ಮಧ್ಯ ರಾತ್ರಿಯಿಂದಲೇ ಥಿಯೇಟರ್‌ಗಳಲ್ಲಿ 'ಸಲಾರ್' ಆರ್ಭಟ: ಪೊಲೀಸರ ಲಾಠಿ ಚಾರ್ಚ್

ಪ್ರಭಾಸ್ ನಟನೆಯ 'ಸಲಾರ್' ವಿಶ್ವದಾದ್ಯಂತ ತೆರೆಗಪ್ಪಳಿಸಿದೆ. ಬೆಂಗಳೂರು, ಹೈದರಾಬಾದ್ ಸೇರಿದಂತೆ ಕೆಲವಡೆ ಮಧ್ಯರಾತ್ರಿಯಿಂದಲೇ ಸಿನಿಮಾ ಪ್ರದರ್ಶನ ಶುರುವಾಯಿತು. ಫ್ಯಾನ್ಸ್ ಶೋಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಪೊಲೀಸರ ಲಾಠಿ ಏಟು ತಿಂದು ಅಭಿಮಾನಿಗಳು ಸಿನಿಮಾ ನೋಡಿದ ಘಟನೆಯೂ ನಡೆದಿದೆ.

ಬೆಂಗಳೂರಿನ ಮಡಿವಾಳದ ಸಂಧ್ಯಾ ಚಿತ್ರಮಂದಿರದಲ್ಲಿ ಮಧ್ಯರಾತ್ರಿ 'ಸಲಾರ್' ಅಬ್ಬರ ಶುರುವಾಯಿತು. ಅತ್ತ ಹೈದರಾಬಾದ್‌ನ ಹಲವು ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ಮಧ್ಯರಾತ್ರಿಯೇ ಪ್ರಭಾಸ್ ದರ್ಬಾರ್ ನೋಡಿ ಫಿದಾ ಆಗಿದ್ದಾರೆ. ದೊಡ್ಡಮಟ್ಟದಲ್ಲಿ ಅಭಿಮಾನಿಗಳು ಸಿನಿಮಾ ನೋಡಲು ಮುಗಿಬಿದ್ದರು. 'ಸಲಾರ್‌' ಹಲವು ಕಾರಣಗಳಿಂದ ಭಾರೀ ನಿರೀಕ್ಷೆ ಹುಟ್ಟಾಕ್ಕಿತ್ತು. ಸತತ ಸೋಲುಗಳಿಂದ ಪ್ರಭಾಸ್ ಕಂಗೆಟ್ಟಿದ್ದರು. ಪ್ರಶಾಂತ್ ನೀಲ್ ಈ ಬಾರಿ ಪ್ರಭಾಸ್ ಜೊತೆ ಕೈ ಜೋಡಿಸಿದ್ದು ಕುತೂಹಲ ಹೆಚ್ಚಿಸಿತ್ತು. ಡಾರ್ಲಿಂಗ್ ಅಭಿಮಾನಿಗಳು ಸಿನಿಮಾ ನೋಡಲು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದರು.

Salaar Release: Police Lathi Charge Prabhas Fans Outside hyderabad sandhya theatre

ಹೈದರಾಬಾದ್‌ನಲ್ಲಿ ಮಧ್ಯರಾತ್ರಿಯೇ ಸಿನಿಮಾ ನೋಡಲು ಅಭಿಮಾನಿಗಳು ಥಿಯೇಟರ್‌ಗಳ ಮುಂದೆ ಜಮಾಯಿಸಿದರು. ಅಭಿಮಾನಿಗಳ ಸಂಭ್ರಮ, ಆರ್ಭಟ, ಹಂಗಾಮ ಜೋರಾಗಿತ್ತು. ಹೈದರಾಬಾದ್‌ ಆರ್‌ಟಿ ಕ್ರಾಸ್‌ ರೋಡ್ಸ್‌ನಲ್ಲಿರುವ ಸಂಧ್ಯಾ ಥಿಯೇಟರ್‌ನಲ್ಲಿ ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲು ಲಾಠಿ ಚಾರ್ಜ್ ಮಾಡಿದ್ದಾರೆ. ಈ ಘಟನೆಯಲ್ಲಿ ಅಭಿಮಾನಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ದೊಡ್ಡಮಟ್ಟದಲ್ಲಿ ಅಭಿಮಾನಿಗಳು ಬಂದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ನಿಯಂತ್ರಿಸುವ ಪ್ರಯತ್ನ ಮಾಡಿದ್ದಾರೆ. ಸಾಧ್ಯವಾಗದೇ ಇದ್ದಾರೆ ಲಾಠಿ ರುಚಿ ತೋರಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹೈದ್ರಾಬಾದ್‌ನಲ್ಲಿ ಮಧ್ಯರಾತ್ರಿ 1.00 ಗಂಟೆ ವೇಳೆಗೆ ಸಾಕಷ್ಟು ಬೆನಿಫಿಟ್‌ ಶೋಗಳು ನಡೀತು. ರಾಜಧಾನಿ (ದಿಲ್ ಸುಖ್ ನಗರ), ನೆಕ್ಸಸ್ ಮಾಲ್ (ಕೂಕಟ್ ಪಲ್ಲಿ), ಎಂಬಿ ಮಾಲ್, ಭ್ರಮರಾಂಬ (ಕೂಕಟ್ ಪಲ್ಲಿ), 3. ವಿಶ್ವನಾಥ್ (ಕೂಕಟ್ ಪಲ್ಲಿ), ಅರ್ಜುನ್ (ಕೂಕಟ್ ಪಲ್ಲಿ), ಗೋಕುಲ್ (ಎರಗಡ್ಡ), ಶ್ರೀ ರಾಮುಲು (ಮೂಸಾಪೇಟ್), ಸಂಧ್ಯಾ 35 ಎಮ್‌ಎಮ್, ಮಲ್ಲಿಕಾರ್ಜುನ (ಕೂಕಟ್ ಪಲ್ಲಿ), ಸಾಯಿ ರಾಮ್ (ಮಲ್ಕಾಜ್ಗಿರಿ) ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಶೋಗಳನ್ನು ಆಯೋಜಿಸಲಾಗಿತ್ತು.

