270 ಕೋಟಿ ಬಜೆಟ್‌ನ 'ಸಲಾರ್' ಸಿನಿಮಾದಲ್ಲಿ ನಟಿಸಲು ಶೃತಿ ಹಾಸನ್, ಪೃಥ್ವಿರಾಜ್ ಸುಕುಮಾರನ್ ಪಡೆದಿದ್ದು ಎಷ್ಟು?

ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ಡೈನಾಮಿಕ್ ಜೋಡಿಯಾಗಿ ನಟಿಸಿರುವ ಪ್ರಶಾಂತ್ ನೀಲ್ ಅವರ ಬಹು ನಿರೀಕ್ಷಿತ ಚಿತ್ರ 'ಸಲಾರ್' ಡಿಸೆಂಬರ್ 22 ರಂದು ಬಿಡುಗಡೆಯಾಗಿದೆ. ವರದಿಗಳ ಪ್ರಕಾರ 270 ಕೋಟಿ ರೂಪಾಯಿ ಬಜೆಟ್‌ನಲ್ಲಿ ಚಿತ್ರವನ್ನು ನಿರ್ಮಿಸಲಾಗಿದೆ.

ಸಿನಿಮಾದಲ್ಲಿ ನಾಯಕಿಯಾಗಿ ನಟಿ ಶ್ರುತಿ ಹಾಸನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಬಿಡುಗಡೆ, ಸಲಾರ್ ವಿಮರ್ಶೆಗಳು ಸುದ್ದಿಯಾಗುತ್ತಿದ್ದು, ಇದರ ಜೊತೆಗೆ ಚಿತ್ರದಲ್ಲಿ ನಟಿಸಿರುವವರ ಸಂಭಾವನೆ ವಿಷಯ ಕೂಡ ಚರ್ಚೆಯಲ್ಲಿದೆ. 270 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಟ, ನಟಿಯರಿಗೆ ಎಷ್ಟು ಸಿಕ್ಕಿರಬಹುದು ಎಂಬ ಅಂದಾಜು ನಡೆಯುತ್ತಿದೆ. ಪ್ರತಿಭಾವಂತ ಪಾತ್ರವರ್ಗ ಮತ್ತು ಸಿಬ್ಬಂದಿ ಸಂಭಾವನೆಯ ಬಗ್ಗೆ ವರದಿಗಳು ಬರುತ್ತಿವೆ.

Salaar: Part One- Ceasefire stars Shruti Haasan, Prithviraj Sukumar’s remuneration details

'ಸಲಾರ್‌'ಗಾಗಿ ನಟಿ ಶ್ರುತಿ ಹಾಸನ್ ಸಂಭಾವನೆ

'ಸಲಾರ್' ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವುದು ಬಹುಭಾಷಾ ನಟಿ ಶೃತಿ ಹಾಸನ್. ಈಗಾಗಲೇ ಹಾಡು ಮತ್ತು ಟ್ರೈಲರ್‌ನಲ್ಲಿ ಅವರನ್ನು ಕಂಡಿದ್ದ ಅಭಿಮಾನಿಗಳು ಸಿನಿಮಾದಲ್ಲಿ ಕಣ್ತುಂಬಿಕೊಂಡಿದ್ದಾರೆ. ಅವರ ಪಾತ್ರಕ್ಕೂ ಮಿಶ್ರ ಪ್ರತಿಕ್ರಿಯೆ ಲಭ್ಯವಾಗಿದೆ. ಸಿನಿಮಾದಲ್ಲಿ ನಿರ್ಣಾಯಕ ಪಾತ್ರದಲ್ಲಿ ನಟಿಸಿದ್ದಾರೆ.

ಸಲಾರ್ ಚಿತ್ರಕ್ಕಾಗಿ ನಟಿ ಶೃತಿ ಹಾಸನ್ ಅವರು 8 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಅವರ ಪಾತ್ರವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇನ್ನು, ಶೂಟಿಂಗ್ ಸಮಯದಲ್ಲಿ ಈ ಸೆಟ್‌ನಲ್ಲಿ ಇದ್ದಿದ್ದು, ಹತ್ತಿರದ ಸ್ನೇಹಿತರು ಮತ್ತು ಕುಟುಂಬದವರ ಜೊತೆಗೆ ಇದ್ದಂತೆ ಆಗಿದೆ ಎಂದು ಹೇಳಿದ್ದಾರೆ. ಜೊತೆಗೆ ಈ ಚಿತ್ರ ನನ್ನದಲ್ಲ, ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ನಿರ್ವಹಿಸಿರುವ ಪಾತ್ರಗಳ ಸುತ್ತ ಸುತ್ತುತ್ತದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.

