ಸಲಾರ್ ಟೀಸರ್ ಎಷ್ಟು ನಿಮಿಷಗಳಿರಲಿದೆ? ಈ ಹಿಂದೆಯೇ ಲೀಕ್ ಆಗಿತ್ತು ಈ ಮಾಹಿತಿ!
ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಶನ್‌ನ ಬಹು ನಿರೀಕ್ಷಿತ ಚಿತ್ರ ಸಲಾರ್ ಸದ್ಯ ದಿನದಿಂದ ದಿನಕ್ಕೆ ತನ್ನ ಕ್ರೇಜ್ ಅನ್ನು ಹೆಚ್ಚಿಸುತ್ತಿದೆ. ಇದೇ ಸೆಪ್ಟೆಂಬರ್ 28ರಂದು ಬಿಡುಗಡೆಯಾಗಲಿರುವ ಈ ಸಲಾರ್ ಚಿತ್ರದ ಟೀಸರ್ ಅನ್ನು ನಾಳೆ ( ಜುಲೈ 6 ) ಬೆಳಗ್ಗೆ 5.12ಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಮುಹೂರ್ತ ಫಿಕ್ಸ್ ಮಾಡಿದೆ.
ಹೌದು, ಹೊಂಬಾಳೆ ಫಿಲ್ಮ್ಸ್ ಚಿತ್ರದ ಟೀಸರ್ ಬಿಡುಗಡೆ ಮಾಹಿತಿಯನ್ನು ಘೋಷಿಸುವ ಮೂಲಕ ಚಿತ್ರದ ಮೇಲಿನ ಹೈಪ್ ಹೆಚ್ಚಿಸುವ ಕೆಲಸಕ್ಕೆ ಕೈಹಾಕಿದೆ. ಇನ್ನು ಟೀಸರ್ ಬಿಡುಗಡೆಗೆ ದಿನಾಂಕ ಹಾಗೂ ಸಮಯ ಫಿಕ್ಸ್ ಆದ ಬೆನ್ನಲ್ಲೇ ಸಿನಿ ರಸಿಕರು ಹಾಗೂ ಪ್ರಭಾಸ್ ಅಭಿಮಾನಿಗಳು ಟೀಸರ್ ಹೇಗಿರಲಿದೆ, ಚಿತ್ರದ ಕಾನ್ಸೆಪ್ಟ್ ಏನೆಂಬುದನ್ನು ಈ ಟೀಸರ್ ಮೂಲಕ ತಿಳಿಯಬಹುದು ಎಂದು ಕುತೂಹಲದಿಂದ ಕೌಂಟ್ ಡೌನ್ ಶುರುವಿಟ್ಟುಕೊಂಡಿದ್ದಾರೆ.

ಹೀಗೆ ಸಲಾರ್ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಕಾವು ಏರಿಸುತ್ತಿದ್ದರೆ, ಮತ್ತೊಂದೆಡೆ ಇದು ಎಷ್ಟು ನಿಮಿಷಗಳ ಟೀಸರ್ ಆಗಿರಲಿದೆ ಹಾಗೂ ಏನೆಲ್ಲಾ ದೃಶ್ಯಗಳಿರಲಿವೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿವೆ.
ಇನ್ನು ಸಲಾರ್ ಚಿತ್ರತಂಡ ಸಹ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿಯೂ ಸಹ ಟೀಸರ್ ಎಷ್ಟು ನಿಮಿಷಗಳಿರಲಿದೆ ಗೆಸ್ ಮಾಡಿ ಎಂದು ಟ್ವೀಟ್ ಮಾಡುವ ಮೂಲಕ ಸಿನಿ ರಸಿಕರು ಹಾಗೂ ಪ್ರಭಾಸ್ ಫ್ಯಾನ್ಸ್‌ಗಳಲ್ಲಿನ ಕುತೂಹಲವನ್ನು ಕೆರಳಿಸಿದೆ.
