Prabhas- Yash: ರಾಕಿಭಾಯ್ ಯಶ್ ಫ್ಯಾನ್ಸ್ ದಾಖಲೆ ಮುರಿದು ಪ್ರಭಾಸ್ ಫ್ಯಾನ್ಸ್ ಸೆಲೆಬ್ರೇಷನ್

ಸ್ಟಾರ್ ನಟರು ಮಾತ್ರವಲ್ಲ ಅವರ ಅಭಿಮಾನಿಗಳು ಕೆಲವೊಮ್ಮ ದಾಖಲೆಗಳನ್ನು ಬರೆಯುತ್ತಾರೆ. ನೆಚ್ಚಿನ ಕಲಾವಿದರಿಗಾಗಿ ಸಾಹಸಗಳನ್ನು ಮಾಡುತ್ತಿರುತ್ತಾರೆ. ಬಾಹುಬಲಿ ಪ್ರಭಾಸ್ ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಬಹುಕೋಟಿ ವೆಚ್ಚದ ಸಿನಿಮಾಗಳಲ್ಲಿ ನಟಿಸುತ್ತಿರುವ ಡಾರ್ಲಿಂಗ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಟಾಲಿವುಡ್ ಮೋಸ್ಟ್ ಎಲಿಜಬಲ್ ಬ್ಯಾಚುಲರ್‌ಗೆ ಶುಭಾಶಯಗಳ ಮಹಾಪೂರವೇ ಹರಿದುಬರ್ತಿದೆ. ಇನ್ನು ನೆಚ್ಚಿನ ನಟನ ಹುಟ್ಟುಹಬ್ಬವನ್ನು ಬಹಳ ಜೋರಾಗಿ ಅಭಿಮಾನಿಗಳು ಆಚರಿಸುತ್ತಿದ್ದಾರೆ. ಕುಕಟ್‌ಪಲ್ಲಿ ಕತೈಲಾಪುರ ಗ್ರೌಂಡ್‌ನಲ್ಲಿ 'ಸಲಾರ್' ಪ್ರಭಾಸ್ ದೊಡ್ಡ ಕಟೌಟ್‌ ನಿಲ್ಲಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಚಿತ್ರದಲ್ಲಿ ಎರಡು ಕತ್ತಿ ಹಿಡಿದು ಎದುರಾಳಿಗಳ ವಿರುದ್ಧ ಸಮರಕ್ಕೆ ನಿಂತ ಪ್ರಭಾಸ್ ಫೋಟೊ 230 ಎತ್ತರದ ಕಟೌಟ್‌ ರೂಪದಲ್ಲಿ ಮೂಡಿ ಬಂದಿದೆ. ಈವರೆಗೆ ಮತ್ಯಾವುದೇ ಹೀರೊ ಕಟೌಟ್ ಇಷ್ಟು ದೊಡ್ಡದಾಗಿ ನಿರ್ಮಿಸಿರಲಿಲ್ಲ.ಈ ವಿಷಯದಲ್ಲಿ ಪ್ರಭಾಸ್ ದಾಖಲೆ ಸೃಷ್ಟಿಸಿದ್ದಾರೆ ಎಂದು ಹೇಳಬಹುದು. ಈ ಮೂಲಕ ಯಂಗ್ ರೆಬಲ್ ಸ್ಟಾರ್ ಹುಟ್ಟುಹಬ್ಬವನ್ನು ಅಭಿಮಾನಿಗಳು ವಿಶೇಷವಾಗಿಸಿದ್ದಾರೆ.

Salaar Prabhas now holds the record for having Indias largest cutout

ದಸರಾ ಹಬ್ಬದ ಸಂಭ್ರಮದಲ್ಲೇ ಪ್ರಭಾಸ್ ಹುಟ್ಟುಹಬ್ಬ ಬಂದಿರೋದು ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ. ಈ ಕಟೌಟ್ ಅನಾವರಣಗೊಳಿಸಲು ಅಭಿಮಾನಿಗಳು ಹೈದರಾಬಾದ್‌ನಲ್ಲಿ ಬೃಹತ್ ರ್ಯಾಲಿ ಆಯೋಜಿಸಿದ್ದರು. ಬಳಿಕ ಕಟೌಟ್ ಬಳಿ ಸಂಭ್ರಮಾಚರಣೆ ನಡೆಸಲಾಯಿತು. ಪ್ರಭಾಸ್ ಅಭಿಮಾನಿ ಸಂಘಗಳು ಭಾಗವಹಿಸಿ ಸಂಭ್ರಮಿಸಿದರು. ಇನ್ನು ಅದೇ ಮೈದಾನದಲ್ಲಿ ಕ್ರೀಡಾಕೂಟ, ನೃತ್ಯ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸದ್ಯ ಪ್ರಭಾಸ್ ಯುಕೆ ಪ್ರವಾಸದಲ್ಲಿದ್ದಾರೆ. ಅಲ್ಲೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ ತಾಯ್ನಾಡಿಗೆ ವಾಪಸ್ ಬರಲಿದ್ದಾರೆ.

