್ರಾ ಸ್ಟೈಲಿಶ್ ಆಗಿ ಕಾಣುತ್ತಿದ್ದರು.
ಇತರ ನಟ, ನಿರ್ದೇಶಕ, ತಾಂತ್ರಿಕ ವರ್ಗ ಕೂಡ ಕಪ್ಪು ಬಣ್ಣವನ್ನೇ ಅಯ್ಕೆ ಮಾಡಿಕೊಂಡಿದ್ದರು. ಚಿತ್ರದ ನಾಯಕಿ ಶ್ರುತಿ ಹಾಸನ್ ಸಕತ್ ಆಗಿ ಕಾಣುವ ಗೋಲ್ಡ್ ಮತ್ತು ಬ್ಲ್ಯಾಕ್ ಕಲರ್ ಕಾಂಬಿನೇಷನ್‌ನ ಡ್ರೆಸ್ ಧರಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಪಾರ್ಟಿಯ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿವೆ. ಈ ಸಕ್ಸಸ್ ಪಾರ್ಟಿಯ ಚಿತ್ರಗಳನ್ನು ನಟಿ ಶ್ರುತಿ ಹಾಸನ್ ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು.
ಪಾರ್ಟಿಯಲ್ಲಿ ಕಾಣದ ಪೃಥ್ವಿರಾಜ್ ಸುಕುಮಾರನ್
ಇನ್ನು, ಈ ಸಕ್ಸಸ್ ಪಾರ್ಟಿಯಲ್ಲಿ ಎಲ್ಲರ ಕಣ್ಣು ಹುಡುಕುತ್ತಿದದ್ದು ನಟ ಪೃಥ್ವಿರಾಜ್ ಸುಕುಮಾರನ್ ಅವರನ್ನು. ಈ ಸಿನಿಮಾದ ಪ್ರಮುಖ ಪಾತ್ರ ವರದ ರಾಜಮನ್ನಾರ್ ಆಗಿ ಇಡೀ ಸಿನಿಮಾದಲ್ಲಿ ತಣ್ಣಗೆ ತಂಗಾಳಿಯಂತೆ, ಕೆಲವೊಮ್ಮೆ ಬಿರುಗಾಳಿಯಂತೆ ಕಾಣಿಸುತ್ತಾರೆ. ದೇವ ಮತ್ತು ವರದ ಅವರ ನಡುವಿನ ಸ್ನೇಹ ಮತ್ತು ಸೋದರತ್ವದ ಭಾವನೆಯೇ ಸಲಾರ್‌ನ ಜೀವಾಳ. ಹೀಗಾಗಿಯೇ ಎಲ್ಲರ ಕಣ್ಣು ವರದ ಮೇಲಿತ್ತು. ಆದರೆ, ಅವರು ಎಲ್ಲಿಯೋ ಕಾಣಿಸಿಕೊಂಡಿಲ್ಲ. ಕಾರಣ, ಪೃಥ್ವಿರಾಜ್ ಸುಕುಮಾರನ್ ತನ್ನ 'ಆಡುಜೀವಿತಂ' ಚಿತ್ರದ ಪೈನಲ್ ಕೆಲಸದಲ್ಲಿ ಬ್ಯುಸಿ ಇದ್ದಾರೆ.

ಸಲಾರ್ ಭಾಗ 2: ಶೌರ್ಯಾಂಗ ಪರ್ವಂ
ಸಲಾರ್ ಭಾಗ 1: ಕದನ ವಿರಾಮಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದ್ದಯ, ಈಗ ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಇಬ್ಬರೂ ಸಲಾರ್ ಭಾಗ 2: ಶೌರ್ಯಾಂಗ ಪರ್ವಂಗಾಗಿ ಮತ್ತೆ ಒಂದಾಗುತ್ತಿದ್ದಾರೆ. ಚಿತ್ರದ ಭಾಗ 2 ರ ಸ್ಕ್ರಿಪ್ಟ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ ಎಂದು ಪ್ರಶಾಂತ್ ನೀಲ್ ತಿಳಿಸಿದ್ದಾರೆ. ಹೀಗಾಗಿ ಸಿನಿಮಾ ಆದಷ್ಟು ಬೇಗ ಸೆಟ್ಟೇರುವ ಸಾಧ್ಯತೆಯಿದೆ.
ಪ್ರಭಾಸ್ ಮುಂದಿನ ಸಿನಿಮಾಗಳು
ಇನ್ನು, ಪ್ರಭಾಸ್ ಅವರು ನಿರ್ದೇಶಕ ಮಾರುತಿ ಅವರ ಮುಂದಿನ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಈ ಸಿನಿಮಾದ ಶೀರ್ಷಿಕೆಯನ್ನು 15 ಜನವರಿ 2024 ರಂದು ಸಂಕ್ರಾಂತಿಯ ಸಂದರ್ಭದಲ್ಲಿ ಬೆಳಗ್ಗೆ 7:08 ಕ್ಕೆ ಪ್ರಕಟಿಸಲಾಗುವುದು. ಇದು ಒಂದು ಹಾರರ್ ಕಾಮಿಡಿ ಸಿನಿಮಾ ಎಂದು ಹೇಳಲಾಗಿದೆ. ಇದರ ಜೊತೆಗೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ಮತ್ತು ದಿಶಾ ಪಟಾನಿ ಅವರೊಂದಿಗಿನ ಮಹತ್ವಾಕಾಂಕ್ಷೆಯ ಯೋಜನೆಯಾದ ಕಲ್ಕಿ 2898 AD ಯ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.


Click it and Unblock the Notifications











