"KGf-2 ಕೂಡ ನನಗೆ ತೃಪ್ತಿ ಕೊಟ್ಟಿಲ್ಲ, ಸಲಾರ್-1 ಸಣ್ಣ ಟ್ರೈಲರ್ ಅಷ್ಟೇ, ಪಾರ್ಟ್‌-2 ಹೇಗಿರುತ್ತೆ ಅಂದ್ರೆ?": ಪ್ರಶಾಂತ್ ನೀಲ್

ಸೂಪರ್ ಹಿಟ್ 'ಸಲಾರ್' ಪಾರ್ಟ್-1 ಚೇಸ್‌ಫೈರ್ ಓಟಿಟಿ ಎಂಟ್ರಿಗೆ ಕೌಂಟ್‌ಡೌನ್ ಶುರುವಾಗಿದೆ. ಮಧ್ಯರಾತ್ರಿಯಿಂದಲೇ ಸಿನಿಮಾ ಡಿಜಿಟಲ್ ಸ್ಟ್ರೀಮಿಂಗ್ ಆಗಲಿದೆ. ಬಾಕ್ಸಾಫೀಸ್‌ನಲ್ಲಿ ಸಿನಿಮಾ 700 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಮುಂದಿನ ವರ್ಷ ಸಿನಿಮಾ ಸೀಕ್ವೆಲ್ ತೆರೆಗೆ ತರುವ ಪ್ರಯತ್ನ ನಡೀತಿದೆ.

'KGF' ಸರಣಿ ಬಳಿಕ ಪ್ರಶಾಂತ್ ನೀಲ್ 'ಸಲಾರ್' ಸರಣಿಗೆ ಕೈ ಹಾಕಿದ್ದರು. ದೇವ- ವರದ ಇಬ್ಬರ ಸ್ನೇಹದ ಅರ್ಧ ಕಥೆಯನ್ನು ಮಾತ್ರ ತೆರೆಗೆ ತರಲಾಗಿದೆ. ಉಳಿದ ಅರ್ಧ ಕಥೆ ಏನು? ಆತ್ಮೀಯ ಸ್ನೇಹಿತರು ಬದ್ಧವೈರಿಗಳು ಆಗೋದು ಯಾಕೆ? ಎನ್ನುವ ಪ್ರಶ್ನೆ ಹುಟ್ಟಾಕಿ ಸೀಕ್ವೆಲ್ ಬಗ್ಗೆ ನೀಲ್ ಕುತೂಹಲ ಮೂಡಿಸಿದೆ. 'ಉಗ್ರಂ' ಚಿತ್ರದಲ್ಲಿ 2 ಗಂಟೆಗಳಲ್ಲಿ ಹೇಳಿದ ಕಥೆಯನ್ನೇ ದೊಡ್ಡದಾಗಿ 6 ಗಂಟೆಗಳ 'ಸಲಾರ್' ಸರಣಿಯಲ್ಲಿ ಹೇಳುತ್ತಿದ್ದಾರೆ.

Salaar Part 1 is a trailer for the sequel, Says Prashanth neel

ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಶಾಂತ್ ನೀಲ್ ಸಲಾರ್ ಪಾರ್ಟ್-1 ಜಸ್ಟ್ ಟ್ರೈಲರ್ ಅಷ್ಟೇ. ಅಸಲಿ ಪಿಕ್ಚರ್ ಇನ್ನು ಬಾಕಿಯಿದೆ ಎಂದಿದ್ದಾರೆ. "ಸಲಾರ್ ಸೆಕೆಂಡ್ ಪಾರ್ಟ್‌ಗೆ ಫಸ್ಟ್ ಪಾರ್ಟ್ ಜಸ್ಟ್ ಟ್ರೈಲರ್ ಇದ್ದಂತೆ. ಫಸ್ಟ್ ಪಾರ್ಟ್‌ಗಾಗಿ ಒಂದಷ್ಟು ಕಂಟೆಟ್ ಕಟ್ ಮಾಡಿದ್ದೆವು. ಆದರೆ ದೊಡ್ದಾಗುತ್ತದೆ ಎಂದು ಕೊಂಚ ಕಂಟೆಂಟ್ ಉಳಿಸಿದ್ದೇವೆ. ಸೆಕೆಂಡ್ ಪಾರ್ಟ್‌ನಲ್ಲಿ ಅದನ್ನು ಸೇರಿಸುತ್ತೇವೆ" ಎಂದಿದ್ದಾರೆ.