ಸಲಾರ್ ಚಿತ್ರತಂಡದ ಈ ಟ್ವೀಟ್ ಕುರಿತು ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಅನೇಕ ದಿನಗಳ ಹಿಂದೆಯೇ ಲೀಕ್ ಆಗಿದ್ದ ಸಲಾರ್ ಚಿತ್ರದ ಟೀಸರ್ ಮಾಹಿತಿಯನ್ನು ಇಲ್ಲಿ ಕಾಮೆಂಟ್ ಮಾಡಿದ್ದಾರೆ. ಹೀಗೆ ನೆಟ್ಟಿಗರು ಮಾಡಿರುವ ಕಾಮೆಂಟ್ ಪ್ರಕಾರ ಸಲಾರ್ ಚಿತ್ರದ ಟೀಸರ್ ಲೆಂತ್ 1.31 ನಿಮಿಷಗಳಷ್ಟಿದೆ ಎನ್ನಲಾಗಿದೆ. ಈ ಕುರಿತಾದ ಪಟ್ಟಿಯೊಂದು ಈ ಹಿಂದೆ ವೈರಲ್ ಆಗಿತ್ತು. ಈ ಪಟ್ಟಿಯಲ್ಲಿ ಟೀಸರ್ ಸರ್ಟಿಫಿಕೇಟ್, ಚಿತ್ರದ ಕೆಟಗರಿ, ಚಿತ್ರ ಯಾವ ಮೂಲ ಭಾಷೆಯಲ್ಲಿ ಚಿತ್ರೀಕರಣಗೊಂಡಿದೆ ಎಂಬ ಮಾಹಿತಿಯೂ ಸಹ ಇತ್ತು.
ಹೀಗೆ ನೆಟ್ಟಿಗರು ಕಾಮೆಂಟ್ ಮಾಡಿರುವ ಮಾಹಿತಿ ಪ್ರಕಾರ ಸಲಾರ್ ಟೀಸರ್ 1.31 ನಿಮಿಷವಿರಲಿದ್ದು, ಇದು ಹಳೆಯ ಮಾಹಿತಿ ಎಂದೂ ಸಹ ಕೆಲವರು ಹೇಳುತ್ತಿದ್ದಾರೆ ಹಾಗೂ ಹೊಸ ಟೀಸರ್ ಎರಡು ನಿಮಿಷಗಳಷ್ಟು ಲೆಂತ್ ಇರಲಿದೆ ಎಂಬ ಮಾಹಿತಿಯೂ ಸಹ ಇದೆ.
ಇನ್ನು ಸಲಾರ್ ಚಿತ್ರದ ಟೀಸರ್ ಲೆಂತ್ ಕುರಿತ ಚರ್ಚೆ ಒಂದೆಡೆಯಾದರೆ, ವಿಭಿನ್ನವೆನಿಸುವ ಸಮಯಕ್ಕೆ ಸಲಾರ್ ಟೀಸರ್ ಬಿಡುಗಡೆ ಮಾಡುತ್ತಿರುವುದು ಸಲಾರ್ ಚಿತ್ರತಂಡದ ಮತ್ತೊಂದು ವಿಶೇಷವೆನಿಸಿದೆ. ಭಾರತದಲ್ಲಿ ಬೆಳಗ್ಗಿನ ಜಾವ 5.12ಕ್ಕೆ ಸಲಾರ್ ಟೀಸರ್ ಬಿಡುಗಡೆಯಾಗಲಿದ್ದು, ಉಳಿದ ಯಾವ ದೇಶಗಳಲ್ಲಿ ಎಷ್ಟು ಗಂಟೆಗೆ ಟೀಸರ್ ಹೊರಬೀಳಲಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
ಯುಎಇ - 3.42 AM (GST)
ಯುಎಸ್ ( ಜುಲೈ 5 ) - 7.42 PM ( EST ), 4.42 PM (PST) & 6.42 PM (CST)
ಯುರೋಪ್ - 1.42 AM ( CET )
ಯುನೈಟೆಡ್ ಕಿಂಗ್‌ಡಮ್ - 12.42 AM (GMT )
ರಷ್ಯಾ - 3.42 AM ( MSD )
ಆಸ್ಟ್ರೇಲಿಯಾ - 9.42 AM ( AEST )
ನ್ಯೂಜಿಲೆಂಡ್ - 11.42 AM ( NZST )
ಆಫ್ರಿಕಾ - 2.42 AM ( SAST )
ಜಪಾನ್ - 8.42 AM ( JST )
ಚೈನಾ - 7.42 AM ( CST )
ಮಲೇಷಿಯಾ - 7.42 AM (MYT)
ಸಿಂಗಾಪುರ - 7.42 AM (SGT)
ನೇಪಾಳ - 5.27 AM (NPT)


Click it and Unblock the Notifications











