'ಸಲಾರ್' ಪ್ರೀ ರಿಲೀಸ್ ಬ್ಯುಸಿನೆಸ್ ಕೇಳಿ ಬೆಚ್ಚಿಬಿದ್ದ ಟಾಲಿವುಡ್: 'KGF- 2' ಮೀರಿಸುತ್ತಾ ಸಿನಿಮಾ ಕಲೆಕ್ಷನ್?
ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಮೇಕಿಂಗ್ ಹಂತದಲ್ಲೇ ಭಾರೀ ಸದ್ದು ಮಾಡ್ತಿದೆ. ಇವರಿಬ್ಬರು ಡೆಡ್ಲಿ ಕಾಂಬಿನೇಷನ್ ಈ ಹಿಂದಿ ಎಲ್ಲಾ ಬಾಕ್ಸಾಫೀಸ್ ದಾಖಲೆ ಮುರಿಯುವ ಸುಳಿವು ಸಿಕ್ತಿದೆ. ಅದಕ್ಕೆ ತಕ್ಕಂತೆ ಹೊಂಬಾಳೆ ಸಂಸ್ಥೆ ಸಿನಿಮಾ ನಿರ್ಮಾಣ ಮಾಡ್ತಿದೆ. ಸಿನಿಮಾ ಓವರ್‌ಸೀಸ್ ರೈಟ್ಸ್ ಭಾರೀ ಮೊತ್ತಕ್ಕೆ ಮಾರಾಟ ಆಗಿದೆ ಎನ್ನಲಾಗ್ತಿದೆ.
'ಸಲಾರ್' ಸಿನಿಮಾ ಈಗಾಗಲೇ 300 ಕೋಟಿ ರೂ. ಬ್ಯುಸಿನೆಸ್ ಮಾಡಿದೆ ಎನ್ನುವ ಟಾಕ್ ಶುರುವಾಗಿದೆ. ಆಂಧ್ರ, ತೆಲಂಗಾಣ ಡಿಸ್ಟ್ರಿಬ್ಯೂಷನ್ ರೈಟ್ಸ್ 150 ಕೋಟಿ ರೂ.ಗೆ ಖ್ಯಾತ ಡಿಸ್ಟ್ರಿಬ್ಯೂಷನ್ ಸಂಸ್ಥೆ ಸ್ವಂತ ಮಾಡಿಕೊಂಡಿದೆ ಎನ್ನಲಾಗ್ತಿದೆ. ಈಗಾಗಲೇ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದ್ದು, ಸಣ್ಣ ಟೀಸರ್ ಬರೋಕು ಮೊದ್ಲೆ ದಾಖಲೆಗಳನ್ನು ಬರೀತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಬಹಳ ಹಿಂದೆಯೇ ರಿಲೀಸ್ ಆಗಬೇಕಿತ್ತು. ಕೊರೊನಾ ಹಾವಳಿಯಿಂದ ಶೂಟಿಂಗ್ ತಡವಾಗಿಯಿತು.

