For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಹೇರ್‌ಸ್ಟೈಲ್‌ಗಾಗಿ ದೊಡ್ಡ ಮೊತ್ತ ಖರ್ಚು ಮಾಡಿಸುತ್ತಿದ್ದಾರೆ ಪ್ರಶಾಂತ್ ನೀಲ್

  |

  ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾದಲ್ಲಿ ನಟ ಪ್ರಭಾಸ್ ನಟಿಸುತ್ತಿರುವುದು ಗೊತ್ತಿರುವ ಸಂಗತಿಯೇ. 'ಸಲಾರ್' ಸಿನಿಮಾವು ಪ್ರಶಾಂತ್ ನಿರ್ದೇಶಿಸಿದ್ದ 'ಉಗ್ರಂ' ಸಿನಿಮಾದ ರೀಮೇಕ್ ಎನ್ನಲಾಗಿತ್ತು. ನಂತರ 'ಸಲಾರ್' ಸ್ವಮೇಕ್ ಎಂಬುದನ್ನು ಸ್ವತಃ ಪ್ರಶಾಂತ್ ನೀಲ್ ಖಾತ್ರಿಪಡಿಸಿದರು.

  ಪ್ರಭಾಸ್ ಹೇರ್ ಸ್ಟೈಲ್ ಗೆ ಲಕ್ಷ ಗಟ್ಟಲೆ ಖರ್ಚು ಮಾಡಿದ| Filmibeat Kannada

  ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ಹಲವು ಆಕರ್ಷಣೆಗಳನ್ನು ಒಳಗೊಂಡಿರಲಿದೆ. ಕತೆಯೂ ಸಹ ಸಾಕಷ್ಟು ಭಿನ್ನವಾಗಿರಲಿದೆ. 'ಸಲಾರ್' ಸಿನಿಮಾದಲ್ಲಿ ಪ್ರಭಾಸ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  ಇದೇ ಮೊದಲ ಬಾರಿಗೆ ಪ್ರಭಾಸ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದು, ಎರಡು ಭಿನ್ನರೀತಿಯ ಪಾತ್ರಗಳಿಗಾಗಿ ಭಿನ್ನ ಮಾದರಿ ಗೆಟಪ್, ಹೇರ್‌ಸ್ಟೈಲ್, ಸಂಭಾಷಣೆ ಹೇಳುವ ವಿಧಾನ ಇನ್ನಿತರೆ ವಿಷಯಗಳ ಬಗ್ಗೆ ಗಮನ ವಹಿಸಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. ಅದರಲ್ಲೂ ಪ್ರಭಾಸ್ ಹೇರ್‌ಸ್ಟೈಲ್‌ಗಾಗಿ ಲಕ್ಷಾಂತರ ಹಣ ಖರ್ಚು ಮಾಡಲಾಗಿದೆಯಂತೆ.

  ಪ್ರಭಾಸ್ ನಟಿಸುತ್ತಿರುವ ಎರಡು ಭಿನ್ನ ಪಾತ್ರಗಳಿಗೆ ಎರಡು ಮಾದರಿಯ ಹೇರ್‌ಸ್ಟೈಲ್ ಇರಲಿದ್ದು, ಪ್ರಭಾಸ್‌ರ ಎರಡು ಪಾತ್ರಗಳನ್ನು ಪ್ರತ್ಯೇಕಗೊಳಿಸುವಲ್ಲಿ ಹೇರ್‌ಸ್ಟೈಲ್‌ ಮಹತ್ವದ ಪಾತ್ರ ನಿರ್ವಹಿಸಲಿದೆ ಹಾಗಾಗಿಯೇ ಪ್ರಭಾಸ್‌ರ ಹೇರ್‌ಸ್ಟೈಲ್‌ ಬಗ್ಗೆ ಪ್ರಶಾಂತ್ ನೀಲ್ ವಿಶೇಷ ಕಾಳಜಿವಹಿಸಿದ್ದಾರೆ.

  ಪ್ರಭಾಸ್‌ರ ಹೇರ್‌ಸ್ಟೈಲ್‌ಗೆ ಮಾತ್ರವೇ ನಾಲ್ಕು ಲಕ್ಷಕ್ಕೂ ಹೆಚ್ಚಿನ ಹಣವನ್ನು ಖರ್ಚು ಮಾಡಲಾಗಿದೆ. ಪ್ರಖ್ಯಾತ ಹೇರ್‌ಸ್ಟೈಲಿಸ್ಟ್‌ ಇಂದ ಪ್ರಭಾಸ್‌ರ ಎರಡು ಪಾತ್ರಗಳಿಗೆ ಎರಡು ಭಿನ್ನ ಮಾದರಿಯ ಹೇರ್‌ಸ್ಟೈಲ್ ಮಾಡಿಸಿದ್ದಾರೆ ಪ್ರಶಾಂತ್ ನೀಲ್. ಹಲವು ಹೇರ್‌ಸ್ಟೈಲ್‌ಗಳನ್ನು ಪ್ರಯೋಗಿಸಿದ ಬಳಿಕ ಅಂತಿಮವಾದುದ್ದನ್ನು ಆಯ್ಕೆ ಮಾಡಿದ್ದಾರೆ ಪ್ರಶಾಂತ್.

  'ಸಲಾರ್' ಸಿನಿಮಾವನ್ನು ದೊಡ್ಡ ಮಟ್ಟದಲ್ಲಿಯೇ ನಿರ್ಮಾಣ ಮಾಡಲಾಗುತ್ತಿದ್ದು, ಭಾರಿ ದುಬಾರಿ ಸೆಟ್‌ಗಳನ್ನು ಹಾಕಿ ಫೈಟ್‌ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಸಿನಿಮಾದ ನಾಯಕಿ ಶ್ರುತಿ ಹಾಸನ್ ಹಾಗೂ ಪ್ರಭಾಸ್ ನಡುವಿನ ಫೈಟ್ ಸಿನಿಮಾದ ಪ್ರಮುಖ ಅಂಶಗಳಲ್ಲಿ ಒಂದು.

  English summary
  Salaar movie producer spending whooping amount on Prabhas's hairstyle. Prabhas doing double role in the movie both characters will have different hairstyle.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X