Salaar Vs Dunki: ಶಾರುಖ್ ಖಾನ್ ಕಾಲು ಎಳೀತಾ 'ಸಲಾರ್' ಟೀಮ್?: ಪೋಸ್ಟ್ ಫುಲ್ ವೈರಲ್

ಬಾಕ್ಸಾಫೀಸ್‌ನಲ್ಲಿ 'ಸಲಾರ್' ವರ್ಸಸ್ 'ಡಂಕಿ' ಫೈಟ್ ಮುಂದುವರೆದಿದೆ. ಎರಡೂ ಸಿನಿಮಾಗಳು 2ನೇ ವಾರವೂ ಬಾಕ್ಸಾಫೀಸ್‌ನಲ್ಲಿ ಸಖತ್ ಸದ್ದು ಮಾಡ್ತಿವೆ. ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಆರ್ಭಟ ಕೊಂಚ ಜೋರಾಗಿದೆ. ಈಗಾಗಲೇ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ವರ್ಲ್ಡ್‌ ವೈಡ್ ಗ್ರಾಸ್ ಕಲೆಕ್ಷನ್ 600 ಕೋಟಿ ರೂ. ಗಡಿ ದಾಟಿದೆ.

'ಸಲಾರ್‌' ಚಿತ್ರ ಡಿಸೆಂಬರ್ 22ಕ್ಕೆ ರಿಲೀಸ್ ಆಗುತ್ತದೇ ಎಂದಾಗಲೇ 'ಡಂಕಿ' ಜೊತೆ ಫೈಟ್ ಎನ್ನುವ ಚರ್ಚೆ ಶುರುವಾಯಿತು. ಈ ಬಗ್ಗೆ ಪ್ರಭಾಸ್ ಹಾಗೂ ಶಾರುಖ್ ಖಾನ್ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತು. ಯಾವ ಸಿನಿಮಾ ಗೆಲ್ಲುತ್ತೆ ನೋಡೋಣ? ಎನ್ನುವ ಬಗ್ಗೆ ಇಬ್ಬರ ಅಭಿಮಾನಿಗಳ ನಡುವೆ ತಿಕ್ಕಾಟ ಶುರುವಾಗಿತ್ತು. ಟ್ರೋಲ್, ಸಟೈರ್ ಜೋರಾಗಿತ್ತು. ಆದರೆ ಎರಡೂ ಸಿನಿಮಾಗಳು ಪ್ರೇಕ್ಷಕರ ಮನಗೆದ್ದವು. ಒಳ್ಳೆ ಓಪನಿಂಗ್ ಪಡೆದುಕೊಂಡಿದ್ದವು. ಬಳಿಕ ಕಲೆಕ್ಷನ್ ಬಗ್ಗೆ ಫ್ಯಾನ್ಸ್ ವಾರ್ ತಾರಕಕ್ಕೇರಿತು.

Salaar Vs Dunki: Did hombale films troll Shahrukh Khan?

ರಾಜ್‌ಕುಮಾರ್ ಹಿರಾನಿ ನಿರ್ದೇಶನದಲ್ಲಿ ಶಾರುಖ್ ಖಾನ್ ನಟನೆಯ ಕಾಮಿಡಿ ಎಂಟರ್‌ಟೈನರ್‌ ಒಂದು ದಿನ ಮೊದಲು ಬಿಡುಗಡೆಯಾಯಿತು. 'ಸಲಾರ್‌' ಚಿತ್ರಕ್ಕೂ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಯಿತು. ಇನ್ನು ಥಿಯೇಟರ್‌ಗಳ ಹಂಚಿಕೆ ವಿಚಾರದಲ್ಲೂ ಎರಡೂ ಸಿನಿಮಾಗಳ ನಡುವೆ ಪೈಪೋಟಿ ನಡೀತು. ಅದ್ಯಾವ ಮಟ್ಟಿಗೆ ಅಂದ್ರೆ ನಮಗೆ ಸ್ಕ್ರೀನ್ ಕೊಡುತ್ತಿಲ್ಲ ಎಂದು ಹೊಂಬಾಳೆ ಸಂಸ್ಥೆ ಮಲ್ಟಿಪ್ಲೆಕ್ಸ್‌ ಚೈನ್ ಮೇಲೆ ಗರಂ ಆಗಿತ್ತು. ಈ ತಾರತಮ್ಯ ವಿರೋಧಿಸಿ ನಿಮಗೆ ನಮ್ಮ ಸಿನಿಮಾ ಕೊಡಲ್ಲ ಎಂದು ಪಟ್ಟು ಹಿಡಿದಿದ್ದರು.

ಸದ್ಯ 11 ದಿನಕ್ಕೆ ಶಾರುಖ್ ಖಾನ್ 'ಡಂಕಿ' ಸಿನಿಮಾ 380 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡವೇ ಖಚಿತಪಡಿಸಿದೆ. ಇನ್ನು 'ಸಲಾರ್' ತಂಡ ಕೂಡ 10 ದಿನಕ್ಕೆ ತಮ್ಮ ಸಿನಿಮಾ 625 ಕೋಟಿ ರೂ. ಗಳಿಕೆ ಮಾಡಿರುವುದಾಗಿ ಪೋಸ್ಟ್ ಮಾಡಿದೆ. ಆದರೆ ಈ ಪೋಸ್ಟ್‌ ಬಗ್ಗೆ ಈಗ ಭಾರೀ ಚರ್ಚೆ ಶುರುವಾಗಿದೆ. ಶಾರುಖ್ ಖಾನ್‌ನ ಟ್ರೋಲ್ ಮಾಡಿ ಪೋಸ್ಟ್ ಆಗಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.

