100 ಎಕರೆ ಜಾಗದಲ್ಲಿ ಸೆಟ್.. 'KGF'ಗಿಂತಲೂ 5 ಪಟ್ಟು ದೊಡ್ಡದು 'ಸಲಾರ್' ಎಂದ ಭುವನ್ ಗೌಡ

ಪ್ರಶಾಂತ್ ನೀಲ್ ನಿರ್ದೇಶನದ ' ಸಲಾರ್' ಸಿನಿಮಾ ಬಹಳ ಅದ್ಧೂರಿಯಾಗಿ ನಿರ್ಮಾಣವಾಗಿದೆ. ಬಹುಕೋಟಿ ವೆಚ್ಚದಲ್ಲಿ ಈ ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ನಿರ್ಮಾಣವಾಗಿದೆ. ಟ್ರೈಲರ್ ನೋಡಿದಾಗಲೇ ಇದು ದೊಡ್ಡ ಸ್ಕೇಲ್ ಸಿನಿಮಾ ಅನ್ನೊದು ಗೊತ್ತಾಗಿತ್ತು. ಇಬ್ಬರು ಸ್ನೇಹಿತರ ಕಥೆಯನ್ನು ಊಹೆಗೂ ನಿಲುಕದ ರೀತಿಯಲ್ಲಿ ಕಟ್ಟಿಕೊಡುವ ಪ್ರಯತ್ನ ನಡೆದಿದೆ.

ದೇವ ಪ್ರಭಾಸ್ ಸ್ನೇಹಿತ ವರದರಾಜ ಮನ್ನಾರ್ ಪಾತ್ರದಲ್ಲಿ ಪೃಥ್ವಿರಾಜ್ ಸುಕುಮಾರ್ ಮಿಂಚಿದ್ದಾರೆ. ಖಾನ್ಸರ್‌ ಸಾಮ್ರಾಜ್ಯದ ಅಧಿಪತ್ಯಕ್ಕಾಗಿ ಭಾರೀ ಹೋರಾಟಗಳೇ ನಡೆಯಲಿದೆ. ರಾಜಮನ್ನಾರ್ ಬಳಿಕ ಖಾನ್ಸರ್‌ ಅಧಿಕಾರ ಮಗ ವರದರಾಜ ಮನ್ನಾರ್‌ಗೆ ಸಿಗಬೇಕು. ಅದಕ್ಕಾಗಿ ದೇವ ಆತನ ಬೆಂಬಲಕ್ಕೆ ನಿಲ್ಲಲಿದ್ದಾನೆ. ಇಷ್ಟು ಆತ್ಮೀಯರಾಗಿರುವ ಸ್ನೇಹಿತರು ಆಜನ್ಮ ಶತ್ರುಗಳಾಗುವುದು ಯಾಕೆ? ಅನ್ನೋದೇ ಬಹಳ ಕುತೂಹಲ ಮೂಡಿಸಿದೆ.

Salaar scale is 5 times that of KGF says cinematographer bhuvan gowda

ಹೊಂಬಾಳೆ ಸಂಸ್ಥೆ 200 ಕೋಟಿ ರೂ. ಬಜೆಟ್‌ನಲ್ಲಿ 'ಸಲಾರ್' ಸಿನಿಮಾ ನಿರ್ಮಿಸಿದೆ. 'KGF' ಮಾದರಿಯಲ್ಲೇ ಅದ್ಧೂರಿ ಸೆಟ್‌ಗಳು ಚಿತ್ರದಲ್ಲಿದೆ. ಹಾಗಂತ 'KGF' ಸಿನಿಮಾ ಸೆರೆಹಿಡಿದ ಕೋಲಾರದ ಗಣಿಯಲ್ಲಿ 'ಸಲಾರ್' ಚಿತ್ರೀಕರಣ ನಡೆದಿಲ್ಲ. ಚಿತ್ರಕ್ಕಾಗಿ ಹೊಸ ಪ್ರಪಂಚವನ್ನು ನೀಲ್ ಅಂಡ್ ಟೀಂ ಸೃಷ್ಟಿಸಿದೆ. ಅದಕ್ಕೆ ಆರ್ಟ್ ಡೈರೆಕ್ಟರ್ ಶಿವಕುಮಾರ್ ಸಾಥ್ ಸಿಕ್ಕಿದೆ.

ಇನ್ನು 'KGF' ಚಿತ್ರವನ್ನು ಸೆರೆ ಹಿಡಿದ ಭುವನ್ ಗೌಡ 'ಸಲಾರ್' ಆರ್ಭಟಕ್ಕೂ ಕ್ಯಾಮರಾ ಕಣ್ಣಾಗಿದ್ದಾರೆ. ಸಂದರ್ಶನವೊಂದರಲ್ಲಿ 'ಸಲಾರ್' ಸಿನಿಮಾ ಮೇಕಿಂಗ್ ಅನುಭವವನ್ನು ಭುವನ್ ಗೌಡ ಬಿಚ್ಚಿಟ್ಟಿದ್ದಾರೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರದ ಬಹುತೇಕ ಚಿತ್ರೀಕರಣ ನಡೆದಿದೆ. 'KGF' ಚಿತ್ರಕ್ಕಿಂತ ತಾಂತ್ರಿಕವಾಗಿ ಸ್ಕೇಲ್ ವಿಚಾರದಲ್ಲಿ 5 ಪಟ್ಟು ದೊಡ್ಡ ಸಿನಿಮಾ ಎಂದಿದ್ದಾರೆ.

