For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿಗೆ ಕೈಕೊಟ್ಟ ಸಲ್ಮಾನ್ ಮತ್ತೊಬ್ಬ ನಟನ ಹುಡುಕಾಟದಲ್ಲಿ ಚಿತ್ರತಂಡ

  By ಫಿಲ್ಮಿಬೀಟ್ ಡೆಸ್ಕ್
  |

  ನಟ ಸಲ್ಮಾನ್ ಖಾನ್ ದಕ್ಷಿಣ ಚಿತ್ರರಂಗಕ್ಕೆ ಬರುತ್ತಿದ್ದಾರೆ. ನಟ ಚಿರಂಜೀವಿ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎಂದು ಕೆಲ ದಿನಗಳಿಂದ ದೊಡ್ಡದಾಗಿ ಸುದ್ದಿಯಾಗಿತ್ತು. ಆದರೆ ಸಲ್ಮಾನ್ ಖಾನ್, ಚಿರಂಜೀವಿ ನೀಡಿದ ಆಫರ್ ಅನ್ನು ತಿರಸ್ಕರಿಸಿದ್ದಾರೆ.

  ಚಿರಂಜೀವಿ ಕೊಟ್ಟ ಆಫರ್ ತಿರಸ್ಕರಿಸಿದ ಸಲ್ಮಾನ್ ಖಾನ್

  ಸಲ್ಮಾನ್ ಖಾನ್ ತೆಲುಗಿಗೆ ಬರುತ್ತಿದ್ದಾರೆ, ಚಿರಂಜೀವಿ ಜೊತೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಸಲ್ಮಾನ್ ಖಾನ್ ತೆಲುಗು ಸಿನಿಮಾದಲ್ಲಿ ನಟಿಸುವುದನ್ನು ಸ್ವತಃ ಚಿರಂಜೀವಿ ಘೋಷಣೆ ಮಾಡುತ್ತಾರೆ. ಭಾರಿ ಅದ್ಧೂರಿಯಾಗಿ ಸಲ್ಮಾನ್ ಖಾನ್ ಅನ್ನು ಬರಮಾಡಿಕೊಳ್ಳಲಾಗುತ್ತದೆ ಎಂದೆಲ್ಲ ಸುದ್ದಿಗಳು ಹರಿದಾಡಿದ್ದವು ಆದರೆ ಈಗ ಅವೆಲ್ಲ ಠುಸ್‌ ಆಗಿವೆ.

  ಚಿರಂಜೀವಿ ನಟಿಸುತ್ತಿರುವ 153ನೇ ಸಿನಿಮಾದಲ್ಲಿ ಸಲ್ಮಾನ್ ಖಾನ್‌ಗೆ ವಿಶೇಷ ಪಾತ್ರ ಮೀಸಲಿಡಲಾಗಿತ್ತು. ಆದರೆ ಸಲ್ಮಾನ್ ಖಾನ್ ಈ ಆಫರ್ ಅನ್ನು ತಿರಸ್ಕರಿಸಿದ್ದಾರೆ. ಆ ಮೂಲಕ ಚಿತ್ರತಂಡವು ಮತ್ತೊಬ್ಬ ಸ್ಟಾರ್ ನಟನಿಗಾಗಿ ಹುಡುಕಾಟದಲ್ಲಿ ನಿರತವಾಗಿದೆ.

  ಮಲಯಾಳಂನ ಸೂಪರ್ ಹಿಟ್ ಸಿನಿಮಾ 'ಲುಸೀಫರ್' ರೀಮೇಕ್‌ನಲ್ಲಿ ಚಿರಂಜೀವಿ ನಟಿಸುತ್ತಿದ್ದು ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಲು ಸಲ್ಮಾನ್ ಖಾನ್ ಅನ್ನು ಕೇಳಲಾಗಿತ್ತು. ಸಲ್ಮಾನ್ ಖಾನ್‌ ಜೊತೆ ನಟ ಚಿರಂಜೀವಿ ಹಾಗೂ ರಾಮ್ ಚರಣ್ ತೇಜಗೆ ಆತ್ಮೀಯ ಬಂಧ ಇರುವ ಕಾರಣ ಸಲ್ಮಾನ್ ಖಾನ್‌ಗೆ ಈ ಆಫರ್ ನೀಡಲಾಗಿತ್ತು.