ಬಹುತೇಕ ಸಿನಿಮಾ ಶೂಟಿಂಗ್ ಮುಕ್ತಾಯವಾಗಿದೆ. ಓವರ್‌ಸೀಸ್ ಡಿಸ್ಟ್ರಿಬ್ಯೂಷನ್ ರೈಟ್ಸ್ 75 ಕೋಟಿ ರೂ.ಗೆ ಮಾರಾಟವಾಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇನ್ನು ತಮಿಳುನಾಡು ರೈಟ್ಸ್ 25 ಕೋಟಿ ರೂ.ಗೆ ಬಿಕರಿಯಾಗಿದೆಯಂತೆ. ಹಿಂದಿ ಬೆಲ್ಟ್ ರೈಟ್ಸ್ ಬಗ್ಗೆಯೂ ಚರ್ಚೆ ನಡೀತಿದ್ದು ಅಂದಾಜು 400 ಕೋಟಿ ರೂ.ವರೆಗೂ ಸಿನಿಮಾ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡುವ ಲೆಕ್ಕಾಚಾರ ನಡೀತಿದೆ. 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಜೊತೆಗೆ ಸಿನಿಮಾ ಪ್ರಮೋಷನ್, ರಿಲೀಸ್ ಪ್ಲ್ಯಾನ್ ನಡೀತಿದೆ.
ಪ್ರತಿ ಸೀನ್‌ನ ಕೂಡ ಹೀರೊ ಎಂಟ್ರಿ ಸೀನ್ ರೇಂಜ್‌ಗೆ ಎಲಿವೇಟ್ ಮಾಡಿ ತೋರಿಸೋ ನಿರ್ದೇಶಕ ಪ್ರಶಾಂತ್ ನೀಲ್. ಇಡೀ ಭಾರತೀಯ ಚಿತ್ರರಂಗವೇ ಒಪ್ಪಿಕೊಂಡಿರುವ ಆಕ್ಷನ್ ಹೀರೊ ಪ್ರಭಾಸ್. ಇವರಿಬ್ಬರ ಕಾಂಬಿನೇಷನ್ ಅಂದ್ಮೇಲೆ ಕೇಳ್ಬೇಕಾ? ಈಗಾಗಲೇ 'ಸಲಾರ್' ಸಿನಿಮಾ ಪೋಸ್ಟರ್‌ಗಳಿಂದಲೇ ಭಾರೀ ಸದ್ದು ಮಾಡ್ತಿದೆ. ಇನ್ನು 'KGF' ಸರಣಿ ಹಾಗೂ 'ಕಾಂತಾರ' ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಯಶಸ್ವಿಯಾಗಿ ಕೊಂಡೊಯ್ದು ಗೆದ್ದ ಹೊಂಬಾಳೆ ಸಂಸ್ಥೆ ಈ ಬಾರಿ ಮತ್ತೊಂದು ಗೆಲುವಿನ ನಿರೀಕ್ಷೆಯಿದೆ.
'KGF' ಸರಣಿ ಸಿನಿಮಾಗಳು ಚಿನ್ನದ ಗಣಿ ಹಿನ್ನಲೆಯಲ್ಲಿ ಮೂಡಿ ಬಂದರೆ 'ಸಲಾರ್' ಕಲ್ಲಿದ್ದಲು ಗಣಿಗಳ ಕಥೆ ಇದೆಯಂತೆ. 'KGF' ಸರಣಿಗೆ ಕೆಲಸ ಮಾಡಿದ ಬಹುತೇಕ ತಂಡ ಈ ಚಿತ್ರಕ್ಕೂ ಕೆಲಸ ಮಾಡ್ತಿದೆ. ರವಿಬಸ್ರೂರು ಮ್ಯೂಸಿಕ್, ಭುವನ್ ಗೌಡ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ಈಗ ಪ್ಯಾನ್ ಇಂಡಿಯಾ ಸಿನಿಮಾಗಳು 1000 ಕೋಟಿ ರೂ. ಕಲೆಕ್ಷನ್ ಮಾಡೋದು ಕಷ್ಟ ಏನಲ್ಲ. ಇತ್ತೀಚೆಗೆ ಬಂದ 'ಪಠಾಣ್' ಸಿನಿಮಾ ಒಂದೇ ಭಾಷೆಯಲ್ಲಿ ಈ ಸಾಧನೆ ಮಾಡಿತ್ತು.

ಪ್ರಭಾಸ್‌ಗೆ ದೇಶಾದ್ಯಂತ ದೊಡ್ಡ ಅಭಿಮಾನಿ ಬಳಗ ಇದೆ. ಹಿಂದಿ ಬೆಲ್ಟ್‌ನಲ್ಲೂ ಯಂಗ್ ರೆಬಲ್ ಸ್ಟಾರ್ ಸಿನಿಮಾಗಳು ಸದ್ದು ಮಾಡುತ್ತವೆ. ಸೌತ್‌ನಲ್ಲಿ ಮುಗ್ಗರಿಸಿದ 'ಸಾಹೋ' ಸಿನಿಮಾ ಹಿಂದಿ ಬೆಲ್ಟ್‌ನಲ್ಲಿ ಗೆದ್ದಿತ್ತು. ಅಂದ್ರೆ ಪ್ರಭಾಸ್‌ಗೆ ಇರುವ ಕ್ರೇಜ್ ಅದು. ಇನ್ನು ಪ್ರಶಾಂತ್ ನೀಲ್ ಸಿನಿಮಾ ಅಂದ್ಮೇಲೆ ಸಹಜವಾಗಿಯೇ ನಿರೀಕ್ಷೆ ಎವರೆಸ್ಟ್ ಎತ್ತರಕ್ಕೆ ಏರುತ್ತದೆ. 'ಸಲಾರ್' ಯಶ್ ನಟನೆಯ 'KGF- 2' ಕಲೆಕ್ಷನ್ ದಾಖಲೆ ಮುರಿದರೂ ಅಚ್ಚರಿಪಡಬೇಕಿಲ್ಲ.
'ಸಲಾರ್' ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸ್ತಿದ್ದು ಈಗಾಗಲೇ ಆಕೆಯ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಜಗಪತಿ ಬಾಬು, ಪೃಥ್ವಿರಾಜ್ ಸುಕುಮಾರನ್, ಕನ್ನಡ ನಟರಾದ ಮಧು ಗುರುಸ್ವಾಮಿ ಹಾಗೂ ಪ್ರಮೋದ್ ತಾರಾಗಣದಲ್ಲಿದ್ದಾರೆ. ಅಂದಾಜು 200 ಕೋಟಿ ರೂ. ಬಜೆಟ್‌ನಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬರ್ತಿದೆ. ಥ್ರಿಯೇಟ್ರಿಕಲ್ ರೈಟ್ಸ್ ಮಾತ್ರವಲ್ಲದೇ ಆಡಿಯೋ ರೈಟ್ಸ್, ಓಟಿಟಿ ರೈಟ್ಸ್, ಸ್ಯಾಟಲೈಟ್ ರೈಟ್ಸ್ ಅಂತೆಲ್ಲಾ ಭಾರೀ ಬ್ಯುಸಿನೆಸ್ ನಡೆಯಲಿದೆ.


Click it and Unblock the Notifications











