Salaar Trailer: ಉಗ್ರಂನ ಅಪ್‌ಡೇಟೆಡ್ ವರ್ಷನ್ ಅಂತೆ ಸಲಾರ್... ಕನ್ನಡಿಗರ ಪಾಲಿಗೆ ವಿಶೇಷ ಅನಿಸಲಿಲ್ಲವೇ 'ಸಲಾರ್'!?

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ಸಲಾರ್ ಭಾಗ ಒಂದರ ಟ್ರೈಲರ್ ರಿಲೀಸ್ ಆಗಿದೆ. ಕೆಜಿಎಫ್ ನಿರ್ಮಾಪಕರ ಸಿನಿಮಾದಲ್ಲಿ ಪ್ರಭಾಸ್ ಮತ್ತು ಮಲಯಾಳಂ ಸ್ಟಾರ್ ಪೃಥ್ವಿರಾಜ್ ಅಬ್ಬರಿಸಿದ್ದಾರೆ. ಇಬ್ಬರು ಸ್ನೇಹಿತರ ನಡುವಿನ ಕಥೆ ಎಂದಬುದು ತಿಳಿಯುತ್ತಿದೆ. ಟ್ರೈಲರ್ ನೋಡಿದ ಹಲವರು ಇದನ್ನು ಮೆಚ್ಚಿಕೊಂಡರೆ ಮತ್ತೆ ಕೆಲವರು ನಿರಾಸೆ ವ್ಯಕ್ತಪಡಿಸಿದ್ದಾರೆ.

ಸಲಾರ್ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಮೊದಲ ಭಾಗದ ಟ್ರೈಲರ್ ಅನಾವರಣವಾಗಿದೆ. ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಸಿನಿಮಾ ಇದೇ ತಿಂಗಳ 22ಕ್ಕೆ ತೆರೆಗೆ ಬರಲಿದೆ. ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹಾಕಿದ್ದು, ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿದ್ದಾರೆ. ಟ್ರೈಲರ್ ನೋಡಿದ ಕನ್ನಡಿಗರು ಭಾರಿ ನಿರಾಸೆ ವ್ಯಕ್ತಪಡಿಸಿದ್ದು, ಇದು ಹೈ ಬಜೆಟ್ ಉಗ್ರಂ ಎಂದು ಟೀಕಿಸಿದ್ದಾರೆ.

Salaar Trailer: Why people comparing Salaar to kannada movie Ugramm?

ಉಗ್ರಂನ ಅಪ್‌ಡೇಟೆಡ್ ವರ್ಷನ್ ಅಂತೆ ಸಲಾರ್!

ಸಲಾರ್ ಸಿನಿಮಾದ ಬರೋಬ್ಬರಿ 3:46 ನಿಮಿಷಗಳ ಟ್ರೈಲರ್ ಬಿಡುಗಡೆಯಾಗಿದೆ. ಪ್ರಭಾಸ್, ಪೃಥ್ವಿರಾಜ್ ಅಬ್ಬರಿಸಿದ್ದಾರೆ. ನಟ ಜಗಪತಿ ಬಾಬು, ಗರುಡ ಖ್ಯಾತಿಯ ರಾಮಚಂದ್ರ, ಶ್ರುತಿ ಹಾಸನ್ ನಟಿಸಿದ್ದು, ಟ್ರೈಲರ್‌ನಲ್ಲಿ ಹೈ ಆಕ್ಷನ್ ಎಂಟರ್ಟೈನರ್ ಎಂಬುದು ಕಾಣುತ್ತಿದೆ. ಜೊತೆಗೆ ಇದು ಪ್ರಶಾಂತ್ ನೀಲ್ ನಿರ್ದೇಶನದ ಉಗ್ರಂ ಸಿನಿಮಾದ ಹಲವು ಅಂಶಗಳನ್ನು ನೆನಪಿಸುತ್ತಿದೆ.

ಸಲಾರ್ ಟ್ರೈಲರ್ ಇಬ್ಬರು ಸ್ನೇಹಿತರ ಕಥೆ . ಸ್ನೇಹಿತನಿಗಾಗಿ ಏನಾದರೂ ಮಾಡುವ 'ದೇವ'ನ ಕೋಪ, ತ್ಯಾಗ, ಖಾನ್ಸಾರಾ ಎಂಬ ಸಾಮ್ರಾಜ್ಯ್, ಕುರ್ಚಿಗಾಗಿ ನಡೆಯುವ ಕುತಂತ್ರ, ಸ್ನೇಹಿತನಿಗಾಗಿ ಬರುವ ಗೆಳೆಯ...ಹೀಗೆ ಹಲವು ಅಂಶಗಳನ್ನು ಹೇಳುತ್ತಿದೆ. ಇದೇ ಎಳೆ 2014 ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಉಗ್ರಂ ಸಿನಿಮಾದಲ್ಲಿಯೂ ಇತ್ತು. ಇದನ್ನೇ ಕನ್ನಡಿಗರು ಬೊಟ್ಟು ಮಾಡಿ ತೋರಿಸುತ್ತಿದ್ದಾರೆ.

Salaar Trailer: Why people comparing Salaar to kannada movie Ugramm?