Salaar: Part One- Ceasefire stars Shruti Haasan, Prithviraj Sukumar’s remuneration details


ಪೃಥ್ವಿರಾಜ್ ಸುಕುಮಾರನ್ ಸಂಭಾವನೆ

ಇನ್ನು, ಚಿತ್ರದಲ್ಲಿ ಅತಿ ಪ್ರಮುಖ ಪಾತ್ರ ನಿರ್ವಹಿಸಿರುವ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಅವರ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನಟ ಪೃಥ್ವಿರಾಜ್ ಸುಕುಮಾರನ್, ವರದರಾಜ ಮನ್ನಾರ್ ಆಗಿ ಆರ್ಭಟಿಸಿದ್ದಾರೆ. ಪ್ರಭಾಸ್ ಅವರ ಪಾತ್ರ ದೇವಾ ಆತ್ಮೀಯ ಸ್ನೇಹಿತನ ಪಾತ್ರದಲ್ಲ ನಟಿಸಿದ್ದಾರೆ. ಈ ಸಿನಿಮಾಗಾಗಿ ಪೃಥ್ವಿರಾಜ್ ಸುಕುಮಾರನ್ 4 ಕೋಟಿ ರೂಪಾಯಿಗಳನ್ನು ಸಂಭಾವನೆಯಾಗಿ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಅವರ ಜೊತೆಗೆ ಪೃಥ್ವಿರಾಜ್ ಸುಕುಮಾರನ್ ತಂದೆ ಪಾತ್ರದಲ್ಲಿ ನಟಿಸಿರುವ ಜಗಪತಿ ಬಾಬು ಕೂಡ 4 ಕೋಟಿ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆದುಕೊಂಡಿದ್ದಾರೆ.

ಮೊದಲ ದಿನ 180 ಕೋಟಿ ಗಳಿಸಿದ ಸಲಾರ್

'ಸಲಾರ್: ಭಾಗ ಒಂದು- ಕದನ ವಿರಾಮ' ಡಿಸೆಂಬರ್ 22 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಇಂಡಸ್ಟ್ರಿ ಟ್ರ್ಯಾಕಿಂಗ್ ಸೈಟ್ Sacnilk ಪ್ರಕಾರ, 'ಸಲಾರ್' ಚಿತ್ರದ ದೇಶೀಯ ಅಡ್ವಾನ್ಸ್ ಟಿಕೆಟ್ ಮಾರಾಟವು 49 ಕೋಟಿ ರೂಪಾಯಿಗಳನ್ನು ಗಳಿಸಿದೆ. ಆನ್‌ಲೈನ್ ಮತ್ತು ಆಫ್‌ಲೈನ್ ಮಾರಾಟ ಎರಡನ್ನೂ ಪರಿಗಣಿಸಿದಾಗ, ಎಲ್ಲಾ ಭಾಷೆಗಳಲ್ಲಿ ಒಟ್ಟಾರೆ ಆರಂಭಿಕ ದಿನದ ಗಳಿಕೆಯು ಸುಮಾರು 180 ಕೋಟಿ ರೂಪಾಯಿಯಾಗಿದೆ.

ವಿಶ್ವಾದ್ಯಂತ 'ಸಲಾರ್' 45 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ಗಳಿಸಿದೆ. ಇದು 2023 ರಲ್ಲಿ ಭಾರತೀಯ ಚಲನಚಿತ್ರ ಒಂದರ ಅತಿದೊಡ್ಡ ಓಪನಿಂಗ್ ಆಗಲಿದೆ. 'ಸಲಾರ್: ಭಾಗ ಒಂದು' ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ಬಿಡುಗಡೆಯಾಗಿದೆ.

More from Filmibeat

English summary
Salaar: Shruti Haasan, Prithviraj Sukumar’s remuneration details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X