Salman Khan: ಚಿರಂಜೀವಿ ಜೊತೆ ಅಭಿನಯಿಸಲು ಸಲ್ಮಾನ್ ಹಾಕಿದ ಶರತ್ತೇನು?

ಬಾಲಿವುಡ್ ಸಲ್ಮಾನ್ ಖಾನ್ ಸೌತ್ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಸಲ್ಮಾನ್ ಖಾನ್ ಚಿರಂಜೀವಿ ಜೊತೆಗೆ 'ಗಾಡ್ ಫಾದರ್' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸಲ್ಲು ಭಾಯ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ಈ ಸುದ್ದಿ ಅಧಿಕೃತವಾಗಿದೆ. ಹೂ ಗುಚ್ಚ ಕೊಟ್ಟು ಸಲ್ಮಾನ್ ಖಾನ್‌ರನ್ನು ಚಿರಜೀವಿ ಸ್ವಾಗತ ಕೋರಿದ್ದಾರೆ. ಇಬ್ಬರು ಸ್ಟಾರ್ ನಟರು ಒಟ್ಟಿಗೆ ಇರುವ ಫೋಟೊ ವೈರಲ್ ಆಗಿದೆ.

ಈಗ ಸಲ್ಮಾನ್ ಖಾನ್ ಬಗ್ಗೆ ಹೊಸ ಸುದ್ದಿ ಹಬ್ಬಿದೆ. ಈ ಚಿತ್ರಕ್ಕಾಗಿ ಸಲ್ಮಾನ್ ಖಾನ್ ಎಷ್ಟು ಸಂಭಾವನೆ ಪಡೆದಿದ್ದಾರೆ ಎನ್ನುವ ಬಗ್ಗೆ ಚರ್ಚೆ ಆಗುತ್ತಿದೆ. ಬಾಲಿವುಡ್‌ನ ಸೂಪರ್‌ ಸ್ಟಾರ್ ಇಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದಾರೆ ಅಂದರೆ ದುಪ್ಪಟ್ಟು ಹಣ ಪಡೆದಿರುತ್ತಾರೆ ಎಂದು ಊಹಿಸಬಹುದು. ಆದರ ಸಲ್ಮಾನ್ ಖಾನ್ ಇದಕ್ಕೆ ವಿರುದ್ಧವಾಗಿ ಇದ್ದಾರೆ.

ಹೌದು, ನಟ ಸಲ್ಮಾನ್ ಖಾನ್ ಈ ಚಿತ್ರದಲ್ಲಿ ಅಭಿನಯಿಸಲು ಯಾವುದೇ ಸಂಭಾವನೆ ಪಡೆದುಕೊಂಡಿಲ್ಲ ಎನ್ನಲಾಗಿದೆ. ಚಿರು ಮತ್ತು ಸಲ್ಮಾನ್ ಖಾನ್ ನಡುವೆ ಸ್ನೇಹದ ಬಂಧ ಇದೆ. ಹಾಗಾಗಿ ಸಲ್ಮಾನ್ ಖಾನ್ ಚಿರಂಜೀವಿ ಮೇಲಿನ ಪ್ರೀತಿಯಿಂದ ಸಂಭಾವನೆ ಪಡೆಯದೆ ಅಭಿನಯ ಮಾಡುತ್ತಿದ್ದಾರಂತೆ. ಈ ವಿಚಾರ ಸದ್ಯ ಬಾಲಿವುಡ್ ಮತ್ತು ಟಾಲಿವುಡ್‌ನಲ್ಲಿ ಹೆಚ್ಚು ಚರ್ಚೆ ಆಗುತ್ತಿದೆ.

Salman Khan Acting With Chiranjeevi In God Father For Free

ಸಲ್ಮಾನ್ ಖಾನ್ ಮತ್ತು ಚಿರಂಜೀವಿ ಕುಟುಂಬಕ್ಕೆ ನಂಟಿದೆ. ಚಿರಂಜೀವಿ ಪುತ್ರ ರಾಮ್‌ಚರಣ್ 'ಜಂಜೀರ್' ಚಿತ್ರ ಮಾಡಿದಾಗ ಸಲ್ಮಾನ್, ರಾಮ್‌ ಚರಣ್‌ಗೆ ಸಪೋರ್ಟ್ ಮಾಡಿದ್ದರು. ಹಾಗೆ ಸಲ್ಮಾನ್ ಹೈದರಾಬಾದ್‌ಗೆ ಶೂಟಿಂಗ್‌ಗೆ ಬಂದರೆ ಸಾಕು, ಅವರಿಗೆ ಚಿರಂಜೀವಿ ಮನೆಯಿಂದಲೇ ಊಟ ಬರುತ್ತದೆ. ಹಾಗೇ ಸಲ್ಮಾನ್ ಖಾನ್‌ಗೂ ಅವರ ಮನೆಯ ಊಟ ಎಂದರೆ ಬಲು ಇಷ್ಟವಂತೆ.

ಹೀಗೆ ಎರಡೂ ಕುಟುಂಬಗಳ ಬಾಂಧವ್ಯದ ಹಿನ್ನೆಲೆ ಚಿರಂಜೀವಿಯ 'ಗಾಡ್ ಫಾದರ್‌' ಚಿತ್ರದಲ್ಲಿ ಅಭಿನಯಿಸಲು, ಯಾವುದೇ ತಕರಾರಿಲ್ಲದೆ ಸಲ್ಮಾನ್ ಖಾನ್ ಒಪ್ಪಿದ್ದಾರೆ. ಆದರೆ ಸಿನಿಮಾ ಮಾಡಲು ನಟ ಸಲ್ಮಾನ್ ಖಾನ್ ಒಂದು ಶರತ್ತು ವಿಧಿಸಿದ್ದಾರಂತೆ. ಅದು ಮತ್ತೇನು ಅಲ್ಲ. ಈ ಚಿತ್ರಕ್ಕಾಗಿ ಸಂಭಾವನೆ ಕೊಡಬಾರದು ಎಂದು ಶರತ್ತು ಹಾಕಿದ್ದಾರಂತೆ. ಸಿನಿಮಾ ಒಪ್ಪಿಕೊಳ್ಳುವಾಗಲೇ ಸಲ್ಮಾನ್ ಖಾನ್ ಸಂಭಾವನೆ ಬೇಡ ಎಂದು ಹೇಳಿನೇ ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಈ ಚಿತ್ರ ಮಲಯಾಳಂನ 'ಲೂಸಿಫರ್' ಚಿತ್ರದ ಅಧಿಕೃತ ರಿಮೇಕ್ ಆಗಿದೆ. ತೆಲುಗು ನಿರ್ದೇಶಕ ಮೋಹನ್ ರಾಜ ಈ ಸಿನಿಮಾ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ನಯನತಾರಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎನ್ನುವ ಸುದ್ದಿ ಇದೆ.

More from Filmibeat

English summary
Salman Khan Acting With Chiranjeevi In God Father Without Remuneration,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X