ಬಾಲಾ- ಅಗಸ್ತ್ಯ ಇಲ್ಲಿ ವರದ- ದೇವ ಆಗಿ ಬದಲಾದರೇ?

ಸಲಾರ್ ಟ್ರೈಲರ್‌ ನೋಡಿದ ಕನ್ನಡಿಗರಿಗೆ ಕೆಲವು ಡೈಲಾಗ್‌ಗಳು ಕೇಳಿದ ಹಾಗೆ ಅನ್ನಿಸುತ್ತದೆ. ಉಗ್ರಂ ಸಿನಿಮಾದಲ್ಲಿನ ಬಾಲಾ ಮತ್ತು ಅಗಸ್ತ್ಯ ನಡುವೆ ನಡೆಯುವ ಸಂಭಾಷಣೆಯ್ನನೇ ಹೊಲುವಂತೆ ವರದ- ದೇವ ನಡುವಿನ ಸಂಭಾಷಣೆ ಇದೆ. ಅಲ್ಲೂ ಸ್ನೇಹಕ್ಕಾಗಿ ಊರು ತೊರೆದು ಹೋಗುವ ಗೆಳೆಯ...ಇಲ್ಲೂ ಊರು ತೊರೆದು ಹೋಗುವ ಗೆಳೆಯನಿದ್ದಾನೆ.

ಇನ್ನು, 'ಕನ್ನಡದ ಉಗ್ರಂ', 'ನಮ್ಮದೆ ಕನ್ನಡದ ಉಗ್ರಂ Copy... ಅದರಲ್ಲಿ ಬೇರೆ chapter 1 chapter 2 ಅಂತೆ', 'ಆಧುನಿಕ ಕಾಲದ ಉಗ್ರಂ', 'ಉಗ್ರಂ 2 ಶ್ರೀ ಮುರಳಿಗೆ ಮಾಡ್ತೀನಿ ಅಂತ ಹೇಳಿ ನೋಡಿದ್ರೆ ಇಲ್ಲಿ ಇಂಗೆ ಮಾಡವ್ರೆ. ಉಗ್ರಂ ಅಪ್‌ಡೇಟೆಡ್ ಕಾಪಿ' ಎಂದು ಕನ್ನಡಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇದರ ಜೊತೆಗೆ ಉಗ್ರಂ ಸಿನಿಮಾದ ದೃಶ್ಯಗಳನ್ನು ಟ್ರೈಲರ್ ಜೊತೆಗೆ ಸೇರಿಸಿ ಮ್ಯಾಚ್ ಮಾಡುವ ಪ್ರಯತ್ನ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿದೆ.

ಸಲಾರ್ ಟ್ರೈಲರ್ ಬಿಡುಗಡೆ ಬೆನ್ನಲ್ಲೇ Disappointed ಟ್ರೆಂಡಿಂಗ್!

ಇನ್ನು, ಸಲಾರ್ ಟ್ರೈಲರ್ ಬಿಡುಗಡೆಯಾಗಿ ಭರ್ಜರಿ ಹೈಪ್ ಕ್ರಿಯೆಟ್ ಮಾಡ್ತಿದೆ. ಇದರ ಜೊತೆಗೆ ಟ್ವಿಟರ್‌ನಲ್ಲಿ Disappointed ಎಂಬ ಹ್ಯಾಶ್‌ಟ್ಯಾಗ್ ಕೂಡ ಟ್ರೆಂಡ್ ಆಗುತ್ತಿದೆ. ಕೆಜಿಎಫ್ ತಂಡದಿಂದ ಇಂತಹ ಸಪ್ಪೆ ಟ್ರೈಲರ್ ನಿರೀಕ್ಷಿಸಿರಲಿಲ್ಲ ಎನ್ನುತ್ತಿದ್ದಾರೆ. ಜೊತೆಗೆ ಇದನ್ನು ಕಬ್ಜಾ ಟ್ರೈಲರ್‌ ಜೊತೆಗೆ ಹೋಲಿಸಲಾಗುತ್ತಿದೆ.

ಉಗ್ರಂ ನಲ್ಲಿನ ಶ್ರೀ ಮುರುಳಿ ಅವರ ಆಕ್ಟಿಂಗ್ ಅನ್ನು ಪ್ರಭಾಸ್ ಮಾಡಿಲ್ಲ. ಅವರ ಡೈಲಾಗ್ ಡೆಲಿವರಿ ಇವರಿಗೆ ಬಂದಿಲ್ಲ ಎಂಬ ಮಿಮ್‌ಗಳು ಬರುತ್ತಿವೆ. ಕೆಜಿಎಫ್ ಅಂತಹ ಹಿಟ್ ಸಿನಿಮಾ ಕೊಟ್ಟವರ ಸಿನಿಮಾ ಎಂದು ನಂಬಲು ಆಗುತ್ತಿಲ್ಲ. ಹಿನ್ನೆಲೆ ಸಂಗೀತಾ ಕೂಡ ಅಷ್ಟು ಸೆಳೆಯುತ್ತಿಲ್ಲ ಎಂದು ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ.

More from Filmibeat

English summary
Fans comparing Salaar movie to Ugramm.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X