ತೆಲುಗಿಗೆ ಹೊರಟ ಕನ್ನಡದ ಮತ್ತೋರ್ವ ನಟಿ ಸಂಜನಾ ಆನಂದ್

ಕನ್ನಡದಲ್ಲಿ ನಟನೆ ಆರಂಭಿಸಿದ ಅದೆಷ್ಟೋ ನಟಿಯರು ಈಗ ತೆಲುಗು ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಅದೆಷ್ಟೋ ಕನ್ನಡದ ಕಲಾವಿದರು ಪರಭಾಷ ಸಿನಿಮಾಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಹೀಗೆ ಬೇರೆ ಭಾಷೆಯ ಸಿನಿಮಾಗಳಿಗೆ ತೆರಳುವ ಕಲಾವಿದರಲ್ಲಿ ಕೆಲವರು ಮತ್ತೆ ಕನ್ನಡ ಸಿನಿಮಾಗಳತ್ತ ಬಂದರೂ ಮತ್ತೂ ಕೆಲವರು ತೆಲುಗು ತಮಿಳು ಸಿನಿಮಾಗಳಲ್ಲಿಯೇ ಬ್ಯುಸಿಯಾಗಿ ಬಿಡುತ್ತಾರೆ. ಹೀಗೆ ಕನ್ನಡದ ಕಲಾವಿದರು ಎಲ್ಲಾ ಇಂಡಸ್ಟ್ರಿಯಲ್ಲಿಯೂ ತಮ್ಮ ಪ್ರತಿಭೆ ಅನಾವರಣ ಮಾಡುತ್ತಿದ್ದಾರೆ. ಸದ್ಯ ಇದೇ ಪಟ್ಟಿಗೆ ಈಗ ಕನ್ನಡತಿ ಸಂಜನಾ ಆನಂದ್ ಕೂಡ ಸೇರ್ಪಡೆಯಾಗಿದ್ದಾರೆ.

ಈಗಾಗಲೇ ಕನ್ನಡದ ರಶ್ಮಿಕಾ ಮಂದಣ್ಣ, ರಚಿತ ರಾಮ್, ಶ್ರೀಲೀಲಾ, ಶ್ರದ್ಧಾ ಶ್ರಿನಾಥ್, ನಬಾ ನಟೇಶ್ ರಂತಹ ನಟಿಮಣಿಯರು ತೆಲುಗು ತಮಿಳು ಇಂಡಷ್ಟ್ರಿಗಳಲ್ಲಿ ಅಭಿನಯಿಸಿ ಹೆಸರು ಸಂಪಾದಿಸುತ್ತಿದ್ದಾರೆ. ಇವರೊಂದಿಗೆ ಈಗ ನಟಿ ಸಂಜನಾ ಆನಂದ್ ಕೂಡ ತೆಲುಗಿನ ದೊಡ್ಡ ಬ್ಯಾನರ್‌ ಸಿನಿಮಾದಲ್ಲಿ ಕೆಲಸ ಮಾಡಲು ಸಜ್ಜಾಗಿದ್ದಾರೆ. ಇದಕ್ಕಾಗಿ ಸಾಕಷ್ಟು ತಯಾರಿ ಕೂಡ ಮಾಡಿಕೊಂಡಿದ್ದಾರೆ.

ಕನ್ನಡದ ಸಲಗ, ವಿಂಡೋ ಸೀಟ್, ಶೋಕಿವಾಲ, ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾಗಳಲ್ಲಿ ನಟಿಸಿರುವ ಸಂಜನಾ ಆನಂದ್ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ತಮ್ಮ ಸೌಮ್ಯ ಸ್ವಭಾವ, ಡೀಸೆಂಟ್ ಲುಕ್‌ನಿಂದಲೇ ಪಡ್ಡೆ ಹುಡುಗರ ನಿದ್ದೆ ಕದಿಯುವ ಈ ಕನ್ನಡತಿ ಸಂಜನಾ ಸಲಗಾ ಸಿನಿಮಾದಲ್ಲಿ ವಿಭಿನ್ನ ನಟನೆ ಮಾಲಕ ಗಮನ ಸೆಳೆದಿದ್ದರು. ಅಷ್ಟೆ ಅಲ್ಲದೇ ರಗಡ್ ಡೈಲಾಗ್‌ಗಳನ್ನು ಹೇಳುವ ಮೂಲಕ ನೋಡುಗರ ಗಮನ ಸೆಳೆದಿದ್ದ ಸಂಜನಾರ ಮುಂದಿನ ಪ್ರಾಜೆಕ್ಟ್ ಯಾವುದು ಎಂಬ ಬಗ್ಗೆ ಅಭಿಮಾನಿಗಳು ಚಿಂತಿಸುತ್ತಿದ್ದರು. ಇದಕ್ಕೆ ಈಗ ಉತ್ತರ ಸಿಕ್ಕಿದ್ದು ಸಂಜನಾ ಆನಂದ್ ತೆಲುಗು ಚಿತ್ರದಲ್ಲಿ ನಟಿಸಲಿದ್ದಾರೆ.