  ಚಿರು ಜೊತೆ ನಟಿಸುವುದಿಲ್ಲ ಎಂದ ಸಲ್ಮಾನ್ ಖಾನ್

  ಚಿರು ಜೊತೆ ನಟಿಸುವುದಿಲ್ಲ ಎಂದ ಸಲ್ಮಾನ್ ಖಾನ್

  ಆದರೆ ಆಫರ್ ತಿರಸ್ಕರಿಸಿರುವ ಸಲ್ಮಾನ್ ಖಾನ್, ಈಗಾಗಲೇ ಸಾಕಷ್ಟು ಸಿನಿಮಾಗಳು ಕೈಯಲ್ಲಿರುವುದರಿಂದ ಚಿರಂಜೀವಿ ಜೊತೆ ಸಿನಿಮಾದಲ್ಲಿ ನಟಿಸಲಾಗದು ಎಂದಿದ್ದಾರೆ. ಅಲ್ಲದೆ 'ಲುಸೀಫರ್' ಸಿನಿಮಾದ ಹಿಂದಿ ರೀಮೇಕ್‌ನಲ್ಲಿ ತಾವೇ ನಟಿಸುವ ಬಗ್ಗೆಯೂ ಸಲ್ಮಾನ್ ಖಾನ್ ಯೋಚಿಸುತ್ತಿದ್ದಾರಂತೆ ಹೀಗಿರುವಾಗ ಅದೇ ಸಿನಿಮಾದ ತೆಲುಗು ರೀಮೇಕ್‌ನಲ್ಲಿ ಮುಖ್ಯ ಪಾತ್ರದ ಹೊರತು ಬೇರೆ ಮಾತ್ರ ಮಾಡುವುದು ಸೂಕ್ತವಲ್ಲ ಎಂಬುದು ಸಲ್ಮಾನ್ ಖಾನ್ ಅಭಿಪ್ರಾಯ. ಸಲ್ಮಾನ್ ಖಾನ್‌ ಈಗಾಗಲೇ ಹಲವು ರೀಮೇಕ್‌ ಸಿನಿಮಾಗಳನ್ನು ಮಾಡುತ್ತಿದ್ದಾರೆ.

  ಚಿಯಾನ್ ವಿಕ್ರಂ ನಟಿಸುವ ಸಾಧ್ಯತೆ

  ಚಿಯಾನ್ ವಿಕ್ರಂ ನಟಿಸುವ ಸಾಧ್ಯತೆ

  'ಲುಸೀಫರ್' ರೀಮೇಕ್‌ನಲ್ಲಿ ಸಲ್ಮಾನ್ ಖಾನ್ ನಟಿಸುತ್ತಿಲ್ಲವಾದ್ದರಿಂದ ಆ ಪ್ರಮುಖವಾದ ಪಾತ್ರಕ್ಕೆ ಮತ್ತೊಬ್ಬ ನಟನ ಹುಡುಕಾಟವನ್ನು ನಡೆಸಲಾಗುತ್ತಿದೆ. ತಮಿಳಿನ ಚಿಯಾನ್ ವಿಕ್ರಂ ಅನ್ನು ಸಂಪರ್ಕಿಸಲಾಗುತ್ತಿದ್ದು, ವಿಕ್ರಂ ಆ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರಂತೆ. ಮಲಯಾಳಂ ನಲ್ಲಿ ಪೃಥ್ವಿರಾಜ್ ಸುಕುಮಾರ್ ನಿರ್ವಹಿಸಿದ್ದ ಪಾತ್ರವನ್ನು ತೆಲುಗಿನಲ್ಲಿ ಈಗ ಚಿಯಾನ್ ವಿಕ್ರಂ ನಿರ್ವಹಿಸಲಿದ್ದಾರೆ. ಸಿನಿಮಾದಲ್ಲಿ ಈ ಪಾತ್ರ 5 ರಿಂದ 7 ನಿಮಿಷವಷ್ಟೆ ಕಾಣಿಸಿಕೊಳ್ಳುತ್ತದೆ. ಆದರೆ ಸಿನಿಮಾದ ಆರಂಭದಿಂದಲೂ ಸಿನಿಮಾದ ಪಾತ್ರವಾಗಿ ಇರುತ್ತದೆ. ಹಾಗಾಗಿಯೇ ಇದು ಚಿಕ್ಕ ಪಾತ್ರವಾದರೂ ಬಹಳ ಪ್ರಮುಖ ಪಾತ್ರವಾಗಿದೆ.