Salaar Vs Dunki: Did hombale films troll Shahrukh Khan?

'ಸಲಾರ್' ತಂಡ ಶಾರುಖ್ ಖಾನ್ ಅವರನ್ನು ವ್ಯಂಗ್ಯ ಮಾಡಿ ಪೋಸ್ಟ್ ಮಾಡಿದ್ದಾರೆ ಎನ್ನಲಾಗ್ತಿದೆ. ಸಿನಿಮಾ ಕಲೆಕ್ಷನ್ ಬಗ್ಗೆ ಟ್ವೀಟ್ ಮಾಡಿ, "ಖಾನ್ಸಾರ್.. ಐಯಾಮ್ ಸಾರಿ" ಎಂದು ಬರೆದಿದ್ದಾರೆ. ಬೇಕಂತಲೇ ಖಾನ್ಸಾರ್‌ ಎನ್ನುವ ಪದ ಬಳಸಿ ವ್ಯಂಗ್ಯ ಮಾಡಿದ್ದಾರೆ, ಶಾರುಖ್ ಅವರನ್ನು ಖಾನ್ಸಾರ್ ಎಂದು ಬಣ್ಣಿಸಿದ್ದಾರೆ. ಅದನ್ನು ಬಳಸಿಕೊಂಡು ಈ ಟ್ವೀಟ್ ಮಾಡಲಾಗಿದೆ ಎನ್ನುವ ಚರ್ಚೆ ಶುರುವಾಗಿದೆ. ಈ ಬಗ್ಗೆ ಪ್ರಭಾಸ್ ಅಭಿಮಾನಿಗಳು ಖುಷಿಯಾಗಿದ್ದು, ಆ ಟ್ವೀಟ್ ಬಳಸಿ ಶಾರುಖ್ ಅಭಿಮಾನಿಗಳಿಗೆ ಕೌಂಟರ್ ಕೊಡುತ್ತಿದ್ದಾರೆ. ಸದ್ಯ ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಆದರೆ 'ಸಲಾರ್' ಕಥೆ ಖಾನ್ಸಾರ್‌ ಎನ್ನುವ ನಗರದ ಸುತ್ತಾ ನಡೆಯುತ್ತದೆ. ಹಾಗಾಗಿ ಈ ರೀತಿ ಪೋಸ್ಟ್ ಮಾಡಿದ್ದಾರೆ ಅನ್ನೋದು ಗೊತ್ತಾಗುತ್ತಿದೆ.

'ಸಲಾರ್ ವರ್ಸಸ್ ಡಂಕಿ' ಎನ್ನುವ ಚರ್ಚೆ ಬಗ್ಗೆ ಇತ್ತೀಚೆಗೆ ನಿರ್ದೇಶಕ ಪ್ರಶಾಂತ್ ನೀಲ್ ಮಾತನಾಡಿದ್ದರು. "ನಾವಿಲ್ಲಿ ಒಬ್ಬರಿಗೊಬ್ಬರು ಪೈಪೋಟಿ ಮಾಡೋಕೆ ಬಂದಿಲ್ಲ. ನಾವಿಬ್ಬರೂ ಒಟ್ಟಿಗೆ ಗೆಲ್ಲಬೇಕಿದೆ. ನಾನು ಇಂತಹ ಫ್ಯಾನ್ಸ್‌ ವಾರ್‌ನ ಭಾಗವಾಗುವುದಕ್ಕೆ ಇಷ್ಟ ಪಡಲ್ಲ. ತುಂಬಾ ಕೆಟ್ಟದಾಗಿ ಮಾತಾಡಿಕೊಳ್ಳುತ್ತಿದ್ದಾರೆ ಅಂತ ಕೇಳಿದ್ದೇನೆ. ಈ ಇಬ್ಬರೂ ಸ್ಟಾರ್‌ಗಳು ಕೂಡ ಭಾರತೀಯ ಸಿನಿಮಾ ರಂಗದ ದೊಡ್ಡ ತಾರೆಯರೇ. ಅವರಿಗೆ ಗೌರವ ಸಲ್ಲಲೇ ಬೇಕು"

"ಡಂಕಿ ಹಾಗೂ ಸಲಾರ್ ನಡುವೆ ಯುದ್ಧ ಅನ್ನೋದನ್ನು ನಾವಿಬ್ಬರೂ ಯೋಚನೆ ಮಾಡಿಲ್ಲ. 'ಡಂಕಿ' ಮೇಕರ್ಸ್ ಹೀಗೆಲ್ಲೆ ಯೋಚನೆ ಮಾಡುತ್ತಾರೆ ಅಂತ ಅನಿಸುತ್ತಿಲ್ಲ. ಹಾಗೇ 'ಸಲಾರ್' ಮೇಕರ್ಸ್ ಕೂಡ ಹಾಗೇ ಯೋಚನೆ ಮಾಡಲ್ಲ. ನಾವಿಲ್ಲಿ ವೀಕ್ಷಕರ ಗಮನ ಸೆಳೆಯುವುದಕ್ಕೆ ಇದ್ದೇವೆ. ಜನರು ಮೆಚ್ಚಿಸುವುದಕ್ಕೆ ಇದ್ದೇವೆ. ನಮ್ಮ ನಮ್ಮ ನಡುವೆ ಸ್ಪರ್ಧೆ ಮಾಡುವುದಕ್ಕೆ ಅಲ್ಲ. ಇದು ಕ್ರಿಕೆಟ್ ಮ್ಯಾಚ್ ಅಲ್ಲ" ಎಂದು ಪ್ರಶಾಂತ್ ನೀಲ್ ಹೇಳಿದ್ದರು.

More from Filmibeat

English summary
Salaar Makers Latest post created a storm on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X