"ಸಲಾರ್ ಚಿತ್ರದಲ್ಲಿ ಫ್ರೆಂಡ್‌ಶಿಪ್ ಇಂಪಾರ್ಟೆಂಟ್ ಎಲಿಮೆಂಟ್. ಕಥೆಗಾಗಿ ಒಂದು ಅದ್ಭುತ ಪ್ರಪಂಚ ಸೃಷ್ಟಿಸಿದ್ದೇವೆ. ಫಸ್ಟ್‌ ಹಾಫ್‌ನಲ್ಲಿ ದೇವ- ವರದ ಸ್ನೇಹ ನೋಡಿದ್ದೀರಾ. ಸೆಕೆಂಡ್‌ ಪಾರ್ಟ್‌ನಲ್ಲಿ ಅದಕ್ಕಿಂತ ಹೆಚ್ಚು ಡ್ರಾಮಾ, ಅದ್ಭುತ ಅನುಭವ ಕೊಡುತ್ತದೆ. ಇಬ್ಬರು ಆತ್ಮೀಯ ಸ್ನೇಹಿತರೇ ಶತ್ರುಗಳಾದರೆ ಹೇಗಿರುತ್ತದೆ? ಎನ್ನುವುದನ್ನು ಮುಂದೆ ನೋಡಬಹುದು"

"ಅಂತಹ ಒಳ್ಳೆಯ ಸ್ನೇಹಿತರು ಏಕೆ ದೂರಾದರು? ಯಾವಾಗ ದೂರಾದರು? ಕಾರಣ ಏನು? ಅಂತಹ ಮಾನಸಿಕ ವಿಧ್ವಂಸಕ್ಕೆ ಕಾರಣ ಏನು? ಫಸ್ಟ್ ಪಾರ್ಟ್‌ನಲ್ಲಿ ನೋಡಿದ ಪಾತ್ರಗಳು, ಅವುಗಳ ಸುತ್ತಲಿನ ಪ್ರಪಂಚ. ಎಲ್ಲದಕ್ಕೂ ಸೀಕ್ವೆಲ್‌ನಲ್ಲಿ ಅರ್ಥ ಇರುತ್ತದೆ. ಒಂದು ಎಮೋಷನ್ ಕನೆಕ್ಟ್ ಆಗಿರುತ್ತದೆ. ನಾನು ಯಾವಾಗಲೂ ಮೊದಲಿಗೆ ಎಂಡಿಂಗ್ ಬರೆದುಕೊಳ್ಳುತ್ತೇನೆ. ಬಳಿಕ ಅದರ ಸುತ್ತಾ ಇನ್ನುಳಿದ ಅಂಶಗಳನ್ನು ಸೇರಿಸುತ್ತಾ ಹೋಗುತ್ತೇನೆ. ಆ ರೀತಿ ಬರೆದ ಕಥೆಗಳಲ್ಲಿ 'ಸಲಾರ್' ಕೂಡ ಒಂದು"