"ಸಲಾರ್ ಚಿತ್ರೀಕರಣಕ್ಕಾಗಿ ರಾಮೋಜಿರಾವ್ ಒಳಗೆ ಮತ್ತೊಂದು ರಾಮೋಜಿರಾವ್ ಫಿಲ್ಮ್ ಸಿಟಿ ನಿರ್ಮಾಣ ಮಾಡಿದಂತಿತ್ತು. ಕಲಾ ನಿರ್ದೇಶಕ ಶಿವಕುಮಾರ್ ಮತ್ತವರ ತಂಡ ಬರೋಬ್ಬರಿ 100 ಎಕರೆ ಜಾಗದಲ್ಲಿ ಬಳಸಿ ಭಾರಿ ದೊಡ್ಡ-ದೊಡ್ಡ ಸೆಟ್ ನಿರ್ಮಾಣ ಮಾಡಿದ್ದರಂತೆ. ದಂಡುಮೈಲಾರಂ ಎನ್ನುವ ಸ್ಥಳದಲ್ಲಿ ಸೆಟ್ ಸುತ್ತಾ ಅರ್ಥ ಕಿಲೋಮೀಟರ್ ಉದ್ದದ ತಾತ್ಕಾಲಿಕ ಗೋಡೆ ನಿರ್ಮಿಸಲಾಗಿತ್ತು. ತಾಂತ್ರಿಕವಾಗಿ ಮತ್ತೊಂದು ಹಂತಕ್ಕೆ ಚಿತ್ರವನ್ನು ಕೊಂಡೊಯ್ಯಲಾಗಿದೆ. ಭಾರತೀಯ ಸಿನಿಮಾ ಇತಿಹಾಸದಲ್ಲೇ ಇದು ಅತಿ ದೊಡ್ಡ ಸೆಟ್" ಎಂದಿದ್ದಾರೆ.

Salaar scale is 5 times that of KGF says cinematographer bhuvan gowda

"ಅಲೆಕ್ಸಾ 39 ಎನ್ನುವ ಅತ್ಯಾಧುನಿಕ ಕ್ಯಾಮೆರಾದಲ್ಲಿ ಸಿನಿಮಾ ಚಿತ್ರೀಕರಣ ಮಾಡಿದ್ದೇವೆ. ಈ ಕ್ಯಾಮೆರಾದ ದೃಶ್ಯಗಳು ಐಮ್ಯಾಕ್ಸ್ ಗುಣಮಟ್ಟದಲ್ಲಿತ್ತದೆ. KGFಗೆ ಹೋಲಿಸಿದರೆ ಇದು ಐದು ಪಟ್ಟು ದೊಡ್ಡ ಸಿನಿಮಾ ಎಂದಿರುವ ಭುವನ್ ಗೌಡ ಬಹುತೇಕ ಚಿತ್ರೀಕರಣ ಸೆಟ್‌ಗಳಲ್ಲೇ ನಡೆದಿದೆ. ಶೇಕಡಾ 5ರಷ್ಟು ಮಾತ್ರ ಗ್ರಾಫಿಕ್ಸ್ ಬಳಸಲಾಗಿದೆ. ಹಾಗಾಗಿ ಸಿನಿಮಾ ಬಹಳ ರಿಯಲಿಸ್ಟಿಕ್ ಆಗಿ ಬಂದಿದೆ" ಎಂದಿದ್ದಾರೆ.

'ಉಗ್ರಂ' ಚಿತ್ರದಲ್ಲಿ ಭುವನ್ ಗೌಡ ಮೊದಲ ಬಾರಿಗೆ ಛಾಯಾಗ್ರಹಕರಾಗಿ ಕೆಲಸ ಮಾಡಿದ್ದರು. ಬಳಿಕ 'ರಥಾವರ' ಹಾಗೂ 'ಪುಷ್ಪಕ ವಿಮಾನ' ಸಿನಿಮಾಗಳನ್ನು ಸೆರೆ ಹಿಡಿದರು. ಅದರ ಬೆನ್ನಲ್ಲೇ 'KGF' ಸರಣಿ ಸಿನಿಮಾಗಳನ್ನು ಚಿತ್ರೀಕರಿಸುವ ಅವಕಾಶ ಸಿಕ್ಕಿತ್ತು. ಚಿತ್ರದಲ್ಲಿ ಭುವನ್ ಛಾಯಾಗ್ರಹಣದ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿತ್ತು. ಬಳಿಕ 'ಸಲಾರ್' ತಂಡ ಸೇರಿದ್ದರು.

'KGF' ಚಿತ್ರಕ್ಕೆ ಕೆಲಸ ಮಾಡಿದ್ದ ಪ್ರಶಾಂತ್ ನೀಲ್, ರವಿ ಬಸ್ರೂರು, ಭುವನ್ ಗೌಡ ಹಾಗೂ ಶಿವಕುಮಾರ್ 'ಸಲಾರ್' ಚಿತ್ರಕ್ಕೂ ಆಧಾರ ಸ್ತಂಭಗಳಾಗಿದ್ದಾರೆ. ಡಿಸೆಂಬರ್ 22ಕ್ಕೆ 'ಸಲಾರ್' ಸಿನಿಮಾ ತೆರೆಗೆ ಬರಲಿದೆ. ಈಗಾಗಲೇ ಟೀಸರ್, ಟ್ರೈಲರ್, ಸಾಂಗ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಶೀಘ್ರದಲ್ಲೇ ಸಿನಿಮಾ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಲಿದೆ. ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ತಯಾರಿ ನಡೀತಿದೆ.

More from Filmibeat

English summary
cinematographer bhuvan gowda about Salaar scale, sets and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X