Salaar Box Office: ಮೂರೇ ದಿನಕ್ಕೆ ವಿಶ್ವಾದ್ಯಂತ 400 ಕೋಟಿ ರೂಪಾಯಿ ಬಾಚಿಕೊಂಡ 'ಸಲಾರ್'!

ಸತತ ಸೋಲುಗಳಿಂದ ಕಂಗೆಟ್ಟಿದ್ದ ನಟ ಪ್ರಭಾಸ್, ಪ್ರಶಾಂತ್ ನೀಲ್ ಅವರ ನಿರ್ದೇಶನದ ಸಲಾರ್ ಚಿತ್ರದ ಮೂಲಕ ಮತ್ತೆ ಕಂಬ್ಯಾಕ್ ಮಾಡಿದ್ದಾರೆ. ಸಿನಿಮಾ ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಬಿಡುಗಡೆಯಾದ ಮೂರೇ ದಿನಗಳಲ್ಲಿ ಚಿತ್ರ 400 ಕೋಟಿ ರುಪಾಯಿ ದಾಟಿ ಇತಿಹಾಸ ಸೃಷ್ಟಿಸಿದೆ.

ನಟ ಶ್ರೀಮುರುಳಿ ಮತ್ತು ಪ್ರಶಾಂತ್ ನೀಲ್ ಕಾಂಭಿನೇಷನ್‌ನ ಕನ್ನಡ ಸಿನಿಮಾ 'ಉಗ್ರಂ' ರಿಮೇಕ್ ಆಗಿರುವ 'ಸಲಾರ್' ಅನ್ನು ಅದ್ದೂರಿಯಾಗಿ ತೆರೆಗೆ ತರಲಾಗಿದೆ. ಇಬ್ಬರು ಸ್ನೇಹಿತರ ಕಥೆಯನ್ನು ರಸವತ್ತಾಗಿ ನಮ್ಮ ಮುಂದೆ ಇಟ್ಟಿದ್ದಾರೆ. ಕನ್ನಡಿಗರಿಗೆ ಸಿನಿಮಾದ ಕತೆ ಹೊಸಲ್ಲದಿದ್ದರೂ ಅದ್ದೂರಿ ಮೇಕಿಂಗ್‌ಗಾಗಿ ನೋಡುತ್ತಿದ್ದಾರೆ.

Salaar worldwide day 3 Box Office Collection; Prabhas film crosses Rs 400 crore mark

ಮೂರೇ ದಿನಗಳಲ್ಲಿ ಚಿತ್ರ 400 ಕೋಟಿ ಗಳಿಸಿದ ಸಲಾರ್!

sacnilk.com ನ ಆರಂಭಿಕ ಅಂದಾಜುಗಳ ಪ್ರಕಾರ, ಪ್ರಶಾಂತ್ ನೀಲ್ ಅವರ ಸಲಾರ್ ಭಾಗ 1: ಕದನ ವಿರಾಮ ಚಿತ್ರ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 208 ಕೋಟಿ ರೂಪಾಯಿಗಳನ್ನು ಬಾಚಿಕೊಂಡಿದೆ. ಭಾರತ ಮತ್ತು ವಿದೇಶಗಳಲ್ಲಿ ಒಳ್ಳೆ ಓಪನಿಂಗ್ ಪಡೆದಿದ್ದ ಚಿತ್ರ, ವಿಶ್ವಾದ್ಯಂತ 400 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ.

ತೆಲುಗು ಭಾಷೆಯಲ್ಲಿ ತಯಾರಾಗಿರುವ 'ಸಲಾರ್' ಹಿಂದಿ, ಮಲಯಾಳಂ, ಕನ್ನಡ ಮತ್ತು ತಮಿಳಿನಲ್ಲಿ ಡಬ್ ಆಗಿದೆ. ನಟ ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್‌ ಕಾಂಬಿನೇಷನ್ ಸಕತ್ ವರ್ಕ್ ಆಗಿದೆ. 'ಉಗ್ರಂ' ಅನ್ನು ತೆರೆಯ ಮೇಲೆ ತರುವ ನಿರ್ದೇಶಕ ಪ್ರಶಾಂತ್ ನೀಲ್ ಕನಸು ನನಸಾಗಿದೆ.

ಮೊದಲ ದಿನ, ಸಲಾರ್‌ನ ತಂಡ ಮತ್ತು ಹೊಂಬಾಳೆ ಫಿಲ್ಮ್ಸ್ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಚಿತ್ರವು ವಿಶ್ವಾದ್ಯಂತ 175 ಕೋಟಿ ರೂ ಗಳಿಸಿದೆ ಎಂದು ಹೇಳಿದೆ. ಸಲಾರ್ ಈ ವರ್ಷದ ಅತಿದೊಡ್ಡ ಓಪನಿಂಗ್ ಪಡೆದ ಭಾರತೀಯ ಚಿತ್ರ. ಇನ್ನೂ, ಎರಡು ದಿನಗಳಲ್ಲಿ ವಿಶ್ವಾದ್ಯಂತ 295.7 ಕೋಟಿ ಗಳಿಸಿದೆ.

ಸಲಾರ್: ಭಾಗ 1: ಕದನ ವಿರಾಮ

ಸಲಾರ್: ಭಾಗ 1: ಕದನ ವಿರಾಮದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಇದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ತಯಾರಾದ ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಸಲಾರ್ ಭಾಗ 2ರಲ್ಲಿ ಮಿತ್ರರಾಗಿರುವ ದೇವಾ (ಪ್ರಭಾಸ್) ಮತ್ತು ವರ್ಧರಾಜನ್ ಮನ್ನಾರ್ (ಪೃಥ್ವಿರಾಜ್ ಸುಕುಮಾರನ್) ಶತ್ರುಗಳಾಗಿ ಬದಲಾಗುವ ಕಥೆಯನ್ನು ತೋರಿಸಲಾಗುತ್ತದೆ.

More from Filmibeat

English summary
Prabhas' film Salaar: Part 1: Ceasefire box office collection day 3.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X