ಈ ಬಾರಿ ತೆಲಂಗಾಣದಲ್ಲಿ ಟಿಕೆಟ್ ದರ ಹೆಚ್ಚಿಸಲು ಕೂಡ ಸರ್ಕಾರ ಅನುಮತಿ ನೀಡಿತ್ತು. ಇನ್ನು ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಥಿಯೇಟರ್‌ಗಳ ಮುಂದೆ ಜಮಾಯಿಸಿ ನೆಚ್ಚಿನ ನಟನಿಗೆ ಜೈಕಾರ ಹಾಕಿದರು. ಕಟೌಟ್‌ಗಳನ್ನು ನಿಲ್ಲಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಒಟ್ನಲ್ಲಿ 'ಸಲಾರ್' ಸಂಭ್ರಮದ ಸಾಗರದಲ್ಲಿ ಮುಳುಗೆದ್ದರು.

ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ 5 ಗಂಟೆಗೆ ಹಲವೆಡೆ 'ಸಲಾರ್' ಸಿನಿಮಾ ಪ್ರದರ್ಶನ ಆರಂಭವಾಯಿತು. ವಾರಕ್ಕೂ ಮೊದ್ಲೆ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿತ್ತು. ಕನ್ನಡಕ್ಕೂ ಸಿನಿಮಾ ಡಬ್ ಆಗಿ ರಿಲೀಸ್ ಆಗಿದೆ. ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ಕನ್ನಡ ವರ್ಷನ್‌ಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಒರಾಯನ್ ಮಾಲ್‌ನಲ್ಲಿ ಕೂಡ ಕನ್ನಡ ಶೋಗಳು ಸಿಕ್ಕಿತ್ತು.

ಅಡ್ವಾನ್ಸ್ ಬುಕ್ಕಿಂಗ್‌ನಿಂದಲೇ 'ಸಲಾರ್' ಸಿನಿಮಾ ಕರ್ನಾಟಕದಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಬೆಳಗ್ಗೆ 5 ಗಂಟೆಯ ಬಹುತೇಕ ಶೋಗಳು ಹೌಸ್‌ಫುಲ್ ಆಗಿತ್ತು. ಕೆಲವೆಡೆ ಟಿಕೆಟ್ ದರ ಹೆಚ್ಚಿಸಿದ್ದು ಕೂಡ ಕಂಡುಬಂತು. ಮೊದಲಿನಿಂದಲೂ 'ಸಲಾರ್' ಕನ್ನಡದ 'ಉಗ್ರಂ' ಸಿನಿಮಾ ರೀಮೆಕ್ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೂ ಕೂಡ ಪ್ರೇಕ್ಷಕರು ಸಿನಿಮಾ ನೋಡಲು ತುದಿಗಾಲಿನಲ್ಲಿ ನಿಂತಿದ್ದರು. ಅದಕ್ಕೆ ತಕ್ಕಂತೆ ಬುಕ್ಕಿಂಗ್, ಓಪನಿಂಗ್ ಸಿಕ್ಕಿದೆ.

ಪ್ರಶಾಂತ್ ನೀಲ್ ನಿರ್ದೇಶನದ 4ನೇ ಸಿನಿಮಾ 'ಸಲಾರ್'. ಎರಡು ಭಾಗಗಳಾಗಿ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಮಾಸ್ ಪ್ರೇಕ್ಷಕರಿಗೆ ಸಿನಿಮಾ ಭರ್ಜರಿ ಮನರಂಜನೆ ಒದಗಿಸಿದೆ. ಪಕ್ಕಾ ಪೈಸಾ ವಸೂಲ್ ಸಿನಿಮಾ ಎನಿಸಿಕೊಂಡಿದೆ. ಮೊದಲ ದಿನವೇ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ.

More from Filmibeat

English summary
Salaar: Police resort to lathi-charge to control prabhas fans
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X