ಅತಿವೇಗವಾಗಿ ಲಕ್ಷ ಲೈಕ್ಸ್; ಈ 2 ಸಿನಿಮಾಗಳ ದಾಖಲೆ ಮುರಿಯುವಲ್ಲಿ ವಿಫಲಗೊಂಡ ಸಲಾರ್!
ಇಂದು ( ಜುಲೈ 6 ) ಬೆಳ್ಳಂಬೆಳಗ್ಗೆಯೇ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಮುಂದಿನ ಚಿತ್ರ ಸಲಾರ್‌ನ ಟೀಸರ್ ಯುಟ್ಯೂಬ್‌ಗೆ ಅಪ್ಪಳಿಸಿದೆ. ಮಾಸ್ ಹೀರೊ ಪ್ರಭಾಸ್ ಹಾಗೂ ಮಾಸ್ ಡೈರೆಕ್ಟರ್ ಪ್ರಶಾಂತ್ ನೀಲ್ ಕಾಂಬಿನೇಶನ್‌ನಲ್ಲಿ ಮೂಡಿ ಬರುತ್ತಿರುವ ಸಲಾರ್ ಸಹ ಮಾಸ್ ಆಗಿರಲಿದೆ ಎಂದು ಇಂದು ಬಿಡುಗಡೆಯಾಗಿರುವ ಟೀಸರ್ ತಿಳಿಸಿದೆ.
ಬೆಳಗ್ಗೆ 5.12ಕ್ಕೆ ಬಿಡುಗಡೆಯಾದ ಸಲಾರ್ ಟೀಸರ್ 1.46 ನಿಮಿಷವಿದ್ದು, ಈ ಟೀಸರ್‌ನಲ್ಲಿ ಶುರುವಿನಿಂದ ಕೊನೆಯವರೆಗೂ ಮಾಸ್ ಎಲಿಮೆಂಟ್‌ಗಳ ಸರಮಾಲೆಯೇ ಇದೆ. ವಿದೇಶಿ ವಿಲನ್‌ಗಳ ಗುಂಪು ಓರ್ವನನ್ನು ಗುಂಡಿಕ್ಕಿ ಕೊಲ್ಲಲು ಗುಂಪುಗಟ್ಟಿ ನಿಂತಿರುವಾಗ ಆ ವಿಲನ್‌ಗಳ ಜತೆ ಆತ ( ಟಿನ್ನು ಆನಂದ್ ) ಮಾತನಾಡಲು ಆರಂಭಿಸುತ್ತಾನೆ.

'ಸಿಂಪಲ್ ಇಂಗ್ಲಿಷ್.. ನೋ ಕನ್‌ಫ್ಯೂಷನ್.." ಎಂದು ಡೈಲಾಗ್ ಆರಂಭಿಸುವ ಆತ "ಲಯನ್, ಚೀತಾ, ಟೈಗರ್, ಎಲಿಫೆಂಟ್ ವೆರಿ ಡೇಂಜರಸ್.. ಬಟ್.. ನಾಟ್ ಇನ್ ಜುರಾಸಿಕ್ ಪಾರ್ಕ್.. ಬಿಕಾಸ್ ಇನ್ ದಟ್ ಪಾರ್ಕ್, ದೇರ್ ಈಸ್ ಎ.." ಎಂದು ನಾಯಕ ನಟ ಪ್ರಭಾಸ್‌ಗೆ ಬಿಲ್ಡಪ್ ಕೊಡ್ತಾನೆ.
ಇಷ್ಟರಲ್ಲಿ ಲಯನ್, ಚೀತಾ, ಎಲಿಫೆಂಟ್ ಹಾಗೂ ಟೈಗರ್ ಡೈಲಾಗ್‌ಗೆ ಖಳ ನಾಯಕರ ಅಟ್ಟಹಾಸವನ್ನು ತೋರಿಸುವ ಪ್ರಶಾಂತ್ ನೀಲ್ ಬಳಿಕ ಪ್ರಭಾಸ್ ಮಾಸ್ ಅವತಾರವನ್ನೂ ಸಹ ತೋರಿಸಿದ್ದಾರೆ. ಇಲ್ಲಿ ತನ್ನ ಸುತ್ತುವರಿದಿದ್ದ ವಿದೇಶಿ ವಿಲನ್‌ಗಳಿಗೆ ನಾಯಕನ ಪರಿಚಯ ಮಾಡಿಸಲು ಪ್ರಾಣಿಗಳನ್ನು ಹೋಲಿಸಿ ಬಿಲ್ಡಪ್ ನೀಡಲಾಗಿದೆ.
ಸಿಂಹ, ಹುಲಿ, ಚಿರತೆ ಹಾಗೂ ಆನೆ ಈ ಎಲ್ಲಾ ಪ್ರಾಣಿಗಳು ತುಂಬಾ ಭಯಂಕರ.. ಆದರೆ ಜುರಾಸಿಕ್ ಪಾರ್ಕ್‌ನಲ್ಲಿ ಅವು ಭಯಾನಕ ಅಲ್ಲ. ಏಕೆಂದರೆ ಅಲ್ಲಿ ಸಲಾರ್‌ನ ನಾಯಕನಿದ್ದಾನೆ ಎಂದು ತಿಳಿಸಿ ನಾಯಕನ ವೈಭವೀಕರಣ ಮಾಡಲಾಗಿದೆ.
