ವೇಗದ 100 ಮಿಲಿಯನ್ ವ್ಯೂಸ್ ಪಡೆದ ಟೀಸರ್‌ಗಳು; ಕೆಜಿಎಫ್ ಚಾಪ್ಟರ್ 2 ಮೀರಿಸಿದ ಸಲಾರ್!
ಜುಲೈ 6ರ ಮುಂಜಾನೆ 5.12ಕ್ಕೆ ಸರಿಯಾಗಿ ಭಾರತದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಸಲಾರ್ ಚಿತ್ರದ ಟೀಸರ್ ಬಿಡುಗಡೆಗೊಂಡಿತು. ಬಾಹುಬಲಿ ಸರಣಿ ಬಳಿಕ ನಟಿಸಿದ ಸಾಹೋ, ರಾಧೆ ಶ್ಯಾಮ್ ಹಾಗೂ ಆದಿಪುರುಷ್ ಚಿತ್ರಗಳಲ್ಲಿ ಸತತವಾಗಿ ಸೋತು ಹಿನ್ನಡೆ ಅನುಭವಿಸಿರುವ ಪ್ರಭಾಸ್‌ಗೆ ಸಲಾರ್ ಕೈಹಿಡಿಯಲಿದೆ ಎಂಬ ನಿರೀಕ್ಷೆ ಎಲ್ಲರಲ್ಲಿಯೂ ಇದೆ.
ಇನ್ನು ಸಲಾರ್ ಚಿತ್ರ ಇದೇ ಸೆಪ್ಟೆಂಬರ್ 28ರಂದು ತೆರೆಗೆ ಅಪ್ಪಳಿಸಿದ್ದು, ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ. ಹೀಗೆ ಬಿಡುಗಡೆಗೆ ದಿನಗಣನೆ ಆರಂಭಗೊಳ್ಳುತ್ತಿದ್ದಂತೆಯೇ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಲು ಸಲಾರ್ ಚಿತ್ರತಂಡ ಟೀಸರ್ ಬಿಡುಗಡೆಗೊಳಿಸಿತು.

ಟೀಸರ್ ಬಿಡುಗಡೆಯಾದ ಬಳಿಕ ಪ್ರಭಾಸ್ ಅಭಿಮಾನಿಗಳು ಹಾಗೂ ಸಿನಿ ರಸಿಕರು ಟೀಸರ್ ಮೆಚ್ಚಿಕೊಂಡರೆ, ಇನ್ನೂ ಕೆಲ ಸಿನಿ ರಸಿಕರು ಚಿತ್ರದ ಟೀಸರ್ ನಿರೀಕ್ಷಿಸಿದ ಮಟ್ಟಕ್ಕೆ ಇಲ್ಲ, ಕೆಜಿಎಫ್ ಡಿಲೀಟೆಡ್ ಸೀನ್‌ಗಳನ್ನು ಬಳಸಿ ಮಾಡಿದಂತಿದೆ, ಉಗ್ರಂ ಚಿತ್ರದ ರಿಮೇಕ್ ಎಂದೆಲ್ಲಾ ಕಾಮೆಂಟ್ ಮಾಡಿದರು.
ಇನ್ನು ಹೀಗೆ ಟೀಸರ್ ಬಗ್ಗೆ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಮತ್ತೊಂದಷ್ಟು ಸಿನಿ ರಸಿಕರು ಟೀಸರ್ ಬಗ್ಗೆ ತಮ್ಮಲ್ಲಿನ ಬೇಸರವನ್ನು ಹೊರಹಾಕಿದ್ದಾರೆ. ಈ ಪೈಕಿ ಅನೇಕರು ಬೇಸರ ಹೊರಹಾಕಿರುವುದು ಸಲಾರ್ ಟೀಸರ್‌ನಲ್ಲಿನ ಗಣಿ ದೃಶ್ಯಗಳ ಬಗ್ಗೆ. ಈ ದೃಶ್ಯಗಳ ಬಗ್ಗೆ ಕಾಮೆಂಟ್ ಬರೆದುಕೊಂಡಿರುವ ಕೆಲ ಸಿನಿ ರಸಿಕರು ಈ ದೃಶ್ಯಗಳು ಕೆಜಿಎಫ್ ಚಿತ್ರದ ಡಿಲೀಟೆಡ್ ಸೀನ್‌ಗಳ ಹಾಗೆ ಇವೆ, ಪ್ರಶಾಂತ್ ನೀಲ್ ಅಲ್ಲಿ ಬಳಸದ ದೃಶ್ಯಗಳನ್ನು ಇಲ್ಲಿ ಬಳಸಿದ್ದಾರೆ ಎಂದು ಕಾಲೆಳೆದಿದ್ದರು.
