'ಸಲಾರ್' ಟೀಸರ್ ನಂಬರ್ 1 ಆಗಲು ಈ ಎರಡು ಚಿತ್ರಗಳ ದಾಖಲೆಯನ್ನು ಮುರಿಯಲೇಬೇಕು!
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ವಿಷಯವೆಂದರೆ ಅದು ಸಲಾರ್ ಟೀಸರ್. ಹೌದು, ಸಲಾರ್ ಚಿತ್ರದ ಟೀಸರ್ ನಾಳೆ ( ಜುಲೈ 6 ) ಬೆಳಗ್ಗೆ 5.12ಕ್ಕೆ ಬಿಡುಗಡೆಯಾಗಲಿದ್ದು, ಸಿನಿ ರಸಿಕರು ಹಾಗೂ ಪ್ರಭಾಸ್ ಅಭಿಮಾನಿಗಳು ಚಿತ್ರದ ಟೀಸರ್ ನೋಡಲು ಕಾತರರಾಗಿ ಕಾಯುತ್ತಿದ್ದಾರೆ.
ಬಾಹುಬಲಿ ಚಿತ್ರ ಸರಣಿ ಬಳಿಕ ತೆರೆಗೆ ಬಂದ ಸಾಹೋ, ರಾಧೆ ಶ್ಯಾಮ್ ಹಾಗೂ ಆದಿಪುರುಷ್ ಈ ಮೂರೂ ಚಿತ್ರಗಳ ಮೂಲಕವೂ ನಿರೀಕ್ಷಿಸಿದ ಯಶಸ್ಸನ್ನು ಸಾಧಿಸಲಾಗದೇ ಸೋತಿರುವ ಪ್ರಭಾಸ್ ಸಲಾರ್ ಮೂಲಕ ಗೆಲ್ಲಲೇಬೇಕಾಗಿದ್ದು, ಈ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಕೊಂಡಿದೆ.

ಉಗ್ರಂ, ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರಗಳ ಮೂಲಕ ಹ್ಯಾಟ್ರಿಕ್ ಬಾರಿಸಿರುವ ಪ್ರಶಾಂತ್ ನೀಲ್ ಮೇಲೆ ಅಪಾರವಾದ ನಿರೀಕ್ಷೆ ಇದ್ದು, ನೀಲ್ ಮತ್ತೊಮ್ಮೆ ಗೆಲ್ಲುವುದು ಖಚಿತ ಎಂಬ ವಿಶ್ವಾಸ ದೊಡ್ಡ ಮಟ್ಟದಲ್ಲಿ ವ್ಯಕ್ತವಾಗ್ತಿದೆ.
ಇನ್ನು ಸಲಾರ್ ಚಿತ್ರ ಇದೇ ಸೆಪ್ಟೆಂಬರ್ 28ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು, ಚಿತ್ರತಂಡ ಬಿಡುಗಡೆಯ ದಿನಾಂಕ ಸಮೀಪಿಸುತ್ತಿದ್ದಂತೆ ಚಿತ್ರದ ಹೈಪ್ ಹೆಚ್ಚಿಸುವ ಕೆಲಸಕ್ಕೆ ಕೈಹಾಕಿದೆ. ಹೌದು, ನಾಳೆ ( ಜುಲೈ 6 ) ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡುವ ಮೂಲಕ ಕ್ರೇಜ್ ಹೆಚ್ಚಿಸಲು ಸಲಾರ್ ಚಿತ್ರತಂಡ ಮುಂದಾಗಿದೆ.
ಟೀಸರ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಟೀಸರ್ ಮುಂಜಾನೆ 5.12ಕ್ಕೆ ಬಿಡುಗಡೆಯಾಗುವ ವಿಷಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಇಷ್ಟು ಬೇಗನೆ ಟೀಸರ್ ಮಾಡುತ್ತಿರುವುದರ ಉದ್ದೇಶವೇನು ಎಂಬೆಲ್ಲಾ ಚರ್ಚೆಗಳು ಆರಂಭವಾಗಿವೆ.
ಹೀಗೆ ಟೀಸರ್ ಬಿಡುಗಡೆಯಾಗುತ್ತಿರುವ ಸಮಯದ ಕುರಿತು ಸಾಕಷ್ಟು ಮಾತುಕತೆಗಳನ್ನು ನಡೆಯುತ್ತಿದ್ದು, ಮತ್ತೊಂದೆಡೆ ಈ ಟೀಸರ್ ದಾಖಲೆ ಬರೆಯಬೇಕೆಂದರೆ ಯಾವ ಚಿತ್ರಗಳ ದಾಖಲೆಯನ್ನು ಮುರಿಯಬೇಕು ಎಂಬ ಗುರಿಯನ್ನೂ ಸಹ ಪ್ರಭಾಸ್ ಅಭಿಮಾನಿಗಳು ಕಲೆಹಾಕುತ್ತಿದ್ದಾರೆ.
ಸಲಾರ್ ಚಿತ್ರದ ಟೀಸರ್ ಬಿಡುಗಡೆಯಾದ 24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದುಕೊಂಡ ಟೀಸರ್ ಎನಿಸಿಕೊಳ್ಳಬೇಕೆಂದರೆ ಆದಿಪುರುಷ್ ಟೀಸರ್‌ನ ವ್ಯೂಸ್ ದಾಖಲೆಯನ್ನು ಮುರಿಯಬೇಕಿದೆ. ಹೌದು, ಆದಿಪುರುಷ್ ಚಿತ್ರದ ಟೀಸರ್ ಬಿಡುಗಡೆಯಾದ 24 ಗಂಟೆಗಳಲ್ಲಿ 101 ಮಿಲಿಯನ್ ವ್ಯೂಸ್ ಪಡೆದುಕೊಂಡಿತ್ತು. ಹೀಗಾಗಿ ಸಲಾರ್ ಟೀಸರ್ ಆದಿಪುರುಷ್ ಟೀಸರ್ ವ್ಯೂಸ್ ದಾಖಲೆಯನ್ನು ಮುರಿದುಹಾಕಬೇಕಿದೆ.
ಇದು ವ್ಯೂಸ್ ಲೆಕ್ಕಚಾರವಾದರೆ ಲೈಕ್ಸ್ ವಿಚಾರಕ್ಕೆ ಬಂದರೆ ಸಲಾರ್ ಟೀಸರ್ ಕೆಜಿಎಫ್ ಚಾಪ್ಟರ್ 2 ದಾಖಲೆಯನ್ನು ಹಿಂದಿಕ್ಕಬೇಕಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಬಿಡುಗಡೆಯಾದ 24 ಗಂಟೆಗಳಲ್ಲಿ 4.2 ಮಿಲಿಯನ್ ಲೈಕ್ಸ್ ಪಡೆದುಕೊಂಡಿತ್ತು. ಹೀಗಾಗಿ ಸಲಾರ್ ಚಿತ್ರದ ಟೀಸರ್ 4.2 ಮಿಲಿಯನ್‌ಗಿಂತ ಹೆಚ್ಚಿನ ಲೈಕ್ಸ್ ಪಡೆದುಕೊಂಡರೆ ಕೆಜಿಎಫ್ ಚಾಪ್ಟರ್ 2 ಟೀಸರ್ ಲೈಕ್ಸ್ ದಾಖಲೆಯನ್ನು ಮುರಿದುಹಾಕಲಿದೆ.


Click it and Unblock the Notifications