Salaga fame actress Sanjana Anand enter telugu industry

ತೆಲುಗಿನಲ್ಲಿ ಹೆಸರಿಡದ ಚಿತ್ರದ ಶೂಟಿಂಗ್‌ನಲ್ಲಿ ಸಂಜನಾ ಭಾಗಿ ಆಗಿದ್ದು, ಟೈಟಲ್ ಇನ್ನು ಇಡದ ಈ ಚಿತ್ರ ಕಳೆದ ತಿಂಗಳು ಮುಹೂರ್ತ ನೆರವೇರಿಸಿಕೊಂಡಿದೆ. ಇದರಲ್ಲಿ ಸಂಜನಾ ಆನಂದ್ ಕೂಡ ಭಾಗಿಯಾಗಿದ್ದು, ಈ ಖುಷಿಯ ವಿವಾರವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. "ನಿಮ್ಮೆಲ್ಲರ ಆಶಿರ್ವಾದದೊಂದಿಗೆ ಮತ್ತೊಂದು ಹೊಸ ಜರ್ನಿ ಆರಂಭ" ಎಂದು ಬರೆದುಕೊಂಡಿರೋ ಸಂಜನಾ ಅಭಿಮಾನಿಗಳ ಆಶಿರ್ವಾದವನ್ನು ಕೇಳಿದ್ದಾರೆ.

ಈ ಸಿನಿಮಾದ ಶೂಟಿಂಗ್ ಕೂಡ ಈಗಾಗಲೇ ಆರಂಭವಾಗಿದ್ದು, ಸಂಜನಾ ಕೂಡ ಭಾಗಿಯಾಗಿದ್ದಾರೆ. ಖ್ಯಾತ ಚಿತ್ರ ನಿರ್ದೇಶಕ ಕೋಡಿ ರಾಮಕೃಷ್ಣ ಅವರ ಮಗಳು ಕೋಡಿ ದಿವ್ಯ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಇವರ ಬ್ಯಾನರನಲ್ಲಿ ಸಿದ್ಧವಾಗುತ್ತಿರುವ ಚೊಚ್ಚಲ ಚಿತ್ರ ಇದಾಗಿದ್ದು, ಇದಕ್ಕೆ ಸಂಜನಾ ಆನಂದ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

ಪ್ರೇಮಕಥೆಯನ್ನು ಹೊತ್ತು ಬರುತ್ತಿರುವ ಸಿನಿಮಾ ಇದಾಗಿದ್ದು, ವಿಭಿನ್ನ ಬಗೆಯ ಲವ್‌ ಸ್ಟೋರಿಯನ್ನು ಸಿನಿ ಪ್ರೇಕ್ಷಕರಿಗೆ ಪರಿಚಯಿಸುವ ಪ್ರಯತ್ನವನ್ನು ಚಿತ್ರತಂಡ ಮಾಡಲಿದೆ. ಇನ್ನು ಈ ಸಿನಿಮಾದಲ್ಲಿ 'ರಾಜ ವಾರು ರಾಣಿ ಗಾರು' ಮತ್ತು 'ಎಸ್‌ ಆರ್ ಕಲ್ಯಾಣಮಂಟಪ್ಪಂ' ಸಿನಿಮಾ ಖ್ಯಾತಿಯ ನಟ ಕಿರಣ್ ಅಬ್ಬಾವರಂ ಈ ಚಿತ್ರದಲ್ಲಿ ಸಂಜನಾ ಜೊತೆ ಡ್ಯುಯೆಟ್ಟು ಹಾಡಲಿದ್ದಾರೆ. ಹಾಗೆ ನವ ನಿರ್ದೇಶಕ ಕಾರ್ತಿಕ್ ಶಂಕರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಸಂಜನಾ ಅಭಿನಯದ 'ಹನಿಮೂನ್' ವೆಬ್‌ಸೀರಿಸ್ ತೆಲುಗಿಗೂ ಡಬ್ ಆಗಿತ್ತು. ನಂತರದಿಂದ ತೆಲುಗಿನಿಂದ ಹೆಚ್ಚು ಹೆಚ್ಚು ಆಫರ್‌ಗಳು ಸಂಜನಾ ಆನಂದ್ ಅವರನ್ನು ಹರಸಿ ಬರುತ್ತಿತ್ತು. ಒಳ್ಳೆ ಕಥೆಗಾಗಿ ಕಾದಿದ್ದ ಸಂಜನಾಗೆ ಈಗ ತನಗೊಪ್ಪುವ ಸಿನಿಮಾ ಕಥೆಯೇ ಸಿಕ್ಕಿರೋದು ತುಂಬ ಖುಷಿಯಾಗಿದೆ. ಹಾಗೆ ಕನ್ನಡದಲ್ಲಿ ಸಂಜನಾ ನಟಿಸಿರುವ ಕೆಲ ಸಿನಿಮಾಗಳು ರಿಲೀಸ್‌ಗೆ ಸಜ್ಜಾಗಿದ್ದು, ಟೈಟಲ್ ಇಡದ ಎರೆಡು ಚಿತ್ರದಲ್ಲಿ ಈಗಾಗಲೇ ಸಂಜನಾ ಅಭಿನಯಿಸುತ್ತಿದ್ದಾರೆ. ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿರುವ ಸಂಜನಾ ತೆಲುಗಿನಲ್ಲಿ ಹೇಗೆ ಕಮಾಲ್ ಮಾಡುತ್ತಾರೆ ಅನ್ನೋದನ್ನ ನೋಡಬೇಕಿದೆ.

More from Filmibeat

English summary
Salaga actress Sanjana Anand to make her Telugu debut with a Love story
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X