ಮೆಗಾ ಸ್ಟಾರ್ ಸಿನಿಮಾದಲ್ಲಿ ಸಲ್ಮಾನ್ ಖಾನ್: ಚಿತ್ರತಂಡ ಹೇಳಿದ್ದೇನು?

ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹು ನಿರೀಕ್ಷೆಯ ಆಚಾರ್ಯ ಸಿನಿಮಾದ ಟಾಲಿವುಡ್ ಮಾತ್ರವಲ್ಲದೆ ಬಾಲಿವುಡ್ ನಲ್ಲಿಯೂ ಸದ್ದು ಮಾಡುತ್ತಿದೆ. ಚಿತ್ರ ಸೆಟ್ಟೇರಿದಾಗಿನಿಂದಲೂ ಒಂದಲ್ಲೊಂದು ಸುದ್ದಿಯ ಮೂಲಕ ಆಚಾರ್ಯ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಚಿತ್ರಕ್ಕೆ ನಾಯಕಿಯ ಆಯ್ಕೆಯ ಗೊಂದಲ ಇನ್ನೂ ಬಗೆಹರಿದಿಲ್ಲ.

ಚಿರುಗೆ ನಾಯಕಿಯಾರಾಗ್ತಾರೆ ಎನ್ನುವ ಕುತೂಹಲ ಜೊತೆಗೀಗ, ಆಚಾರ್ಯ ಸಿನಿಮಾಗೆ ಬಾಲಿವುಡ್ ನ ಸ್ಟಾರ್ ನಟರೊಬ್ಬರು ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಹೌದು, ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಆಚಾರ್ಯಗೆ ಸಿನಿಮಾಗೆ ಎಂಟ್ರಿ ಕೊಡುವ ಮೂಲಕ ಸೌತ್ ಸಿನಿರಂಗದಲ್ಲಿ ಕಾಣಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದೆ ಓದಿ...

ಚಿರಂಜೀವಿ ಸಿನಿಮಾದಲ್ಲಿ ಮಹೇಶ್ ಬಾಬು

ಚಿರಂಜೀವಿ ಸಿನಿಮಾದಲ್ಲಿ ಮಹೇಶ್ ಬಾಬು

ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಬಹುನಿರೀಕ್ಷೆಯ ಆಚಾರ್ಯ ಸಿನಿಮಾದಲ್ಲಿ ಪ್ರಿನ್ಸ್ ಮಹೇಶ್ ಬಾಬು ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಸಂಭಾವನೆ ವಿಚಾರವಾಗಿ ಮಹೇಶ್ ಬಾಬು ಸಿನಿಮಾದಲ್ಲಿ ನಟಿಸಲು ನಿರಾಕರಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಆದರೆ ಈ ವಿಚಾರವನ್ನು ನಟ ಮಹೇಶ್ ಬಾಬು ತಳ್ಳಿ ಹಾಕಿದ್ದರು.

ಮಹೇಶ್ ಬಾಬು ಆಯ್ತು ಈಗ ಸಲ್ಮಾನ್ ಖಾನ್ ಸರದಿ

ಮಹೇಶ್ ಬಾಬು ಆಯ್ತು ಈಗ ಸಲ್ಮಾನ್ ಖಾನ್ ಸರದಿ

ನಟ ಮಹೇಶ್ ಬಾಬು ಕಾಣಿಸಿಕೊಳ್ಳಬೇಕಿದ್ದ ಜಾಗದಲ್ಲಿ ಸಲ್ಮಾನ್ ಖಾನ್ ನಟಿಸಲಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿದೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಸಲ್ಮಾನ್ ಖಾನ್ ಬಣ್ಣಹಚ್ಚಲಿದ್ದಾರೆ. ಮೊದಲ ಬಾರಿಗೆ ಸಲ್ಲು ಮತ್ತು ಚಿರಂಜೀವಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಸಲ್ಮಾನ್ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾತುಗಳು ಕಳೆದೆರಡು ದಿನಗಳಿಂದ ಹರಿದಾಡುತ್ತಿದೆ. ಆದರೀಗ ಈ ಬಗ್ಗೆ ಸಿನಿಮಾತಂಡ ಸ್ಪಷ್ಟನೆ ನೀಡಿದೆ.

ಸ್ಪಷ್ಟನೆ ನೀಡಿದ ಚಿತ್ರತಂಡ

ಸ್ಪಷ್ಟನೆ ನೀಡಿದ ಚಿತ್ರತಂಡ

ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಕೊರಟಾಲ ಶಿವ ಇದೊಂದು ಸುಳ್ಳು ಸುದ್ದಿ ಎಂದಿದ್ದಾರೆ. ಇಂತಹ ಸುದ್ದಿಗಳನ್ನು ಅದ್ಯಾರು ಹಬ್ಬಿಸುತ್ತಾರೊ ಗೊತ್ತಿಲ್ಲ. ನಾವು ಸಲ್ಮಾನ್ ಖಾನ್ ಅವರನ್ನು ಸಂಪರ್ಕವೇ ಮಾಡಿಲ್ಲ. ಹೀಗಿರುವಾಗ ಈ ತರಹದ ಸುದ್ದಿಗಳು ಹೇಗೆ ಹುಟ್ಟಿಕೊಳ್ಳುತ್ತವೆಯೋ ಗೊತ್ತಿಲ್ಲ" ಎಂದು ಹೇಳುವ ಮೂಲಕ ಗಾಳಿ ಸುದ್ದಿಗೆ ಬ್ರೇಕ್ ಹಾಕಿದ್ದಾರೆ.

ಚಿರುಗೆ ಯಾರಾಗ್ತಾರೆ ನಾಯಕಿ?

ಚಿರುಗೆ ಯಾರಾಗ್ತಾರೆ ನಾಯಕಿ?

ನಟ ಚಿರಂಜೀವಿ ಜೊತೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಮೂಡಿಸಿದೆ. ನಟಿ ತ್ರಿಷಾ ಸಿನಿಮಾದಿಂದ ಹೊರನಡೆದ ನಂತರ ನಾಯಕಿ ಆಯ್ಕೆ ಗೊಂದಲದಲ್ಲಿದೆ. ತ್ರಿಷಾ ನಂತರ ಕಾಜಲ್ ಅಗರ್ ವಾಲ್ ಹೆಸರು ಕೇಳಿ ಬರುತ್ತಿತ್ತು. ಆದರೀಗ ಕಾಜಲ್ ಕೂಡ ಸಿನಿಮಾದಿಂದ ಹೊರ ನಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

More from Filmibeat

English summary
Bollywood Actor Salman Khan is not part of Chiranjeevi's Acharya film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X