  ಮುಖ್ಯ ಪಾತ್ರದಲ್ಲಿ ಸುಹಾಸಿನಿ ನಟಿಸುತ್ತಿದ್ದಾರೆ

  ಮುಖ್ಯ ಪಾತ್ರದಲ್ಲಿ ಸುಹಾಸಿನಿ ನಟಿಸುತ್ತಿದ್ದಾರೆ

  'ಲುಸೀಫರ್' ತೆಲುಗು ರೀಮೇಕ್‌ನಲ್ಲಿ ಚಿರಂಜೀವಿ ಸಹೋದರಿಯ ಪಾತ್ರವನ್ನು ಹಿರಿಯ ನಟಿ ಸುಹಾಸಿನಿ ನಿರ್ವಹಿಸಲಿದ್ದಾರೆ. ಬಹಳ ವರ್ಷಗಳ ನಂತರ ಈ ಇಬ್ಬರು ಒಟ್ಟಿಗೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕನ ಸಹೋದರಿ ಪಾತ್ರ ಸಿನಿಮಾದ ಮತ್ತೊಂದು ಪ್ರಮುಖ ಪಾತ್ರವಾಗಿದೆ. ಜೊತೆಗೆ ಸಿನಿಮಾದ ನಾಯಕಿಯಾಗಿ ನಯನತಾರಾ ಕಾಣಿಸಿಕೊಳ್ಳಲಿದ್ದಾರೆ. ಮಲಯಾಳಂನ ಮೂಲ 'ಲುಸೀಫರ್' ಸಿನಿಮಾದಲ್ಲಿ ನಾಯಕಿ ಪಾತ್ರ ಇಲ್ಲ. ಆದರೆ ತೆಲುಗು ಸಿನಿಮಾದಲ್ಲಿ ನಾಯಕಿ ಪಾತ್ರ ಸೃಷ್ಟಿಸಲಾಗಿದೆ. ಚಿರಂಜೀವಿ ಒಳ್ಳೆಯ ಡ್ಯಾನ್ಸರ್ ಆದ್ದರಿಂದ ನೃತ್ಯಗಳೂ ಇರಲಿವೆ ಎನ್ನಲಾಗುತ್ತಿದೆ.

  ಹಲವು ಸಿನಿಮಾಗಳಲ್ಲಿ ಸಲ್ಮಾನ್ ಖಾನ್ ಬ್ಯುಸಿ

  ಹಲವು ಸಿನಿಮಾಗಳಲ್ಲಿ ಸಲ್ಮಾನ್ ಖಾನ್ ಬ್ಯುಸಿ

  ಚಿರಂಜೀವಿ ಪ್ರಸ್ತುತ 'ಆಚಾರ್ಯ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರೀಕರಣ ಅಂತಿಮ ಹಂತದಲ್ಲಿದ್ದು ಆ ಸಿನಿಮಾದ ಬಳಿಕ 'ಲುಸೀಫರ್' ತೆಲುಗು ರೀಮೇಕ್ ಚಿತ್ರೀಕರಣ ಪ್ರಾರಂಭವಾಗಲಿದೆ. ಇನ್ನು ನಟ ಸಲ್ಮಾನ್ ಖಾನ್ 'ಟೈಗರ್ 3' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದು ನಾಯಕಿ ಕತ್ರಿನಾ ಕೈಫ್ ಜೊತೆ ರಷ್ಯಾಕ್ಕೆ ಪ್ರಯಾಣ ಬೆಳೆಸಿದ್ದಾರೆ. ಸತತ ಮೂರು ವಾರಗಳ ಕಾಲ ರಷ್ಯಾದಲ್ಲಿ ಚಿತ್ರೀಕರಣ ನಡೆಸಲಿದ್ದಾರೆ. ಸಲ್ಮಾನ್ ಖಾನ್ ನಟನೆಯ 'ಅಂತಿಮ್' ಸಿನಿಮಾ ಬಿಡುಗಡೆಗೆ ಈಗಾಗಲೇ ರೆಡಿಯಾಗಿದೆ. ಇದರ ಹೊರತಾಗಿ 'ಬುಲ್ ಬುಲ್ ಮ್ಯಾರೇಜ್ ಹಾಲ್', 'ವಾಂಟೆಡ್ 2', 'ರಘು ರಾಜಾ ರಾಮ್', 'ಕಿಕ್ 2', 'ನೋ ಎಂಟ್ರಿ 2', 'ಇನ್‌ಶಾ ಅಲ್ಲಾ', 'ಕಬಿ ಈದ್ ಕಬಿ ದಿವಾಲಿ', 'ಡಾನ್ಸಿಂಗ್ ಡ್ಯಾಡ್', 'ಭಜರಂಗಿ ಭಾಯಿಜಾನ್', 'ದಬಂಗ್ 4', 'ಢಾಕ್' ಸಿನಿಮಾಗಳಲ್ಲಿ ಸಲ್ಮಾನ್ ಖಾನ್ ನಟಿಸಲಿದ್ದಾರೆ.

  English summary
  Bollywood actor Salman Khan not acting in Chiranjeevi's 153 movie. Chiranjeevi acting in Malayalam movie 'Lucifer' Telugu remake.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X