Salaar Part 1 is a trailer for the sequel, Says Prashanth neel

"ನಾನು ಕ್ರಿಯೇಟ್ ಮಾಡಿರುವ ಪ್ರತಿಯೊಂದು ಅಂಶವು ಕ್ಲೈಮ್ಯಾಕ್ಸ್ ಖದರ್ ಹೆಚ್ಚಿಸುತ್ತದೆ. ಸಲಾರ್ ಮೊದಲ ಭಾಗದಲ್ಲಿ 3 ಆಕ್ಷನ್ ಸೀಕ್ವೆನ್ಸ್ ಇತ್ತು. ಪಾರ್ಟ್‌-2ನಲ್ಲಿ ಇನ್ನು ಜಾಸ್ತಿ ಇರುತ್ತದೆ. ಆದರೆ ಎಲ್ಲವೂ ಕಥೆಗೆ ಪೂರಕವಾಗಿರುತ್ತದೆ. ಸುಖಾ ಸುಮ್ಮನೆ ಸೇರಿಸಲ್ಲ. 'ಸಲಾರ್' ವಿಚಾರದಲ್ಲಿ ಪ್ರಭಾಸ್ ಖುಷಿಯಾಗಿದ್ದಾರೆ. ನನಗೆ ತೃಪ್ತಿಯಿಲ್ಲ. KGF-2 ಮಾಡಿದಾಗಲೂ ತೃಪ್ತಿ ಇರಲಿಲ್ಲ. ಒಬ್ಬ ಕ್ರಿಯೇಟರ್ ಆಗಿ ಇನ್ನು ಏನೋ ಮಾಡಬೇಕು ಎನ್ನುವ ತುಡಿತ ಇದ್ದೇ ಇರುತ್ತದೆ. ಇನ್ನುಳಿದಂತೆ ಕಲೆಕ್ಷನ್ ಬಹಳ ಮುಖ್ಯ. ಆ ಮ್ಯಾಜಿಕ್ ನಡೆದಿದೆ. ಸಲಾರ್‌-2ನಲ್ಲಿ ಇದು ಇನ್ನು ಜೋರಾಗಿರುತ್ತದೆ" ಎಂದು ನೀಲ್ ಹೇಳಿದ್ದಾರೆ.

"ಸಲಾರ್-2 ಸ್ಟೋರಿ, ವಿಷ್ಯುವಲ್ಸ್, ಕಲೆಕ್ಷನ್ ಎಲ್ಲದರಲ್ಲೂ ಅದ್ಭುತ ನೋಡುತ್ತೀರಾ. ನಾನು ಯಾವುದೇ ಭಾಷೆಯಲ್ಲಿ ಸಿನಿಮಾ ಮಾಡಲು ಸಿದ್ಧ. ಯಾವ ನಟನೊಟ್ಟಿಗೆ ಸಿನಿಮಾ ಮಾಡ್ತಿನೋ ಆತ ಯಾವ ಭಾಷೆಯ ಎನ್ನುವ ಮೇಲೆ ಆ ಭಾಷೆಯಲ್ಲಿ ಸಿನಿಮಾ ಮಾಡ್ತೀನಿ. KGF-3, ಸಲಾರ್-2 ಸಿನಿಮಾಗಳನ್ನು ಮಾಡುವುದಾಗಿ ಹೇಳಿದ್ದೇವೆ. ಕಂಡಿತ ಸಿನಿಮಾಗಳು ಬಂದೇ ಬರುತ್ತವೆ" ಎಂದು ಪ್ರಶಾಂತ್ ನೀಲ್ ವಿವರಿಸಿದ್ದಾರೆ.

'ಸಲಾರ್‌' ಬಳಿಕ ಪ್ರಶಾಂತ್ ನೀಲ್ ಯಾವ ಸಿನಿಮಾ ಮಾಡುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಜ್ಯೂ. ಎನ್‌ಟಿಆರ್ ಜೊತೆಗೂ ಒಂದು ಸಿನಿಮಾ ಘೋಷಣೆ ಮಾಡಿದ್ದಾರೆ. ಈ ವರ್ಷವೇ ಸಿನಿಮಾ ಸೆಟ್ಟೇರುತ್ತದೆ ಎಂದಿದ್ದಾರೆ. ಹಾಗಾದರೆ 'ಸಲಾರ್‌- 2' ಯಾವಾಗ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.

More from Filmibeat

English summary
Prashanth neel spills the beans on Salaar 2- Shouryanga Parvam;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X