ಇನ್ನು ಈ ಟೀಸರ್ ನೋಡಿದ ಬಳಿಕ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕೆಲವರು ಟೀಸರ್ ಸೂಪರ್ ಎಂದರೆ, ಇನ್ನೂ ಕೆಲವರು ಟೀಸರ್ ನಿರೀಕ್ಷಿಸಿದ ಮಟ್ಟದಲ್ಲಿಲ್ಲ, ಕೆಜಿಎಫ್ ಹಾಗೂ ಉಗ್ರಂ ಛಾಯೆಯಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಹೀಗೆ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ಸಲಾರ್ ಟೀಸರ್ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಲಕ್ಷಗಟ್ಟಲೇ ವ್ಯೂಸ್ ಹಾಗೂ ಲೈಕ್ಸ್ ಪಡೆದುಕೊಳ್ಳಲು ಆರಂಭಿಸಿದ್ದು, ದಾಖಲೆಗಳ ಎಣಿಕೆ ಮಾಡುವಲ್ಲಿ ಅಭಿಮಾನಿಗಳು ಹಾಗೂ ಪ್ರಭಾಸ್ ಫ್ಯಾನ್ಸ್ ನಿರತರಾಗಿದ್ದಾರೆ. ಇನ್ನು ದೊಡ್ಡ ಹೈಪ್‌ನೊಂದಿಗೆ ಬಿಡುಗಡೆಯಾದ ಸಲಾರ್ ಚಿತ್ರದ ಟೀಸರ್ ಬಿಡುಗಡೆಗೊಂಡ ಕೆಲವೇ ಗಂಟೆಗಳಲ್ಲಿ ಲಕ್ಷ ಲೈಕ್‌ಗಳನ್ನು ಪಡೆದುಕೊಂಡಿದೆ.
ಸಲಾರ್ ಟೀಸರ್ 9 ನಿಮಿಷಗಳಲ್ಲಿ ಲಕ್ಷ ಲೈಕ್‌ಗಳನ್ನು ಪಡೆದುಕೊಂಡಿದೆ. ಈ ಮೂಲಕ ಅತಿವೇಗವಾಗಿ ಲಕ್ಷ ಲೈಕ್ಸ್ ಪಡೆದ ತೆಲುಗು ಟೀಸರ್‌ಗಳ ಪೈಕಿ ಮೂರನೇ ಸ್ಥಾನ ಪಡೆದುಕೊಂಡಿದ್ದು, ಆರ್‌ಆರ್‌ಆರ್ ಟೀಸರ್ ಹಾಗೂ ವಕೀಲ್ ಸಾಬ್ ಟೀಸರ್ ದಾಖಲೆಗಳನ್ನು ಮುರಿಯುವಲ್ಲಿ ವಿಫಲಗೊಂಡಿದೆ. ಅತಿ ವೇಗವಾಗಿ ಲಕ್ಷ ಲೈಕ್ಸ್ ಪಡೆದ ತೆಲುಗು ಚಿತ್ರಗಳ ಟೀಸರ್‌ಗಳ ಪಟ್ಟಿ ಈ ಕೆಳಕಂಡಂತಿದೆ..
1. ಆರ್ ಆರ್ ಅರ್ ( ಜೂನಿಯರ್ ಎನ್‌ಟಿಆರ್ ಟೀಸರ್ ) - 6 ನಿಮಿಷಗಳಲ್ಲಿ
2. ವಕೀಲ್ ಸಾಬ್ - 7 ನಿಮಿಷಗಳಲ್ಲಿ
3. ಸಲಾರ್ - 9 ನಿಮಿಷಗಳಲ್ಲಿ
4. ಸರಿಲೇರು ನೀಕೆವ್ವರು - 18 ನಿಮಿಷಗಳಲ್ಲಿ
5. ಬ್ರೋ - 20 ನಿಮಿಷಗಳಲ್ಲಿ
6. ಆರ್ ಆರ್ ಆರ್ ( ರಾಮ್ ಚರಣ್ ಟೀಸರ್ ) - 20 ನಿಮಿಷಗಳಲ್ಲಿ
7. ಆದಿಪುರುಷ್ - 22 ನಿಮಿಷಗಳಲ್ಲಿ
8. ಸಾಹೋ - 23 ನಿಮಿಷಗಳಲ್ಲಿ
9. ಆಚಾರ್ಯ - 25 ನಿಮಿಷಗಳಲ್ಲಿ
10. ಪುಷ್ಪ - 25 ನಿಮಿಷಗಳಲ್ಲಿ


Click it and Unblock the Notifications