ಈ ಹಿಂದೆ ತಮಿಳು ನಟ ಸೂರ್ಯ ಅಭಿಮಾನಿಗಳು ನೆಚ್ಚಿನ ನಟನ 215 ಅಡಿ ಕಟೌಟ್ ನಿಲ್ಲಿಸಿದ್ದರು. 3 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಯಶ್ ಅಭಿಮಾನಿಗಳು ಈ ದಾಖಲೆ ಮುರಿದ್ದರು. ರಾಕಿ ಭಾಯ್ ಯಶ್ 216 ಅಡಿಗಳ ಕಟೌಟ್ ನಿಲ್ಲಿಸಿದ್ದರು. ನಗರದ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ 2020ರಲ್ಲಿ ಅಭಿಮಾನಿಗಳು ಅದ್ಧೂರಿಯಾಗಿ ಯಶ್ ಹುಟ್ಟುಹಬ್ಬ ಆಚರಿಸಿದ್ದರು. 216 ಕಟೌಟ್ ಜೊತೆಗೆ 5000 ಕೆಜಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು. ಇದೀಗ ಯಶ್ ಅಭಿಮಾನಿಗಳ 216 ಅಡಿ ಕಟೌಟ್ ದಾಖಲೆ ಮುರಿದು ಪ್ರಭಾಸ್ ಅಭಿಮಾನಿಗಳು 230 ಅಡಿ ಕಟೌಟ್ ನಿರ್ಮಿಸಿ ಖುಷಿಪಟ್ಟಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಹೊಂಬಾಳೆ ಸಂಸ್ಥೆ ಈ ಸಿನಿಮಾ ನಿರ್ಮಾಣ ಮಾಡಿರುವುದು ವಿಶೇಷ. ಡಿಸೆಂಬರ್ 22ಕ್ಕೆ ಸಿನಿಮಾ ರಿಲೀಸ್ ಮಾಡೋದಾಗಿ ಚಿತ್ರತಂಡ ಪುನರುಚ್ಚರಿಸಿದೆ. ಶಾರುಖ್ ಖಾನ್ ನಟನೆಯ 'ಡಂಕಿ' ಡಿಸೆಂಬರ್ 21ಕ್ಕೆ ತೆರೆಗಪ್ಪಳಿಸಲಿದೆ. ಹಾಗಾಗಿ ಎರಡೂ ಸಿನಿಮಾಗಳ ನಡುವೆ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಡುವ ಸುಳಿವು ಸಿಗುತ್ತಿದೆ.

ಪ್ರಭಾಸ್ ಹುಟ್ಟುಹಬ್ಬಕ್ಕೆ 'ಸಲಾರ್' ಟೀಸರ್ ರಿಲೀಸ್ ಆಗುತ್ತದೆ ಎಂದು ಅಭಿಮಾನಿಗಳು ಕಾದಿದ್ದರು. ಆದರೆ ಯಾವುದೇ ಟೀಸರ್ ಬಂದಿಲ್ಲ. ಕೊನೆ ಪಕ್ಷ ಹೊಸ ಪೋಸ್ಟರ್ ಬರುತ್ತದೆ ಎಂದು ಕಾದವರಿಗೂ ಬೇಸರ ಮೂಡಿದೆ. ಕಾರಣ ಚಿತ್ರತಂಡ ಹೊಸ ಪೋಸ್ಟರ್ ಬಿಟ್ಟಿಲ್ಲ. ಹೀಗಾಗಲೇ ರಿಲೀಸ್ ಆಗಿರುವ ಪೋಸ್ಟರ್‌ಗಳನ್ನೆಲ್ಲಾ ಕೊಲಾಜ್ ಮಾಡಿ ಪೋಸ್ಟರ್ ಬಿಟ್ಟು ಪ್ರಭಾಸ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಈ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

'ಸಲಾರ್' ಸಿನಿಮಾ 2 ಭಾಗಗಳಾಗಿ ಪ್ರೇಕ್ಷಕರ ಮುಂದೆ ಬರಲಿದೆ. ಇನ್ನು ಈ ಸಿನಿಮಾ ಬಳಿಕ ಪ್ರಭಾಸ್ ನಟನೆಯ 'ಕಲ್ಕಿ' ಸಿನಿಮಾ ಮೂಡಿ ಬರಲಿದೆ. ರಾಜಾ ಡೀಲಕ್ಸ್ ಎನ್ನುವ ಮತ್ತೊಂದು ಸಿನಿಮಾದಲ್ಲೂ ಯಂಗ್ ರೆಬಲ್ ಸ್ಟಾರ್ ನಟಿಸುತ್ತಿದ್ದಾರೆ. ಪ್ರಭಾಸ್ ಇದೀಗ ಬರೀ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಿದ್ದಾರೆ. ಸಾವಿರಾರು ಕೋಟಿ ಬಂಡವಳ ಹಾಕಿ ಸಿನಿಮಾಗಳನ್ನು ನಿರ್ಮಿಸಲಾಗುತ್ತಿದೆ.

More from Filmibeat

English summary
prabhas birthday: Fans Built Salaaar Actor's Biggest Cut-Out.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X