ಹೀಗೆ ಸಲಾರ್ ಹಾಗೂ ಕೆಜಿಎಫ್ ಚಿತ್ರಗಳ ದೃಶ್ಯಗಳ ನಡುವೆ ಹೋಲಿಕೆ ಶುರುವಾಗಿದ್ದು, ಈ ಎರಡೂ ಚಿತ್ರಗಳಿಗೆ ಲಿಂಕ್ ಇದೆ ಎಂಬ ಕಾಮೆಂಟ್‌ಗಳೂ ಸಹ ವ್ಯಕ್ತವಾಗಿವೆ. ಇನ್ನು ಈ ಚಿತ್ರಗಳ ನಡುವಿನ ದಾಖಲೆಗಳ ನಡುವೆ ಸಹ ಹೋಲಿಕೆಗಳು ಶುರುವಾಗಿವೆ. ಸಲಾರ್ ಚಿತ್ರದ ಟೀಸರ್ ಮುಂಜಾನೆ ಬಿಡುಗಡೆಯಾಗಲಿದೆ ಎಂಬ ವಿಷಯ ತಿಳಿದ ಕೂಡಲೇ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ದಾಖಲೆಯನ್ನು ಮುರಿಯುವುದು ಬಲು ಕಷ್ಟ ಎಂದಿದ್ದರು.
ಆದರೆ ಸಲಾರ್ ಬಿಡುಗಡೆಯಾದ 24 ಗಂಟೆಗಳಲ್ಲಿ 83 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿತು. ಕೆಜಿಎಫ್ ಚಾಪ್ಟರ್ 2 ಟೀಸರ್ 24 ಗಂಟೆಗಳಲ್ಲಿ 68.83 ಮಿಲಿಯನ್ ವ್ಯೂಸ್ ಪಡೆದುಕೊಂಡಿತ್ತು. ಹೀಗೆ ಕೆಜಿಎಫ್ ಚಾಪ್ಟರ್ 2 ಟೀಸರ್‌ಗಿಂತ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿರುವ ಸಲಾರ್ ಟೀಸರ್ ಅತಿ ವೇಗವಾಗಿಯೂ ನೂರು ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡ ಟೀಸರ್ ಎಂಬ ದಾಖಲೆ ಬರೆದುಕೊಂಡಿದೆ.
ಸಲಾರ್ ನೂರ ಮಿಲಿಯನ್ ವೀಕ್ಷಣೆಗಳನ್ನು 43 ಗಂಟೆಗಳಲ್ಲಿ ಪಡೆದುಕೊಂಡರೆ, ಕೆಜಿಎಫ್ ಚಾಪ್ಟರ್ 2 ನೂರು ಮಿಲಿಯನ್ ವೀಕ್ಷಣೆಗಳನ್ನು 48 ಗಂಟೆಗಳಲ್ಲಿ ಪಡೆದುಕೊಂಡಿತ್ತು. ಈ ಮೂಲಕ ಸಲಾರ್ ಟೀಸರ್ ಕೆಜಿಎಫ್ ಚಾಪ್ಟರ್ 2 ಟೀಸರ್‌ಗಿಂತ ವೇಗವಾಗಿ ನೂರು ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಇನ್ನು ವ್ಯೂಸ್ ವಿಚಾರದಲ್ಲಿ ದಾಖಲೆ ಬರೆದಿರುವ ಸಲಾರ್ ಲೈಕ್ಸ್ ವಿಚಾರದಲ್ಲಿ ಕೆಜಿಎಫ್ ಚಾಪ್ಟರ್ 2ಗಿಂತ ಹಿಂದೆ ಉಳಿದಿದೆ. ಹೌದು, ಕೆಜಿಎಫ್ ಚಾಪ್ಟರ್ 2 ಟೀಸರ್ ಬಿಡುಗಡೆಯಾದ 24 ಗಂಟೆಗಳಲ್ಲಿ ಅತಿಹೆಚ್ಚು ಲೈಕ್ಸ್ ಪಡೆದುಕೊಂಡ ಭಾರತದ ಟೀಸರ್ ಎನಿಸಿಕೊಂಡಿದೆ.
ಹಾಗಿದ್ದರೆ ಯುಟ್ಯೂಬ್‌ನಲ್ಲಿ ಅತಿಹೆಚ್ಚು ಲೈಕ್ಸ್ ಪಡೆದ ಭಾರತದ ಟೀಸರ್‌ಗಳ ಪಟ್ಟಿಯಲ್ಲಿ ಟಾಪ್ 5 ಸ್ಥಾನಗಳನ್ನು ಯಾವ ಚಿತ್ರಗಳ ಟೀಸರ್‌ಗಳು ಪಡೆದುಕೊಂಡಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
1. ಕೆಜಿಎಫ್ ಚಾಪ್ಟರ್ 2 - 4.27 ಮಿಲಿಯನ್ ಲೈಕ್ಸ್
2. ಮಾಸ್ಟರ್ - 1.85 ಮಿಲಿಯನ್ ಲೈಕ್ಸ್
3. ಸಲಾರ್ - 1.67 ಮಿಲಿಯನ್ ಲೈಕ್ಸ್
4. ಸರ್ಕಾರ್ - 1.18 ಮಿಲಿಯನ್ ಲೈಕ್ಸ್
5. ಪಠಾಣ್ - 1.13 ಮಿಲಿಯನ್ ಲೈಕ್ಸ್


Click it and Unblock the Notifications











